ಆಸ್ಪತ್ರೆಯಲ್ಲಿ ಕಾಲಿಗೆ ಸರಪಳಿ ತೊಡಿಸಿರುವ ಚಿತ್ರ ಸ್ಟಾನ್ ಸ್ವಾಮಿಯವರದ್ದಲ್ಲ

ಭೀಮಾ ಕೊರೇಂಗಾವ್ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ಬಂಧನದಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಸ್ಟಾನ್ ಸ್ವಾಮಿ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೆ ಅವರಿಗೆ ಜಾಮೀನು ನೀಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಜಾಮೀನು ನೀಡದ ನ್ಯಾಯಾಂಗ ವ್ಯವಸ್ಥೆ ಮತ್ತು ಅವರ ಮೇಲೆ ಪ್ರಕರಣದ ದಾಖಲಿಸಿದ ಪ್ರಭುತ್ವದ ವಿರುದ್ದ ಆಕ್ರೋಶ ಭುಗಿಲೆದ್ದಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯೊಂದರಲ್ಲಿ ಹಾಸಿಗೆಯಲ್ಲಿ ಸರಪಳಿಗಳಿಂದ ಬಂಧಿಸಲ್ಪಟ್ಟ ಹಿರಿಯ ವ್ಯಕ್ತಿಯೊಬ್ಬರ ಫೋಟೋ ಒಂದನ್ನು ಫಾದರ್ ಸ್ಟಾನ್ ಸ್ವಾಮಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಅದು ಅವರ ಫೋಟೊವಲ್ಲ.

ಈ ಫೋಟೋದಲ್ಲಿರುವ ವ್ಯಕ್ತಿ 92 ವರ್ಷದ ಬಾಬುರಾಮ್ ಸಿಂಗ್ ಎಂಬುವವರದ್ದು. ಅವರು ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದು, 2021 ರ ಮೇ ತಿಂಗಳಲ್ಲಿ ಉತ್ತರ ಪ್ರದೇಶದ ಎತಾಹ್ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ತೆಗೆದ ಫೋಟೊ ಅದಾಗಿದೆ.

ಉತ್ತರ ಪ್ರದೇಶದ 92 ವರ್ಷದ ಕೊಲೆ ಅಪರಾಧಿಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲ, ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಮತ್ತು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲಾಗಿದ್ದ ದಿವಂಗತ ಸ್ಟಾನ್ ಸ್ವಾಮಿ ಅವರದ್ದು ಎಂದು ವೈರಲ್  ಆಗಿದೆ.

ಇದನ್ನೂ ಓದಿ: ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ನಿಧನ

ಜುಲೈ 3, 2021 ರಂದು ಮುಂಜಾನೆ ಸ್ಟಾನ್ ಸ್ವಾಮಿ ಅವರು ಹೃದಯ ಸ್ತಂಭನದಿಂದ ಬಳಲುತ್ತಿದ್ದಾರೆ ಎಂದು ಹೋಲಿ ಫ್ಯಾಮಿಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಇಯಾನ್ ಡಿಸೋಜಾ ಬಾಂಬೆ ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಮಧ್ಯಾಹ್ನ 1:24 ಕ್ಕೆ ಸ್ಟಾನ್ ಸ್ವಾಮಿ ನಿಧನರಾಗಿದ್ದಾರೆ.

 

ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಕುರಿತು ವಕೀಲರು ತುರ್ತು ಮನವಿಯನ್ನು ಸಲ್ಲಿಸಿದ ನಂತರ ಹೈಕೋರ್ಟ್ ವಿಶೇಷ ವಿಚಾರಣೆಯನ್ನು ನಿಗದಿಪಡಿಸಿತ್ತು. ಆದರೆ, ವಿಚಾರಣೆ ಪ್ರಾರಂಭಿಸುವ ಒಂದು ಗಂಟೆ ಮೊದಲೇ ಹೋರಾಟಗಾರ ಸ್ಟಾನ್ ಸ್ವಾಮಿ ನಿಧನರಾದರು.

ಅದಾದ ಬಳಿಕ ಕೊಲೆ ಅಪರಾಧಿ ಬಾಬುರಾಮ್ ಸಿಂಗ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾನ್ ಸ್ವಾಮಿ ಅವರ ಫೋಟೋ ಎಂದು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಆಗಿರುವ ಫೋಟೋದಲ್ಲಿ, ವೃದ್ಧ ವ್ಯಕ್ತಿಯೊಬ್ಬರು ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತಿದ್ದಾರೆ, ಆಕ್ಸಿಜನ್ ಮಾಸ್ಕ್‌ ಧರಿಸಿದ್ದಾರೆ. ಒಂದು ಕಾಲಿಗೆ ಕೊಳ ಹಾಕಿರುವ ಸರಪಳಿಯನ್ನು ಹಾಕಿದ್ದು, ಹಾಸಿಗೆಗೆ ಬಂಧಿಸಿದ್ದಾರೆ. ಈ ಫೋಟೋ ಹಂಚಿಕೊಂಡು ಅವರು ಸ್ಟಾನ್ ಸ್ವಾಮಿ ಎಂದು ಹೇಳಿಕೊಳ್ಳಲಾಗುತ್ತಿದೆ.

ಈ ಚಿತ್ರವನ್ನು ಗೂಗಲ್ ಇಮೇಜ್ ಹುಡುಕಾಟ ನಡೆಸಿದಾಗ, ಮೇ 2021 ರಲ್ಲಿ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ಕೊಲೆ ಅಪರಾಧಿ ಬಾಬುರಾಮ್ ಸಿಂಗ್ ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ತೆಗೆದಿರುವ ಚಿತ್ರ ಎಂದು ತೋರಿಸಿದೆ. ಈ ಬಗ್ಗೆ ವರದಿಗಳು, ಸುದ್ದಿಗಳನ್ನು ಗೂಗಲ್ ತೋರಿಸಿದೆ.

ಈ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ಉತ್ತರಪ್ರದೇಶದ ಹೆಚ್ಚುವರಿ ಮಹಾನಿರ್ದೇಶಕರು (ಜೈಲು) ಆನಂದ್ ಕುಮಾರ್, ಜೈಲು ಅಧಿಕಾರಿ ಅಶೋಕ್ ಯಾದವ್ ಅವರನ್ನು ಅಮಾನತುಗೊಳಿಸಲು ಆದೇಶಿಸಿದರು ಮತ್ತು ಅವರ ಮೇಲ್ವಿಚಾರಣಾ ಅಧಿಕಾರಿಯಿಂದ ಸ್ಪಷ್ಟನೆ ಕೋರಿದ್ದಾರೆ ಎಂದು ಎನ್‌ಡಿಟಿವಿ 2021 ರ ಮೇ 13 ರಂದು ವರದಿ ಮಾಡಿದೆ.

ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ 2021 ರ ಫೆಬ್ರವರಿ 6 ರಂದು ಇಟಾ ಜೈಲಿಗೆ ಹಾಕಲ್ಪಟ್ಟ ಬಾಬುರಾಮ್ ಸಿಂಗ್, ಇಟಾ ಜಿಲ್ಲೆಯ ಕುಲ್ಲಾ ಹಬೀಪುರ ಗ್ರಾಮದ ನಿವಾಸಿ ಎಂದು ಟೈಮ್ಸ್ ಆಫ್ ಇಂಡಿಯಾ 2021 ರ ಮೇ 14 ರಂದು ವರದಿ ಮಾಡಿದೆ.

ಈ ಫೋಟೋವನ್ನು ಹಂಚಿಕೊಂಡಿರುವ ಪೋಸ್ಟ್‌ಗಳು ವೈರಲ್ ಆಗುತ್ತಿರುವ ಹಿನ್ನೆಲೆ ಫೇಸ್‌ಬುಕ್ ಈಗ ಅಂತಹ ಪೋಸ್ಟ್‌ಗಳನ್ನು ತಪ್ಪು ಮಾಹಿತಿ ಎಂದು ತೋರಿಸುತ್ತಿದೆ.

ಬದಲಿಗೆ ಈ ಕೆಳಗಿರಗಿರುವುದು ಸ್ಟಾನ್ ಸ್ವಾಮಿಯವರ ಚಿತ್ರವಾಗಿದೆ.


ಇದನ್ನೂ ಓದಿ: ಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here