ಅಮೆರಿಕದ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯ ಪ್ರತಿಮೆ ಅನಾವರಣ ಮಾಡಲಾಗಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
“ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಿರಾಟ್ ಕೊಹ್ಲಿ ಅವರ ಪ್ರತಿಮೆ ಅನಾವರಣ ಮಾಡಿದ್ದಾರೆ. ಅಲ್ಲಿನ ಜನರಿಗೆ ವಿರಾಟ್ ಕೊಹ್ಲಿ ಕ್ರಿಕೆಟ್‌ಗಿಂತಲೂ ದೊಡ್ಡವರು” ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.


ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್‌ನಲ್ಲಿ ಈ ಕುರಿತು ಮಾಹಿತಿ ಹುಡುಕಿದಾಗ, ಅಂತಹ ಯಾವುದೇ ಪ್ರತಿಮೆ ಅನಾವರಣ ಮಾಡಿದ ಬಗ್ಗೆ ವರದಿಗಳು ನಮಗೆ ಲಭ್ಯವಾಗಿಲ್ಲ.
ನ್ಯೂಯಾರ್ಕ್ ಸಿಟಿಯ ಟೈಮ್ ಸ್ಕ್ವೇರ್‌ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳನ್ನು ನಾವು ಪರಿಶೀಲಿಸಿದ್ದೇವೆ. ಅಲ್ಲಿ ವಿರಾಟ್ ಕೊಹ್ಲಿ ಅವರ ಪ್ರತಿಮೆ ಅನಾವರಣದ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ಹೆಚ್ಚುವರಿಯಾಗಿ, ಜೂನ್ 28, 2024 ರಂದು @timessquarenyc ನ Instagram ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅಂತಹ ಯಾವುದೇ ಪ್ರತಿಮೆ ಸ್ಥಾಪಿಸಿರುವುದನ್ನು ತೋರಿಸಿಲ್ಲ.

ಹಾಗೆಯೇ ಟೈಮ್ ಸ್ಕ್ವೇರ್‌ನ ವೆಬ್‌ಸೈಟ್‌ನಲ್ಲೂ ವಿರಾಟ್ ಕೊಹ್ಲಿಯ ಪ್ರತಿಮೆ ಅನಾವರಣಗೊಳಿಸಿದ ಬಗ್ಗೆ ಯಾವುದೇ ಮಾಹಿತಿ ಕಂಡು ಬಂದಿಲ್ಲ.
ಅರ್ಥ್‌ಕ್ಯಾಮ್ ಮೂಲಕ ಪ್ರಸಾರ ಮಾಡಲಾದ ಟೈಮ್ಸ್ ಸ್ಕ್ವೇರ್‌ನ ನೇರ ದೃಶ್ಯಾವಳಿಗಳಲ್ಲೂ ಅಂತಹ ಯಾವುದೇ ಪ್ರತಿಮೆಯನ್ನು ತೋರಿಸಲಿಲ್ಲ.
ಗೂಗಲ್‌ನಲ್ಲಿ “Virat Kohli” “statue” ಮತ್ತು “Duroflex”ಎಂದು ಕೀವರ್ಡ್ ಹುಡುಕಿದಾಗ ಜೂನ್ 23,2024 ರಂದು ಮ್ಯಾಟ್ರೆಸ್ ಸಂಸ್ಥೆಯ ಇನ್‌ಸ್ಟಾಗ್ರಾಂ ಪೋಸ್ಟ್ ಲಭ್ಯವಾಗಿದೆ. ಅದರಲ್ಲಿ, ವೈರಲ್ ಆದ ವಿಡಿಯೋ ಇದ್ದು, ಆ ವಿಡಿಯೋದಲ್ಲಿ “ಈಗಷ್ಟೇ ಅನಾವರಣಗೊಂಡಿದೆ: ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ದೊಡ್ಡ ಪ್ರತಿಮೆ. ಈ ರಾಜನ ಕರ್ತವ್ಯ, ನಾವು ಜಾಗತಿಕವಾಗಿ ವಿಸ್ತರಣೆ ಹೊಂದುತ್ತಿದ್ದು ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ! ನ್ಯೂಯಾರ್ಕ್, ವೆಸ್ಟ್ ಇಂಡೀಸ್ ಮತ್ತು ವಿಶ್ವಕಪ್ 2024 ರ ಉದ್ದಕ್ಕೂ ವಿರಾಟ್ ಅವರ ನೆಚ್ಚಿನ ಡ್ಯುರೊಫ್ಲೆಕ್ಸ್ ಹಾಸಿಗೆಯನ್ನು ಅವರಿಗೆ ತಲುಪಿಸಲಾಗುತ್ತಿದೆ! #ViratSleepsOnDuroflex *CGIವಿಡಿಯೋ” ಎಂದಿದೆ.
ಪೋಸ್ಟ್‌ನಲ್ಲಿ ಬಳಸಲಾದ ಹ್ಯಾಶ್‌ಟ್ಯಾಗ್‌ಗಳು –“#GreatSleepGreatHealth #ViratKohli #worldcup #cricket #CGI #cgianimation– ದೃಶ್ಯವು ಕಂಪ್ಯೂಟರ್‌ನಿಂದ ರಚಿಸಲ್ಪಟ್ಟ ವಿಡಿಯೋ ಚಿತ್ರಣವಾಗಿದೆ ಎಂದು ಮತ್ತಷ್ಟು ಒತ್ತಿಹೇಳುತ್ತದೆ.

ಡ್ಯುರೊಫ್ಲೆಕ್ಸ್‌ನ ಪ್ರೊಫೈಲ್ ಅನ್ನು ನೋಡಿದ್ದು ಅಂತಹ ಅನೇಕ CGI ಮೂಲಕ ರಚಿತವಾದ ವಿವರಗಳು ಲಭ್ಯವಾಗಿವೆ.

ಟೈಮ್ಸ್ ಸ್ಕ್ವೇರ್‌ನಲ್ಲಿರುವ ಕೊಹ್ಲಿಯ ಪ್ರತಿಮೆಯನ್ನು ತೋರಿಸುವ ಅದೇ ತುಣುಕನ್ನು ಅವರ X ಖಾತೆಯಲ್ಲಿ “#CGI” ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

ಇದನ್ನು ಡ್ಯುರೊಫ್ಲೆಕ್ಸ್‌ನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದಲ್ಲಿ “#CGI #cgi ಅನಿಮೇಷನ್” ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ.

ನಾವು ನಡೆಸಿದ ಪರಿಶೀಲನೆಯಲ್ಲಿ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ಬೃಹತ್ ಪ್ರತಿಮೆಯನ್ನು ತೋರಿಸುವ ವೈರಲ್ ದೃಶ್ಯಗಳು CGI ನಿಂದ ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : FACT CHECK : ಸಂಬಂಧಿಕರಲ್ಲದ ಹೊರಗಿನವರಿಗೆ ರೈಲು ಟಿಕೆಟ್ ಬುಕ್ ಮಾಡಿದ್ರೆ ಜೈಲು ಸೇರಬೇಕಾಗುತ್ತದೆ ಎನ್ನುವುದು ಸುಳ್ಳು


