ಬಾಪು’ತಿರುಪತಿ ದೇವಸ್ಥಾನಕ್ಕೆ ದೇಸಿ ತುಪ್ಪ ಪೂರೈಸಿದ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಮಾಲೀಕರು’ ಎಂಬ ಬರಹದೊಂದಿಗೆ ಪಾಕಿಸ್ತಾನ ಮತ್ತು ಮುಸ್ಲಿಮರ ಹೆಸರಿನ ಪಟ್ಟಿಯಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇತ್ತಿಚೆಗೆ ತೀವ್ರ ವಿವಾದವಾಗಿದ್ದ ತಿರುಪತಿ ಲಡ್ಡು ವಿಚಾರವಾಗಿ ಈ ಚಿತ್ರ ಕೋಮುದ್ವೇಷ ಹರಡಲು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನಾನುಗೌರಿ ಫ್ಯಾಕ್ಟ್‌ಚೆಕ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತಿರುಪತಿ ಲಡ್ಡುವಿಗೆ ಬಳಸಿದ ತುಪ್ಪದಲ್ಲಿ ದನ, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ವರದಿಯಾದ ಹಿನ್ನಲೆಯಲ್ಲಿ, ಅದನ್ನು ತಿರುಪತಿ ದೇವಸ್ಥಾನಕ್ಕೆ ಪೂರೈಸಿದ್ದು ಮುಸ್ಲಿಮರು ಅದರಲ್ಲೂ ಪಾಕಿಸ್ತಾನಿ ಮುಸ್ಲಿಮರು ಎಂಬಂತೆ ಬಿಂಬಿಸಿ ಈ ವೈರಲ್ ಚಿತ್ರ ಹರಿದಾಡುತ್ತಿವೆ. ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಪ್‌ಗಳಲ್ಲಿ ಹರಿದಾಡುತ್ತಿವೆ. ಅವುಗಳ ಕೆಲವು ಆರ್ಕೈವ್‌ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ. ಇದೇ ಚಿತ್ರ ಹಾಗೂ ಬರಹ ಇಂಗ್ಲಿಷ್‌ನಲ್ಲೂ ಹರಿದಾಡುತ್ತಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ. ಇದನ್ನೂಓದಿ: FACT CHECK : ಹಿಂದೂ ವಿದ್ಯಾರ್ಥಿನಿಯರಿಂದ ನಮಾಝ್ ಮಾಡಿಸಿದ ಮುಸ್ಲಿಮರು? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ಫ್ಯಾಕ್ಟ್‌ಚೆಕ್ ನಾನುಗೌರಿ ಫ್ಯಾಕ್ಟ್‌ಚೆಕ್
ವಾಸ್ತವದಲ್ಲಿ ವೈರಲ್ ಚಿತ್ರದಲ್ಲಿ ಇರುವ ವ್ಯಕ್ತಿಗಳು ಪಾಕಿಸ್ತಾನಿ ಮೂಲದ ಎ.ಆರ್. ಫುಡ್ಸ್ (ಪ್ರೈ) ಲಿಮಿಟೆಡ್ ಕಂಪೆನಿಯ ಉದ್ಯೋಗಿಗಳಾಗಿದ್ದಾರೆ. ಈ ಕಂಪನಿ ತಿರುಪತಿ ದೇವಸ್ಥಾನಕ್ಕೆ ತುಪ್ಪ ಪೂರೈಕೆಯನ್ನು ಮಾಡುತ್ತಿಲ್ಲ. ತಿರುಪತಿ ದೇವಸ್ಥಾನಕ್ಕೆ ತುಪ್ಪ ಪೂರೈಸುವುದು ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯಾಗಿದೆ.
ಹೆಸರುಗಳಲ್ಲಿನ ಸಾಮ್ಯತೆಗಳನ್ನು ಬಳಸಿಕೊಂಡು ಬಿಜೆಪಿ ಪರವಿರುವ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲಕ್ಕೀಡು ಮಾಡುವಂತೆ ಕೋಮುದ್ವೇಷ ಹರಡುತ್ತಿದ್ದಾರೆ.
ವೈರಲ್ ಚಿತ್ರದಲ್ಲಿರುವ ಪಾಕಿಸ್ತಾನಿ ಮೂಲದ ಕಂಪನಿ ಎ.ಆರ್ ಫುಡ್ಸ್ (ಪ್ರೈ) ಲಿಮಿಟೆಡ್ ಮತ್ತು ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಿದ ಆರೋಪದ ತಮಿಳುನಾಡು ಮೂಲದ ಕಂಪೆನಿಯಾದ ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಒಂದೇ ರೀತಿಯ ಹೆಸರಿನ ಕಂಪೆನಿಯಾದರೂ ಅವು ಬೇರೆ ಬೇರೆ ಕಂಪೆನಿಗಳಾಗಿವೆ.
ಎ.ಆರ್. ಫುಡ್ಸ್ (ಪ್ರೈ) ಲಿಮಿಟೆಡ್ ಮಸಾಲೆ ಕಂಪನಿಯಾಗಿದ್ದು, ಅದನ್ನು 1970 ರಲ್ಲಿ ಪಾಕಿಸ್ತಾನದಲ್ಲಿ ಸ್ಥಾಪಿಸಲಾಯಿತು. ಆದರೆ ಎ.ಆರ್. ಡೈರಿ ಉತ್ಪನ್ನಗಳನ್ನು ಉತ್ಪಾದಿಸುವ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಅನ್ನು ಭಾರತದಲ್ಲಿ 1995 ರಲ್ಲಿ ಸ್ಥಾಪಿಸಲಾಯಿತು. ಇದನ್ನೂಓದಿ: FACT CHECK | ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲವೇ ? ಇತಿಹಾಸ ತಿರುಚಲಾಗಿದೆಯಾ?
ಪಾಕಿಸ್ತಾನಿ ಕಂಪನಿ ಎ.ಆರ್. ಫುಡ್ಸ್ (ಪ್ರೈ) ಲಿಮಿಟೆಡ್
ಎ.ಆರ್. ಫುಡ್ಸ್ (ಪ್ರೈ) ಲಿಮಿಟೆಡ್ “ಫೂಲ್” ಬ್ರಾಂಡ್ ಆಹಾರ ವಸ್ತುಗಳನ್ನು ತಯಾರಿಸುತ್ತದೆ. ಈ ಕಂಪೆನಿಯು ಪ್ಯಾಕೇಜ್ ಮಾಡಿದ ಮಸಾಲೆಗಳನ್ನು ಮಾರಾಟ ಮಾಡುತ್ತದೆ. ವಿವರಗಳನ್ನು ಅವರ ವೆಬ್‌ಸೈಟ್‌ನಲ್ಲಿ ಕಾಣಬಹುದು (arfoods.com.pk). ಜೊತೆಗೆ “.pk” ಡೊಮೇನ್ ವೆಬ್‌ಸೈಟ್ ಇದು ಪಾಕಿಸ್ತಾನದಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ.
ಎ.ಆರ್ ಫುಡ್ಸ್ (ಪ್ರೈ) ಲಿಮಿಟೆಡ್‌ನ ಲಿಂಕ್ಡ್‌ಇನ್ ಪ್ರೊಫೈಲ್‌ನ ರಿವೀವ್ ಕಂಪೆನಿಯು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರುವುದನ್ನು ಖಚಿತಪಡಿಸುತ್ತದೆ. ಕಂಪನಿಯ ಲಿಂಕ್ಡ್‌ಇನ್ ಪೇಜ್‌ನಲ್ಲಿ ವೈರಲ್ ಚಿತ್ರದಲ್ಲಿ ಪಟ್ಟಿ ಮಾಡಲಾದ ಐದು ಉದ್ಯೋಗಿಗಳಲ್ಲಿ ನಾಲ್ಕು ಉದ್ಯೋಗಿಗಳ ಹೆಸರುಗಳು, ಫೋಟೋಗಳು ಮತ್ತು ಉದ್ಯೋಗ ಶೀರ್ಷಿಕೆಗಳು ಹೊಂದಾಣಿಕೆಯಾಗುತ್ತವೆ.
ಗೌಪ್ಯತೆ ಸೆಟ್ಟಿಂಗ್‌ಗಳ ಕಾರಣದಿಂದ ಐದನೇ ವ್ಯಕ್ತಿಯ ‘ಲಿಯೋನಿಡಾಸ್ ಶೇಖ್’ ಅವರ ಪ್ರೊಫೈಲ್ ಅನ್ನು ವೀಕ್ಷಿಸಲು ಸಾಧ್ಯವಾಗದಿದ್ದರೂ, ಅವರು “A.R ಫುಡ್ಸ್ (ಪ್ರೈ) ಲಿಮಿಟೆಡ್‌ನಲ್ಲಿ ವೇರ್‌ಹೌಸ್ ಆಪರೇಷನ್ಸ್ ಮ್ಯಾನೇಜರ್” ಎಂದು ತಿಳಿದುಬರುತ್ತದೆ. ಹಾಗಾಗಿ ಈ ವೈರಲ್ ಚಿತ್ರವನ್ನು ಈ ಪಾಕಿಸ್ತಾನಿ ಕಂಪನಿಯ ಉದ್ಯೋಗಿಗಳ ಲಿಂಕ್ಡ್‌ಇನ್ ಖಾತೆಗಳಿಂದ ಪಡೆಯಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಇದಲ್ಲದೆ, ವೈರಲ್ ಚಿತ್ರ ಮತ್ತು ಮೂಲ ಪ್ರೊಫೈಲ್‌ಗಳು ಈ ವ್ಯಕ್ತಿಗಳ ಸ್ಥಳ ಪಾಕಿಸ್ತಾನ ಎಂದು ಸ್ಪಷ್ಟವಾಗಿ ಹೇಳುತ್ತದೆ. ಇದನ್ನೂಓದಿ: FACT CHECK : ಭಾರತೀಯ ಸೈನಿಕರಿಗೆ ಸಿಕ್ಕಿಬಿದ್ದ ಜಿಹಾದಿಗಳು ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ
ಭಾರತೀಯ ಕಂಪನಿ ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್
ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ತಮಿಳುನಾಡು ಮೂಲದ ಡೈರಿ ಕಂಪನಿಯಾಗಿದ್ದು ಅದು ರಾಜ್ ಮಿಲ್ಕ್ ಬ್ರಾಂಡ್ ಅನ್ನು ಮಾರಾಟ ಮಾಡುತ್ತದೆ. ಈ ಸಂಸ್ಥೆಯ ನಿರ್ದೇಶಕರು ರಾಜಶೇಖರನ್ ಸೂರ್ಯಪ್ರಭ, ರಾಜು ರಾಜಶೇಖರನ್ ಮತ್ತು ಶ್ರೀನಿವಾಸಲುನಾಯ್ಡು ರಾಮಚಂದ್ರನ್ ಶ್ರೀನಿವಾಸನ್ ಎಂಬವರಾಗಿದ್ದಾರೆ. ಕಂಪನಿಯು ತಮಿಳುನಾಡಿನ ದಿಂಡಿಗಲ್‌ನಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಅದರ ಸ್ಥಳವು ಗೂಗಲ್ ನಕ್ಷೆಗಳಲ್ಲಿ ನೋಡಬಹುದಾಗಿದೆ.
ಅದಾಗ್ಯೂ, ಕಂಪನಿಯು ತನ್ನ ಉತ್ಪನ್ನಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದೆ. ಅದಾಗ್ಯೂ, ರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಅನ್ನು ಹೆಚ್ಚು ಕಲಬೆರಕೆ ತುಪ್ಪವನ್ನು ಪೂರೈಸುವುದಕ್ಕಾಗಿ ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಕಂಪನಿಯು ಶೋಕಾಸ್ ನೋಟಿಸ್‌ಗೆ ತೃಪ್ತಿಕರ ಪ್ರತಿಕ್ರಿಯೆಯನ್ನು ನೀಡಲು ವಿಫಲವಾದರೆ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ.
ಒಟ್ಟನಲ್ಲಿ ಹೇಳಬಹುದಾದರೆ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಕಾಣಿಸಿಕೊಂಡಿರುವ ಪಾಕಿಸ್ತಾನಿ ಕಂಪನಿಯು ತಿರುಪತಿ ದೇವಸ್ಥಾನದ ಲಡ್ಡುಗಳಿಗೆ ತುಪ್ಪ ಪೂರೈಸುತ್ತಿಲ್ಲ. ಅದು ಪಾಕಿಸ್ತಾನದ ಇಸ್ಲಾಮಾಬಾದ್ ಮೂಲದ ಎ.ಆರ್. ಫುಡ್ಸ್ (ಪ್ರೈ) ಲಿಮಿಟೆಡ್ ಎಂಬ ಮಸಾಲೆ ಪದಾರ್ಥಗಳ ಕಂಪೆನಿಯಾಗಿದೆ. ಆದರೆ ತಿರುಪತಿ ದೇವಸ್ಥಾನಕ್ಕೆ ತುಪ್ಪ ಪೂರೈಸಿದ್ದು ತಮಿಳುನಾಡು ಮೂಲದ A.R. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯಾಗಿದೆ. ಇದರ ಮಾಲಿಕರು ಹಿಂದೂಗಳಾಗಿದ್ದಾರೆ. ಅದು ಕಲಬೆರಕೆ ತುಪ್ಪವನ್ನು ಸರಬರಾಜು ಮಾಡುವ ಆರೋಪ ಎದುರಿಸುತ್ತಿದೆ.
ವಿಡಿಯೊ ನೋಡಿ: ಅಂಗನವಾಡಿ ನೌಕರರೆಂದರೆ ತಾತ್ಸಾರವೇಕೆ? ನಮ್ಮನ್ನು ಖಾಯಂ ಮಾಡಿ. ನಮ್ಮ ಅಳಲನ್ನು ಕೇಳಿ ಮುಖ್ಯಮಂತ್ರಿಗಳೆ.


