ಭಾರತದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ, ಅನಿರೀಕ್ಷಿತ ಪ್ರವಾಹಗಳು ಸಂಭವಿಸಿವೆ. ಅನೇಕ ಜನರು ತಮ್ಮ ಗ್ರಾಮ ಮತ್ತು ಮನೆಗಳನ್ನು ತೊರೆದು ಕಾಳಜಿ ಕೇಂದ್ರವನ್ನು ಆಶ್ರಯಿಸಿದ್ದಾರೆ. ಇತ್ತ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಶಾಲಾ ಸಮವಸ್ತ್ರ ಧರಿಸಿ ಮಕ್ಕಳು ತಮ್ಮ ಜೀವವನ್ನು ಲೆಕ್ಕಿಸದೆ ಕೇಬಲ್ ಸಹಾಯದಿಂದ ನದಿ ದಾಟುತ್ತಿರುವುದನ್ನು ಕಾಣಬಹುದು.
ತಮ್ಮ ಜೀವವನ್ನು ಲೆಕ್ಕಿಸದೆ ಪುಲ್ಲಿ ಕೇಬಲ್ ಬಳಸಿ ನದಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ. ಮಕ್ಕಳು ಕೇಬಲ್ ದಾಟುತ್ತಿರುವಾಗ ಕೆಳಗೆ ನದಿಯು ರಭಸವಾಗಿ ಹರಿಯುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ‘‘ಸರ್ಕಾರ ಧಾರ್ಮಿಕ ಯಾತ್ರೆಗಳತ್ತ ಗಮನ ಹರಿಸುವುದನ್ನು ಬಿಟ್ಟು. ಈ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ರಸ್ತೆ, ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನ ಪಡಬೇಕು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.
ಇನ್‌ಸ್ಟಾಗ್ರಾಮ್ ಖಾತೆದಾರರು ತಮ್ಮ ಖಾತೆಯಲ್ಲಿ “The Daily struggle of Nepal Students” ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಫ್ರೀ ಡಾಕ್ಯುಮೆಂಟರಿ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ “most Dangerous ways of School I Nepal I Free Documentary” ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವೊಂದು ಲಭ್ಯವಾಗಿದ್ದು, ಇದು ನೇಪಾಳದ ಶಾಲಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಕಷ್ಟ ಎಂದು ವಿಡಿಯೋವಿನಲ್ಲಿ ಹೇಳಲಾಗಿದೆ. ವಿಡಿಯೋಗೆ ನೀಡಿರುವ ಡಿಸ್ಕ್ರಿಪ್ಷನ್‌ನಲ್ಲಿ ಕುಂಪೂರದ ಪರ್ವತ ಗ್ರಾಮದಲ್ಲಿರುವ ಶಾಲಾ ಮಕ್ಕಳು ಶಾಲೆಗೆ ಹೋಗಲು ವಿದ್ಯಾರ್ಥಿಗಳು ಬೆಟ್ಟ ಗುಡ್ಡಗಳನ್ನು ದಾಟಿ ನಡೆದುಕೊಂಡು ಹೋಗಬೇಕು ಎಂದಿದೆ.

ಮಕ್ಕಳ ಕುಟುಂಬದವರು ಪ್ರತಿ ನಿತ್ಯ ಭಯದಿಂದಲೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ತಮ್ಮ ಮಕ್ಕಳನ್ನು ಒಂದು ದಿನ ಬಿಟ್ಟು ಮತ್ತೊಂದು ದಿನ ಶಾಲೆಗೆ ಕಳುಹಿಸುತ್ತಾರೆ ಎಂದು ಬರೆಯಲಾಗಿದೆ. ನಾವು IMDb ಪೇಜ್‌ನಲ್ಲೂ ಈ ಸುದ್ದಿಗೆ ಸಂಬಂಧಿಸಿದ ವಿಡಯೋವೊಂದು ಕಂಡುಕೊಂಡಿದ್ದು,ಈ ವಿಡಿಯೋವಿಗೆ “The Most Dangerous Ways to School” ಎಂಬ ಸಾಕ್ಷ್ಯಚಿತ್ರ ಸರಣಿಯಲ್ಲಿರುವ ಒಂದು ಸಂಚಿಕೆಯಲ್ಲಿ ಈ ಸುದ್ದಿಯ ಕುರಿತು ನೋಡಬಹುದು. ಮೇ 2024ರಲ್ಲಿ ಕೇರಳದ ಶಾಲಾ ವಿದ್ಯಾರ್ಥಿಗಳ ದುಸ್ಥಿತಿಯಿದು ಎಂದು ವೈರಲ್ ಆದ ಸುದ್ದಿಯನ್ನು ಹಲವಾರು ಫ್ಯಾಕ್ಟ್‌ಚೆಕ್ ಸಂಸ್ಥೆಗಳು ವೈರಲ್ ಸುದ್ದಿ ನಿಜವಲ್ಲ ಎಂದು ವರದಿ ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ನೇಪಾಳದ ಶಾಲಾ ವಿದ್ಯಾರ್ಥಿಗಳು ಕೇಬಲ್ ಕಾರ್ ಸೇತುವೆಯನ್ನು ಬಳಸಿ ನದಿ ದಾಟುತ್ತಿರುವ ದೃಶ್ಯವನ್ನು ಭಾರತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : FACT CHECK : ಇಂಗ್ಲೆಂಡ್ ಪೊಲೀಸರು ಮುಸ್ಲಿಮರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ ಎಂಬುವುದು ಸುಳ್ಳು


