Homeದಿಟನಾಗರಫ್ಯಾಕ್ಟ್‌ಚೆಕ್‌: ಲಂಗರ್‌‌ನ ಈ ಚಿತ್ರ ಯುದ್ದ ಪೀಡಿತ ಉಕ್ರೇನ್‌ ದೇಶದ್ದಲ್ಲ

ಫ್ಯಾಕ್ಟ್‌ಚೆಕ್‌: ಲಂಗರ್‌‌ನ ಈ ಚಿತ್ರ ಯುದ್ದ ಪೀಡಿತ ಉಕ್ರೇನ್‌ ದೇಶದ್ದಲ್ಲ

- Advertisement -
- Advertisement -

ಉಕ್ರೇನ್  ಮತ್ತು ರಷ್ಯಾ  ನಡುವೆ ನಡೆಯುತ್ತಿರುವ ಯುದ್ದದಿಂದ ಅಲ್ಲಿಯ ನಾಗರೀಕರಿಗೆ ಭಾರೀ ಸಂಕಷ್ಟ ಎದುರಾಗಿದ್ದು, ಈ ಕಷ್ಟದ ಸಮಯದಲ್ಲಿ “ಸಿಖ್ಖರು ಉಕ್ರೇನ್‌ನಲ್ಲಿ ಲಂಗರ್‌ನಲ್ಲಿ ಆಹಾರ ನೀಡುತ್ತಿದ್ದಾರೆ” ಎಂದು ಪ್ರತಿಪಾದಿಸಿ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ರಷ್ಯಾ ದಾಳಿಯಿಂದಾಗಿ  ಉಕ್ರೇನ್‌ನಲ್ಲಿ ಜನರು  ಮನೆ ಕಳೆದುಕೊಂಡು ಪರಿತಪ್ಪಿಸುತ್ತಿರುವ ಸಂದರ್ಭದಲ್ಲಿ ಸಿಖ್ಖರು ಅಲ್ಲಿಯ ಜನರಿಗೆ ಆಹಾರ ಒದಗಿಸುವ ಮೂಲಕ ಉಕ್ರೇನ್ ನಾಗರೀಕರ ನೆರವಿಗೆ ನಿಂತಿದೆ ಎಂದು ಹೇಳಿಕೊಳ್ಳುವ ಪೋಸ್ಟ್‌ ವೈರಲ್ ಆಗುತ್ತಿದೆ.

ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡಕಾಡಿದಾಗ, ಈ ಫೋಟೋವನ್ನು ಡಿಸೆಂಬರ್ 2017 ರಲ್ಲಿ  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಡಿರುವುದು  ಕಂಡುಬಂದಿದೆ. ಅಲ್ಲದೆ, ‘ವೀ ದಿ ಸಿಖ್ಸ್’ ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಪ್ರೊಫೈಲ್‌ಗಳಲ್ಲಿ 06 ಆಗಸ್ಟ್ 2018 ರಂದು ಅದೇ ಚಿತ್ರವನ್ನು ಅಪ್‌ಲೋಡ್ ಮಾಡಿದೆ. “ಕೆನಡಾದ ಮೊದಲ ಉಚಿತ ಆಹಾರ ಟ್ರಕ್ – ಗುರುನಾನಕ್ ದೇವ್ ಜಿಯವರ  LANGAR – ಗುಡ್ ಬೈ ಹಂಗರ್” ಎಂದು ಬರೆದುಕೊಂಡಿದೆ.

ಇದಕ್ಕೂ ಮೊದಲು ಅಂದರೆ 2016ರಲ್ಲಿ Indian desi food ಎಂಬ ಫೇಸ್‌ಬುಕ್ ಪೇಜ್ ನಲ್ಲಿಯೂ ಇದೇ ಫೋಟೋ ಶೇರ್ ಆಗಿರುವುದನ್ನು ಇಲ್ಲಿ ಗಮನಿಸಬಹುದು.

ಈ ಫೋಟೋದಲ್ಲಿ ಕಾಣುವ ಸಿಖ್‌ ಮೊಬೈಲ್ ಕ್ಯಾಂಟೀನ್ ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆ ದೃಶ್ಯಗಳಲ್ಲಿ ಕೆಲವನ್ನು  ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಲ್ಲದೆ, ಟ್ರಕ್‌ನಲ್ಲಿ ‘ಸಿಖ್ ಸೇವಾ ಸೊಸೈಟಿ ಟೊರೊಂಟೊ’ ಫೋನ್ ಸಂಖ್ಯೆಯನ್ನು ಕಾಣಬಹುದು.

ಇದೆಲ್ಲದರ ನಡುವೆ ಉಕ್ರೇನ್‌ನಿಂದ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ರೈಲಿನಲ್ಲಿ ಸಿಖ್ಖರು ಲಂಗರ್ ನೀಡುತ್ತಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿವೆ. ಆ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್‌ ಆಗಿ ಹರಿದಾಡುತ್ತಿರುವ ಲಂಗರ್ ಫೋಟೋ ಹಳೆಯದಾಗಿದ್ದು, ಇದು ಹಿಂದೆ ಕೆನಡಾದಲ್ಲಿ ನಡೆದ ಆಹಾರ ವಿತರಣೆಯ ಚಿತ್ರವಾಗಿದೆ. ಇದಕ್ಕೂ ಉಕ್ರೇನ್‌‌ಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವವಂತೆ, ಚಿತ್ರದ ಪೋಸ್ಟ್‌ನಲ್ಲಿ ಹೇಳಿರುವ ಪ್ರತಿಪಾದನೆ ತಪ್ಪಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಪ್ಯಾಲೆಸ್ತೀನ್‌‌ನ ದಿಟ್ಟ ಬಾಲಕಿಯನ್ನು ಉಕ್ರೇನ್‌‌‌ನವರು ಎಂದು ವರದಿ ಮಾಡಿದ ಪಬ್ಲಿಕ್ ಟಿವಿ, ಸುವರ್ಣ ಟವಿ ಮತ್ತು ವಿಜಯವಾಣಿ.ನೆಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...