ದೆಹಲಿಯ ಗಡಿಗಳಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ 100 ದಿನ ದಾಟಿ ಮುಂದುವರೆದಿದ್ದರೂ, ಕೇಂದ್ರ ಸರ್ಕಾರ ಮತ್ತೆ ಮಾತುಕತೆಗೆ ಸಿದ್ಧವಾಗಿಲ್ಲ. ಇದೇ ಸಂದರ್ಭದಲ್ಲಿ ಬ್ರಿಟಿಷ್ ಸಂಸತ್ತು ಮಾರ್ಚ್ 8 ರಂದು ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸಲು ಸಜ್ಜಾಗಿದೆ ಎಂದು ದಿ ವೈರ್ ವರದಿ ಮಾಡಿದೆ.
ಮೋದಿಯವರು ಕೃಷಿ ಕಾನೂನುಗಳ ವಿರುದ್ಧ ಮತ್ತು ರೈತ ಹೋರಾಟದ ಪರ ವಿದೇಶದಲ್ಲಿ ನಡೆಯುವ ಯಾವುದೇ ಪ್ರತಿಭಟನೆಗಳು ಮತ್ತು ರ‍್ಯಾಲಿಗಳಿಗೆ ಕಾಂಗ್ರೆಸ್ ಪಕ್ಷದ ನೇತೃತ್ವದ ‘ರಾಷ್ಟ್ರ ವಿರೋಧಿ’ ಕೃತ್ಯ ಎಂದು ಕರೆಯುತ್ತಿದ್ದಾರೆ. ಜನವರಿ 5 ರಂದು, ಯುಕೆ ಯ 100 ಕ್ಕೂ ಹೆಚ್ಚು ಸಂಸದರು ಭಾರತದಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಪತ್ರವೊಂದನ್ನು ಕಳುಹಿಸಿ, ಅವರ ನಿಲುವನ್ನು ತಿಳಿಸಲು ಕೋರಿದ್ದರು.
ಅಂದಿನಿಂದ, ಪ್ರತಿಭಟನಾಕಾರರ ಸುರಕ್ಷತೆ ಮತ್ತು ಪತ್ರಿಕಾ ಸ್ವಾತಂತ್ರ‍್ಯವನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವನ್ನು ಒತ್ತಾಯಿಸುವ ಇ-ಅರ್ಜಿಯ ಮೂಲಕ ಈ ವಿಷಯದ ಬಗ್ಗೆ ಚರ್ಚೆಯನ್ನು ನಡೆಸುವ ಕ್ರಮವನ್ನು ಒತ್ತಾಯಿಸಿದ್ದಾರೆ. ಇದಕ್ಕೆ 115,676 ಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ.
ಟ್ರಾಕ್ಟರ್ ಮೆರವಣಿಗೆಗೆ ನಾಲ್ಕು ದಿನಗಳ ಮೊದಲು ಜನವರಿ 22 ರಂದು ರೈತ ಸಂಘಗಳು ಮತ್ತು ಕೇಂದ್ರದ ನಡುವೆ ಕೊನೆಯ ಸುತ್ತಿನ ಮಾತುಕತೆ ನಡೆಯಿತು, ಜನವರಿ 26 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಉಂಟಾದ ಗೊಂದಲ ಮತ್ತು ಹಿಂಸಾಚಾರದ ನಂತರ ಕೇಂದ್ರ ಮಾತುಕತೆಯಿಮದ ದೂರ ಉಳಿದಿದೆ.
ದಿ ವೈರ್‌ನ ಪ್ರಶ್ನೆಗಳಿಗೆ ಉತ್ತರಿಸಿದ ಸ್ಲೊಗ್‌ನ ಬ್ರಿಟಿಷ್ ಲೇಬರ್ ಸಂಸದ ತನ್ಮಂಜೀತ್ ಸಿಂಗ್ ಧೇಸಿ, ನಮ್ಮ ಶಾಸಕಾಂಗವು ಸ್ಥಳೀಯ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆ ಹೆಚ್ಚಿನ ಸಮಯವನ್ನು ಕಳೆಯುತ್ತದೆ. ಆದರೆ ಅದೇ ಹೊತ್ತಿಗೆ ವಿಶ್ವದ ಇತರ ಕಡೆಯ ಸಮಸ್ಯೆಗಳನ್ನು ಚಚಿಸುತ್ತದೆ. “ಇದು ನಮ್ಮ ಪ್ರಜಾಪ್ರಭುತ್ವವನ್ನು ಶ್ರೀಮಂತಗೊಳಿಸುತ್ತದೆ ಮತ್ತು ಸಂಸದರ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ, ಇಂತಹ ಚರ್ಚೆಗಳು ನಮ್ಮ ಸಾಮೂಹಿಕ ರಾಷ್ಟ್ರೀಯ ಚಿಂತನೆಯನ್ನು ಸೂಚಿಸುತ್ತವೆ ಮತ್ತು ಜಾಗತಿಕವಾಗಿ ನಮ್ಮ ಸ್ನೇಹಿತರು ಮತ್ತು ಮಿತ್ರರಾಷ್ಟ್ರಗಳಿಗೆ ರಚನಾತ್ಮಕ ಟೀಕೆಗಳನ್ನು ಒದಗಿಸಲು ಸಹಕಾರಿಯಾಗುತ್ತವೆ ” ಎಂದು ಹೇಳಿದ್ದಾರೆ.
ರೈತರ ಪರವಾಗಿ ಪ್ರತಿಭಟನೆಗಳು ಮತ್ತು ರ‍್ಯಾಲಿಗಳನ್ನು ‘ಭಾರತವನ್ನು ಕೆಣಕುವ ಪಿತೂರಿ’ ಎಂಬ ಭಾರತೀಯ ಸರ್ಕಾರದ ಆರೋಪದ ಕುರಿತು ಉತ್ತರಿಸಿದ ಧೇಸಿ, “ಇದು ಖಂಡಿತವಾಗಿಯೂ ತಪ್ಪು. ಸರ್ಕಾರದ ನೀತಿಗಳ ಬಗ್ಗೆ ಕಳವಳ ವ್ಯಕ್ತಪಡಿಸುವುದು ರಾಷ್ಟ್ರ ವಿರೋಧಿ ಅಥವಾ ಭಾರತ ವಿರೋಧಿ ಅಲ್ಲ. ಅದು ಯಾರೇ ಆಗಿರಬಹುದು. ಯುಕೆಯಲ್ಲಿ, ನಮ್ಮ ಸರ್ಕಾರ ಮತ್ತು ವಿದೇಶಿ ಸರ್ಕಾರಗಳ ಕ್ರಮಗಳನ್ನು ನಾವು ನಿರಂತರವಾಗಿ ಪರಿಶೀಲಿಸುತ್ತೇವೆ; ನಿಜಕ್ಕೂ ಇದು ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತವಾಗಿದೆ.’ ಎಂದರು.
ಜಲಂಧರ್‌ನ ರಾಯ್‌ಪುರ ಗ್ರಾಮದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖಂಡರಾಗಿರುವ ಪರಮಜಿತ್ ಸಿಂಗ್ ರಾಯ್ಪುರ್, (ತನ್ಮಂಜೀತ್ ಸಿಂಗ್ ಅವರ ತಂದೆಯ ಚಿಕ್ಕಪ್ಪ) ಈ ಬೆಳವಣಿಗೆಯು ರೈತರಿಗೆ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು. “ಮೋದಿ ಸರ್ಕಾರವು ರೈತರ ಮಾತುಗಳನ್ನು ಕೇಳಲು ಸಹ ಸಿದ್ಧರಿಲ್ಲದಿದ್ದರೂ, ಯುಕೆ ಸಂಸತ್ತು ಈ ವಿಷಯದ ಬಗ್ಗೆ ಚರ್ಚೆಯನ್ನು ನಡೆಸುತ್ತಿದೆ. ಪ್ರತಿಭಟನೆ ಪ್ರಾರಂಭವಾದಾಗಿನಿಂದ ಯುಕೆ ಸಂಸತ್ತಿನಲ್ಲಿ ರೈತರ ಪ್ರತಿಭಟನೆಯ ವಿಷಯವನ್ನು ತನ್ಮಂಜಿತ್ ಸಿಂಗ್ ಮತ್ತು ಇತರ ಯುಕೆ ಸಂಸದರು ಗಟ್ಟಿಯಾಗಿ ಎತ್ತಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ’ ಎಂದಿದ್ದಾರೆ.
ಮಾರ್ಚ್ 8 ರಂದು ಔಪಚಾರಿಕ ಚರ್ಚೆ ನಡೆಸುವ ಮೂಲಕ ರೈತರ ಆಂದೋಲನಕ್ಕೆ ಉತ್ತೇಜನ ಸಿಗುತ್ತದೆ ಮತ್ತು ಮೋದಿ ಸರ್ಕಾರ ಖಂಡಿತವಾಗಿಯೂ ಒತ್ತಡಕ್ಕೆ ಒಳಗಾಗುತ್ತದೆ ಎಂದು ಪರಮಜಿತ್ ಹೇಳಿದ್ದಾರೆ. “ಅವರು ಈ ಅಸ್ತವ್ಯಸ್ತತೆಯನ್ನು ಕೊನೆಗೊಳಿಸಬೇಕು ಮತ್ತು ರೈತರ ಮಾತನ್ನು ಕೇಳಬೇಕು ಎಂದು ನಾವು ಮೋದಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದು ಅವರು ಹೇಳಿದರು.
ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸುತ್ತಾ, ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ಡಾ. ದರ್ಶನ್ ಪಾಲ್, ಇದು ಹೆಮ್ಮೆಯ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಭಾರತ ಸರ್ಕಾರ ಗಮನಿಸದಿದ್ದರೂ, ಬ್ರಿಟಿಷ್ ಸಂಸತ್ತು ಈ ಬಗ್ಗೆ ಚರ್ಚೆ ನಡೆಸುತ್ತಿದೆ… ಒಂದು ಕಡೆ ನಾಚಿಕೆ, ಮತ್ತೊಂದು ಕಡೆ ಹೆಮ್ಮೆಯ ವಿಷಯ’ ಎಂದಿದ್ದಾರೆ.
“ಮೋದಿ ಸರ್ಕಾರದ ಅಸೂಕ್ಷ್ಮತೆ, ಅಜ್ಞಾನ ಮತ್ತು ಅಹಂಕಾರದಿಂದಾಗಿ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗ ಯುಕೆ ಸರ್ಕಾರ ಚರ್ಚೆಯನ್ನು ನಡೆಸುತ್ತಿದೆ. ಇಲ್ಲಿಯವರೆಗೆ ನಡೆದ ಪ್ರತಿಭಟನೆಯಲ್ಲಿ 270 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ರೈತರ ಮೂಲಭೂತ ಮಾನವ ಹಕ್ಕುಗಳನ್ನು ಹಾಳುಮಾಡಲಾಯಿತು, ಮೂಲಭೂತ ಸೌಲಭ್ಯಗಳನ್ನು ನಿಲ್ಲಿಸಲಾಯಿತು. ರೈತರ ಸಮಸ್ಯೆ ಕೇಳುವ ಬದಲು ಸರ್ಕಾರ ಅವುಗಳನ್ನು ಕಡೆಗಣಿಸಿತು. ಯುಕೆ ಸಂಸತ್ತಿನ ಉಪಕ್ರಮವನ್ನು ನಾವು ಸ್ವಾಗತಿಸುತ್ತೇವೆ, ಏಕೆಂದರೆ ನಮ್ಮ ಏಕೈಕ ಕಾಳಜಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು” ಎಂದು ದರ್ಶನ್ ಪಾಲ್ ಹೇಳಿದ್ದಾರೆ.
ವಿಶೇಷವೆಂದರೆ, ಹಲವಾರು ಯುಕೆ ಸಂಸದರು ಸೋಷಿಯಲ್ ಮೀಡಿಯಾದಲ್ಲಿ, ವಿಶೇಷವಾಗಿ ಟ್ವಿಟರ್‌ನಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನಿರಂತರ ಅಭಿಯಾನವನ್ನು ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಿದ ದಿಶಾ ರವಿ, ನೊದೀಪ್ ಕೌರ್ ಅವರ ಬಂಧನ ಮತ್ತು ಪತ್ರಿಕಾ ಸ್ವಾತಂತ್ರ‍್ಯದ ಮೇಲಿನ ದಾಳಿಯ ವಿರುದ್ಧ ಲೀಸೆಸ್ಟರ್ ಈಸ್ಟ್ ನ ಸಂಸದ ಕ್ಲೌಡಿಯಾ ವೆಬ್ಬೆ ಧ್ವನಿ ಎತ್ತಿದ್ದರು. ಅವರ ವಿರುದ್ದ ಟ್ವಿಟ್ಟರ್‌ನಲ್ಲಿ ಲೈಂಗಿಕ ದೌರ್ಜನ್ಯದ ಬೆದರಿಕೆ ಮತ್ತು ಜನಾಂಗೀಯ ನಿಂದನೆ ಕಾಣಿಸಿಕೊಂಡಿದ್ದವು.
ಫೆಬ್ರವರಿ 8 ರಂದು ಯುಕೆ ಪಿಎಂ ಬೋರಿಸ್ ಜಾನ್ಸನ್‌ಗೆ ಬರೆದ ಪತ್ರದಲ್ಲಿ, ಕ್ಲೌಡಿಯಾ ವೆಬ್ಬೆ ಹೀಗೆ ಬರೆದಿದ್ದಾರೆ: “ಪ್ರತಿಭಟನಾಕಾರರ ವಿರುದ್ಧ ದೌರ್ಜನ್ಯ ಮತ್ತು ಹಿಂಸಾಚಾರದ ಬಗ್ಗೆ ಭಾರತೀಯ ಸರ್ಕಾರದಲ್ಲಿನ ನಿಮ್ಮ ಸಹವರ್ತಿಗಳೊಂದಿಗೆ ಕಳವಳ ವ್ಯಕ್ತಪಡಿಸಬೇಕು ಮತ್ತು ರೈತರ ಕಳವಳಗಳನ್ನು ಆಲಿಸಲು ಮತ್ತು ತೊಡಗಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಿ. ಭಾರತದಲ್ಲಿ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಬಳಸಬಹುದಾದ ನೀರಿನ ಫಿರಂಗಿಗಳು, ಅಶ್ರುವಾಯು ಮತ್ತು ದಂಡಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ”
ಇದಕ್ಕೂ ಮೊದಲು 2020 ರ ಡಿಸೆಂಬರ್‌ನಲ್ಲಿ 36 ಬ್ರಿಟಿಷ್ ಸಂಸದರು ಯುಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಬ್ ಅವರಿಗೆ ಪತ್ರ ಬರೆದು ಭಾರತೀಯ ಸರ್ಕಾರದೊಂದಿಗೆ ರೈತರ ಪ್ರತಿಭಟನೆಯ ವಿಷಯವನ್ನು ಚರ್ಚಿಸಬೇಕೆಂದು ಒತ್ತಾಯಿಸಿದ್ದರು.
ಇದನ್ನೂ ಓದಿ: ರೈತ ಹೋರಾಟಕ್ಕೆ 100 ದಿನ: ಹೆದ್ದಾರಿ ತಡೆ, ಬಿಜೆಪಿ ಬಹಿಷ್ಕರಿಸಲು ರೈತರ ಕರೆ



ವಿದೇಶೀಯರಿಗೆ ಅರ್ಥ ಆಗುತ್ತಿರುವ ನಮ್ಮ ರೈತರ ಕಶ್ಟ, ಸ್ವದೇಶೀಯರಿಗೆ ಅರ್ಥ ಆಗುತ್ತಿಲ್ಲ, ಇದು ಈ ದೇಶದ ದುರಂತ.