ಲಾಕ್‌ಡೌನ್ ಸಮಯದಲ್ಲಿ ಪೊಲೀಸರಿಂದ ದೌರ್ಜನ್ಯ ನಡೆಯುತ್ತಿರುವ ಹಲವು ವಿಡಿಯೋಗಳು ವೈರಲ್ ಆದನಂತರ ಪೊಲೀಸರ ಹೊಡೆಯುವಿಕೆ ನಿಂತಿದೆ. ಆದರೆ ಈಗ ಜನರೇ ವಾಪಸ್ ಪೊಲೀಸರಿಗೆ ಹೊಡೆಯುತ್ತಿದ್ದಾರೆ ಎಂಬ ಸಂದೇಶಗಳು ಹರಿದಾಡುತ್ತಿವೆ.
ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರನ್ನು ಖಾವಿ ಧರಿಸಿದ ಪೂಜಾರಿಯೊಬ್ಬರು ಹಿಡಿದಿಟ್ಟುಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವೀಡಿಯೊದಲ್ಲಿ ಪೂಜಾರಿಯು ಪೋಲೀಸನ್ನು ಉಸಿರುಗಟ್ಟಿಸುವ ರೀತಿಯಲ್ಲಿ ಕುತ್ತಿಗೆಯನ್ನು ಹಿಡಿಯುತ್ತಿರುವುದು ಕಾಣಬಹುದು. ‘ಜಾಗೊ ಇಂಡಿಯಾ’ ಎಂಬ ಫೇಸ್ ಬುಕ್ ಪೇಜ್ ಈ ವಿಡಿಯೊ ಪೋಸ್ಟ್ ಮಾಡಿದೆ. ಈ ಪೋಸ್ಟ್ ಈವರೆಗೆ 18,000 ಕ್ಕೂ ಹೆಚ್ಚು ಶೇರುಗಳಾಗಿದೆ.
Anda bokth, police बाले koमार क्यू रहे हो???
Posted by Jago India on Monday, April 6, 2020
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೊವೀಡ್ ಲಸಿಕೆ ಪಡೆದ ಮೇಲೆ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಶಕ್ತಿ ದೊರೆಯುತ್ತದೆಯೇ?
ಈ ವೀಡಿಯೋ ಬಗ್ಗೆ “ಆಲ್ಟ್ ನ್ಯೂಸ್” ಫ್ಯಾಕ್ಟ್ ಚೆಕ್ ನಡೆಸಿದೆ. ಪ್ರಸ್ತುತ ವಿಡಿಯೊ ಮಾರ್ಚ್ 18, 2019 ರಂದು ಯೂಟ್ಯೂಬ್ ಚಾನೆಲಾದ CWE ತನ್ನ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋ ಇದು ಎಂದು ಕಂಡು ಹಿಡಿದಿದೆ. ಕೆಳಗೆ ಇರುವ ವೀಡಿಯೊದಲ್ಲಿ 2:52 ನಿಮಿಷಗಳ ನಂತರ ವೈರಲ್ ಆದ ಚಿತ್ರಣವನ್ನು ನೋಡಬಹುದು.
ವೀಡಿಯೊವನ್ನು ವಿಭಿನ್ನ ಕ್ಯಾಮೆರಾ ಕೋನಗಳಿಂದ ಚಿತ್ರೀಕರಿಸಲಾಗಿರುವುದರಿಂದ, ಇದು ವೃತ್ತಿಪರವಾಗಿ ತಯಾರಿಸಲ್ಪಟ್ಟಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಅಂದರೆ ಅದು ಚಿತ್ರೀಕರಣಕ್ಕಾಗಿ ಮಾಡಿದ ನಟನೆಯಾಗಿದ್ದು ನಿಜವಾಗಿ ಹೊಡೆದುದ್ದಲ್ಲ. ಇದಲ್ಲದೆ, CWE ಚಾನೆಲ್ ನಲ್ಲಿ ಇಂತಹ ಅನೇಕ ಇತರ ವೀಡಿಯೊಗಳನ್ನು ಕಾಣಬಹುದಾಗಿದೆ.
ಈ ವೀಡಿಯೋದಲ್ಲಿರುವ ಪೊಲಿಸ್ ಪಾತ್ರದ ಹೆಸರು “ಸಿಂಘಮ್ ದುಬೆ” ಆಗಿದ್ದು, ನಟನ ಹೆಸರು ಮನೀಶ್ ದುಬೆ ಎಂದಾಗಿದೆ. ಇವರು ತನ್ನ ಫೇಸ್‌ಬುಕ್ ಬಯೋದಲ್ಲಿ ತನ್ನನ್ನು ತಾನು ವೃತ್ತಿಪರ ಕುಸ್ತಿಪಟು ಎಂದು ಗುರುತಿಸಿಕೊಳ್ಳುತ್ತಾರೆ.

CWE ಚಾನೆಲ್ ನ ಮತ್ತೊಂದು ವಿಡಿಯೊವನ್ನು ಅವಿನಾಶ್ ಎಂಬ ಫೇಸ್‌ಬುಕ್ ಅಕೌಂಟಿನಿಂದ ಪೋಸ್ಟ್ ಮಾಡಿ “ಹಿಂದೂಸ್ತಾನಿ ಮಹಿಳೆಯ ಶಕ್ತಿ ನೋಡಿ. ಮುಂಬೈಯಲ್ಲಿ, ಪಾಕಿಸ್ತಾನದ ಮಹಿಳಾ ಫ್ರೀಸ್ಟೈಲ್ ಕುಸ್ತಿಪಟುವೊಬ್ಬಳು ಅಖಾಡಕ್ಕಿಳಿದು, ಭಾರತೀಯ ಮಹಿಳೆಯರಿಗೆ ಅಶ್ಲೀಲವಾಗಿ ಬೈದು ಅಖಾಡಕ್ಕೆ ಇಳಿಯುವಂತೆ ಸವಾಲು ಒಡ್ಡುತ್ತಾಳೆ. ಅವಳ ಸವಾಲನ್ನು ಸಂಧ್ಯಾ ಫಡ್ಕೆ ಎಂಬ ದುರ್ಗಾ ವಾಹಿನಿಯ ಮಹಿಳೆ ಸ್ವೀಕರಿಸಿದಳು” ಎಂದು ಬರೆಯಲಾಗಿದೆ.
एक हिंदुस्तानी औरत की ताकत ?देखीये। मुम्बई मे एक पाकिस्तानी लेडीज फ्रीस्टाइल कुस्तीबाज महिला रिंग मे खडे हो कर भारतीय महिला ओ को गाली देते हुये रिग मे आने के लिये चैलेन्ज करने लगी इसके चैलेन्ज को स्वीकार करते हुये दुर्गा वाहिनी की महिला संन्ध्या फडके नाम की महिला रिंग मे उतर कर आई आगे क्या हुआ इस वीडियो मे आप खुद देखे ?
Posted by Avinash Singh Rajput on Tuesday, January 21, 2020
CWE ಎಂದರೆ ಕಾಂಟಿನೆಂಟಲ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್. ಚಾನೆಲ್ ತನ್ನನ್ನು “ಮೊದಲ ಭಾರತೀಯ ಕುಸ್ತಿ ಮನರಂಜನಾ ಅಕಾಡೆಮಿ” ಎಂದು ಕರೆದುಕೊಳ್ಳುತ್ತದೆ. ಈ ಹಿಂದೆಯೂ ಈ ಚಾನೆಲ್ ವಿಡಿಯೋಗಳನ್ನು ಇಟ್ಟುಕೊಂದು ನೈಜ ಘಟನೆಗಳೆಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಸೋನಿಯಾ ಗಾಂಧಿಯ ಎಡಿಟೆಡ್ ಚಿತ್ರವನ್ನು ಹಂಚುತ್ತಿರುವ ಬಿಜೆಪಿ


