Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’!

ಫ್ಯಾಕ್ಟ್‌ಚೆಕ್‌: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’!

ಮೀಸಲಾತಿಯಿಂದಾಗಿ ಬ್ರಾಹ್ಮಣರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಪಾದಿಸಿರುವ ಪತ್ರಿಕೆಯು ಓದುಗರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದೆ

- Advertisement -
- Advertisement -

‘‘ನೀಟ್‌‌ ಪಿಜಿ ಪರೀಕ್ಷೆಯಲ್ಲಿ ಭಾರತಕ್ಕೆ ಮೊದಲ ರ್‍ಯಾಂಕ್ ಪಡೆದ ಬ್ರಾಹ್ಮಣ ವಿದ್ಯಾರ್ಥಿಗೆ ಮೀಸಲಾತಿಯ ಕಾರಣಕ್ಕೆ ಗದಗ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ” ಎಂದು ಪ್ರತಿಪಾದಿಸಿ ಕನ್ನಡ ದಿನಪತ್ರಿಕೆ ‘ವಿಶ್ವವಾಣಿ’ ಜನವರಿ 29ರ ಶನಿವಾರದಂದು ಸುದ್ದಿಯೊಂದು ಪ್ರಸಾರ ಮಾಡಿದೆ.

ಪತ್ರಿಕೆಯು ತನ್ನ ಹೆಡ್‌ಲೈನ್‌ನಲ್ಲಿ, “ಪಡೆದದ್ದು ಮೊದಲ ರ್‍ಯಾಂಕ್‌; ಆದರೂ ಸೀಟು ಸಿಗಲಿಲ್ಲ” ಎಂದು ಬರೆದಿದೆ. ಉಪಶೀರ್ಷಿಕೆಯಲ್ಲಿ, “ಗದಗಿನ ವೈದ್ಯಕೀಯ ಕಾಲೇಜಿನಲ್ಲಿ ಮೂರು ಸೀಟಿಗೂ ಮೀಸಲಾತಿ; ಬ್ರಾಹ್ಮಣರಾದವರಿಗೆ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಗಬಾರದೆ?” ಎಂದು ಪ್ರಶ್ನಿಸಿದೆ.

ಸುದ್ದಿಯಲ್ಲಿ, “ಗಗನ್‌ ಕುಬೇರ ಎಂಬ ಬ್ರಾಹ್ಮಣ ವಿದ್ಯಾರ್ಥಿಯು 2021 ನೇ ಸಾಲಿನ ಆಲ್‌ ಇಂಡಿಯಾ ನೀಟ್- ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದರು. ಆದರೆ ಮೀಸಲಾತಿ ಕಾರಣಕ್ಕೆ ಗದಗಿನ ವೈದ್ಯಕೀಯ ಕಾಲೇಜಿನಲ್ಲಿ ಅವರಿಗೆ ಸೀಟು ಸಿಕ್ಕಿಲ್ಲ. ಮೀಸಲಾತಿ ಕಾರಣಕ್ಕೆ ಸೀಟು ಸಿಗುತ್ತಿಲ್ಲ” ಎಂದು ಮೀಸಲಾತಿ ಬಗ್ಗೆ ಓದುಗರಲ್ಲಿ ತಪ್ಪು ಅಭಿಪ್ರಾಯ ಬರುವ ರೀತಿಯಲ್ಲಿ ವರದಿ ಪ್ರಕಟಿಸಿದೆ.

ಮೀಸಲಾತಿ ಬಗ್ಗೆ ಓದುಗರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವಂತೆ ಮಾಡಿರುವ ವಿಶ್ವವಾಣಿ ಪತ್ರಿಕೆಯ ವರದಿಯ ಸ್ಕ್ರೀನ್‌ಶಾರ್ಟ್‌ (ಆರ್ಕೈವ್‌ ಲಿಂಕ್ ಇಲ್ಲಿ ಕ್ಲಿಕ್‌ ಮಾಡಿ)

ಈ ಸುದ್ದಿಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ವಿಶ್ವವಾಣಿ ಪತ್ರಕರ್ತ ವಿಶ್ವೇಶ್ವರ ಭಟ್‌‌ ಅವರು, “ಇದು ಕರ್ನಾಟಕದ ಅರ್ಹತೆಯ ಅಣಕ. ಮೊದಲ ರ್‍ಯಾಂಕ್‌ ಪಡೆದರೂ ಮೀಸಲಾತಿ ಕಾರಣಕ್ಕೆ ಎಂಡಿ ಸೀಟು ನಿರಾಕರಿಸಲಾಗಿದೆ” ಎಂದು ಬರೆದು, ತಮ್ಮ ಪತ್ರಿಕೆಯ ವರದಿಯ ಚಿತ್ರವನ್ನು ಉಲ್ಲೇಖಿಸಿ ಮತ್ತೇ ಓದುಗರ ದಾರಿ ತಪ್ಪಿಸಿದ್ದಾರೆ.

ವಿಶ್ವೇಶ್ವರ ಭಟ್‌ ಟ್ವೀಟ್ (ಆರ್ಕೈವ್ ಲಿಂಕ್‌ ಇಲ್ಲಿ ಕ್ಲಿಕ್ ಮಾಡಿ)

ವಾಸ್ತವವೇನು? ಗಗನ್‌ ಕುಬೇರ ಎಂಬವರು NEET PG-2021 ಮೊದಲ ರ್‍ಯಾಂಕ್‌ ಪಡೆದಿದ್ದು ನಿಜವೇ?

ಸಂವಿಧಾನವು ಸಾಮಾಜಿಕ ಕಾರಣಕ್ಕೆ ನೀಡಿರುವ ಮೀಸಲಾತಿಯ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಮೂಡಲು ಅಥವಾ ಮೂಡಿಸಲು ಈ ವರದಿಯನ್ನು ಬರೆಯಲಾಗಿದೆ ಎಂಬುವುದು ವಿಶ್ವವಾಣಿಯ ಇಡೀ ವರದಿಯಲ್ಲಿ ಎದ್ದು ಕಾಣುತ್ತದೆ. ಅಲ್ಲದೆ, ವಿಶ್ವವಾಣಿಯು ಸುದ್ದಿಯ ಶೀರ್ಷಿಕೆಯಲ್ಲೇ ಸುಳ್ಳನ್ನು ಬರೆದಿದೆ. ವಾಸ್ತವದಲ್ಲಿ ಗಗನ್‌ ಕುಬೇರ್‌ ಅವರು, ‘2021 ರ ನೀಟ್‌ ಪಿಜಿ ಪರೀಕ್ಷೆ’ಯಲ್ಲಿ ಮೊದಲ ರ್‍ಯಾಂಕ್‌ ಪಡೆದಿಲ್ಲ!.

2021 ರ ನೀಟ್‌ ಪಿಜಿ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಪಡೆದವರು ಹೆಸರು ಅಮಥ್ಯ ಸೇನ್‌ಗುಪ್ತಾ ಎಂದಾಗಿದ್ದು, ಅವರು ಪಶ್ಚಿಮ ಬಂಗಾಳದವರಾಗಿದ್ದಾರೆ. 2021 ರ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಇವರ ಹೆಸರೇ ಇಲ್ಲ. ಇದನ್ನು ನೀವು ಇಲ್ಲಿ ನೋಡಬಹುದಾಗಿದೆ.

2021 ರ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ

ನಾನುಗೌರಿ.ಕಾಂ ಈ ಸುದ್ದಿಯ ಸತ್ಯಾಸತ್ಯತೆಯನ್ನು ತಪಾಸಣೆಗೆ ಒಳಪಡಿಸಿದಾಗ, ನಮಗೆ ಗಗನ್‌ ಕುಬೇರ್‌ ಅವರ ಟ್ವಿಟರ್‌, ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ ಚಾನೆಲ್‌ ಸಿಕ್ಕಿದೆ. ಅವರು ನಿಜವಾಗಿಯು ಡಾಕ್ಟರ್‌ ಹೌದೇ ಎಂಬ ಬಗ್ಗೆ ನಾನುಗೌರಿ.ಕಾಂ ತಪಾಸಣೆ ಮಾಡುತ್ತಿದ್ದು, ಅದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ(ಮಾಹಿತಿ ಸಿಕ್ಕಕೂಡಲೇ ಇಲ್ಲಿ ಅಪ್‌ಡೇಟ್‌ ಮಾಡುತ್ತೇವೆ) ಅವರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಮೀಸಲಾತಿ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಕಾಣುತ್ತದೆ.

ವಿಶ್ವವಾಣಿ ಪತ್ರಿಕೆಯು ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಅವರ ವಿಡಿಯೊ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಇದು 5:28 ಸೆಕೆಂಡುಗಳಷ್ಟು ಇದೆ. ಈ ವಿಡಿಯೊದಲ್ಲಿ ತಿಳಿದು ಬರುವುದೇನೆಂದರೆ, ಅವರಿಗೆ ನೀಟ್‌ ಪರೀಕ್ಷೆಯಲ್ಲಿ ಸರ್ಕಾರಿ ಸೀಟುಗಳ ಹಂಚಿಕೆಯ ಬಗ್ಗೆ ಮತ್ತು ಅದರಲ್ಲಿನ ಮೀಸಲಾತಿ ಹಂಚಿಕೆಯ ಬಗ್ಗೆ ತುಂಬಾ ತಪ್ಪು ಅಭಿಪ್ರಾಯವಿದೆ.

ವಿಡಿಯೊದಲ್ಲಿ, ವ್ಯಕ್ತಿಯು ತನ್ನನ್ನು ತಾನು ಗಗನ್ ಕುಬೇರ್‌ ಎಂದು ಪರಿಚಯಿಸಿದ್ದಾರೆ. “ತಾನು ನೀಟ್‌ ಯುಜಿ 2021 ಪರೀಕ್ಷೆ ಬರೆದಿದ್ದು, ಗದಗಿನ ವೈದ್ಯಕೀಯ ಕಾಲೇಜಿನಲ್ಲಿ ಅನಸ್ತೇಶಿಯ ಅಧ್ಯಯನ ಮಾಡಬೇಕು ಎಂದು ಬಯಸಿದ್ದೆ. ಆದರೆ, ನಾನು ಭಾರತ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದರೂ, ನನಗೆ ಸೀಟು ಸಿಗುವುದಿಲ್ಲ. ಯಾಕೆಂದರೆ ಅಲ್ಲಿನ ಒಟ್ಟು ಮೂರು ಸರ್ಕಾರಿ ಸೀಟಿನಲ್ಲಿ ಎಲ್ಲವೂ ಮೀಸಲಾತಿಗೆ ಹೋಗಿದೆ” ಎಂದು ಹೇಳಿದ್ದಾರೆ. ಉಳಿದಂತೆ ವಿಡಿಯೊದಲ್ಲಿ ಅವರು ಸಾಮಾನ್ಯವಾಗಿ ಮೀಸಲಾತಿ ವಿರೋಧಿಗಳು ಹೇಳುವ ಮಾತನ್ನೇ ಹೇಳಿದ್ದಾರೆ.

ಆದರೆ ವಿಶ್ವವಾಣಿ ಪತ್ರಿಕೆಯು, ಈ ವಿಡಿಯೊದ ಎರಡು ನಿಮಿಷದ ತುಣುಕೊಂದರ ಆಧಾರದಲ್ಲಿ ಇಡೀ ವರದಿಯನ್ನು ಪ್ರಕಟಿಸಿದೆ. ಈ ವಿಡಿಯೊದ ಸತ್ಯಾಸತ್ಯತೆಯನ್ನು ತಪಾಸಣೆ ಮಾಡುವ ಗೋಜಿಗೆ ಕೂಡಾ ಹೋಗಿಲ್ಲ. ಅಲ್ಲದೆ, ವಿಡಿಯೊದಲ್ಲಿ ಇರುವ ವ್ಯಕ್ತಿ ಹೇಳುತ್ತಿರುವ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ.

ಗಗನ್‌ ಅವರು ಕೇವಲ ಉದಾಹರಣೆಗೆ ಹೇಳಿದ್ದ, “ನಾನು ಭಾರತ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದರೂ, ನನಗೆ ಸೀಟು ಸಿಗುವುದಿಲ್ಲ” ಎಂಬುವುದನ್ನು, ವಿಶ್ವವಾಣಿ ಪತ್ರಿಕೆಯು ಅವರು, “ದೇಶಕ್ಕೆ ಮೊದಲ ರ್‍ಯಾಂಕ್” ಎಂದು ಪ್ರತಿಪಾದಿಸಿ ವರದಿ ಪ್ರಕಟಿಸಿದೆ.

ಗಗನ್‌ ಅವರ ವಿಡಿಯೊ ವ್ಯಾಪಕವಾಗಿ ಹರಿದಾಡಿದಾಗ ಅವರು ತನ್ನ ಯೂಟ್ಯೂಬ್‌‌ನ ವಿಡಿಯೊ ಡಿಸ್‌ಕ್ರಿಪ್ಷನ್‌ ಅಲ್ಲಿ ರ್‍ಯಾಂಕ್‌ ಬಗ್ಗೆ ಸ್ಪಷ್ಟೀಕರಣ ಕೂಡಾ ನೀಡಿದ್ದಾರೆ. ಅದರಲ್ಲಿ ಅವರು, “ನಾನು 1 ನೇ ರ್‍ಯಾಂಕ್ ಅಲ್ಲ. ಬದಲಾಗಿ ಅಖಿಲ ಭಾರತ ಮಟ್ಟದಲ್ಲಿ 12,406 ಪಡೆದಿದ್ದೇನೆ. ಅದು ಹಿಂದಿನ ಕಟ್-ಆಫ್ ಅಥವಾ ಮೀಸಲಾತಿ ಪ್ರಕಾರ ಕರ್ನಾಟಕದ ಸರ್ಕಾರಿ ಕಾಲೇಜಿನಲ್ಲಿ ಕ್ಲಿನಿಕಲ್ ಸೀಟ್ ಪಡೆಯಲು ಯೋಗ್ಯವಾಗಿದೆ” ಎಂದು ಬರೆದಿದ್ದಾರೆ.

ಗಗನ್ ಸ್ಪಷ್ಟೀಕರಣ

ಈ ಮೂಲಕ ತಿಳಿಯುವುದೇನೆಂದರೆ, ವಿಶ್ವವಾಣಿ ಪತ್ರಿಕೆಯ ವರದಿಯು ಸಂಪೂರ್ಣ ಸುಳ್ಳಾಗಿದ್ದು, ಅದರ ಪತ್ರಕರ್ತರಾಗಿರುವ ವಿಶ್ವೇಶ್ವರ ಭಟ್‌ ಅವರ ಪ್ರತಿಪಾದನೆಯೂ ತಪ್ಪಾಗಿದೆ. ಇಡೀ ವರದಿ ಮೀಸಲಾತಿಯನ್ನು ವಿರೋಧಿಸಲೇ ಬೇಕು ಎಂಬ ಸಿದ್ದ ಮಾದರಿಯೊಂದಿಗೆ ಬರೆಯಲಾಗಿದೆ.

ಹಾಗಾದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಸಿಗುವುದಿಲ್ಲ ಎಂಬುವುದು ನಿಜವೇ?

ಗಗನ್‌ ಅವರು ತನ್ನ ವಿಡಿಯೊದಲ್ಲಿ, “ತಾನು ಗದಗಿನ ಕಾಲೇಜಿನಲ್ಲಿ ಅಸನಸ್ತೇಶಿಯ ಓದಬೇಕು ಎಂದು ಭಾವಿಸಿದ್ದೆ. ಒಂದು ವೇಳೆ ತಾನು ಫಸ್ಟ್‌ ರ್‍ಯಾಂಕ್ ಬಂದರೂ ಅಲ್ಲಿ ನನಗೆ ಸೀಟು ಸಿಗುತ್ತಿರಲಿಲ್ಲ. ಅಲ್ಲಿ ಎಲ್ಲವೂ ಮೀಸಲಾತಿಗೆ ಹೋಗಿದೆ. ಬ್ರಾಹ್ಮಣರಿಗೆ ಅನ್ಯಾಯವಾಗಿದೆ. ಪರೀಕ್ಷಾ ಮಂಡಳಿ ಈ ರೀತಿ ಮಾಡುವುದಕ್ಕಿಂತ ಸಾಮಾನ್ಯ ವರ್ಗದ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬರೆಸುವುದನ್ನೇ ನಿಲ್ಲಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಅವರಿಗೆ ನೀಟ್‌ ಪರೀಕ್ಷೆಯಲ್ಲಿ ಸರ್ಕಾರಿ ಸೀಟುಗಳ ಹಂಚಿಕೆಯ ಬಗ್ಗೆ ಮತ್ತು ಅದರಲ್ಲಿನ ಮೀಸಲಾತಿ ಹಂಚಿಕೆಯ ಬಗ್ಗೆ ತುಂಬಾ ತಪ್ಪು ಅಭಿಪ್ರಾಯವಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಕ್ಯಾರಿಯರ್‌ ಗೈಡನ್ಸ್‌ ಎಕ್ಸ್‌ಪರ್ಟ್ ಉಮ್ಮರ್‌ ಯುಎಚ್‌, “ಅವರು ಹೇಳಿದಂತೆ ಗದಗ ವೈದ್ಯಕೀಯ ಕಾಲೇಜಿನಲ್ಲಿ ಅನಸ್ತೇಶಿಯಾ ಅಧ್ಯಯನಕ್ಕೆ ಮೂರು ಸರ್ಕಾರಿ ಸೀಟುಗಳು ಇರುವುದು ನಿಜವೇ ಆಗಿದೆ. ಈ ಮೂರು ಸೀಟುಗಳಲ್ಲಿ ಒಂದು ಸೀಟು ಹಿಂದುಳಿದ ವರ್ಗದ ವಿದ್ಯಾರ್ಥಿಗೆ, ಇನ್ನೊಂದು ಸೀಟು ಎಸ್‌ಟಿ ಸಮುದಾಯದ ವಿದ್ಯಾರ್ಥಿಗೆ, ಮತ್ತೊಂದು ಸೀಟು ಸರ್ಕಾರಿ ಕಾಲೇಜಿನಲ್ಲಿ ಸೇವೆ ಮಾಡುತ್ತಿರುವ ಸಾಮಾನ್ಯ ವರ್ಗದ ಅಭ್ಯರ್ಥಿಗೆ ಮೀಸಲಿಡಲಾಗಿದೆ (ಈ ಸೀಟಿಗೆ ಕಾಲೇಜಿನ ಯಾವುದೆ ವರ್ಗದ ವಿದ್ಯಾರ್ಥಿಯು ಸ್ಪರ್ಧಿಸಬಹುದಾಗಿದೆ). ಆದರೆ ವಿಡಿಯೊದಲ್ಲಿ ಇರುವ ವ್ಯಕ್ತಿಯು ಸರ್ಕಾರಿ ಸೇವೆಯಲ್ಲಿ ಇಲ್ಲವಾಗಿರಬಹುದು. ಆದ್ದರಿಂದ ಅವರಿಗೆ ಅಲ್ಲಿ ಸೀಟು ಸಿಕ್ಕಿಲ್ಲ. ಈ ಒಂದು ಸೀಟು ವಿಡಿಯೊದಲ್ಲಿ ಇರುವ ವ್ಯಕ್ತಿ ಮೊದಲ ರ್‍ಯಾಂಕ್‌ ಇದ್ದರೂ ಸಿಗುವುದಿಲ್ಲ” ಎಂದು ಹೇಳಿದ್ದಾರೆ.

 

“ಈ ರೀತಿಯ ಮೀಸಲು ಕ್ಯಾಟೆಗೆರಿಗಳು ಯಾವಾಗಲೂ ಅದೇ ರೀತಿ ಇರುವುದಿಲ್ಲ. ವರ್ಷ ವರ್ಷವೂ ಬೇರೆ ಬೇರೆ ಕಾಲೇಜಿಗೆ ಬದಲಾಗುತ್ತಲೇ ಇರುತ್ತದೆ. ಈ ವರ್ಷ ಗದಗ ಕಾಲೇಜಿಗೆ ಒಬಿಸಿ, ಎಸ್‌ಟಿ ಮತ್ತು ಸರ್ಕಾರಿ ಸೇವೆಯ ಸಾಮಾನ್ಯ ವರ್ಗಕ್ಕೆ ಇದ್ದರೆ, ಮುಂದಿನ ವರ್ಷ ಈ ಕಾಂಬಿನೇಷನ್‌ ಬದಲಾಗಿರುತ್ತದೆ. ಒಂದು ವೇಳೆ ಹಾಗೆ ಇದ್ದರೆ, ಒಂದು ಕಾಲೇಜಿಗೆ ಒಂದು ವರ್ಗದ ವಿದ್ಯಾರ್ಥಿಗಳ ಪ್ರವೇಶ ನಿರಾಕರಿಸದಂತಾಗುತ್ತದೆ. ಹಾಗಾಗಿ ಇದು ಬದಲಾಗುತ್ತಲೇ ಇರುತ್ತದೆ” ಎಂದು ಅವರು ತಿಳಿಸಿದ್ದಾರೆ.

“ಅನಸ್ತೇಶಿಯಾಗೆ ಸರ್ಕಾರಿ ಕೋಟಾದ ಅಡಿಯಲ್ಲಿ ಒಟ್ಟು 38 ಸೀಟುಗಳಿವೆ. ಅದರಲ್ಲಿ ಸಾಮಾನ್ಯ ವರ್ಗಕ್ಕೆ 15 ಸೀಟು ಮೀಸಲಿವೆ, ಉಳಿದ ಸೀಟುಗಳು ಉಳಿದ ವರ್ಗಗಳಿಗೆ ಮೀಸಲಿರಿಸಲಾಗಿದೆ. ಸರ್ಕಾರಿ ಸೀಟುಗಳನ್ನು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನೀಡಲಾಗುತ್ತದೆ. ವಿಡಿಯೋದಲ್ಲಿ ಗಗನ್ ಅವರು ಸಾಮಾನ್ಯ ವರ್ಗದ ವ್ಯಕ್ತಿಯೊಬ್ಬ ಗದಗಿನಲ್ಲಿ ಕಲಿಯಬಾರದೇ, ಅವರು ದೂರದ ಬೆಂಗಳೂರಿನಲ್ಲೇ ಯಾಕೆ ಕಲಿಯಬೇಕು ಎಂದಿದ್ದಾರೆ. ವಾಸ್ತವದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿ ಮಾತ್ರವಲ್ಲದೆ ಬೇರೆ ವರ್ಗದ ವಿದ್ಯಾರ್ಥಿಗಳು ಕೂಡಾ ಅವರಿಗೆ ಬೇಕಾದ ಕಡೆ ಸರ್ಕಾರಿ ಸೀಟು ಸಿಗುವುದಿಲ್ಲ. ಮೀಸಲಾತಿ ಹೇಗೆ ಹಂಚಿಕೆಯಾಗಿ ಇರುತ್ತೆದೆಯೋ, ಈ ಆಧಾರದಲ್ಲಿ ವಿದ್ಯಾರ್ಥಿಗಳು ಅಲ್ಲಿ ಪ್ರವೇಶ ಪಡೆಯುತ್ತಾರೆ. ಹೇಗೆ ಗದಗಿನಲ್ಲಿ ಇರುವ ಎರಡು ಸೀಟುಗಳಲ್ಲಿ ಎಸ್‌ಟಿ ಮತ್ತು ಒಬಿಸಿ ಇರುತ್ತೇರೆಯೋ ಹಾಗೆ ಕೆಲವು ಕಡೆ ಸಾಮಾನ್ಯ ವರ್ಗಗಳಿಗೆ ಮಾತ್ರ ಹಂಚಿಕೆಯಾಗಿರುತ್ತದೆ. ಈ ಹಂಚಿಕೆ ಮುಂದಿನ ವರ್ಷ ಮತ್ತೇ ಬದಲಾಗುತ್ತದೆ” ಎಂದು ಉಮ್ಮರ್‌ ಅವರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. Fact of the matter is for a country and it’s people to achieve peak performance, 100% of seats should be decided on merit only. At the same time to lift up people who have been culturally downtrodden, maximum facilities should be provided financially. Reserving seats in the name of caste is reverse racism.

  2. ಅತ್ಯುತ್ತಮ ವಾದ ವರದಿ ಮಾಡಿದ್ದಿರಾ…

    ದಯಮಾಡಿ ಇದ್ದ ನ್ನು ಸಾಮಾನ್ಯ ವರ್ಗದ ಜನರಿಗೆ‌‌ ತಲುಪಿಸಿ. ಈ ದೇಶದಲ್ಲಿ ಜಾತಿ ಇರುತ್ತೆ,ಜಾತಿ ಶೋಷಣೆ ಇದ್ದೆ ಇರುತ್ತೆ.

    ಈ ಪಿಡುಗು ಇನ್ನೂ ಆಳವಾಗಿ ಬೇರೂರಿದೆ.

  3. Brother you are seeing iceberg on the sea. Reservation is for all categories. Being educated if you are speaking like this means so sad. Why can’t you go to temple and tell same thing why Brahmin should only be the priest. If you taken 1st rank all colleges wi call you offer seat.

  4. There should be Reservation, and should not cross more than 33%, be it caste, economic, linguistic, religious or rural. This way there will justice for both the groups. Good example is in Olympics, in a 100 m race, it’s always almost the African wins the race, not the Chinese or Japanese or Koreans….. because of their tall and short stature. That means both are not physically equal. So the shorter person should start roughly 10 m starting point to equate…… likewise the upper caste vs lower caste brains are not equal for memory, grasping, intelligence. The reverse is true if any physical field job is given. So the Judiciary system should look into this aspect and frame the generalised rule for Reservation.

  5. ನೀವು ಮೇಲೆ ತೋರಿಸಿರುವ ಮೊದಲನೆಯ ಪಟ್ಟಿಯಲ್ಲಿ ಲೆಕ್ಕ ತಪ್ಪಿದೆಯಲ್ಲ?

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...