ಹಿಂದೂ ಸಾಧುಗಳ ರೀತಿ ವಸ್ತ್ರ ಧರಿಸಿ, ಹಣೆ ಮೇಲೆ ವಿಭೂತಿ ಹಚ್ಚಿರುವ ಮೂವರು ಗಡ್ಡದಾರಿ ವ್ಯಕ್ತಿಗಳ ಜೊತೆ ಜನರ ಗುಂಪೊಂದು ವಾಗ್ವಾದ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ‘ಮೂವರು ಸಾಧುಗಳನ್ನು ವ್ಯಕ್ತಿಯೊಬ್ಬ”ನಿಮಗೆ ಎಷ್ಟು ದೇವರ ನಾಮಗಳು ಗೊತ್ತಿದೆ?” ಎಂದು ಪ್ರಶ್ನಿಸುವುದು ಮತ್ತು ಇತರ ವ್ಯಕ್ತಿಗಳಿಗೆ ” ಇವರು ನಿಜವಾದ ಸಾಧುಗಳಲ್ಲ, ಸಾಧುಗಳ ವೇಷ ಧರಿಸಿರುವ ಮುಸ್ಲಿಮರು. ಇವರಲ್ಲಿ ಒಬ್ಬಾತನ ಹೆಸರು ಸಲ್ಮಾನ್ ” ಎಂದು ಹೇಳುತ್ತಿರುವುದು ಇದೆ.
ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು, “ಹಿಂದೂ ಸಾಧುಗಳ ವೇಷ ಧರಿಸಿದ್ದ ಓಡಾಡುತ್ತಿದ್ದ ಮುಸ್ಲಿಮರು ಸಿಕ್ಕಿ ಬಿದ್ದಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.
ನವೆಂಬರ್ 2ರಂದು ಈ ವೈರಲ್ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಗುಜರಾತ್ ಭಾಷೆಯ ಸುದ್ದಿವಾಹಿನಿ ‘ಝೀ 24 ಕಾಲಕ್‘ “ಸಾಧುವಿನ ವೇಷದಲ್ಲಿದ್ದ ಸಲ್ಮಾನ್ ಸಿಕ್ಕಿಬಿದ್ದ! ಸೂರತ್‌ನಲ್ಲಿ ಸಾಧುಗಳಂತೆ ಭಿಕ್ಷೆ ಬೇಡುತ್ತಿದ್ದವರ ವಂಚನೆ ಐಡಿ ಪರಿಶೀಲಿಸಿದಾಗ ಬಹಿರಂಗಗೊಂಡಿದೆ” ಎಂದು ಬರೆದುಕೊಂಡಿತ್ತು. ಈಗಲೂ
સાધુના વેશમાં સલમાનનાથ પકડાયો! સુરતમાં ભીક્ષા માગી રહેલા સાધુનું આઇડી ચેક કરાતા ફૂટ્યો ભાંડો#Gujarat #Viral #ViralVideo #Trending #TrendingNow #India #Surat pic.twitter.com/891kz7qBdG
— Zee 24 Kalak (@Zee24Kalak) November 2, 2024
ಬಲಪಂಥೀಯ ಸುದ್ದಿ ಸಂಸ್ಥೆ ‘ಓಪ್ ಇಂಡಿಯಾ‘ ಕೂಡ ನವೆಂಬರ್ 24ರಂದು ವೈರಲ್ ವಿಡಿಯೋ ಹಂಚಿಕೊಂಡು “ಸಲ್ಮಾನ್ ಮತ್ತು ಆತನ ಸಹಚರರು ಕೇಸರಿ ಬಟ್ಟೆ ಧರಿಸಿ ಭಿಕ್ಷೆ ಬೇಡುತ್ತಿದ್ದರು. ಗುರುತಿನ ಚೀಟಿಯ ಮೂಲಕ ಅವರ ನಿಜವಾದ ಗುರುತು ಬಯಲಾಗಿದೆ. ಅವರಿಗೆ ಯಾವುದೇ ಶ್ಲೋಕ ಪಠಿಸಲು ಅಥವಾ ಹಿಂದೂ ದೇವರು ಮತ್ತು ದೇವತೆಗಳ ಹೆಸರು ಸರಿಯಾಗಿ ಹೇಳಲು ಸಾಧ್ಯವಾಗಿಲ್ಲ” ಎಂದು ಬರೆದುಕೊಂಡಿತ್ತು.
भगवा वस्त्र पहन सलमान और उसके साथी भीख माँग रहे थे। आईडी कार्ड से उनकी असली पहचान सामने आई। वे न कोई श्लोक सुना सके और न ही हिंदू देवी-देवताओं का ठीक से नाम बता सके।#surat #Muslims https://t.co/RpzS60uCZ7
— ऑपइंडिया (@OpIndia_in) November 4, 2024
ಮತ್ತೊಂದು ಬಲಪಂಥೀಯ ಸುದ್ದಿ ಸಂಸ್ಥೆ ಸುದರ್ಶನ್ ನ್ಯೂಸ್ ಕೂಡ ನವೆಂಬರ್ 4ರಂದು ವೈರಲ್ ವಿಡಿಯೋ ಹಂಚಿಕೊಂಡು “ಗುಜರಾತ್‌ನ ಸೂರತ್‌ನಲ್ಲಿ, ‘ಜಿಹಾದಿ’ ಸಲ್ಮಾನ್ ಮತ್ತು ಆತನ ಗ್ಯಾಂಗ್ ಸಾಧುಗಳಂತೆ ಪೋಸು ಕೊಡುತ್ತಾ ಭಿಕ್ಷೆ ಬೇಡುತ್ತಿದ್ದರು… ಕೇಸರಿ ವಸ್ತ್ರಗಳನ್ನು ಧರಿಸಿ ಸಾಧುಗಳಂತೆ ಪೋಸು ಕೊಡುತ್ತಿದ್ದ ಮೂವರು ‘ಜಿಹಾದಿ’ಗಳನ್ನು ಬಂಧಿಸಲಾಗಿದೆ” ಎಂದು ಬರೆದುಕೊಂಡಿತ್ತು.
गुजरात के सूरत में ‘साधु’ बन भीख मांग रहा था जिहादी सलमान और उसकी गैंग…
साधू वेश में भगवा वस्त्र पहन कर घूम रहे 3 जिहादी गिरफ्तार…#Surat #Gujarat pic.twitter.com/RQDu5uWvIk
— Sudarshan News (@SudarshanNewsTV) November 4, 2024
ನವೆಂಬರ್ 4ರಂದು ಎಕ್ಸ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದ ಆರ್‌ಎಸ್‌ಎಸ್ ಮುಖವಾಣಿ ಪಾಂಚಜನ್ಯ “ಸಾಧುಗಳ ವೇಷದಲ್ಲಿ ಸಿಕ್ಕಿಬಿದ್ದ ಮುಸ್ಲಿಮರು! ನೀವು ಸಾಧು ಆಗಲು ಬಯಸಿದರೆ, ಏಕೆ ಹಿಂದೂ ಆಗಬಾರದು? ಸಲ್ಮಾನ್ ಎಂಬ ಮುಸ್ಲಿಂ ವ್ಯಕ್ತಿ, ಕೇಸರಿ ವೇಷ ಧರಿಸಿ ಸಾಧುವಿನಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನವೆಂಬರ್ 3,2024 ರಂದು ನಡೆದಿದ್ದು, ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದೇ ಮೊದಲಲ್ಲ-ಸಾಧುಗಳ ವೇಷ ಧರಿಸಿದ ಮುಸ್ಲಿಮರು ಈ ಹಿಂದೆ 16 ಬಾರಿ ಸಿಕ್ಕಿಬಿದ್ದಿದ್ದಾರೆ” ಎಂದು ಬರೆದುಕೊಂಡಿತ್ತು.
ಇನ್ನೂ ಅನೇಕ ಬಲಪಂಥೀಯ ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋ, ಫೋಟೋ ಹಂಚಿಕೊಂಡು ಮುಸ್ಲಿಮರು ಹಿಂದೂ ಸಾಧುಗಳ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ” ಎಂದು ಬರೆದುಕೊಂಡಿದ್ದರು.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಈ ಬಗ್ಗೆ ವರದಿಗಳನ್ನು ಹುಡುಕಿದ್ದೇವೆ. ಈ ವೇಳೆ ದೈನಿಕ್ ಭಾಸ್ಕರ್ ಗ್ರೂಪ್‌ನ ಗುಜರಾತಿ ದಿನಪತ್ರಿಕೆ ದಿವ್ಯಾ ಭಾಸ್ಕರ್ ನವೆಂಬರ್ 4ರಂದು ವಿಡಿಯೋ ಕುರಿತು ಪ್ರಕಟಿಸಿದ ವರದಿ ಲಭ್ಯವಾಗಿದೆ. ಅದರಲ್ಲಿ “ಪೊಲೀಸ್ ತನಿಖೆಯ ನಂತರ ವಿಡಿಯೋದಲ್ಲಿರುವ ಮೂವರೂ ಸಾಧುಗಳು ಹಿಂದೂಗಳು ಮತ್ತು ಅವರು ಜುನಾಗಢದಿಂದ ಬಂದವರು ಎಂದು ತಿಳಿದು ಬಂದಿದೆ” ಎಂಬುವುದಾಗಿ ಹೇಳಿದೆ.

“ಮೂವರು ಸಾಧುಗಳು ಅನುಮಾನಾಸ್ಪದವಾಗಿ ಕಂಡು ಬಂದಿದ್ದರು. ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಅವರು ನೀಡಿದ ಮಾಹಿತಿ ಆಧರಿಸಿ ಜುನಾಗಢದಲ್ಲೂ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅವರು ನೀಡಿರುವ ಮಾಹಿತಿ ಸರಿಯಾಗಿರುವುದು ಗೊತ್ತಾಗಿದೆ. ಮೂವರು ಸಾಧುಗಳಲ್ಲಿ ಒಬ್ಬರ ಹೆಸರು ‘ಸಲ್ಮಾನಾಥ್’. ಇದನ್ನು ಜನರು ಸಲ್ಮಾನ್ ಎಂದು ತಪ್ಪು ತಿಳಿದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು” ದಿವ್ಯಾ ಭಾಸ್ಕರ್ ವರದಿ ವಿವರಿಸಿದೆ.
ಫ್ಯಾಕ್ಟ್‌ಚೆಕ್ ಸಂಸ್ಥೆ ‘ಸಲ್ಮಾನಾಥ್’ ಅವರ ಚುನಾವಣಾ ಗುರುತಿನ ಚೀಟಿಯನ್ನು ಹಂಚಿಕೊಂಡಿದೆ. ಅದರಲ್ಲಿ ಸಲ್ಮಾನಾಥ್ ಅವರ ತಂದೆ ಸೂರಮನಾಥ್ ಪರ್ಮಾರ್ ಎಂದು ಇದೆ. ಪರ್ಮಾರ್ ಎಂಬ ಉಪನಾಮವು ರಜಪೂತ ಸಮುದಾಯಕ್ಕೆ ಸಂಬಂಧಿಸಿದೆ. ಇವರು ಹೆಚ್ಚಾಗಿ ಉತ್ತರ ಮತ್ತು ಮಧ್ಯ ಭಾರತದಲ್ಲಿ, ವಿಶೇಷವಾಗಿ ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಮಹಾರಾಷ್ಟ್ರದಲ್ಲಿ ನೆಲೆಗೊಂಡಿದ್ದಾರೆ.

ಸಾಧುಗಳನ್ನು, ವಿಶೇಷವಾಗಿ ಮನೆಯಿಂದ ಮನೆಗೆ ತೆರಳಿ ಭಿಕ್ಷೆ ಬೇಡುವವರಿಗೆ ಮುಸ್ಲಿಮರು ಎಂದು ಆಧಾರರಹಿತ ಅನುಮಾನದ ಮೇಲೆ ಕಿರುಕುಳ ನೀಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಜುಲೈನಲ್ಲಿ ಮೀರತ್‌ನಲ್ಲಿ ಮೂವರು ಸಾಧುಗಳ ಗುಂಪಿಗೆ ಮುಸ್ಲಿಮರು ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಅಲೆದಾಡುವ ಸನ್ಯಾಸಿಗಳನ್ನು ಮಕ್ಕಳ ಅಪಹರಣಕಾರರು ಎಂದು ಸುಳ್ಳು ಆರೋಪ ಹೊರಿಸಿದ ಇತರ ನಿದರ್ಶನಗಳೂ ಇವೆ.
ಇದನ್ನೂ ಓದಿ | FACT CHECK : ಅಪಘಾತದ ವಿಡಿಯೋಗೆ ಕೋಮು ಬಣ್ಣ ಬಳಿದ ಬಲಪಂಥೀಯರು


