ವಿಶ್ವದ ಒಬ್ಬ ಸಸ್ಯಹಾರಿ ಕೂಡಾ ಕೊರೊನಾ ವೈರಸ್‌ನಿಂದ ಬಳಲುತ್ತಿಲ್ಲ. ಮಾಂಸಹಾರದ ಫ್ರೋಟೀನಿನಿಂದ ವೈರಸ್ ಬದುಕುಳಿಯುತ್ತದೆ, ಇದರಿಂದಾಗಿ ಮಾಂಸಾಹಾರಿಗಳಿಗೆ ಕೊರೊನಾ ಸೋಂಕಿನ ಅಪಾಯವಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಸಂದೇಶವನ್ನು ‘ವಿಶ್ವ ಆರೋಗ್ಯ ಸಂಸ್ಥೆ’ಯ ‘ಗೌಡೆನ್ ಗಲಿಯ’ ಅವರು ಕೂಡಾ ದೃಢಪಡಿಸಿದ್ದಾರೆ ಎಂಬ ಬರಹವಿರುವ ಚಿತ್ರಗಳು ಟ್ವಿಟ್ಟರ್ ಹಾಗೂ ಫೇಸ್ ಬುಕ್ ಸೇರಿದಂತೆ ಜಾಲತಾಣದಾದ್ಯಂತ ಹರಡುತ್ತಿದೆ.


All vegetarian Sanatan Dharmis only need little care about Social Distancing and enjoy long healthy life.@DrGarekar pic.twitter.com/6t9OypIYvR
— Mastana (@HarishK04131926) May 12, 2020
ಸಸ್ಯಾಹಾರದಿಂದ ಕೊರೊನಾ ಬರುವುದಿಲ್ಲ ನಿಜವೇ?: ಫ್ಯಾಕ್ಟ್-ಚೆಕ್
ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ನಡೆಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಈ ರೀತಿಯಾಗಿ ಹೇಳಿಕೆ ನೀಡಿಲ್ಲ ಎಂದು ಅದು ದೃಢಪಡಿಸಿದೆ.
ಅಲ್ಲದೆ ಆಲ್ಟ್ ನ್ಯೂಸ್‌ಗೆ WHO ದ ಕಚೇರಿಯಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡಿ “WHO ಅಂತಹ ಯಾವುದೇ ಆಹಾರವನ್ನು ಅನುಮೋದಿಸಿ ಅಥವಾ ಖಂಡಿಸಿ ಹೇಳಿಕೆಯನ್ನು ನೀಡಿಲ್ಲ” ಎಂದು ಹೇಳಿದೆ. ಹೀಗಾಗಿ ಈ ಪ್ರತಿಪಾದನೆ ಸುಳ್ಳಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿ ಸುಪ್ರಿಯಾ ಬೆಜ್ಬಾರುವಾ ಅವರು, ವೈರಲ್ ಆಗುತ್ತಿರುವ ಸಂದೇಶವನ್ನು ಖಂಡಿಸಿರುವುದನ್ನು ಅಂತರಾಷ್ಟ್ರೀಯ ಪತ್ರಿಕೆ ಎಪಿಎಫ್ ವರದಿ ಮಾಡಿದೆ.
ಇದರ ಬದಲಾಗಿ ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಪೌಷ್ಠಿಕಾಂಶದ ಸಲಹೆ ನೀಡುತ್ತಾ, ಕೊರೊನಾ ಸಾಂಕ್ರಮಿಕ ಸಮಯದಲ್ಲಿ ವಯಸ್ಕರಿಗೆ ಮಾಂಸ ಸೇವಿಸುವಂತೆ ಶಿಫಾರಸ್ಸು ಮಾಡುತ್ತದೆ.
ಗೌಡೆನ್ ಗಲಿಯಾ ಅವರ ಹೇಳಿಕೆ
ಗ್ರಾಫಿಕ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಚೀನಾ ಪ್ರತಿನಿಧಿ ಗೌಡೆನ್ ಗಲಿಯಾ ಅವರ ಹೇಳಿಕೆಯು ನಿಜವಾಗಿದ್ದರೂ, ಅದನ್ನು ಬೇರೆ ಸಂದರ್ಭದಿಂದ ಆಯ್ಕೆ ಮಾಡಿದ್ದಾರೆ. ಚೀನಾದ ವುಹಾನ್‌ನಲ್ಲಿನ ಸಮುದ್ರಹಾರ ಮಾರುಕಟ್ಟೆಯಲ್ಲಿ ಪತ್ತೆಯಾದ ಕೊರೊನಾ ವೈರಸ್ ಕುರಿತಾದ ಸಿಎನ್‌ಎನ್ ವರದಿಯಲ್ಲಿ ಗ್ಯಾಲಿಯಾ ಹೇಳಿಕೆಗಳು ಕಾಣಿಸಿಕೊಂಡಿವೆ.
“ಸಿಎನ್ಎನ್ ಈ ವೀಡಿಯೊವನ್ನು ಮಾರುಕಟ್ಟೆಯೊಳಗೆ ಚಿತ್ರೀಕರಿಸಲಾಗಿದೆ, ಇಲ್ಲಿ ಸಮುದ್ರಾಹಾರಕ್ಕಿಂತ ಹೆಚ್ಚು ಬೇರೆಯದನ್ನೇ ಮಾರಾಟ ಮಾಡಲಾಗುತ್ತಿದೆ ಎಂದು ತೋರಿಸುತ್ತದೆ. ಪಕ್ಷಿಗಳು, ಹಾವುಗಳು, ರಕೂನ್ ನಾಯಿಗಳು ಸೇರಿದಂತೆ ಇತರ ಜೀವಂತ ಕಾಡು ಪ್ರಾಣಿಗಳನ್ನು ಮಾರಾಟ ಮಾಡುತ್ತಿವೆ ಎಂದು ಸೂಚಿಸುತ್ತದೆ. ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿರಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ” ಎಂದು ವರದಿ ಹೇಳುತ್ತದೆ.
ನಂತರ ವೀಡಿಯೊದಲ್ಲಿ 3:40 ನಿಮಿಷಗಳಲ್ಲಿ, ಗಲಿಯಾ, “ಪ್ರಾಣಿ ಪ್ರಪಂಚದೊಂದಿಗಿನ ನಮ್ಮ ಇಂಟರ್ಫೇಸ್‌ನಲ್ಲಿ, ಯಾವಾಗಲೂ ಸ್ಪಿಲ್‌ಓವರ್‌ನ ಅಪಾಯವಿರುತ್ತದೆ ಮತ್ತು ಜನರು ಮಾಂಸವನ್ನು ತಿನ್ನುವವರೆಗೂ ಸೋಂಕಿನ ಅಪಾಯವಿದೆ” ಎಂದು ಹೇಳಿದರು.
ಹೀಗಾಗಿ, ಗಲಿಯಾ ಮಾಂಸ ಸೇವನೆಯ ವಿರುದ್ಧ ಸಲಹೆ ನೀಡುವುದಿಲ್ಲ ಆದರೆ ಅವರ ಹೇಳಿಕೆಯು ವಿಲಕ್ಷಣ ಮಾಂಸಹಾರದ ಕುರಿತಾಗಿದೆ. ಆದ್ದರಿಂದ, ಯಾವುದೇ ಸಸ್ಯಾಹಾರಿಗಳಿಗೆ ಕೊರೊನಾ ವೈರಸ್ ಬರುವುದಿಲ್ಲ ಎಂಬ ಹೇಳಿಕೆ ತಪ್ಪಾಗಿದೆ.
ಓದಿ: ಕೊರೊನಾ ವೈರಸ್ ಎಂದಿಗೂ ಹೋಗದಿರಬಹುದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ



Can you declaired a name of vegetarian who is suffering from carona
Can you declaired any one of vegetarian person who is suffering from carona