Homeಮುಖಪುಟನಕಲಿ ಅಂಕಪಟ್ಟಿ ಪ್ರಕರಣ: ಯುಪಿ ಬಿಜೆಪಿ ಶಾಸಕನಿಗೆ 5 ವರ್ಷ ಜೈಲು

ನಕಲಿ ಅಂಕಪಟ್ಟಿ ಪ್ರಕರಣ: ಯುಪಿ ಬಿಜೆಪಿ ಶಾಸಕನಿಗೆ 5 ವರ್ಷ ಜೈಲು

- Advertisement -

ಉತ್ತರ ಪ್ರದೇಶದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ತಿವಾರಿ ಅಲಿಯಾಸ್ ಖಬ್ಬು ತಿವಾರಿಗೆ, ಫೈಜಾಬಾದ್‌ನ ವಿಶೇಷ ಸಂಸದ/ಎಂಎಲ್‌ಎ ನ್ಯಾಯಾಲಯವು ನಕಲಿ ಅಂಕಪಟ್ಟಿ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

28 ವರ್ಷಗಳ ಹಿಂದೆ ದಾಖಲಾದ ಪ್ರಕರಣವನ್ನು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಪೂಜಾ ಸಿಂಗ್‌ ಅವರು, ಪ್ರಕರಣದಲ್ಲಿ ಇಂದ್ರ ಪ್ರತಾಪ್‌ ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಘೋಷಿಸಿ, ದಂಡವಾಗಿ 8,000 ರೂಪಾಯಿ ವಿಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಇಂದ್ರ ಪ್ರತಾಪ್ ರಾಜ್ಯದ ಅಯೋಧ್ಯೆ ಜಿಲ್ಲೆಯ ಗೋಸಾಯಿಗಂಜ್‌‌ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೋ

ಇಂದ್ರ ಪ್ರತಾಪ್ ವಿರುದ್ದ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ರಾಮ ತ್ರಿಪಾಠಿ ಅವರು ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ 1992 ರಲ್ಲಿ ಪ್ರಕರಣ ದಾಖಲಿಸಿದ್ದರು.

ಎಫ್ಐಆರ್ ಪ್ರಕಾರ, ಪದವಿಯ ಎರಡನೇ ವರ್ಷದಲ್ಲಿ ಅನುತ್ತೀರ್ಣರಾಗಿದ್ದ ಇಂದ್ರ ಪ್ರತಾಪ್ 1990 ರಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಮುಂದಿನ ತರಗತಿಗೆ ಪ್ರವೇಶ ಪಡೆದಿದ್ದರು.

ಪ್ರಕರಣ ದಾಖಲಾಗಿ 13 ವರ್ಷಗಳ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ದಾಖಲೆಗಳಿಂದ ಹಲವಾರು ಮೂಲ ದಾಖಲೆಗಳು ಕಣ್ಮರೆಯಾಗಿದ್ದವು. ನಂತರ ನ್ಯಾಯಾಲಯವು ದಾಖಲೆಗಳ ದ್ವಿತೀಯ ಪ್ರತಿಗಳೊಂದಿಗೆ ವಿಚಾರಣೆ ಮುಂದುವರೆಸಿತ್ತು.

ಈ ನಡುವೆ, ದೂರುದಾರ ತ್ರಿಪಾಠಿ ಅವರು ಕೂಡ ವಿಚಾರಣೆಯ ಸಮಯದಲ್ಲಿ ಮೃತಪಟ್ಟದ್ದರು. ಆಗಿನ ಸಾಕೇತ್ ಕಾಲೇಜಿನ ಡೀನ್ ಆಗಿದ್ದ ಮಹೇಂದ್ರ ಕುಮಾರ್ ಅಗರವಾಲ್ ಮತ್ತು ಇತರ ಸಾಕ್ಷಿಗಳು ನ್ಯಾಯಾಲಯದಲ್ಲಿ ಇಂದ್ರ ಪ್ರತಾಪ್‌ ವಿರುದ್ಧ ಸಾಕ್ಷ್ಯ ನುಡಿದಿದ್ದರು.

ಇದನ್ನೂ ಓದಿ: ರೈತ ಹೋರಾಟ ನೆಲದಲ್ಲಿ ಹತ್ಯೆ: ಬಿಜೆಪಿ ಸಚಿವರೊಂದಿಗೆ ಆರೋಪಿತ ನಿಹಾಂಗ್ ಗುಂಪಿನ ಮುಖ್ಯಸ್ಥ ಸಭೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial