Homeದಿಟನಾಗರಫ್ಯಾಕ್ಟ್‌ಚೆಕ್: ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ರತನ್ ಟಾಟಾ ಹೇಳಿದರೆ?

ಫ್ಯಾಕ್ಟ್‌ಚೆಕ್: ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ರತನ್ ಟಾಟಾ ಹೇಳಿದರೆ?

- Advertisement -
- Advertisement -

ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ಉದ್ಯಮಿ ರತನ್ ಟಾಟಾ ಹೇಳಿದ್ದಾರೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯಲ್ಲಿ ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್

ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ರತನ್ ಟಾಟಾ ಹೇಳಿದ್ದಾರೆಯೇ ಎಂದು ಇತ್ತೀಚಿನ ಎಲ್ಲಾ ಮಾಧ್ಯಮಗಳ ಹೇಳಿಕೆಯನ್ನು ಪರೀಶಿಲಿಸಲಾಯಿತು. ಅಲ್ಲದೆ ಉದ್ಯಮಿ ರತನ್‌ ಟಾಟಾರವರು ಭಾರತದ ಕೋವಿಡ್‌ ಬಿಕ್ಕಟ್ಟಿನ ಕುರಿತು ಯಾವುದಾದರೂ ಹೇಳಿಕೆ ನೀಡಿದ್ದಾರೆಯೇ ಎಂದು ಹುಡುಕಿದಾಗ ಅವರ ಸಾಮಾಜಿಕ ಮಾಧ್ಯಮಗಳಲ್ಲಿ ಅಂತಹ ಯಾವುದೇ ಹೇಳಿಕೆಗಳು ದೊರೆತಿಲ್ಲ. ಒಂದು ವೇಳೆ ಅವರು ಯಾವುದೇ ಹೇಳಿಕೆ ನೀಡಿದರೆ ಮುಖ್ಯವಾಹಿನಿ ಮಾಧ್ಯಮಗಳು ಅದನ್ನು ಪ್ರಕಟಿಸಬೇಕಿತ್ತು. ಆದರೆ ಈ ಮೇಲಿನ ಪ್ರತಿಪಾದನೆಯ ಕುರಿತು ಒಂದೇ ಒಂದು ಮಾಧ್ಯಮವು ಸಹ ಯಾವುದೆ ಸುದ್ದಿ, ವರದಿ ಮಾಡಿಲ್ಲ.

ಟಾಟಾ ಟ್ರಸ್ಟ್ ವತಿಯಿಂದ ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ಭಾರತ ಸರ್ಕಾರಕ್ಕೆ 1500 ಕೋಟಿ ರೂಗಳ ದೇಣಿಗೆ ನೀಡುವುದಾಗಿ 2020ರ ಮಾರ್ಚ್‌ನಲ್ಲಿ ರತನ್ ಟಾಟಾ ಘೋಷಿಸಿದ್ದರು. ಇತ್ತೀಚೆಗೆ, ಟಾಟಾ ಗ್ರೂಪ್ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳಿಗೆ ಸಹಾಯ ಮಾಡುವುದಾಗಿ ಘೋಷಿಸಿತ್ತು. ಆದರೆ, ರತನ್ ಟಾಟಾ ಅಥವಾ ದಿ ಟಾಟಾ ಗ್ರೂಪ್ ಮೇಲಿನ ಪೋಸ್ಟ್‌ನಲ್ಲಿನ ಹೇಳೀಕೆಯಲ್ಲಿ ಎಲ್ಲಿಯೂ ಹಂಚಿಕೊಂಡಿಲ್ಲ.

ಈ ಹಿಂದೆಯೇ ಇದೇ ರೀತಿಯ ಬೇರೆ ಬೇರೆ ಹೇಳಿಕೆಗಳನ್ನು ರತನ್ ಟಾಟಾರವರ ಹೆಸರಿನಲ್ಲಿ ಹರಿಯಬಿಡಲಾಗಿತ್ತು. ಅವುಗಳೆಲ್ಲ ಸುಳ್ಳು ಎಂದು ಸ್ವತಃ ರತನ್‌ ಟಾಟಾರವರು ಸ್ಪಷ್ಟನೆ ನೀಡಿದ್ದರು. ರತನ್ ಟಾಟಾರವರ ಕುರಿತಾದ ಸುಳ್ಳುಗಳನ್ನು ಫ್ಯಾಕ್ಟ್ಲಿ ಬಯಲುಗೊಳಿಸಿತ್ತು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಿನಲ್ಲಿ ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ರತನ್ ಟಾಟಾ ಯಾವುದೇ ಹೇಳಿಕೆ ನೀಡಿಲ್ಲ.


ಇದನ್ನೂ ಓದಿ: ‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...