Homeಮುಖಪುಟಪಂಜಾಬ್‌ನ ಈ ಖಾಸಗಿ ವಿವಿ ಆಗಲಿದೆಯೇ ದೇಶದ ಅತಿದೊಡ್ಡ ಕೊರೊನಾ ಹಾಟ್‌ಸ್ಪಾಟ್‌?

ಪಂಜಾಬ್‌ನ ಈ ಖಾಸಗಿ ವಿವಿ ಆಗಲಿದೆಯೇ ದೇಶದ ಅತಿದೊಡ್ಡ ಕೊರೊನಾ ಹಾಟ್‌ಸ್ಪಾಟ್‌?

ಹಿಂದೊಮ್ಮೆ ಈ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಈ ದೇಶದ ಪ್ರಧಾನಿ ನರೇಂದ್ರ ಮೋದಿಯೇ ಭಾಗವಹಿಸಿದ್ದರು ಎಂಬುದು ಉಲ್ಲೇಖಾರ್ಹ.

- Advertisement -
- Advertisement -

ದೆಹಲಿ ಸರ್ಕಾರದ ಕಟ್ಟುನಿಟ್ಟಿನ ಆಜ್ಞೆಗಳ ನಡುವೆಯೂ ಸುಮಾರು 2,000 ಜನ ಇದ್ದ ದೆಹಲಿಯ ತಬ್ಲಿಘಿ ಜಮಾತ್ ಸಮಾವೇಶ ನಡೆಯಿತು. ಇದರಲ್ಲಿ ಭಾಗವಹಿಸಿದ ಕೆಲವರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಾಗ ದೇಶಾದಾದ್ಯಂತ ದೊಡ್ಡ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ಇದು ಕೊರೊನಾ ಹಾಟ್‌ಸ್ಪಾಟ್ ಆದಾಗ ಮುಖ್ಯವಾಹಿನಿ ಮಾಧ್ಯಮಗಳು ಒಂದು ಕೋಮಿನ ವಿರುದ್ಧ ಕೆಂಡಕಾರಿ, ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದವು. ತಬ್ಲಿಘಿ ವೈರಸ್‌, ಜಿಹಾದಿ ವೈರಸ್‌ ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್‌ ಆಗಿದ್ದವು.

ಈಗ ಪಂಜಾಬ್ ರಾಜ್ಯದ Lovely Professional University ದೇಶದ ಮತ್ತೊಂದು ಕೊರೊನಾ ಹಾಟ್‌‌ಸ್ಪಾಟ್‌ ಆಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಲಾಕ್‌ಡೌನ್‌ ಘೋಷಿಸಿ 25 ದಿನಗಳಾಗುತ್ತಿದ್ದರೂ 30,000 ವಿದ್ಯಾರ್ಥಿಗಳಿರುವ ದೇಶದ ಈ ದೊಡ್ಡ ಖಾಸಗಿ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ ಸಂಕೀರ್ಣಗಳಲ್ಲಿ 2100 ವಿದ್ಯಾರ್ಥಿಗಳು ಒಟ್ಟಿಗೆ ಇದ್ದು ಸಾಮಾಜಿಕ ಅಂತರ ಪಾಲಿಸಲಾಗಿಲ್ಲ ಎಂಬ ಭಯಾನಕ ಸುದ್ದಿ ಹೊರಬಿದ್ದಿದೆ. ಅಷ್ಟು ಮಾತ್ರವಲ್ಲದೇ ನೂರಾರು ವಿದೇಶಿ ವಿದ್ಯಾರ್ಥಿಗಳು ಇರುವ ಈ ಹಾಸ್ಟೆಲ್‌ನಲ್ಲಿ ಓರ್ವ ವಿದ್ಯಾರ್ಥಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ಪ್ರಕರಣ ಇಡೀ ದೇಶಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಆದರೆ, ಈ ಕುರಿತು ಯಾವ ಮಾಧ್ಯಮಗಳೂ ದೊಡ್ಡದಾಗಿ ಸುದ್ದಿ ಮಾಡುತ್ತಿಲ್ಲದಿರುವುದು ಆಶ್ಚರ್ಯಕರವಾಗಿದೆ. ಇನ್ನೂ ಜನರಿಗಂತು ಇದು ಚರ್ಚೆಯ ವಿಷಯವೇ ಆಗಿಲ್ಲದಿರುವುದು ವಿಪರ್ಯಾಸ.

ಕೊರೋನಾ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ದೇಶದ ಮೇಲೆ ಎರಡು ಬಾರಿ ಲಾಕ್‌ಡೌನ್‌ ಘೋಷಿಸಿದೆ. ಉತ್ಪಾದನಾ ವಲಯದಿಂದ ಶಾಲಾ-ಕಾಲೇಜಿನವರೆಗೆ ಎಲ್ಲಾ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ. ಹೀಗಾಗಿ LPU ವಿಶ್ವವಿದ್ಯಾಲಯ ತನ್ನ ಎಲ್ಲಾ ವಿದ್ಯಾರ್ಥಿಗಳನ್ನೂ ಮನೆಗೆ ಕಳುಹಿಸಬೇಕಿತ್ತು. ಆದರೆ, ವಿದೇಶಿ ವಿದ್ಯಾರ್ಥಿಗಳನ್ನೂ ಕ್ಯಾಂಪಸ್‌ನಲ್ಲೇ ಇಟ್ಟುಕೊಂಡು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದೆ.

ಈ ಕುರಿತು ಏಪ್ರಿಲ್.16 ರಂದು ಫಾಗ್ವಾರ ಜಿಲ್ಲಾಧಿಕಾರಿಗೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಗುರ್ವಿಂದರ್ ಸಿಂಗ್ ಜೋಹಾಲ್ ನೀಡಿರುವ ವರದಿಯಲ್ಲಿ, “ಕ್ಯಾಂಪಸ್‌ನೊಳಗೆ ಕೇವಲ 315 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮಾತ್ರ ವಾಸಿಸುತ್ತಿದ್ದಾರೆ ಎಂದು ವಿಶ್ವವಿದ್ಯಾನಿಲಯವು ಮೊದಲಿಗೆ ತಿಳಿಸಿತ್ತು. ಆದರೆ, ಈಗ ಭಾರತೀಯ ವಿದ್ಯಾರ್ಥಿಗಳೂ ಸೇರಿ 2,100 ಜನ ಕ್ಯಾಂಪಸ್ ಒಳಗೆ ಇದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಇದಲ್ಲದೆ, 570 ಮೆಸ್ ಕಾರ್ಮಿಕರು, 46 ವಾರ್ಡನ್‌ಗಳು ಮತ್ತು 179 ಬೋಧಕವರ್ಗದ ಸದಸ್ಯರೂ ಇದ್ದಾರೆ. ಈ ಪೈಕಿ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಪ್ರಕರಣ ಬಯಲಾಗಿದೆ” ಎಂದು ತಿಳಿಸಿದ್ದಾರೆ.

ಈ ನಡುವೆ ಶುಕ್ರವಾರ ಕ್ಯಾಂಪಸ್ ಎದುರು ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರು LPU ವಿಶ್ವವಿದ್ಯಾಲಯದ “ಪಂಜಾಬ್‌ನ ಹಾಟ್‌ಸ್ಪಾಟ್‌” ಆಗಿ ಮಾರ್ಪಟ್ಟಿದೆ. ಕ್ಯಾಂಪಸ್ ಸುತ್ತಲಿನ ಹಳ್ಳಿಗಳಿಗೂ ಈ ಮೂಲಕ ಆಘಾತವಾಗಿದೆ. ಹೀಗಾಗಿ ದೆಹಲಿಯ ಜಮಾಅತ್‌ ಮೇಲೆ ಆದಂತೆಯೇ ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ವಿಶ್ವವಿದ್ಯಾಲಯವನ್ನು ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಶ್ವವಿದ್ಯಾಲಯದ NOC ಯನ್ನು ಏಕೆ ಹಿಂಪಡೆಯಬಾರದು? ಎಂದು ಪಂಜಾಬ್‌ನ ಉನ್ನತ ಶಿಕ್ಷಣ ಮತ್ತು ಭಾಷಾ ಇಲಾಖೆ ಗುರುವಾರ ಈ ಸಂಸ್ಥೆಗೆ ಶೋಕಾಸ್ ನೋಟಿಸ್ ಸಹ ನೀಡಿದೆ.

ಹಿಂದೊಮ್ಮೆ ಈ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಈ ದೇಶದ ಪ್ರಧಾನಿ ನರೇಂದ್ರ ಮೋದಿಯೇ ಭಾಗವಹಿಸಿದ್ದರು ಎಂಬುದು ಉಲ್ಲೇಖಾರ್ಹ.

ಈ ನಡುವೆ ದೇಶದ ಅತಿದೊಡ್ಡ ಖಾಸಗಿ ವಿಶ್ವವಿದ್ಯಾಲಯವಾಗಿ LPU ಆರಂಭವಾದದ್ದು ಹೇಗೆ? ಈ ವಿವಿಯ ಘಟಿಕೋತ್ಸವಕ್ಕೆ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಭಾಗವಹಿಸುವಷ್ಟು ಎತ್ತರಕ್ಕೆ ಬೆಳೆದದ್ದು ಹೇಗೆ ಎಂದು ಹುಡುಕುತ್ತಾ ಹೋದರೆ ದೊಡ್ಡ ಖಾಸಗಿ ಲಾಬಿಯೊಂದು ಕಣ್ಣಮುಂದೆ ತೆರೆದುಕೊಳ್ಳುತ್ತದೆ.

LPU ವಿಶ್ವವಿದ್ಯಾಲಯ ಮತ್ತು ಖಾಸಗಿ ಲಾಬಿ

ಪಂಜಾಬ್ ಮೂಲಕ ದಿವಂಗತ ಬಲ್ದೇವ್ ರಾಜ್ ಮಿತ್ತಲ್ ಮತ್ತು ಕುಟುಂಬ ಅನೇಕ ಯಶಸ್ವಿ ವ್ಯವಹಾರದಲ್ಲಿ ಕೈಹಾಕಿ ಯಶಸ್ಸು ಗಳಿಸಿದ ನಂತರ 2005ರಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಭಾರತದಲ್ಲಿ ಆವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅವಕಾಶ ಇತ್ತೇ ವಿನಃ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ಇರಲಿಲ್ಲ. ಆದರೆ, ಈ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 2005 ಪಂಜಾಬ್‌ನಲ್ಲಿ ಕಾನೂನನ್ನೇ ಬದಲಿಸಲಾಗಿತ್ತು.

ಈ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಂದಿನ ಪಂಜಾಬ್ ಸರ್ಕಾರ ವಿಧಾನಸಭೆಯಲ್ಲಿ The Lovely Professional University Act, 2005 ಅನ್ನು ಮಂಡಿಸಿ ಅನುಮೋದನೆ ಪಡೆದಿತ್ತು. ಪರಿಣಾಮ ಇದೇ ಹೆಸರಿನಲ್ಲಿ 2006ರಿಂದ 24,000 ವಿದ್ಯಾರ್ಥಿಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭಿಸಿದ್ದ Lovely Professional University ಇಂದು ವಾರ್ಷಿಕ ಸಾವಿರಾರು ಕೋಟಿ ವ್ಯವಹಾರ ನಡೆಸುವ ಉದ್ಯಮವಾಗಿದೆ.

ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶನ ನಡೆಸುತ್ತಿರುವ ಸಮಯದಲ್ಲಿಯೇ ಸಂಸತ್‌ಗೆ ಬಾರದೇ ಈ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ ಎಂದರೆ ಈ ವಿಶ್ವವಿದ್ಯಾಲಯದ ವರ್ಚಸ್ಸನ್ನು ತಿಳಿಯಬಹುದು.

ಇಂದು ಇದೇ ವಿಶ್ವವಿದ್ಯಾಲಯ ಕಾನೂನು ಉಲ್ಲಂಘಿಸಿದೆ. ದೆಹಲಿಯ ತಬ್ಲಿಘಿ ಮಾದರಿಯ ಮತ್ತೊಂದು ಅನಾಹುತಕ್ಕೆ ಎಡೆಮಾಡಿಕೊಟ್ಟಿದೆ. ಆದರೆ, ಈ ದೇಶದ ಕಾನೂನು ವ್ಯವಸ್ಥೆ ನಿಜಕ್ಕೂ ತಬ್ಲಿಘಿ ಆಯೋಜಕರ ವಿರುದ್ಧ ನಡೆದುಕೊಂಡಂತೆಯೇ ಈ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಾ? ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಕಾರ್ಮಿಕರಿಗೆ ವೇತನ ಸಹಿತ ಕೆಲಸದ ಭದ್ರತೆ ಆದೇಶವನ್ನು ಸರ್ಕಾರ ಎರಡೇ ದಿನದಲ್ಲಿ ಹಿಂಪಡೆದದ್ದು ಏಕೆ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...