Homeಮುಖಪುಟಎಚ್‌.ಡಿ ಕುಮಾರಸ್ವಾಮಿ ಕುಟುಂಬದ ವಿವಾಹ ವಿಚಾರ ದೊಡ್ಡದು ಮಾಡಬೇಡಿ: ಸಿಎಂ ಬಿಎಸ್‌ವೈ

ಎಚ್‌.ಡಿ ಕುಮಾರಸ್ವಾಮಿ ಕುಟುಂಬದ ವಿವಾಹ ವಿಚಾರ ದೊಡ್ಡದು ಮಾಡಬೇಡಿ: ಸಿಎಂ ಬಿಎಸ್‌ವೈ

- Advertisement -

ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಮಗ ನಿಖಿಲ್‌ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಕೃಷ್ಣಪ್ಪನವರ ಅಣ್ಣನ ಮಗಳು ರೇವತಿಯವರ ವಿವಾಹವನ್ನು ಸರಳ ರೀತಿಯಲ್ಲಿ ನಡೆಸಿದರು. ಈ ವಿವಾಹ ವಿಚಾರವನ್ನು ದೊಡ್ಡ ಸಮಸ್ಯೆಯನ್ನಾಗಿ ಚರ್ಚಿಸುವ ಅಗತ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಅವರ ಕುಟುಂಬ ದೊಡ್ಡದಾಗಿದ್ದರೂ ಅವರು ಮದುವೆಯನ್ನು ಮಿತಿಯಲ್ಲಿ ನಡೆಸಿದರು. ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಮನಗರದ ಬಳಿಯ ಎಚ್‌ಡಿಕೆ ಸಂಬಂಧಿಕರ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ವಿವಾಹ ಕಾರ್ಯಕ್ರಮ ಜರುಗಿತ್ತು. 60-70 ಜನ ಭಾಗವಹಿಸಿದ್ದರು. ಯಾವುದೇ ಸಾಮಾಜಿಕ ಅಂತರ ನಿಯಮಗಳನ್ನು ಕಾಪಾಡಿಲ್ಲ ಎಂಬ ಅಪಸ್ವರ ಕೇಳಿಬಂದಿತ್ತು.

ಈ ಮೊದಲು ಮದುವೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯನ್ನು ಬೆಂಗಳೂರನ್ನು ರೆಡ್‌ಝೋನ್‌ ಎಂದು ಘೋಷಿಸಿದ್ದರಿಂದ ವಿವಾಹಸ್ಥಳ ರಾಮನಗರಕ್ಕೆ ಸ್ಥಳಾಂತರಿಸಿದ್ದೇವೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟವಾದ್ದರಿಂದ ಮನೆಯಲ್ಲಿ ಮದುವೆ ಮಾಡದೇ ಫಾರ್ಮ್‌‌ಹೌಸ್‌ನಲ್ಲಿ ಮಾಡುತ್ತಿದ್ದೇವೆ. ಈ ಮದುವೆಯೂ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವೈದ್ಯರುಗಳ ಜೊತೆಗಿನ ಸಮಾಲೋಚನೆಯೊಂದಿಗೆ ನಡೆಯುತ್ತಿದೆ ಎಂದು ಎಚ್‌.ಡಿ ಕುಮಾರಸ್ವಾಮಿ ತಿಳಿಸಿದ್ದರು.

ದಯವಿಟ್ಟು ಅಭಿಮಾನಿಗಳು ವಿವಾಹ ನಡೆಯುವ ಸ್ಥಳದಿಂದ ದೂರದಲ್ಲಿರಿ. ಪರಿಸ್ಥಿತಿ ತಿಳಿಯಾದ ಬಳಿಕ ದೊಡ್ಡ ಸಮಾರಂಭವನ್ನು ಆಯೋಜಿಸುತ್ತೇವೆ. ಆಗ ಒಟ್ಟಿಗೆ ಕುಳಿತು ಊಟ ಮಾಡೋಣ ಎಂದು ಮದುವೆಯ ನಂತರ ಎಚ್‌ಡಿಕೆ ಟ್ವೀಟ್‌ ಮಾಡಿದ್ದರು.

ಆದರೆ ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ್‌ರವರು ಮಾತ್ರ ಮದುವೆ ಆಕ್ಷೇಪ ವ್ಯಕ್ತಪಡಿಸಿದ್ದರು. “ವಿವಾಹದ ಸಮಯದಲ್ಲಿ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಇದರಲ್ಲಿ ಎರಡು ಮಾತಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು.

ನಾವು ಅಧಿಕಾರದ ಸ್ಥಾನದಲ್ಲಿರುವವರು ಲಾಕ್‌ಡೌನ್‌ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಅಧಿಕಾರ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ ಎಂಬ ತಪ್ಪು ಸಂದೇಶ ಹೋಗುತ್ತದೆ. ಒಂದು ವೇಳೆ ಉಲ್ಲಂಘನೆ ಕಂಡುಬಂದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಾನು ಪೊಲೀಸರು ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಅಶ್ವಥ್‌ ನಾರಾಯಣ್‌ ತಿಳಿಸಿದ್ದರು.

ಈ ಕುರಿತು ಬಹಳಷ್ಟು ಜನ ಎಚ್‌.ಡಿ ಕುಮಾರಸ್ವಾಮಿಯವರು ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರ ಮೇಲೆ ಯಾವಾಗ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಮಾಧ್ಯಮಗಳ ಈ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪನವರು ಈ ವಿಷಯವನ್ನು ದೊಡ್ಡದು ಮಾಡಬೇಡಿ, ಅವರ ಕುಟುಂಬ ದೊಡ್ಡದಾಗಿದ್ದರೂ ಸಹ ಮಿತಿಯಲ್ಲಿಯೇ ಮದುವೆ ಮಾಡಿದ್ದರೆ. ಅವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.


ಇದನ್ನೂ ಓದಿ: ನಿಖಿಲ್-ರೇವತಿ ಮದುವೆಯಲ್ಲಿ ಸಾಮಾಜಿಕ ಅಂತರವೆಲ್ಲಿ? ಲಾಕ್‌ಡೌನ್‌ ನಡುವೆಯೂ ಮದುವೆಗೆ ಪರ-ವಿರೋಧ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಯಾಕೆ ದೊಡ್ಡದು ಮಾಡಬಾರದು? ಬಡವರಿಗೊಂದು, ಶ್ರೀಮಂತರಿಗೆ ಮತ್ತೊಂದು, ಹೀಗೆ ಎರಡು ರೀತಿಯ ಕಾನೂನು ಜಾರಿಯಲ್ಲಿದೆಯಾ?

  2. ಸ್ವಿಮಿಂಗ್ ಪೂಲ್ ನಲ್ಲಿ ಮಜಾ ಮಾಡ್ತಿದ್ದ ಮಂತ್ರಿನ ಬಿಟ್ಟು ,ಮನೆನಲ್ಲಿ ಮಾಡಿದ ಮದುವೆ ಬಗ್ಗೆ ಮಾತನಾಡ್ತರಲ್ಲ ಜನ , ಛೇ

  3. ಈ ಫೋಟೋದಲ್ಲಿಯೇ 18 ಜನ ಕಾಣಿಸ್ತಾ ಇದಾರೆ. ಖಚಿತ ಮಾಹಿತಿ ಪ್ರಕಾರ 100-150 ಜನ ಸೇರಿದ್ದೂ, ಯಾವದೇ ಮಾಸ್ಕ ಅಥವಾ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ದೇಶದ ಕಾನೂನನ್ನು ಉಲ್ಲಂಘಿಸಲಾಗಿದೆ. ರಾಜ್ಯ ಸರಕಾರ ಕ್ರಮಕೈಕೊಳ್ಳದಿದ್ದರೆ, ಕೇಂದ್ರ ಸರಕಾರ ವರದಿ ತರಿಸ್ಕೊಂಡು ವಿಮರ್ಶೆ ಮಾಡಬೇಕು. ಮಂದಿರ ಮಸ್ಜಿದ್ ಗಳಿಗೆ ಕಟ್ಟು ನಿಟ್ಟಿನಲ್ಲಿ ಕ್ರಮ ಕೈಕೊಡಾಗ ಇವರಿಗೆ ರಾಜಕೀಯ ರಕ್ಷಣೆ ಕೊಡುವದು ಎಷ್ಟು ಸರಿ.
    ಅಕಸ್ಮಾತ್ ಈ ಅರೆಅದಲ್ಲೂ ಸೋಂಕು ಅವರಿದ್ರೆ ಇದಕ್ಕೆ ಸರಕಾರವೇ ಹೊಣೆ.

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial