ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ಹಿಂದೂ ಮಹಿಳೆಯರನ್ನು ಬೆನ್ನಟ್ಟಿ ಥಳಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಕೆಲ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
“ಬಾಂಗ್ಲಾದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ನೋಡಿ. ಹಿಂದೂ ಹೆಣ್ಣು ಮಕ್ಕಳು ಬುರ್ಕಾ ಹಾಕದೆ ರಸ್ತೆಯಲ್ಲಿ ಹೋಗುತ್ತಾ ಇದ್ದಾರೆ ಎಂದು, ಅವರನ್ನು ಸೂ*ಯರು ಎಂದು ನಡು ರಸ್ತೆಯಲ್ಲಿ ಜರಿದು ಒಬ್ಬ ಮತಾಂಧ ಜಿಹಾದಿ ಮುಸ್ಲಿಂ ಯುವಕ ಹೇಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾ ಇದ್ದಾರೆ ನೋಡಿ, ಮನುಷ್ಯತ್ವ ಇಲ್ಲದವರು’ ಎಂಬ ಬರಹದೊಂದಿಗೆ ಪದ್ಮನಾಭ ಉಪಾಧ್ಯಾಯ ಎಂಬ ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ 12ರಂದು ವಿಡಿಯೋ ಹಂಚಿಕೊಳ್ಳಲಾಗಿದೆ.
ಬಾಂಗ್ಲಾದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ನೋಡಿ ಬಹುಶ್ಯ ಹಿಂದೂ ಹೆಣ್ಣು ಮಕ್ಕಳ ಮೇಲೆ ಅವರು ಬುರ್ಕಾ ಹಾಕದೆ ರಸ್ತೆಯಲ್ಲಿ ಹೋಗುತ್ತಾ ಇದ್ದಾರೆ ಎಂದು , ಅವರನ್ನು ಸೂಳೆಯರು ಎಂದು ನಡು ರಸ್ತೆಯಲ್ಲಿ ಜರಿದು ಒಬ್ಬ ಮತಾಂಧ ಜಿಹಾದಿ ಮುಸ್ಲಿಂ ಯುವಕ ಹೇಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾ ಇದ್ದಾರೆ ನೋಡಿ, ಮನುಷ್ಯತ್ವ ಇಲ್ಲದ pic.twitter.com/wXc88rq97n
— Padmanabha upadhya (@nrup25) September 12, 2024
“ಬಾಂಗ್ಲಾದೇಶದಲ್ಲಿ ಬುರ್ಖಾ ಹಾಕಿಲ್ಲ ಎಂಬ ಕಾರಣಕ್ಕೆ ಹಿಂದೂ ಹುಡುಗಿಯರನ್ನು ಬೆನ್ನಟ್ಟಿ ಥಳಿಸಲಾಗುತ್ತಿದೆ. ಈ ಭೂಮಿಯನ್ನು ನರಕವನ್ನಾಗಿ ಮಾಡಲು ಮಾತ್ರ ಅವರನ್ನು ಕಳುಹಿಸಲಾಗಿದೆ. ಭವಿಷ್ಯದಲ್ಲಿ ನಿಮ್ಮ ಮುಂದಿನ ಪೀಳಿಗೆಯನ್ನು ನಾವು ನೋಡುತ್ತಿದ್ದೇವೆ. ಇದು ನಿಮಗೆ ಇನ್ನೂ ಅರ್ಥವಾಗುತ್ತಿಲ್ಲವೇ? ಎಂದು 11 ಸೆಪ್ಟೆಂಬರ್ 2024 ರಂದು ಸನಾತನಿ ಹಿಂದೂ ರಾಕೇಶ್ ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿತ್ತು.
बांग्लादेश में बुर्का न पहनने पर हिंदू लड़कियों का पीछा किया जा रहा है और उनकी पिटाई की जा रही है।
In Bangladesh, Hindu girls are being chased and beaten for not wearing burqa.
इस धरती को नर्क बनाने के लिए ही इन्हें भेजा गया है।🚨🚨 हो सकता है ये भारत मे भी भविष्य मे आपकी अगली… pic.twitter.com/T3axfNIj4W
— सनातनी हिन्दू राकेश 100% Follow Back (@modified_hindu6) September 11, 2024
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ನಾವು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೋ ಮೇಲೆ ‘ಇಸ್ಲಾಮಿಕ್ ಮೀಡಿಯಾ ಟಿವಿ ತಬಕ್‌ಪುರ್’ ಎಂದು ಬರೆದಿರುವುದು ಕಂಡು ಬಂದಿದೆ. ನಾವು ಈ ಕುರಿತು ಸರ್ಚ್ ಮಾಡಿದಾಗ, 30 ಆಗಸ್ಟ್ 2024 ರಂದು ಫೇಸ್ಬುಕ್ ಪೇಜ್‌ನಲ್ಲಿ ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ. ಪೋಸ್ಟ್ ಪ್ರಕಾರ, ಈ ಘಟನೆ ಢಾಕಾದ ಶ್ಯಾಮೋಲಿ ಚೌಕದಲ್ಲಿ ನಡೆದಿದೆ.
ವಿಡಿಯೋ ಜೊತೆಗೆ “ದಯವಿಟ್ಟು ಕೊನೆಯವರೆಗೂ ವೀಡಿಯೊ ನೋಡಿ ಅದಕ್ಕು ಮೊದಲು ಕಾಮೆಂಟ್ ಮಾಡಬೇಡಿ. ಈ ವಿಡಿಯೋದಲ್ಲಿರುವುದು ಮುಖ್ಯ ಮಾಲೀಕ ಮಹಿಳೆ. ನೀವು ಅವಳನ್ನು ನೋಡಿದರೆ ಕೊಲ್ಲಿ. ಇದು ನಿಮ್ಮ ಧಾರ್ಮಿಕ ಜವಾಬ್ದಾರಿಯಾಗಿದೆ. ಸೇನಾ ಪೊಲೀಸರು ನಮ್ಮ ಬೆಂಬಲಕ್ಕೆ ಇದ್ದಾರೆ. ದಯವಿಟ್ಟು ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ವಿಡಿಯೋವನ್ನು ಆದಷ್ಟು ಶೇರ್ ಮಾಡಿ. ಶ್ಯಾಮೋಲಿ ಚೌಕದಲ್ಲಿ ಇದು ನಡೆದಿದೆ. ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿ” ಎಂದು ಬರೆಯಲಾಗಿದೆ.
ವಿಡಿಯೋ ಕುರಿತು ಸ್ಪಷ್ಟ ಮಾಹಿತಿ ಸಿಗದ ಕಾರಣ ನಾವು ಈ ಘಟನೆಯ ಕುರಿತು ಹೆಚ್ಚಿನ ವಿವರಣೆಗಾಗಿ ಗೂಗಲ್ನಲ್ಲಿ ‘dhaka men beaten women’ಎಂದು ಕೀವರ್ಡ್ ಸರ್ಚ್ ಮಾಡಿದ್ದೇವೆ. ಆಗ ಬೆಂಗಾಲಿ ಭಾಷೆಯಲ್ಲಿ ಪ್ರಕಟವಾದ ಕೆಲವು ಲೇಖನ ಲಭ್ಯವಾಗಿದೆ. Our News BD ಎಂಬ ವೆಬ್ಸೈಟ್ನಲ್ಲಿ ಇದೇ ವಿಡಿಯೋದ ಸ್ಕ್ರೀನ್ ಶಾಟ್ನೊಂದಿಗೆ ಸೆ. 2, 2024 ರಂದು ಸುದ್ದಿ ಪ್ರಕಟವಾಗಿದ್ದು ‘ರಾಜಧಾನಿಯಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸಿದ ವಿಡಿಯೋ ವೈರಲ್ ಆಗಿದೆ’ ಎಂದ ಶೀರ್ಷಿಕೆ ನೀಡಲಾಗಿದೆ.

ವರದಿಯ ಪ್ರಕಾರ, ಡಾಕಾದ ಹಲವು ಪ್ರದೇಶಗಳಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸಿದ ವಿಡಿಯೋ ವೈರಲ್ ಆಗಿದೆ. ಲೈಂಗಿಕ ಕಾರ್ಯಕರ್ತರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದೆ ಎಂದು ಸಂತ್ರಸ್ತ ಲೈಂಗಿಕ ಕಾರ್ಯಕರ್ತರು ದೂರಿದ್ದಾರೆ. ಯುವಕನೋರ್ವ ಹಸಿರು ಬಣ್ಣದ ಪೈಪ್‌ನಿಂದ ಮಹಿಳೆಗೆ ತೀವ್ರವಾಗಿ ಥಳಿಸಿದ್ದಾನೆ.
ಕಲ್ಯಾಣಮಯಿ ನಾರಿ ಸಂಘ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ, ಕಳೆದ ಆಗಸ್ಟ್ 27 ರಿಂದ ಲೈಂಗಿಕ ಕಾರ್ಯಕರ್ತೆಯರ ಮೇಲೆ ಒಬ್ಬರ ನಂತರ ಒಬ್ಬರು ಹಲ್ಲೆ ನಡೆಸುತ್ತಿದ್ದಾರೆ. ಕನಿಷ್ಠ 60 ಮಹಿಳಾ ಲೈಂಗಿಕ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಈಗಾಗಲೇ ಮಾತನಾಡಿದ್ದೇವೆ ಎಂದು ಮಹಿಳಾ ಸಂಘ ನೀಡಿದ ಹೇಳಿಕೆ ಈ ವರದಿಯಲ್ಲಿದೆ.
ಹಾಗೆಯೆ ಬಾಂಗ್ಲಾದೇಶದ Kaler Kantho, jaijaidinbd ಮಾಧ್ಯಮ ಕೂಡ ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸುವ ವಿಡಿಯೋ ವೈರಲ್ ಆಗಿದೆ. ಕೆಲವು ಯುವಕರು ವಿವಿಧ ಪ್ರದೇಶಗಳಲ್ಲಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಸಂತ್ರಸ್ತ ಲೈಂಗಿಕ ಕಾರ್ಯಕರ್ತರು ದೂರಿದ್ದಾರೆ’ ಎಂದು ಬರೆಯಲಾಗಿದೆ.
ಒಟ್ಟಿನಲ್ಲಿ, ಬಾಂಗ್ಲಾದೇಶದ ಢಾಕಾದಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಥಳಿಸಿರುವ ಘಟನೆಯನ್ನು ಬುರ್ಖಾ ಧರಿಸದ ಕಾರಣಕ್ಕಾಗಿ ಹಿಂದೂ ಮಹಿಳೆಯರನ್ನು ಥಳಿಸಲಾಗಿದೆ ಎಂಬ ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : FACT CHECK : ರಾಜ್ಯದ ಹಲವೆಡೆ ರಾತ್ರಿ ಹೊತ್ತು ಸಿಂಹಗಳ ಓಡಾಟ…ವೈರಲ್ ವಿಡಿಯೋಗಳ ಅಸಲಿಯತ್ತೇನು?


