Homeಮುಖಪುಟಪ್ರಶಾಂತ್ ಭೂಷಣ್ ಪ್ರಕರಣ: ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್

ಪ್ರಶಾಂತ್ ಭೂಷಣ್ ಪ್ರಕರಣ: ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬಡೆ ಮತ್ತು ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದಂತೆ ಮಾಡಿದ ಟ್ವೀಟ್‌ಗಳಿಗೆ ಕ್ಷಮೆಯಾಚಿಸಲು ನಿರಾಕರಿಸಿದ ಪ್ರಶಾಂತ್ ಭೂಷಣ್ ಅವರ ಪ್ರತಿಕ್ರಿಯೆ ಇನ್ನೂ ಅವಹೇಳನಕಾರಿಯಾಗಿದೆ ಎಂದಿರುವ ಸುಪ್ರೀಂ ಕೋರ್ಟ್ ತೀರ್ಪು ಕಾದಿರಿಸಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ, ಬಿ.ಆರ್ ಗವಾಯಿ ಮತ್ತು ಕೃಷ್ಣ ಮುರಾರಿಯವರಿದ್ದ ಪೀಠವು ಮೂರು ದಿನದ ಕಾಲಾವಾಕಾಶದ ನಂತರ ಮತ್ತೆ ಇಂದು ವಿಚಾರಣೆ ಕೈಗೆತ್ತಿಕೊಂಡಿತು.

ವಕೀಲ, ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ಎಚ್ಚರಿಕೆ ನೀಡಿ, ಪ್ರಕರಣ ಬಿಡಬೇಕು ಎಂದು ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮನವಿ ಮಾಡಿದರು. “ದಯವಿಟ್ಟು ಭವಿಷ್ಯದಲ್ಲಿ ಇದನ್ನು ಪುನರಾವರ್ತಿಸಬೇಡಿ ಎಂದು ಎಚ್ಚರಿಸಿ” ಎಂದು ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಹೇಳಿಕೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸಲು ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟ್ ವಿಚಾರಣೆಯಿಂದ 30 ನಿಮಿಷಗಳ ವಿರಾಮ ನೀಡಿತ್ತು. ಕ್ಷಮೆಯಾಚಿಸಿಲು ಭೂಷಣ್ ನಿರಾಕರಿಸಿದ ನಂತರ, ಸುಪ್ರೀಂ ಕೋರ್ಟ್ “ಏನು ಮಾಡಬೇಕೆಂದು ನಮಗೆ ತಿಳಿಸಿ, ನಾವು ಬೇರೆ ಹೇಳಿಕೆಯನ್ನು ನಿರೀಕ್ಷಿಸಿದ್ದೇವೆ” ಎಂದು ವೇಣುಗೋಪಾಲ್ ಅವರನ್ನು ಕೇಳಿತು.

ಹಲವಾರು ನ್ಯಾಯಾಂಗ ಮತ್ತು ನಿವೃತ್ತ ನ್ಯಾಯಾಧೀಶರು ಉನ್ನತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅಟಾರ್ನಿ ಜನರಲ್ ಹೇಳಿದರು. ಪ್ರಶಾಂತ್ ಭೂಷಣ್ ಅವರಿಗೆ ಎಚ್ಚರಿಕೆ ನೀಡಬಹುದು ಆದರೆ ಶಿಕ್ಷೆಯ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಸೋಮವಾರ, ನಿಂದನೆಯ ಆರೋಪ ಹೊತ್ತಿರುವ ಭೂಷಣ್, ಉನ್ನತ ನ್ಯಾಯಾಲಯ ನೀಡಿದ ಮೂರು ದಿನಗಳ ಸಮಯದ ನಂತರ ತಮ್ಮ ಟ್ವೀಟ್‌ಗಳನ್ನು ಹಿಂತೆಗೆದುಕೊಳ್ಳಲು ಅಥವಾ ಕ್ಷಮೆಯಾಚಿಸಲು ನಿರಾಕರಿಸಿದ್ದರು. ಟ್ವೀಟ್‌ಗಳು ತನ್ನ ನಂಬಿಕೆಯನ್ನು ಪ್ರತಿನಿಧಿಸುತ್ತವೆ. ಕ್ಷಮೆಯಾಚನೆ ನನ್ನ ಆತ್ಮವಂಚನೆಯಾಗುತ್ತದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದರು.

ಅಟಾರ್ನಿ ಜನರಲ್ ಅವರ ಸಲಹೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ, “ಅವರು ಮಾಡಿದ್ದು ತಪ್ಪು ಎಂದು ಅವರು ಭಾವಿಸುವುದಿಲ್ಲ. ಅವರು ಕ್ಷಮೆಯಾಚಿಸಲಿಲ್ಲ. ಜನರು ತಪ್ಪುಗಳನ್ನು ಮಾಡುತ್ತಾರೆ, ಕೆಲವೊಮ್ಮೆ ನಮ್ಮ ನಂಬಿಕೆಗಳು ಸಹ ತಪ್ಪಾಗಿರುತ್ತವೆ. ಆದರೆ ಯಾರಾದರೂ ತಾನು ತಪ್ಪು ಮಾಡಿದ್ದೇನೆಂದು ಭಾವಿಸದಿದ್ದಾಗ ಏನು ಮಾಡಬೇಕು?” ಎಂದು ಕೇಳಿದರು.

“ಇಬ್ಬರು ಸಿಬಿಐ ಅಧಿಕಾರಿಗಳು ಹೋರಾಡುತ್ತಿರುವಾಗ ನಾನು ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಂಗ ನಿಂದನೆಯ ಅರ್ಜಿ ಸಲ್ಲಿಸಲು ಬಯಸಿದ್ದೆ. ಆದರೆ ಅವರು ವಿಷಾದ ವ್ಯಕ್ತಪಡಿಸಿದ ನಂತರ ನಾನು ಹಿಂದೆ ಸರಿದಿದ್ದೇನೆ. ಈ ಸಂದರ್ಭದಲ್ಲಿ ಅವರ ಹೇಳಿಕೆಯ ವಿಷಯದಲ್ಲಿ ಪ್ರಜಾಪ್ರಭುತ್ವವನ್ನು ಅನುಸರಿಸೋಣ” ಎಂದು ವೇಣುಗೋಪಾಲ್ ಉತ್ತರಿಸಿದರು.

ನ್ಯಾಯಾಲಯವು ಸಹಾನುಭೂತಿಯ ದೃಷ್ಟಿಕೋನವನ್ನು ತೆಗೆದುಕೊಂಡರೆ, ಅದನ್ನು ಬಹಳವಾಗಿ ಪ್ರಶಂಸಿಸಲಾಗುತ್ತದೆ ಎಂದು ಅವರು ಹೇಳಿದರು.

“ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ನಂಬಿದರೆ, ಈ ಎಚ್ಚರಿಕೆಯ ಉದ್ದೇಶವೇನು” ಎಂದು ನ್ಯಾಯಮೂರ್ತಿ ಮಿಶ್ರಾ ಮತ್ತೆ ಪ್ರಶ್ನಿಸಿದರು.

ಸರಳವಾದ ಪ್ರಕರಣವೊಂದಕ್ಕೆ ಭೂಷಣ್ ತಮ್ಮ ಟ್ವೀಟ್‌ಗಳ ಮೂಲಕ ಬಣ್ಣ ನೀಡಿದ್ದಾರೆ ಎಂದು ಹೇಳಿದ ನ್ಯಾಯಮೂರ್ತಿ ಮಿಶ್ರಾ, “ಈ ಸಂಸ್ಥೆಯ ವಿರುದ್ಧ, ಈ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಹಲವಾರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ಹೇಳಿದರು.

ಅವರ ಪ್ರತಿಕ್ರಿಯೆಯನ್ನು ಪರಿಗಣಿಸಬಾರದೆಂದು ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ಮನವಿ ಮಾಡಿದಾಗ, ನ್ಯಾಯಮೂರ್ತಿ ಮಿಶ್ರಾ, ” ಹೇಗೆ? ಸಾಧ್ಯವಿಲ್ಲ? ಅವರ ಪ್ರತಿಕ್ರಿಯೆಯನ್ನು ನಾವು ಪರಿಗಣಿಸಿಲ್ಲ ಎಂದು ಎಲ್ಲರೂ ನಮ್ಮನ್ನು ಟೀಕಿಸುತ್ತಿದ್ದಾರೆ. ಅದು ನಮ್ಮ ಪ್ರಕಾರ ಇನ್ನಷ್ಟು ಅವಹೇಳನಕಾರಿಯಾಗಿದೆ. ಈಗ ನಾವು ಅದನ್ನು ತೆಗೆದುಹಾಕಿದರೆ, ದೂಷಣೆಗೆ ಒಳಗಾಗುತ್ತೇವೆ” ಎಂದು ಹೇಳಿದರು.

ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತಾದ ಟೀಕೆಗಳಿಗೆ ಸಂಬಂಧಿಸಿದಂತೆ 2009 ರ ತಿರಸ್ಕಾರ ಪ್ರಕರಣದಲ್ಲಿ ಭೂಷಣ್ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಅಟಾರ್ನಿ ಜನರಲ್ ವೇಣುಗೋಪಾಲ್ ವಾದಿಸಿದರು.

ಆಗ ನ್ಯಾಯಾಧೀಶ ಮಿಶ್ರಾ “ದಯವಿಟ್ಟು ಅವರ ಉತ್ತರವನ್ನು ಓದಿ. ಅವರು ಹೇಳಿದ್ದನ್ನು ನೋಡಿ, ಸುಪ್ರೀಂ ಕೋರ್ಟ್ ಕುಸಿದಿದೆ. ಅದು ಆಕ್ಷೇಪಾರ್ಹವಲ್ಲವೇ?” ಎಂದು ಕೇಳಿದರು.

ಭೂಷಣ್ ಅವರ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ಅಟಾರ್ನಿ ಜನರಲ್ ನ್ಯಾಯಾಧೀಶರನ್ನು ಒತ್ತಾಯಿಸಿದರು. “ಈ ನ್ಯಾಯಾಲಯವು ವ್ಯವಹಾರ ನಿಪುಣತೆಯನ್ನು ತೋರಿಸಲಿ. ಮತ್ತು ಈ ಅಫಿಡವಿಟ್ ಕಾರಣದಿಂದಾಗಿ ತಿರಸ್ಕಾರದ ಅಧಿಕಾರವನ್ನು ಬಳಸಬಾರದು” ಎಂದು ಹೇಳಿದರು.

ಗುರುವಾರ ನಡೆದ ಕೊನೆಯ ವಿಚಾರಣೆಯಲ್ಲಿ, ನ್ಯಾಯಾಲಯವು ಬೇಷರತ್ತಾಗಿ ಕ್ಷಮೆಯಾಚಿಸಲು ಕೋರಿತ್ತು. ಮತ್ತು ತನ್ನ ಹೇಳಿಕೆಯನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿತ್ತು.

ಇಂದಿನ ವಿಚಾರಣೆಯ ಕೊನೆಯಲ್ಲಿ ಭೂಷಣ್ ಪರ ವಕೀಲರಾದ ರಾಜೀವ್‌ ಧವನ್‌ರವರು ‘ಭೂಷಣ್‌ರವರಿಗೆ ಮುಂದೆ ಹೀಗೆ ಮಾಡಬೇಡಿ ಎಂದು ಹೇಳಲಾಗುವುದಿಲ್ಲ. ಇಂತದ್ದನ್ನು ಮಾಡಬೇಡಿ ಎಂದು ಎಚ್ಚರಿಸುವ ಮೂಲಕ ಒಬ್ಬರನ್ನು ಶಾಶ್ವತವಾಗಿ ಮೌನಗೊಳಿಸಲಾಗುವುದಿಲ್ಲ. ಭವಿಷ್ಯದಲ್ಲಿ ಅವರು ಸ್ವಲ್ಪ ಸಂಯಮದಿಂದಿರಬೇಕು ಎಂಬ ಸಂದೇಶವು ಸಾಕು” ಎಂದರು.

ಭೂಷಣ್ ಅವರ ಶಿಕ್ಷೆ ಏನು ಎಂದು ನ್ಯಾಯಾಲಯ ಕೇಳಿದಾಗ,”ಅವರನ್ನು ಹುತಾತ್ಮರನ್ನಾಗಿ ಮಾಡಬೇಡಿ, ಈ ನ್ಯಾಯಾಲಯವು ಅವರಿಗೆ ಯಾವ ಶಿಕ್ಷೆಯನ್ನು ನೀಡುತ್ತದೆ ಎಂಬುದರ ಆಧಾರದ ಮೇಲೆ ಈ ವಿವಾದ ಮುಂದುವರಿಯುತ್ತದೆ. ಮತ್ತು ಈ ನ್ಯಾಯಾಲಯವು ರಾಜಕಾರಣವನ್ನು ತೋರಿಸಿದರೆ ಮಾತ್ರ ಈ ವಿವಾದವು ಕೊನೆಗೊಳ್ಳುತ್ತದೆ” ಎಂದು ಧವನ್ ಹೇಳಿದರು.

ನ್ಯಾಯಾಲವು ತೀರ್ಪನ್ನು ಕಾದಿರಿಸಿದ್ದು ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 10ಕ್ಕೆ ಮೂಂದೂಡಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾರವರು ಸೆಪ್ಟಂಬರ್ 02ರಂದು ನಿವೃತ್ತಿಯಾಗಲಿರುವ ಕಾರಣ ಪ್ರಕರಣವನ್ನು ಹೊಸ ಪೀಠಕ್ಕೆ ವರ್ಗಾಯಿಸಲಾಗಿದೆ.


ಇದನ್ನೂ ಓದಿ: ವಿಶ್ವದೆಲ್ಲೆಡೆ ಬಹುತೇಕ ರದ್ದುಗೊಂಡಿರುವ ವಸಾಹತುಶಾಹಿ ಪಳೆಯುಳಿಕೆ ಕಾನೂನು ‘ನ್ಯಾಯಾಂಗ ನಿಂದನೆ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...