Homeದಿಟನಾಗರಫ್ಯಾಕ್ಟ್‌‌ಚೆಕ್: ಇದು ಅಫ್ಘಾನ್‌‌ ನಾಗರಿಕನ ವಿಡಿಯೊವಲ್ಲ; ಎಡಿಟೆಡ್‌!

ಫ್ಯಾಕ್ಟ್‌‌ಚೆಕ್: ಇದು ಅಫ್ಘಾನ್‌‌ ನಾಗರಿಕನ ವಿಡಿಯೊವಲ್ಲ; ಎಡಿಟೆಡ್‌!

- Advertisement -
- Advertisement -

ವಿಮಾನದ ಟರ್ಬೈನ್ ಮಧ್ಯದಲ್ಲಿ ವ್ಯಕ್ತಿಯೊಬ್ಬ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊವನ್ನು ಅಫ್ಘಾನ್‌ ನಾಗರಿಕರು ತಾಲಿಬಾನ್‌ನಿಂದ ತಪ್ಪಿಸಿಕೊಳ್ಳಲು ವಿಮಾನದ ರೆಕ್ಕೆಗಳ ಮೇಲೆಯು ಸವಾರಿ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದೆ.

ತಾಲಿಬಾನ್ ಅಫ್ಘಾನ್‌ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಹಲವಾರು ಜನರು ದೇಶವನ್ನು ತೊರೆಯಲು ವಿಮಾನ ನಿಲ್ದಾಣಗಳಲ್ಲಿ ಜಮಾಯಿಸಿದ್ದರಿಂದ, ವಿಮಾನ ನಿಲ್ದಾಣದಲ್ಲಿ ಭಾರಿ ಜನಜಂಗುಳಿ ಉಂಟಾಗಿತ್ತು. ಒಂದಷ್ಟು ಜನರು ವಿಮಾನ ಟೇಕ್‌ಆಫ್‌ ಆಗುವ ಹೊತ್ತಿಗೆ ವಿಮಾನ ಟೈರುಗಳ ಅಡಿಯಲ್ಲಿ ಕೂತಿದ್ದು, ಹಾರಾಡುವ ಸಮಯದಲ್ಲಿ ಇಬ್ಬರು ಕೆಳಗಡೆ ಬಿದ್ದಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ಪಿಎಂ ಕನ್ಯಾ ಯೋಜನೆ’ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ₹2000 ಸಿಗುವುದು ನಿಜವೆ?

ಆದರೆ ಈ ವಿಡಿಯೊಗಳ ಜೊತೆಗೆ ವಿಮಾನದ ಟರ್ಬೈನ್‌ ಮೇಲೆ ಮಲಗಿರುವ ವ್ಯಕ್ತಿಯೊಬ್ಬರ ವಿಡಿಯೊ ಕೂಡಾ ವೈರಲ್‌ ಆಗಿದೆ. ಇದನ್ನು ಹಂಚಿಕೊಂಡಿರುವ ಹಲವು ನೆಟ್ಟಿಗರು, “ಅಫ್ಘಾನ್‌ ನಾಗರಿಕರು ಸಾವನ್ನು ಅಪ್ಪಿಕೊಂಡು ವಿಮಾನದ ರೆಕ್ಕೆಗಳ ಮೇಲೆ ಸವಾರಿ ಮಾಡುತ್ತಿದ್ದಾರೆ” ಎಂದು ಬರೆದಿದ್ದಾರೆ. ಈ ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಈ ವಿಡಿಯೊವನ್ನು ಹಲವಾರು ಜನರು ವೀಕ್ಷಿಸಿದ್ದು, ನೂರಾರು ಜನರು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಮಾತ್ರವಲ್ಲದೆ, ಟ್ವಿಟರ್‌‌ನಲ್ಲಿ ಕೂಡಾ ಇದೇ ರೀತಿಯ ಪ್ರತಿಪಾದನೆಯನ್ನು ಮಾಡಲಾಗಿದೆ. ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌‌

ಈ ವಿಡಿಯೋವನ್ನು ವಿಯೆಟ್ನಾಂನ ಗ್ರಾಫಿಕ್ ಡಿಸೈನರ್ ‘ಹ್ಯೂ ಕ್ಸುನ್ ಮಾಯ್’ ಡಿಜಿಟಲ್ ಆಗಿ ರಚಿಸಿದ್ದಾಗಿದೆ. ಅವರು 2020 ರ ಕೊರೊನಾದ ಆರಂಭದಲ್ಲಿ ಇದೇ ರೀತಿಯ ವೀಡಿಯೊಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು. ಆದ್ದರಿಂದ ವೀಡಿಯೊ ಅಫ್ಘಾನಿಸ್ತಾನ ಬಿಕ್ಕಟ್ಟಿಗೆ ಸಂಬಂಧಿಸಿದ್ದಲ್ಲ.

ಚಿತ್ರವನ್ನು ದಿಕ್ವಿಂಟ್ ಫ್ಯಾಕ್ಟ್‌ಚೆಕ್‌ ಮಾಡಿದೆ. ಗೂಗಲ್‌‌ನ ತಂತ್ರಾಂಶಗಳನ್ನು ಬಳಸಿಕೊಂಡು ವಿಡಿಯೊವನ್ನು ರಿವರ್ಸ್ ಸರ್ಚ್ ಮೂಲಕ ಕ್ವಿಂಟ್‌ ಹುಡುಕಾಡಿದೆ. ಈ ಹುಡುಕಾಟದಲ್ಲಿ, 2020 ರ ಆಗಸ್ಟ್ 19 ರಂದು ಇನ್‌ಸ್ಟಾಗ್ರಾಮ್‌‌ ಪೋಸ್ಟ್‌ ಒಂದರಲ್ಲಿ ಈ ವಿಡಿಯೊ ಕಂಡು ಬಂದಿದೆ. ವಿಡಿಯೊ ಕ್ಲಿಪ್‌ನ ಕೊನೆಯಲ್ಲಿ, ಟಿಕ್‌ಟಾಕ್ ಲೋಗೋದೊಂದಿಗೆ ‘ಹ್ಯೂ ಕ್ಸುನ್ ಮೈ’ ಎಂಬ ಬಳಕೆದಾರ ಹೆಸರು ಅದರಲ್ಲಿ ಕಾಣಿಕೊಂಡಿದೆ.

 

ಟಿಕ್‌ಟಾಕ್‌ ಬಳಕೆದಾರರ ಹೆಸರಿನ ಸುಳಿವನ್ನು ಬಳಸಿಕೊಂಡು Google ನಲ್ಲಿ ಮತ್ತೊಂದು ಸುತ್ತಿನ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ, ಫಿಲಿಪಿನೋ ಜೀವನಶೈಲಿ ವೆಬ್‌ಸೈಟ್ ಸ್ಪಾಟ್‌ನ ಲೇಖನವನ್ನು ದಿಕ್ವಿಂಟ್ ಕಂಡುಕೊಂಡಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕಾಲಿಗೆ ಸರಪಳಿ ತೊಡಿಸಿರುವ ಚಿತ್ರ ಸ್ಟಾನ್ ಸ್ವಾಮಿಯವರದ್ದಲ್ಲ

ಈ ಲೇಖನವು ವೈರಲ್ ಆಗಿರುವ ಕ್ಲಿಪ್‌ನ ಫೇಸ್‌ಬುಕ್ ವೀಡಿಯೊವನ್ನು ಹೊಂದಿದೆ. ಅಲ್ಲದೆ ಲೇಖನವು ‘ಹ್ಯೂ ಕ್ಸುನ್ ಮಾಯ್’ ಅನ್ನು ಗ್ರಾಫಿಕ್ ಡಿಸೈನರ್ ಎಂದು ಗುರುತಿಸಿದೆ. ಇಲ್ಲಿಂದ ‘ಹ್ಯೂ ಕ್ಸುನ್ ಮಾಯ್’ ಅವರ ಅಧೀಕೃತ ಫೇಸ್‌ಬುಕ್‌ ಮೂಲಕ ತೆರಳಿ, ಅವರು 17 ಆಗಸ್ಟ್, 2020 ರಂದು ಅಪ್‌ಲೋಡ್ ಮಾಡಿದ್ದ ವೈರಲ್‌ ವಿಡಿಯೊದ ಒರಿಜಿನಲ್‌ ವಿಡಿಯೊವನ್ನು ಕಂಡುಕೊಳ್ಳಲಾಗಿದೆ.

ಇಷ್ಟೇ ಅಲ್ಲದೆ, ವಿಯೆಟ್ನಾಮೀ ವೆಬ್‌ಸೈಟ್ ಜಿಂಗ್ ನ್ಯೂಸ್‌ ಕೂಡಾ ಹ್ಯೂ ಕ್ಸುನ್ ಮಾಯ್ ಬಗ್ಗೆ ಲೇಖನವನ್ನು ಬರೆದಿದೆ. ಹ್ಯೂ ಕ್ಸುನ್ ಮಾಯ್ ಆರಂಭದಲ್ಲಿ ಸ್ವಯಂ ಆಗಿ ವಿಡಿಯೊ ಡಿಸೈನ್‌ ಅನ್ನು ಕಲಿತಿದ್ದು, ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ಫೋಟೊಶಾಪ್‌ ಬಳಸಲು ಕಲಿಯಲು ಪ್ರಾರಂಭಿಸಿದರು ಎಂದು ಲೇಖನವು ಹೇಳಿದೆ.

ಹ್ಯೂ ಕ್ಸುನ್ ಮಾಯ್ ಅವರು ಕೇವಲ ವಿಮಾನದ ರೆಕ್ಕೆಯ ಮೇಲೆ ಮಲಗಿರುವ ವಿಡಿಯೊ ಮಾತ್ರವಲ್ಲದೆ, ಅಡುಗೆ ಮಾಡುತ್ತಿರುವ ಮತ್ತು ವಿಶ್ರಾಂತಿ ಪಡೆಯುತ್ತಿರುವ ವಿಡಿಯೊವನ್ನು ಕೂಡಾ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಒಟ್ಟಿನಲ್ಲಿ ಸ್ಪಷ್ಟವಾಗಿ ಹೇಳಬಹುದಾದರೆ, ‘ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಗೆ ಹೆದರಿ ಓಡುತ್ತಿರುವ ಜನರ ಹೃದಯ ವಿದ್ರಾವಕ ವಿಡಿಯೊ’ ಎಂದು ವೈರಲ್ ಆಗಿರುವ ಈ ವಿಡಿಯೊ ನಿಜವಲ್ಲ, ಎಡಿಟೆಡ್ ವಿಡಿಯೊವಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಸೋನಿಯಾ ಗಾಂಧಿಯ ಎಡಿಟೆಡ್‌‌ ಚಿತ್ರವನ್ನು ಹಂಚುತ್ತಿರುವ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...