Homeಮುಖಪುಟಮದ್ಯ ಸೇವಿಸುವ, ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ ನೀಡಿದ ಬಿಹಾರ ಸರ್ಕಾರ

ಮದ್ಯ ಸೇವಿಸುವ, ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ ನೀಡಿದ ಬಿಹಾರ ಸರ್ಕಾರ

- Advertisement -
- Advertisement -

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು, ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿಗಳು, ಶಾಲಾ ಆವರಣದಲ್ಲಿ ಮದ್ಯ ಸೇವಿಸುವ ಅಥವಾ ಸರಬರಾಜು ಮಾಡುವ ಜನರ ಬಗ್ಗೆ ರಹಸ್ಯವಾಗಿ ಮಾಹಿತಿ ನೀಡುವಂತೆ ಬಿಹಾರ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ.

ಈ ಕುರಿತ ಅಧಿಕೃತ ಹೇಳಿಕೆಯಲ್ಲಿ, ಈ ಕ್ರಮವು ರಾಜ್ಯದಲ್ಲಿ ಮದ್ಯಪಾನ ನಿರ್ಮೂಲನಾ ಅಭಿಯಾನದ ಒಂದು ಭಾಗವಾಗಿದೆ. ಕೆಲವು ಶಾಲಾ ಆವರಣದಲ್ಲಿ ಜನರು ಮದ್ಯ ಸೇವನೆ ಮತ್ತು ಸರಬರಾಜಿನಲ್ಲಿ ತೊಡಗಿರುವುದು, ಇದು ಅವರ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತಿರುವುದು ರಾಜ್ಯದ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇಂತಹವರ ಬಗ್ಗೆ ರಹಸ್ಯವಾಗಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 1 ಏಪ್ರಿಲ್ 2016 ರಿಂದ ರಾಜ್ಯದಲ್ಲಿ ಮದ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದಾರೆ. ಈ ನಿಷೇಧದ ನಂತರ ರಾಜ್ಯದಲ್ಲಿ ಅಕ್ರಮ ಹಾಗೂ ಕಳ್ಳಬಟ್ಟಿ ಮಾರಾಟದ ಪರಿಣಾಮವಾಗಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರವು ಶಿಕ್ಷಣತಜ್ಞರಿಗೆ ಅಂತಹ ಚಟುವಟಿಕೆಗಳ ಬಗ್ಗೆ ತಿಳಿಸಲು ಫೋನ್ ನಂಬರ್ ಹಾಗೂ ಟೋಲ್ ಫ್ರೀ ನಂಬರ್‌‌ಳನ್ನು ಒದಗಿಸಿದೆ.

ಟೋಲ್ ಫ್ರೀ ನಂಬರ್: 18003456268/15545 (ಮೊಬೈಲ್ ನಂಬರ್: 9473400378, 9473400606)

ಬಿಹಾರ ಸರ್ಕಾರದ ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕದ ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತೆ ಸ್ವರ್ಣ ಭಟ್, ‘ರಾಜ್ಯದಲ್ಲಿ ನಡೆಯುತ್ತಿರುವ ಅನಧಿಕೃತ ಮದ್ಯ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಲ್ಲಾ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಆ ಸಮಿತಿಯ ಶಿಫಾರಸ್ಸಿನ ಮೇಲೆ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬೇಕು. ಶಿಕ್ಷಕರಿಗೆ ಇಂತಹ ಹೊಸ ಜವಾಬ್ದಾರಿಗಳು ಒತ್ತಡ ಉಂಟುಮಾಡಲಿದೆ. ಅಪರಾಧಿಗಳನ್ನು ಹಿಡಿಯುವ ಪೊಲೀಸರಿಗೆ ಈ ಜವಾಬ್ದಾರಿ ವಹಿಸುವುದು ಸೂಕ್ತ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read