ವ್ಯಕ್ತಿಯೊಬ್ಬ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನ ಕಿಟಕಿಯ ಗಾಜನ್ನು ಸುತ್ತಿಗೆಯಿಂದ ಒಡೆದು ಹಾಕುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮುಸ್ಲಿಂ ವ್ಯಕ್ತಿ ರೈಲಿನ ಗಾಜನ್ನು ಒಡೆದಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.

ದೇಶದ ಹಲವು ಭಾಗಗಳಲ್ಲಿ ರೈಲು ಹಳಿ ಮೇಲೆ ವಿವಿಧ ವಸ್ತುಗಳನ್ನು ಇಟ್ಟು ರೈಲು ಹಳಿ ತಪ್ಪಿಸಲು ಪ್ರಯತ್ನಿಸುವದು, ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಸೇರಿದಂತೆ ಎಲ್ಲಾ ಘಟನೆಗಳನ್ನು ಮುಸ್ಲಿಮರ ತಲೆಗೆ ಕಟ್ಟುತ್ತಿರುವ ಸಂದರ್ಭದಲ್ಲಿ ವಂದೇ ಭಾರತ್ ರೈಲಿನ ಗಾಜನ್ನು ಮುಸ್ಲಿಂ ವ್ಯಕ್ತಿ ರಾಜಾರೋಷವಾಗಿ ಒಡೆದು ಹಾಕಿದ್ದಾನೆ ಎಂಬುವುದು ಮಹತ್ವ ಪಡೆದುಕೊಂಡಿದೆ. ಹಾಗಾಗಿ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ನಾವು ಮಾಹಿತಿ ಹುಡುಕಿದಾಗ ತಮಿಳುನಾಡಿನ ತಿರುನೆಲ್ವೇಲಿ ಕೋಚಿಂಗ್ ಡಿಪೋದಲ್ಲಿ ಸೆಕ್ಷನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಥೀರ ಮೂರ್ತಿ ಎಂಬವರು ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಮೆಂಟ್ ಲಭ್ಯವಾಗಿದೆ.
ಕಮೆಂಟ್ ಪ್ರಕಾರ, ವಂದೇ ಭಾರತ್ ರೈಲಿಗೆ ಹಾನಿ ಮಾಡಲು ಗಾಜುಗಳನ್ನು ಒಡೆಯಲಾಗಿಲ್ಲ. ಬದಲಿಗೆ ಈಗಾಗಲೇ ಒಡೆದು ಹೋಗಿದ್ದ ಕಿಟಕಿ ಗಾಜನ್ನು ಬದಲಾಯಿಸುವ ಪ್ರಕ್ರಿಯೆಯಾಗಿದೆ ಅದು ಎಂದು ತಿಳಿದು ಬಂದಿದೆ.
विशेष सुचना : सभी की जानकारी के लिए (Mr Manthira Moorthy M @RoboMoorthy Senior Section Engineer. Deputy InCharge – Tirunelveli Coaching Depot. Incharge – Vande Bharat Express.) के अनुसार ये वंदेभारत को नुकसान पहुंचने का नहीं है बल्कि क्रैस्केड window को निकलने के लिए किया… https://t.co/TmEpUZZXNa pic.twitter.com/7l7oFpyBjk
— 🇮🇳 RPT 🇮🇱 (@rp_tripathi) September 10, 2024
ನಾವು ಈ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಿದಾಗ, 10 ಸೆಪ್ಟೆಂಬರ್ 2024 ರಂದು ಟ್ರೈನ್ಸ್ ಆಫ್ ಇಂಡಿಯಾ ಎಂಬ ಎಕ್ಸ್ ಖಾತೆಯಿಂದ ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ. ಪೋಸ್ಟ್‌ನಲ್ಲಿ “ಇಲ್ಲ, ಅವರು ರೈಲಿಗೆ ಹಾನಿ ಮಾಡುತ್ತಿಲ್ಲ, ನಿರ್ವಹಣಾ ಡಿಪೋದಲ್ಲಿ ಹೊಸ ಗಾಜಿಗೆ ಬದಲಿಸಲು ಈಗಾಗಲೇ ಹಾನಿಗೊಳಗಾದ ಗಾಜನ್ನು ಒಡೆಯುತ್ತಿದ್ದಾರೆ. ಏಕೆಂದರೆ, ರೈಲಿನ ಗಾಜನ್ನು ಅದರ ಬಾಡಿಗೆ ಬಿಗಿಯಾಗಿ ಅಳವಡಿಸಿರುವುದರಿಂದ ಅದನ್ನು ತೆಗೆಯಲು ಒಡೆದು ಹಾಕುವ ಅವಶ್ಯಕತೆಯಿದೆ” ಎಂದು ಬರೆದುಕೊಳ್ಳಲಾಗಿದೆ.
No, He isn't damaging the train but breaking an already damaged glass to replace it with a new one at maintenance depot, as the glass is glued tightly with the body it needs to be broken first.pic.twitter.com/RLfn2Byf1i
— Trains of India (@trainwalebhaiya) September 10, 2024
ವೈರಲ್ ವಿಡಿಯೋದಲ್ಲಿ ಗಾಜು ಒಡೆಯುತ್ತಿರುವ ವ್ಯಕ್ತಿ ಮನೀಶ್ ಕುಮಾರ್ ಗುಪ್ತಾ, ಅವರು ಭಾರತೀಯ ರೈಲ್ವೆಯಲ್ಲಿ ಗುತ್ತಿಗೆ ಆಧಾರಿತ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದ್ದರಿಂದ ಮುಸ್ಲಿಂ ವ್ಯಕ್ತಿ ರೈಲಿನ ಗಾಜು ಒಡೆದಿದ್ದಾರೆ ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ.
ಇದನ್ನೂ ಓದಿ : ಪಾವಗಡದಲ್ಲಿ ಸಿಂಹ ಎಂದು ಸುಳ್ಳು ವಿಡಿಯೊ ಪ್ರಸಾರ ಮಾಡಿದ ‘ಝೀ ಕನ್ನಡ ನ್ಯೂಸ್’


