Homeಚಳವಳಿ'Prisonor No. 626710 is present' ಸಾಕ್ಷ್ಯ ಚಿತ್ರ | 'ನಿನ್ನೆಯ ಸಂಜೆ ಉಮರ್‌ ಜೊತೆ...'

‘Prisonor No. 626710 is present’ ಸಾಕ್ಷ್ಯ ಚಿತ್ರ | ‘ನಿನ್ನೆಯ ಸಂಜೆ ಉಮರ್‌ ಜೊತೆ…’

- Advertisement -
- Advertisement -

ನಿನ್ನೆ ಬೆಂಗಳೂರಿನ ಆಶಿರ್ವಾದ್‌ ಕೇಂದ್ರದಲ್ಲಿ Prisonor No. 626710 is present ಎಂಬ ಸಾಕ್ಷ್ಯ ಚಿತ್ರದ ಪ್ರದರ್ಶನ ಏರ್ಪಾಡಾಗಿತ್ತು. 6.30ಕ್ಕೆ ಪ್ರದರ್ಶನ ಎಂದು ಹಾಕಲಾಗಿತ್ತು. 6.15ಕ್ಕೇ ಹಾಲ್‌ ಫುಲ್‌ ಆಗಿತ್ತು. ಆದರೂ ಸಿನಿಮಾ ಶುರುವಾದದ್ದು 6.45ಕ್ಕೆ. ಬಂದವರನ್ನು ಕೂರಿಸಲು ಫಾದರ್‌ ಅರುಣ್‌ ಲೂಯಿಸ್ ಪೇಚಾಡುತ್ತಿದ್ದರು. ಸುಮಾರು ಜನ ನೆಲದ ಮೇಲೆಯೇ ಕೂತರು. ಕೂರಲೂ ಜಾಗವಿಲ್ಲ. ಹಾಗೂ ಹೀಗೂ ಮಾಡಿ ಚಿತ್ರವನ್ನು ಚಾಲು ಮಾಡಲಾಯಿತು.ಉಮರ್ ಖಾಲಿದ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ನೀವು ಈ ವಿಡಿಯೋ ನೋಡುತ್ತಿದ್ದೀರೆಂದರೆ ನಾನು ಬಂಧನವಾಗಿದ್ದೇನೆ ಎಂದೇ ಅರ್ಥ” ಎಂಬ ಉಮರ್‌ ನ ಮಾತಿನೊಂದಿಗೆ ಸಾಕ್ಷ್ಯ ಚಿತ್ರ ಪ್ರಾರಂಭವಾಯಿತು. ತನ್ನ ಬಂಧನವನ್ನು ನಿರೀಕ್ಷಿಸಿದ್ದ ಉಮರ್‌ ಮೊದಲೇ ರೆಕಾರ್ಡ್‌ ಮಾಡಿದ್ದ ವಿಡಿಯೋ ಅದು. ಸ್ವಯಂ ಉಮರ್‌, ಅವರ ಬಾಳ ಸಂಗಾತಿ ಜೋಸ್ನ ಹಾಗೂ ಅವರ ಮತ್ತೊಬ್ಬ ಮಿತ್ರನ ಮಾತುಗಳನ್ನು ನಿರೂಪಣೆಯಾಗಿ ಹೆಣೆಯಲಾಗಿದೆ.

ಇದನ್ನೂ ಓದಿ: ವಿಚಾರಣೆಯಿಲ್ಲದೆ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್

ಮಧ್ಯದಲ್ಲಿ 2016 ರಿಂದ 2020ರ ನಡುವೆ ಜೆ ಎನ್‌ ಯು ಹಾಗೂ ದೆಹಲಿಯಲ್ಲಿ ನಡೆದ ಘಟನಾವಳಿಗಳನ್ನು ಹಿನ್ನೆಲೆಯಾಗಿ ಸಮರ್ಥ ರೀತಿಯಲ್ಲಿ ಬಳಸಲಾಗಿದೆ. ಸಿನೆಮಾ ಉಮರ್‌ ಬಗ್ಗೆ ಮಾತನಾಡಿದರೂ ಅದು ಹೇಳುವುದು ಈ ದೇಶದ ದುರಂತ ಕಥೆಯನ್ನು. ಬಹಳ ಸರಳವಾಗಿ, ನೇರವಾಗಿ, ಕಣ್ಣಿಗೆ ಕಟ್ಟುವ ವಿಡಿಯೋ ತುಣುಕುಗಳ ಮೂಲಕ ಹಾಗೂ ಹೃದಯ ಕಲಕುವ ವಾಸ್ತವಗಳ ಮೂಲಕ ನಿರ್ದೇಶಕ ಲಲಿತ್‌ ವಾಚಾನಿ ಅವರು ಚಿತ್ರವನ್ನು ಕಟ್ಟಿಕೊಡುವ ಪರಿ simple but super.

ಸಿನಿಮಾ ಮುಗಿದ ಮೇಲೆ ಸಂವಾದದ ಆರಂಭಿಕ ಮಾತುಗಳನ್ನಾಡಲು ನನ್ನನ್ನು ಕರೆದರು. ಉಮರ್‌ ಅವರನ್ನು ಹತ್ತಿರದಿಂದ ಬಲ್ಲವನು ಎಂಬ ಕಾರಣಕ್ಕೆ. ಮನದಾಳದಿಂದ ಉಮರ್‌ ಗೆ ಕ್ಷಮೆ ಕೇಳಿದೆ. ಉಮರ್‌ ಬಿಡುಗಡೆಗೆ ಇಷ್ಟು ವರ್ಷವಾದರೂ ನಾವು ಗಟ್ಟಿ ದನಿ ಎತ್ತಲಿಲ್ಲವಲ್ಲಾ ಎಂಬ ಕೊರಗು ಕಾಡುತ್ತಿತ್ತು. ನನ್ನದು ಮಾತ್ರವಲ್ಲ ಬಂದವರೆಲ್ಲರ ಮನಸ್ಸುಗಳೂ ಉಮರ್‌ ಬಿಡುಗಡೆಗೆ ಏನಾದರೂ ಮಾಡಬೇಕು ಎಂದು ಒತ್ತಾಯಿಸುತ್ತಿದ್ದವು.

ಭಾಗವಹಿಸಿದವರಲ್ಲಿ ಬಹುತೇಕ ಯುವ ಮುಖಗಳು. ಅ ಮುಖಗಳಲ್ಲಿ ಒಂದು ಕಾಳಜಿ ಇತ್ತು, ಹೊಳಪಿತ್ತು. ಸಂವಾದದ ಭಾಗವಾಗಿ ಹಲವರು ಯುವ ಮಿತ್ರರು ಬಹಳ ಚೆನ್ನಾಗಿ ಮಾತನಾಡಿದರು. ಮರ ಸಂಸ್ಥೆಯ ರಾಮ್‌ ಅರ್ಥಪೂರ್ಣ ಮಾತುಗಳ ಮೂಲಕ ಸಭೆಯನ್ನು ಸಮಾರೋಪಗೊಳಿಸಿದರು. ಸಭೆ ಮುಗಿದರೂ ಅನೇಕರಿಗೆ ಹೊರಡುವ ಮನಸ್ಸಿರಲಿಲ್ಲ. ಅಲ್ಲಲ್ಲೆ ಗುಂಪಾಗಿ ನಿಂತು, ಕುಳಿತು, ಮಾತಿನಲ್ಲಿ ತಲ್ಲೀನರಾಗಿದ್ದರು. ಕಳಕಳಿಯ ಮನಸ್ಸುಗಳ ಕಲರವದ ಮಾತಾವರಣ ಎಲ್ಲರನ್ನು ಹಿಡಿದಿಟ್ಟುಕೊಂಡಿತ್ತು ಅನಿಸುತ್ತೆ.

ಇದನ್ನೂಓದಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ

ಯುವಜನರ ನಡುವೆ ಹಿರಿಯ ಹೋರಾಟಗಾರರೂ ಇದ್ದರು. ಯುವಜನರಿಗೆ ಮಾತನಾಡಲು ಬಿಟ್ಟು ಅವರು ಸುಮ್ಮನೆ ಕೂತು ಆಲಿಸುತ್ತಿದ್ದರು. ಒಂದು ರೀತಿಯಲ್ಲಿ ಆನಂದಿಸುತ್ತಿದ್ದರು. ಪ್ರಸಿದ್ಧ ರಂಗ ಕರ್ಮಿ ರಘುನಂದನ್ ಅವರು ವಿರೋಧ ಪಕ್ಷಗಳಾವುವೂ ಕೋರೆಗಾಂವ್‌ ಆರೋಪಿಗಳ ಬಗ್ಗೆಯಾಗಲೀ, ಉಮರ್‌ ಬಗ್ಗೆಯಾಗಲೀ ಮಾತನಾಡುತ್ತಿಲ್ಲ. ಎಲ್ಲಿ ತಮ್ಮನ್ನೂ ಭಯೋತ್ಪಾದಕರ ಬೆಂಬಲಿಗರು ಎಂದು ದೂಷಿಸಲಾಗುತ್ತೋ ಎಂಬ ಭಯ ಅವರಿಗೆ. ಆದರೆ ಈ ಪಕ್ಷಗಳೂ ಸಹ ಮಾತನಾಡಲೇಬಾಕಾದಂತಹ ವಾತಾವರಣವನ್ನು ಹಾಗೂ ಒತ್ತಡವನ್ನು ನಾವು ಸೃಷ್ಟಿಸಬೇಕು ಎಂದು ಸಲಹೆ ಮಾಡಿದರು.

ಸ್ಕ್ರೀನಿಂಗ್‌ ಹಾಗೂ ಸಂವಾದ ಎರಡನ್ನೂ ಮುಗಿಸಿಕೊಂಡು ಹೊರಟೆ. ಆದರೂ ಎರಡೂ ಹಿಂಬಾಲಿಸುತ್ತಲೇ ಬಂದವು. ಈಗಲೂ ಮನದ ಮೂಲೆಯಲ್ಲಿ ಗಟ್ಟಿಯಾಗಿ ಕೂತಿವೆ. ಏನು ಮಾಡುತ್ತೀರಿ ಎಂದು ಕೇಳುತ್ತಿವೆ. ಉತ್ತರ ಕಂಡುಕೊಳ್ಳಲೇಬೇಕು, ನಾವೆಲ್ಲರೂ ಕೂಡಿ.

ಮುಗಿಸುವ ಮುನ್ನ ಒಂದು ಮಾತು. ಈ ಸಾಕ್ಷ್ಯ ಚಿತ್ರ ತಾವು ನೋಡಲೇಬೇಕು. ಸಾಧ್ಯವಾದಷ್ಟು ನೀವಿರುವ ಕಡೆಗಳಲ್ಲಿ ಸ್ಕ್ರೀನಿಂಗ್‌ ಏರ್ಪಡಿಸಿ ಸಮಾನ ಮನಸ್ಕರ ಜೊತೆ ನೋಡಿ. ಆಗದಿದ್ದರೆ ವ್ಯಕ್ತಿಗತವಾಗಿಯಾದರೂ ನೋಡಿ. ಚಿತ್ರದ ಲಿಂಕ್‌ ಬೇಕಿದ್ದಲ್ಲಿ ನಿಸಾರ್‌ [8056035809] ಅವರನ್ನು ಸಂಪರ್ಕಿಸಿ.

ಉಮರ್‌ ಬಳಿ ಮತ್ತೊಮ್ಮೆ ಕ್ಷಮೆ ಕೋರುತ್ತಾ.

ವಿಡಿಯೊನೋಡಿ: ಕಟ್ಟುತ್ತೇವಾ ನಾವು ಜಾತಿ ಇಲ್ಲದ ಭೀತಿ ಇಲ್ಲದ ನಾಡ ಕಟ್ಟುತ್ತೇವೆ; ಹಾಡು ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...