ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಿಂದ ಆರಂಭವಾಗಿರುವ ಮಹಾ ಕುಂಭಮೇಳದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡಾ ಭಾಗಿಯಾಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗಿತ್ತಿದೆ. ಬಿಲ್‌ಗೇಟ್ಸ್ ಮಹಾ ಕುಂಭಮೇಳದಲ್ಲಿ
ವ್ಯಕ್ತಿಯೊಬ್ಬರು ಜನರ ಗುಂಪಿನ ನಡುವೆ ನಿಂತಿರುವ ವಿಡಿಯೊವನ್ನು ಹಲವಾರು ಜನರು ಇದು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಬಿಲ್‌ಗೇಟ್ಸ್ ಭಾಗವಹಿಸಿರುವ ವಿಡಿಯೊ ಎಂದು ಪ್ರತಿಪಾದಿಸಿ ಹಂಚಿಕೊಳ್ಳುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
2025ರ ಮಹಾ ಕುಂಭಮೇಳ ನಡೆಯುವ ಈ ಸಂದರ್ಭದಲ್ಲಿ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ ಅವರು ಭೇಟಿ ನೀಡಿದ್ದಾರೆ ಎಂದು ಈ ವಿಡಿಯೊ ಹೇಳಿಕೊಳ್ಳುತ್ತವೆ. ಅವುಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನೋಡಬಹುದು. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ. ಬಿಲ್‌ಗೇಟ್ಸ್ ಮಹಾ ಕುಂಭಮೇಳದಲ್ಲಿ
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಸಾಫ್ಟ್‌ವೇರ್‌ನ ದಿಗ್ಗಜ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿರುವುದು ನಿಜವೇ ಎಂದು ಪರಿಶೀಲಿಸಲು, ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಬಿಲ್ ಗೇಟ್ಸ್ ಭೇಟಿಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ.
ಬಿಲ್ ಗೇಟ್ಸ್ ಅವರ ಸಾಮಾಜಿಕ ಮಾಧ್ಯಮಗಳ ಖಾತೆಗಳು ಕೂಡಾ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ಬಗ್ಗೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ. ಫೆಬ್ರವರಿ 2024 ರಲ್ಲಿ ಬಿಲ್ ಗೇಟ್ಸ್ ಭಾರತಕ್ಕೆ ನೀಡಿದ್ದಾರೆ. ಅದರ ನಂತರ ಅವರು ಭಾರತಕ್ಕೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 24, 2024 ರಂದು ‘ಗುಲ್ಲಕ್‘ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ.
ವಿಡಿಯೋದ ವಿವರಣೆಯ ಪ್ರಕಾರ ವಾರಣಾಸಿಯಲ್ಲಿ ಬಿಲ್ ಗೇಟ್ಸ್‌ರನ್ನು ಹೋಲುವ ವ್ಯಕ್ತಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದೇ ಚಾನೆಲ್‌ನಲ್ಲಿ ಅದೇ ವ್ಯಕ್ತಿಯ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅವರನ್ನು ವಾರಣಾಸಿಯ ಮಣಿಕರ್ಣಿಕಾ ಘಾಟ್‌ಗೆ ಭೇಟಿ ನೀಡಿದ “ನಕಲಿ ಬಿಲ್ ಗೇಟ್ಸ್” ಎಂದು ವಿಡಂಬನಾತ್ಮಕವಾಗಿ ಉಲ್ಲೇಖಿಸಿದೆ.

ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ದೋರದಿಂದ ನೋಡಿದಾಗ ಬಿಲ್‌ಗೇಟ್ಸ್ ಹೋಲಿಕೆಯನ್ನು ಹೊಂದಿರುವಂತೆ ಕಾಣುತ್ತಾರೆ. ಆದರೆ ಈ ವಿಡಿಯೊವನ್ನು ಹತ್ತಿರದಿಂದ ನೋಡಿದರೆ ಆ ವ್ಯಕ್ತಿಯ ಮುಖ ಚಹರೆ ಸ್ಪಷ್ಟವಾಗಿ ಅವರು ಬಿಲ್ ಗೇಟ್ಸ್‌ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಆಜ್ ತಕ್‌ನ ವರದಿಗಾರ ದೀಪಂಕರ್ ಯಾದವ್ ಅವರೊಂದಿಗೆ ಫ್ಯಾಕ್ಟ್‌ಲಿ ತಂಡ ಮಾತನಾಡಿದ್ದು, ಅವರು ನವೆಂಬರ್ 2024ರಲ್ಲಿ ವಾರಣಾಸಿಗೆ ಭೇಟಿ ನೀಡಿದಾಗ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ತಿಳಿಸಿದ್ದಾರೆ.
ಅವರು ಮಣಿಕರ್ಣಿಕಾ ಘಾಟ್‌ನಲ್ಲಿದ್ದಾಗ, ಘಾಟ್ ಬಳಿಯ ಬಾಲ್ಕನಿಯಲ್ಲಿ ನಿಂತಿದ್ದ ವಿದೇಶಿಯರ ಗುಂಪನ್ನು ನೋಡಿದರು. ಅವರಲ್ಲಿ ಒಬ್ಬರು ಬಿಲ್ ಗೇಟ್ಸ್ ಅವರನ್ನು ಹೋಲುತ್ತಿದ್ದಾರೆ ಎಂದು ಅವರು ಭಾವಿಸಿ ಮನರಂಜನೆಗಾಗಿ ವಿಡಿಯೋವನ್ನು ರೆಕಾರ್ಡ್ ಮಾಡಿ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಂಬಂಧವಿಲ್ಲದ ವಿದೇಶಿ ಪ್ರವಾಸಿಯ ಹಳೆಯ ವಿಡಿಯೋವನ್ನು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
(ಫ್ಯಾಕ್ಟ್‌ಚೆಕ್ ಅನ್ನು ಮೂಲತಃ FACTLY ಪ್ರಕಟಿಸಿತ್ತು. ನಾನುಗೌರಿ.ಕಾಂ ಶಕ್ತಿ ಕಲೆಕ್ಟಿವ್‌ನ ಭಾಗವಾಗಿ ಇದನ್ನು ಮರುಪ್ರಕಟಿಸಿದೆ)
ಇದನ್ನೂಓದಿ: ದೆಹಲಿ ಚುನಾವಣೆ | ಬಿಜೆಪಿ ಎಎಪಿಯನ್ನು ನಕಲು ಮಾಡಿದೆ – ಕೇಜ್ರಿವಾಲ್


