HomeUncategorizedಫ್ಯಾಕ್ಟ್‌ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು...

ಫ್ಯಾಕ್ಟ್‌ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು ಹೇಳಿದ್ದಾರೆಯೇ?

- Advertisement -
- Advertisement -

ಅಮೇರಿಕದವರು 6ನೇ ಮತ್ತು 7ನೇ ಆವೃತ್ತಿಯ ಸೂಪರ್ ಕಂಪ್ಯೂಟರ್‌ಗಳನ್ನು ಸಂಸ್ಕೃತ ಭಾಷೆಯ ಆಧಾರದ ಮೇಲೆ ರಚನೆಮಾಡಲಾಗುತ್ತದೆ ಎಂಬ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ.  6ನೇ ಆವೃತ್ತಿಯ ಕಂಪ್ಯೂಟರನ್ನು 2025ರ ವೇಳೆಗೆ ಮತ್ತು 7ನೇ ಆವೃತ್ತಿಯ ಕಂಪ್ಯೂಟರನ್ನು 2034ರ ವೇಳೆಗೆ ಬಿಡುಗಡೆಗೊಳಸಲಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಪರಿಶೀಲಿಸೋಣ.

ಅಮೇರಿಕವು 6ನೇ ಮತ್ತು 7ನೇ ಅವೃತ್ತಿಯ ಸೂಪರ್ ಕಂಪ್ಯೂಟರ್‌ಗಳನ್ನು ಸಂಸ್ಕೃತ ಭಾಷೆಯ ಆಧಾರದ ಮೇಲೆ ಬಿಡುಗಡೆಮಾಡಲಾಗುತ್ತದೆ ಎಂದು NASA ವಿಜ್ಞಾನಿಗಳು ವರದಿ ಮಾಡಿದ್ದಾರೆ ಎಂಬ ಪೋಸ್ಟ್ 2016ರಿಂದಲೇ ವೈರಲ್ ಆಗುತ್ತಿದೆ. ಅವುಗಳನ್ನು  ಇಲ್ಲಿ ಮತ್ತು ಇಲ್ಲಿ ನೋಡಬಹುದು.

ನಾವು NASA ಅವರ ಅಧಿಕೃತ ವೆಬ್ ಸೈಟ್ ಪರಿಶೀಲಿಸಿದಾಗ ಮೇಲಿನ ಪ್ರತಿಪಾದನೆ ರೀತಿಯ ಯಾವುದೇ ರೀತಿಯ ಮಾಹಿತಿಗಳು ನಮಗೆ ಸಿಕ್ಕಿಲ್ಲ. NASA ಅವರ ಸೂಪರ್ ಕಂಪ್ಯೂಟರ್ ವಿಭಾಗದ ವೈಬ್ ಸೈಟನಲ್ಲಿ ಕೂಡ ಈ ಸಂಸ್ಕೃತ ಭಾಷೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ನಾಸಾ ವರದಿಯ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಪತ್ರಿಕಾ ವರದಿಗಳು ಕಂಡುಬಂದಿಲ್ಲ.

ಸಂಸ್ಕೃತ ಭಾಷೆ ಮತ್ತು NASA ಗೆ ಸಂಬಂಧಿಸಿದಂತೆ, 1985 ರಲ್ಲಿ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಪುಸ್ತಕದಲ್ಲಿ ರಿಕ್ ಬ್ರಿಗ್ಸ್ ಅವರು “Knowledge Representation in Sanskrit and Artificial Intelligence (ಜ್ಞಾನದ ದೃಷ್ಟಿಯಿಂದ ಸಂಸ್ಕೃತ ಮತ್ತು ಕೃತಕ ಬುದ್ದಿಮತ್ತೆ” ಎಂಬ ಬರಹ ಬರೆದಿದ್ದಾರೆ). ಅದರಲ್ಲಿ 2025 ಮತ್ತು 2034ರ ವೇಳೆಗೆ ಸಂಸ್ಕೃತ ಭಾಷೆಯ ಆಧಾರದ ಮೇಲೆ  6ನೇ ಮತ್ತು 7ನೇ ಅವೃತ್ತಿಯ ಸೂಪರ್ ಕಂಪ್ಯೂಟರ್ ತಯಾರುಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಆ ಬರಹದಲ್ಲಿ ಸಂಸ್ಕೃತದಂತಹ 1000 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಭಾಷೆಗಳನ್ನು ಕೃತಕ ಬುದ್ದಿಮತ್ತೆ ಸಂಬಂಧಿತ ಕಂಪ್ಯೂಟರ್ ಪ್ರಕ್ರಿಯೆಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಮಾತ್ರ ಬರೆಯಲಾಗಿದೆ.

ಕೇಂದ್ರ ಗೃಹ ಸಚಿವ ರಾಜನಾಥ್  ಸಿಂಗ್  2015 ರಲ್ಲಿ ಸಂಸ್ಕೃತ ಭಾಷೆಯ ಉಪಯುಕ್ತತೆ ಕುರಿತು ಮಾತನಾಡುತ್ತ, “NASA ಅವರು ಸೂಪರ್ ಕಂಪ್ಯೂಟರ್ ನಿರ್ಮಿಸುತ್ತಿದ್ದಾರೆ, ಅದಕ್ಕೆ ಸಂಸ್ಕೃತ ಭಾಷೆಯು ಅತ್ಯಂತ ಸೂಕ್ತವಾಗಿದೆ ಎಂದಿದ್ದರು. ಆ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹದು. ಆದರೆ 2025 ಮತ್ತು 2034 ರ ವೇಳೆಗೆ ಸಂಸ್ಕೃತ ಭಾಷೆಯ ಆಧಾರದ ಮೇಲೆ 6ನೇ ಮತ್ತು 7ನೇ ಅವೃತ್ತಿಯ ಸೂಪರ್‌ ಕಂಪ್ಯೂಟರ್‌ಗಳನ್ನು ರಚಿಸುವ ಯಾವುದೇ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಇದಕ್ಕೂ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

IIT  ಪ್ರಾಧ್ಯಾಪರಾದ  ಡಾ. ಪವನ್ ಗೋಯಲ್‌ರವರು ನಾಸಾ ಲ್ಯಾಬ್‌ಗಳಲ್ಲಿ ರಹಸ್ಯವಾಗಿ ಸಂಸ್ಕೃತ ಕಲಿಸಲಾಗುತ್ತಿದೆ ಎಂಬ ಪ್ರತಿಪಾದನೆಯನ್ನು ನಿರಾಕರಿಸಿದ್ದಾರೆ. ಅದೆಲ್ಲವೂ ಕಟ್ಟು ಕತೆ ಎಂದು ಟೀಕಿಸಿದ್ದಾರೆ. ಸ್ವರಾಜ್ಯ ಮ್ಯಾಗಜಿನ್‌ನವರು ಅವರ ಬಳಿ ಕೃತಕ ಬುದ್ದಿಮತ್ತೆಯಲ್ಲಿ ಸಂಸ್ಕೃತದ ಬಳಕೆ ಕುರಿತು ರಿಕ್ ಬ್ರಿಗ್ಸ್‌ ವರದಿಯ ಬಗ್ಗೆ ಕೇಳಿದಾಗ “ಅದು ಬಹಳ ಆಸಕ್ತಿದಾಯಕ ಲೇಖನವಾಗಿತ್ತು, ಇದು ಭಾರತೀಯ ವ್ಯಾಕರಣ ಸಂಪ್ರದಾಯದ ಪರಿಕಲ್ಪನೆಗಳನ್ನು ಕೃತಕ ಬುದ್ಧಿವಂತಿಕೆ ಸಂಶೋಧನೆಯಲ್ಲಿ ಜ್ಞಾನದ ಪ್ರಾತಿನಿಧ್ಯಕ್ಕಾಗಿ ಹೇಗೆ ಬಳಸಬಹುದು ಎಂಬುದರ ಬಗ್ಗೆ ತಿಳಿಸಲಾಗಿದೆ. ಲೇಖನವು ಕಠಿಣ ಮತ್ತು ಆಸಕ್ತಿದಾಯಕವಾಗಿದೆ. ಆದರೆ ಸೋಷಿಯಲ್  ಮೀಡಿಯಾದಲ್ಲಿ ತಡೆಯಾಗಲಷ್ಟು ತಪ್ಪು ಮಾಹಿತಿ ಹರಡಿದೆ. ’’ಸಂಸ್ಕೃತವು ಕಂಪ್ಯೂಟರ್ ಪ್ರೋಗ್ರಾಮಿಂಗ್‌ಗೆ ಅಂತಿಮ ಭಾಷೆಯಾಗಿದೆ, ಇದನ್ನು  NASA ಪ್ರಯೋಗಾಲಯಗಳಲ್ಲಿ ಅಧ್ಯಯನ ಮಾಡಲಾಗಿದೆ ಎಂದು ಹೇಳುವಷ್ಟರ ಮಟ್ಟಿಗೆ ಸುಳ್ಳು ಹರಡಿದೆ.  ಇಂಗ್ಲಿಷ್ ಅಥವಾ ಹಿಂದಿಯಂತಹ ಯಾವುದೇ ನೈಸರ್ಗಿಕ ಭಾಷೆಯಂತೆ ಸಂಸ್ಕೃತವನ್ನು ಪ್ರೋಗ್ರಾಮಿಂಗ್ ಭಾಷೆಯಾಗಿ ನೇರವಾಗಿ ಬಳಸಲಾಗುವುದಿಲ್ಲ. ಈ ವದಂತಿಗಳು ಪ್ರಾಚೀನ ವಿಜ್ಞಾನ ವ್ಯಾಕರಣಕ್ಕೆ  ಹಾನಿಕಾರಕವಾಗಿದೆ” ಎಂದಿದ್ದಾರೆ.  ಡಾ ಪವನ್ ಗೋಯಲ್ ಅವರು ಕಂಪ್ಯೂಟರ್ ವಿಜ್ಞಾನಿಯಾಗಿದ್ದು, ಅವರು ಸ್ವಯಂಚಾಲಿತ ಕಂಪ್ಯೂಟೇಶನಲ್ ಪ್ರೊಸೆಸಿಂಗ್ ತಂತ್ರಗಳ ಸಹಾಯದಿಂದ ಸಂಸ್ಕೃತ ಪಠ್ಯಗಳನ್ನು ಹೆಚ್ಚು ಪ್ರವೇಶಿಸುವಂತೆ ಮಾಡಲು ಕೆಲಸ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2025 ಮತ್ತು 2034 ರ ವೇಳೆಗೆ ಸಂಸ್ಕೃತ ಭಾಷೆಯನ್ನು ಆಧರಿಸಿ 6ನೇ ಮತ್ತು 7ನೇ ತಲೆಮಾರಿನ ಸೂಪರ್‌ ಕಂಪ್ಯೂಟರ್‌ಗಳನ್ನು ರಚಿಸುವ ಅಮೇರಿಕದ ಯೋಜನೆಯು NASA ವಿಜ್ಞಾನಿಗಳ ವರದಿ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಈ ಯೋಗಿ ಹಿಮಾಲಯದವರೂ ಅಲ್ಲ, ಅವರ ಮೈಮೇಲೆ ಇರುವುದು ಹಿಮವೂ ಅಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...