Homeಮುಖಪುಟಮುಂದಿನ 5 ದಿನಗಳ ವರೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಮಳೆ ಸಾಧ್ಯತೆ

ಮುಂದಿನ 5 ದಿನಗಳ ವರೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಮಳೆ ಸಾಧ್ಯತೆ

- Advertisement -
- Advertisement -

ಶನಿವಾರ ದಕ್ಷಿಣ ಕರ್ನಾಟಕ ಮತ್ತು ರಾಯಲಸೀಮಾದಲ್ಲಿ ಪ್ರತ್ಯೇಕವಾದ ಲಘು ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಯು ಮುನ್ಸೂಚನೆ ನೀಡಿದೆ. ಈ ವಾರ, ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದು, ಮುಂದಿನ ವಾರವೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಕಳೆದ ವಾರ ಈಶಾನ್ಯ ಮಾನ್ಸೂನ್ ಮುಕ್ತಾಯಗೊಂಡಿದೆ. ಹೀಗಾಗಿ, ಮಳೆಯು ತೀವ್ರಗೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ಕೊಚ್ಚಿ ಮತ್ತು ಚೆನ್ನೈ ನಗರಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುವ ಸಾಧ್ಯತೆಯಿದೆ. ಆದರೆ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಬೆಳಿಗ್ಗೆ ಮಂಜು ಮತ್ತು ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ ಎಂದು ಇಲಾಖೆ ಹೇಳಿದೆ.

ಲಘು ಮಳೆಯು ಭಾಗಶಃ ಮೋಡ ಕವಿದ ವಾತಾವರಣ ಮತ್ತು ತಾಪಮಾನದಲ್ಲಿ ಕುಸಿತವನ್ನು ತರುತ್ತದೆ. ಕಡಿಮೆ ಒತ್ತಡದ ಪ್ರದೇಶವಾದ ದಕ್ಷಿಣ ತಮಿಳುನಾಡಿನಿಂದ ದಕ್ಷಿಣ ಒಳಭಾಗದ ಕರ್ನಾಟಕದವರೆಗೆ ಲಘು ಮಳೆ ವಿಸ್ತರಿಸುತ್ತದೆ, ಇದು ಹೊಸ ಮಳೆಯಾಗಿದ್ದು, ಮುಂಗಾರು ಆರಂಭಕ್ಕೆ ಮುನ್ನುಡಿ ಬರೆಯಲಿದೆ.

ಈ ಮಧ್ಯೆ, ತಮಿಳುನಾಡು, ಪುದುಚೇರಿ, ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶದ ಕರಾವಳಿಯಲ್ಲಿ ಮತ್ತು ಕೇರಳದ ಹಲವು ಭಾಗಗಳಲ್ಲಿ ತಾಪಮಾನವು ಸರಾಸರಿಗಿಂತ ಕಡಿಮೆ ಇದೆ.

ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯ ತೀವ್ರತೆಯು ತುಂಬಾ ಕಡಿಮೆಯಿರುವ ನಿರೀಕ್ಷೆ ಇರುವುದರಿಂದ, ಈ ಭಾಗಗಳಿಗೆ ಯಾವುದೇ ಎಚ್ಚರಿಕೆಗಳನ್ನು ನೀಡಿಲ್ಲ.

ಚಂಡಮಾರುತವಿಲ್ಲದೆ ಶಾಂತವಾಗಿರುವ ಉತ್ತರ ಹಿಂದೂ ಮಹಾಸಾಗರ

2021 ರ ಮಾನ್ಸೂನ್ ನಂತರದ ಅವಧಿಯಲ್ಲಿ, ಉತ್ತರ ಹಿಂದೂ ಮಹಾಸಾಗರವು ಯಾವುದೇ ಚಂಡಮಾರುತಗಳಿಲ್ಲದೆ ಶಾಂತವಾಗಿತ್ತು. ಆದರೂ, ಚಂಡಮಾರುತಗಳಿಲ್ಲದೆಯೂ ಇಂತಹ ಭಾರೀ ಮಳೆಯು ತುಂಬಾ ಅಸಾಮಾನ್ಯವಾಗಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಆಗ್ಗಾಗ್ಗೆ ದಾಖಲೆಯ ಮಳೆಗೆ ಕಾರಣವಾಗಿವೆ.

ಜನವರಿಯಲ್ಲಿ ದಕ್ಷಿಣ ಭಾರತದಲ್ಲಿ ಮಳೆಯು ಅತ್ಯಲ್ಪವಾಗಿದೆ ಮತ್ತು ಸರಾಸರಿ 10 ಮಿ.ಮೀ.ಗಿಂತ ಕಡಿಮೆ ಮಳೆಯಾಗಿದೆ. ತಾಪಮಾನವು ಮಧ್ಯಮ ಪ್ರಮಾಣದಲ್ಲಿದ್ದು, ಸ್ಪಷ್ಟವಾಗಿ ಕಾಣುವ ಆಕಾಶದ ಜೊತೆಗೆ ತಣ್ಣನೆಯ ವಾತಾವರಣ ಇರುವುದರಿಂದ ಪರ್ಯಾಯ ದ್ವೀಪ (ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ) ಪ್ರದೇಶಕ್ಕೆ ಜನವರಿಯು ಆಹ್ಲಾದಕರ ತಿಂಗಳುಗಳಲ್ಲಿ ಒಂದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...