Homeದಿಟನಾಗರಫ್ಯಾಕ್ಟ್‌‌ಚೆಕ್: ಹಜ್‌ ಯಾತ್ರೆಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳನ್ನು ಅಮೀರ್‌ ಖಾನ್‌‌‌ ಭೇಟಿಯಾಗಿಲ್ಲ.

ಫ್ಯಾಕ್ಟ್‌‌ಚೆಕ್: ಹಜ್‌ ಯಾತ್ರೆಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳನ್ನು ಅಮೀರ್‌ ಖಾನ್‌‌‌ ಭೇಟಿಯಾಗಿಲ್ಲ.

ಅಮೀರ್‌ ಖಾನ್‌ ಜೊತೆಗೆ ವೈರಲ್ ಚಿತ್ರದಲ್ಲಿ ಇರುವ ಇಬ್ಬರು ಗಡ್ಡದಾರಿಗಳಲ್ಲಿ ಒಬ್ಬರು ದಿವಂಗತ ಪಾಕಿಸ್ತಾನಿ ಗಾಯಕ ಜುನೈದ್ ಜಮ್ಶೆಡ್ ಮತ್ತೊಬ್ಬರು ಆಧ್ಯಾತ್ಮಿಕ ಮಾರ್ಗದರ್ಶಕ ತಾರಿಕ್ ಜಮೀಲ್ ಆಗಿದ್ದಾರೆ.

- Advertisement -
- Advertisement -

ಬಾಲಿವುಡ್ ಪ್ರಸಿದ್ದ ನಟ ಅಮೀರ್‌ ಖಾನ್ ಹಜ್‌ ಯಾತ್ರೆಗೆ ಹೋದಾಗ ಲಷ್ಕರ್‌-ಎ-ತೈಬಾ ಭಯೋತ್ಪಾದಕರನ್ನು ಭೇಟಿಯಾದರು ಎಂದು ಇಬ್ಬರು ಗಡ್ಡದಾರಿ ವ್ಯಕ್ತಿಗಳ ಜೊತೆಗೆ ಅವರು ನಿಂತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಮೀರ್‌ ಖಾನ್‌ ಸುಶಾಂತ್‌ ಸಿಂಗ್ ರಜಪೂತ್ ಸಾವಿನ ಬಗ್ಗೆ ಟ್ವೀಟ್ ಮಾಡಿಲ್ಲ, ಜೊತೆಗೆ ಸ್ವಾತಂತ್ಯ್ರೋತ್ಸವಕ್ಕೂ ಶುಭಾಶಯ ಕೋರಿಲ್ಲ. ಭಯೋತ್ಪಾದಕರೊಂದಿಗೆ ಚಿತ್ರ ಕ್ಲಿಕ್ಕಿಸುತ್ತಿದ್ದಾರೆ, ನಾಚಿಕೆಯಾಗಬೇಕು ಅಮೀರ್‌ ಖಾನ್‌ಗೆ ಎಂಬ ಸಂದೇಶದ ಜೊತೆಗೆ ಈ ಪೋಸ್ಟ್‌ ಅನ್ನು ಹಲವಾರು ಜನರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದು, ಪೋಟೋ ವೈರಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿರುವ ಚಿತ್ರ
ಆರ್ಕೈವ್‌ ಇಲ್ಲಿದೆ.

ಇದನ್ನೇ ಕಾಪಿ ಪೇಸ್ಟ್ ಮಾಡಿ ಹಲವಾರು ಜನರು ಅದೇ ಧ್ವನಿಯಲ್ಲಿ ಟ್ವೀಟ್ ಮಾಡಿದ್ದಾರೆ. ಆರ್ಕೈವ್ ಇಲ್ಲಿದೆ.

ಇನ್ನು ಕೆಲವರು ಅಮೀರ್‌ ಖಾನ್‌ ಮಕ್ಕಾದ ಹಜ್‌ ಯಾತ್ರೆಗೆ ಹೋದಾಗ ಭಯೋತ್ಪಾದಕರನ್ನು ಭೇಟಿಯಾದರು ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ. ಇದರ ಆರ್ಕೈವ್‌ ಇಲ್ಲಿದೆ.

ಫ್ಯಾಕ್ಟ್‌ಚೆಕ್‌

ಅಮೀರ್‌ ಖಾನ್‌ ಜೊತೆಗೆ ವೈರಲ್ ಚಿತ್ರದಲ್ಲಿ ಇರುವ ಇಬ್ಬರು ಗಡ್ಡದಾರಿಗಳಲ್ಲಿ ಒಬ್ಬರು ದಿವಂಗತ ಪಾಕಿಸ್ತಾನಿ ಗಾಯಕ ಜುನೈದ್ ಜಮ್ಶೆಡ್ ಮತ್ತೊಬ್ಬರು ಆಧ್ಯಾತ್ಮಿಕ ಮಾರ್ಗದರ್ಶಕ ತಾರಿಕ್ ಜಮೀಲ್ ಆಗಿದ್ದಾರೆ.

ಈ ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದಾಗ, ಪಾಕಿಸ್ತಾನದ ಪತ್ರಿಕೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನ ಡಿಸೆಂಬರ್ 2016 ರಲ್ಲಿ ಬರೆದ ಲೇಖನವೊಂದು ಕಾಣಬಹುದಾಗಿದೆ. ಅದರಲ್ಲಿ ಈ ಚಿತ್ರವನ್ನು ಕಾಣಬಹುದಾಗಿದೆ. ವರದಿಯಲ್ಲಿ ಜುನೈದ್‌ ಜಮ್ಶೆಡ್‌ ಅವರು ವಿಮಾನ ಅಫಘಾತದಲ್ಲಿ ಸಾವಿಗೀಡಾದಾಗ ಅಮೀರ್‌ ಖಾನ್‌ ಹೇಗೆ ಪ್ರತಿಕ್ರಿಯಿಸಿದರು ಎಂದು ಬರೆಯಲಾಗಿದೆ.

ಅದರಲ್ಲಿ ಅಮೀರ್‌ ಖಾನ್‌ ತನ್ನ ತಾಯಿಯೊಂದಿಗೆ ಹಜ್‌‌ಗೆ ಹೋದಾಗ ಜುನೈದ್‌ ಜಮ್ಶೆಡ್ ಅವರನ್ನು ಅಮೀರ್‌ ಖಾನ್‌ ಭೇಟಿಯಾಗಿದ್ದರು ಎಂದು ಉಲ್ಲೇಖಿಸಲಾಗಿದೆ.‌‌ ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ವೈರಲಾಗುತ್ತಿರುವ ಚಿತ್ರದ ಜೊತೆಗೆ ಅವರ ಹೆಸರನ್ನು ಜುನೈದ್‌ ಜಮ್ಶೇದ್ ಬದಲಾಗಿ ಭಯೋತ್ಪಾದಕ ಜುನೈದ್ ಸಂಶೇದ್ ಎಂದು ತಪ್ಪಾಗಿ ಬರೆಯಲಾಗಿದೆ.

ಇದನ್ನೂ ಓದಿ:  ಜಿಯೋ ಜಾಹಿರಾತಿನಿಂದ ಶಾರುಖ್ ಖಾನ್‌ನನ್ನು ಮುಖೇಶ್ ಅಂಬಾನಿ ಕಿತ್ತೆಸೆದರೆ?

ವಾಸ್ತವದಲ್ಲಿ ಜುನೈದ್‌ ಜಮ್ಶೇದ್‌ ಪ್ರಸಿದ್ದ ಪಾಕಿಸ್ತಾನಿ ಗಾಯಕ ಹಾಗೂ ಇಸ್ಲಾಮಿಕ್ ಬೋಧಕರಾಗಿದ್ದಾರೆ. ಇವರು ತಮ್ಮ ಸಂಗೀತ ವೃತ್ತಿಜೀವನವನ್ನು 1983 ಪ್ರಾರಂಭಿಸಿದರು. ’ಉಸ್ ರಾಹ್ ಪರ್’ ಆಲ್ಬಮ್‌ ಸಂಗೀತ ಇವರ ಪ್ರಸಿದ್ಧ ಸಂಗೀತ ಆಲ್ಬಮ್ ಆಗಿದೆ. ಆದಾಗ್ಯೂ ನಂತರ ಅವರು ತಮ್ಮ ಸಂಗೀತ ವೃತ್ತಿಜೀವನವನ್ನು ಬಿಟ್ಟು ಧಾರ್ಮಿಕ ಚಟುವಟಿಕೆಗಳತ್ತ ಗಮನಹರಿಸಲು ಪ್ರಾರಂಭಿಸಿದ್ದರು.

ಹಜ್‌ ಯಾತ್ರೆಯಲ್ಲಿ ಅಮೀರ್ ಖಾನ್ ಅವರನ್ನು ಇವರು ಭೇಟಿಯಾಗಿರುವ ಬಗ್ಗೆ ಮಾತನಾಡುತ್ತಿರುವ ವಿಡಿಯೋ ಕೆಳಗಿದೆ.

ಇದಲ್ಲದೆ, ಜಮ್ಶೆದ್ ಅವರೊಂದಿಗಿನ ಖಾನ್ ಅವರ ಫೋಟೋಗಳನ್ನು ಪಾಕಿಸ್ತಾನದ ಪತ್ರಿಕೆ ಡಾನ್ ಕೂಡಾ ಪ್ರಕಟ ಮಾಡಿತ್ತು. “ಜುನೈದ್ ಜಮ್ಶೆದ್ ಅವರೊಂದಿಗೆ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕ ತಾರಿಕ್ ಜಮೀಲ್ 2012 ತೀರ್ಥಯಾತ್ರೆಯಲ್ಲಿ” ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಪ್ರಕಟಿಸಿದೆ.

ಡಾನ್‌ ಪತ್ರಿಕೆ ಪ್ರಕಟಿಸಿರುವ ಚಿತ್ರ

ಅಷ್ಟೆ ಅಲ್ಲದೆ ಅಕ್ಟೋಬರ್ 2012 ರಲ್ಲಿ ಜಮ್ಶೆದ್ ಕೂಡಾ ತನ್ನ ಫೇಸ್ಬುಕ್ ಖಾತೆಯಲ್ಲಿ ಅದೇ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

Posted by Junaid Jamshed on Tuesday, October 30, 2012

ಆದ್ದರಿಂದ, ಇದು 2012 ರ ಚಿತ್ರವಾಗಿದ್ದು ಅಮೀರ್‌ ಖಾನ್ ತನ್ನ ತಾಯಿ ಝೀನತ್ ಹುಸೇನ್ ಅವರೊಂದಿಗೆ ಹಜ್‌ ಯಾತ್ರೆಗಾಗಿ ಮೆಕ್ಕಾಗೆ ಹೋಗಿದ್ದಾಗ ಕ್ಲಿಕ್ಕಿಸಿದ ಫೋಟೋವಾಗಿದೆ. ಹಜ್‌ ಯಾತ್ರೆಯ ಬಗ್ಗೆ ಇಂಡಿಯಾ ಟುಡೆ ವರದಿ ಮಾಡಿತ್ತು.

ಇದಲ್ಲದೆ ಅಮೀರ್‌ ಖಾನ್ ಜೊತೆಯಲ್ಲಿ ನಿಂತಿರುವ ಇನ್ನೊಬ್ಬ ವ್ಯಕ್ತಿ ಪಾಕಿಸ್ತಾನದ ಇಸ್ಲಾಮಿಕ್ ದೂರದರ್ಶನ ಬೋಧಕ, ಧಾರ್ಮಿಕ ಬರಹಗಾರ ಮತ್ತು ವಿದ್ವಾಂಸ ಮೌಲಾನಾ ತಾರಿಕ್ ಜಮೀಲ್ ಆಗಿದ್ದಾರೆ. ಅವರು ಪಾಕಿಸ್ತಾನದ ಪ್ರಸಿದ್ಧ ಧಾರ್ಮಿಕ ವಿಧ್ವಾಂಸನಾಗಿದ್ದು, 2020 ರಲ್ಲಿ ದೇಶದ ಸರ್ಕಾರವು ಅವರಿಗೆ ನಾಗರಿಕ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಡೈಲಿ ಟೈಮ್ಸ್ ವರದಿ ತಿಳಿಸಿದೆ.

ಜಮೀಲ್ ಅವರು ಅಮೀರ್‌ ಖಾನ್ ಅವರೊಂದಿಗಿನ ಭೇಟಿಯ ಕುರಿತು ಮಾತನಾಡುವ ವೀಡಿಯೊ ಕೆಳಗಿದೆ.

ಆದ್ದರಿಂದ, ಅಮೀರ್‌ ಖಾನ್ ತನ್ನ ಹಜ್‌ ಯಾತ್ರೆಯಲ್ಲಿ ಭಯೋತ್ಪಾದಕರನ್ನು ಭೇಟಿಯಾದರು ಎಂಬ ಹೇಳಿಕೆ ಸಂಪೂರ್ಣವಾಗಿ ಸುಳ್ಳಾಗಿದೆ.


ಓದಿ: ಮಹಾರಾಷ್ಟ್ರದಲ್ಲಿ ಬಕ್ರೀದ್‌ಗೆ ತಂದ ಆಡುಗಳನ್ನು ಲೂಟಿ ಮಾಡಿದ್ದು ನಿಜವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...