“ಇಂಗ್ಲೆಂಡ್ ಪೊಲೀಸರು ಮುಸ್ಲಿಮರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ” ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಫೋಟೋದಲ್ಲಿ ಕೆಲ ಮುಸ್ಲಿಂ ವಸ್ತ್ರಧಾರಿಗಳು ನಿಂತುಕೊಂಡಿರುವುದು ಮತ್ತು ಸಮವಸ್ತ್ರ ಧರಿಸಿದ ಪೊಲೀಸ್ ಸಿಬ್ಬಂದಿ ಅವರ ಕಾಲಿಗೆ ಎರಗಿದಂತೆ ಕಾಣುತ್ತಿದೆ.
This image reflects current policing strategy perfectly. pic.twitter.com/QEOUAzEbY5
— Paul Golding (@GoldingBF) August 15, 2024
ಫೋಟೋ ಹಂಚಿಕೊಂಡ ಅನೇಕರು “ಈ ಫೋಟೋ ಪ್ರಸ್ತುತ ಪರಿಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಅಂದರೆ, ಇಂಗ್ಲೆಂಡ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ. ಅವರು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಪೊಲೀಸರು ಅವರ ಮುಂದೆ ತಲೆ ಬಾಗುವಂತೆ ಆಗಿದೆ” ಎಂಬುವುದು ವಾದ.
This image reflects current policing strategy perfectly. pic.twitter.com/bBb46VT4BL
— Godfrey Bloom (@GodfreyBlool) August 16, 2024
ಹಾಗಾದರೆ, ಇಂಗ್ಲೆಂಡ್ ಪೊಲೀಸರು ನಿಜವಾಗಿಯೂ ಮುಸ್ಲಿಮರ ಕಾಲಿಗೆ ಬಿದ್ರಾ ಎಂದು ನೋಡೋಣ
ಫ್ಯಾಕ್ಟ್‌ಚೆಕ್ : ವೈರಲ್ ಫೋಟೋ ನಿಜಾನಾ? ಎಂದು ಪರಿಶೀಲಿಸಲು ನಾವು ಈ ಕುರಿತ ಯಾವುದಾದರು ಮಾಧ್ಯಮ ವರದಿಗಳಿವೆಯಾ? ಎಂದು ಹುಡುಕಿದ್ದೇವೆ. ಈ ವೇಳೆ ಈ ಫೋಟೋ ಕುರಿತು ಯಾವುದೇ ವರದಿಗಳು ನಮಗೆ ಲಭ್ಯವಾಗಿಲ್ಲ.
ಬಳಿಕ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಕೃತಕ ಬುದ್ದಿಮತ್ತೆ (ಎಐ) ಮೂಲಕ ರಚಿಸಿದ್ದಾಗಿರಬಹುದು ಎಂಬ ಸಂದೇಹ ನಮಗೆ ಉಂಟಾಗಿದೆ. ಹಾಗಾಗಿ, ಎಐ ಡಿಟೆಕ್ಟರ್, ಹೈವ್ ಮಾಡರೇಶನ್, ಹಗ್ಗಿಂಗ್ ಫೇಸ್ ಸೇರಿದಂತೆ ವಿವಿಧ ಎಐ ಪತ್ತೆ ಹಚ್ಚುವ ಸಾಧನಗಳ ಮೂಲಕ ಫೋಟೋವನ್ನು ಪರಿಶೀಲಿಸಿದ್ದೇವೆ. ಈ ವೇಳೆ ಫೋಟೋ ಎಐ ನಿರ್ಮಿತ ಎಂದು ನಮಗೆ ಖಚಿತವಾಗಿದೆ.
ಹೈವ್ ಮಾಡರೇಶನ್ ಎಂಬ ಎಐ ಪತ್ತೆ ಸಾಧನ, ವೈರಲ್ ಫೋಟೋ ಶೇ.86ರಷ್ಟು ಎಐ ನಿರ್ಮಿತ ಎಂದು ಹೇಳಿದೆ. ಇತರ ಸಾಧನಗಳು ಕೂಡ ಫೋಟೋ ಎಐ ನಿರ್ಮಿತ ಎಂದು ಖಚಿತಪಡಿಸಿವೆ.

ಹಾಗಾಗಿ, ಇಂಗ್ಲೆಂಡ್ ಪೊಲೀಸರು ಮುಸ್ಲಿಮರ ಕಾಲಿಗೆ ಬಿದ್ದಿದ್ದಾರೆ ಎಂಬುವುದು ಸುಳ್ಳು.
ಇದನ್ನೂ ಓದಿ : FACT CHECK : ಕೇರಳದಲ್ಲಿ ಕಾಗೆ ಬಂದು ತ್ರಿವರ್ಣ ಧ್ವಜ ಹಾರಿಸಿರುವುದು ನಿಜಾನಾ?


