Homeಅಂತರಾಷ್ಟ್ರೀಯಮಾ.8 ರಂದು ಬ್ರಿಟನ್ ಸಂಸತ್ತಿನಲ್ಲಿ ಕೃಷಿ ಕಾಯ್ದೆ & ರೈತ ಹೋರಾಟದ ಚರ್ಚೆ!

ಮಾ.8 ರಂದು ಬ್ರಿಟನ್ ಸಂಸತ್ತಿನಲ್ಲಿ ಕೃಷಿ ಕಾಯ್ದೆ & ರೈತ ಹೋರಾಟದ ಚರ್ಚೆ!

- Advertisement -
- Advertisement -

ದೆಹಲಿಯ ಗಡಿಗಳಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ 100 ದಿನ ದಾಟಿ ಮುಂದುವರೆದಿದ್ದರೂ, ಕೇಂದ್ರ ಸರ್ಕಾರ ಮತ್ತೆ ಮಾತುಕತೆಗೆ ಸಿದ್ಧವಾಗಿಲ್ಲ. ಇದೇ ಸಂದರ್ಭದಲ್ಲಿ ಬ್ರಿಟಿಷ್ ಸಂಸತ್ತು ಮಾರ್ಚ್ 8 ರಂದು ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸಲು ಸಜ್ಜಾಗಿದೆ ಎಂದು ದಿ ವೈರ್ ವರದಿ ಮಾಡಿದೆ.

ಮೋದಿಯವರು ಕೃಷಿ ಕಾನೂನುಗಳ ವಿರುದ್ಧ ಮತ್ತು ರೈತ ಹೋರಾಟದ ಪರ ವಿದೇಶದಲ್ಲಿ ನಡೆಯುವ ಯಾವುದೇ ಪ್ರತಿಭಟನೆಗಳು ಮತ್ತು ರ‍್ಯಾಲಿಗಳಿಗೆ ಕಾಂಗ್ರೆಸ್ ಪಕ್ಷದ ನೇತೃತ್ವದ ‘ರಾಷ್ಟ್ರ ವಿರೋಧಿ’ ಕೃತ್ಯ ಎಂದು ಕರೆಯುತ್ತಿದ್ದಾರೆ. ಜನವರಿ 5 ರಂದು, ಯುಕೆ ಯ 100 ಕ್ಕೂ ಹೆಚ್ಚು ಸಂಸದರು ಭಾರತದಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಪತ್ರವೊಂದನ್ನು ಕಳುಹಿಸಿ, ಅವರ ನಿಲುವನ್ನು ತಿಳಿಸಲು ಕೋರಿದ್ದರು.
ಅಂದಿನಿಂದ, ಪ್ರತಿಭಟನಾಕಾರರ ಸುರಕ್ಷತೆ ಮತ್ತು ಪತ್ರಿಕಾ ಸ್ವಾತಂತ್ರ‍್ಯವನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವನ್ನು ಒತ್ತಾಯಿಸುವ ಇ-ಅರ್ಜಿಯ ಮೂಲಕ ಈ ವಿಷಯದ ಬಗ್ಗೆ ಚರ್ಚೆಯನ್ನು ನಡೆಸುವ ಕ್ರಮವನ್ನು ಒತ್ತಾಯಿಸಿದ್ದಾರೆ. ಇದಕ್ಕೆ 115,676 ಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ.

ಟ್ರಾಕ್ಟರ್ ಮೆರವಣಿಗೆಗೆ ನಾಲ್ಕು ದಿನಗಳ ಮೊದಲು ಜನವರಿ 22 ರಂದು ರೈತ ಸಂಘಗಳು ಮತ್ತು ಕೇಂದ್ರದ ನಡುವೆ ಕೊನೆಯ ಸುತ್ತಿನ ಮಾತುಕತೆ ನಡೆಯಿತು, ಜನವರಿ 26 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಉಂಟಾದ ಗೊಂದಲ ಮತ್ತು ಹಿಂಸಾಚಾರದ ನಂತರ ಕೇಂದ್ರ ಮಾತುಕತೆಯಿಮದ ದೂರ ಉಳಿದಿದೆ.

ದಿ ವೈರ್‌ನ ಪ್ರಶ್ನೆಗಳಿಗೆ ಉತ್ತರಿಸಿದ ಸ್ಲೊಗ್‌ನ ಬ್ರಿಟಿಷ್ ಲೇಬರ್ ಸಂಸದ ತನ್ಮಂಜೀತ್ ಸಿಂಗ್ ಧೇಸಿ, ನಮ್ಮ ಶಾಸಕಾಂಗವು ಸ್ಥಳೀಯ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆ ಹೆಚ್ಚಿನ ಸಮಯವನ್ನು ಕಳೆಯುತ್ತದೆ. ಆದರೆ ಅದೇ ಹೊತ್ತಿಗೆ ವಿಶ್ವದ ಇತರ ಕಡೆಯ ಸಮಸ್ಯೆಗಳನ್ನು ಚಚಿಸುತ್ತದೆ. “ಇದು ನಮ್ಮ ಪ್ರಜಾಪ್ರಭುತ್ವವನ್ನು ಶ್ರೀಮಂತಗೊಳಿಸುತ್ತದೆ ಮತ್ತು ಸಂಸದರ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ, ಇಂತಹ ಚರ್ಚೆಗಳು ನಮ್ಮ ಸಾಮೂಹಿಕ ರಾಷ್ಟ್ರೀಯ ಚಿಂತನೆಯನ್ನು ಸೂಚಿಸುತ್ತವೆ ಮತ್ತು ಜಾಗತಿಕವಾಗಿ ನಮ್ಮ ಸ್ನೇಹಿತರು ಮತ್ತು ಮಿತ್ರರಾಷ್ಟ್ರಗಳಿಗೆ ರಚನಾತ್ಮಕ ಟೀಕೆಗಳನ್ನು ಒದಗಿಸಲು ಸಹಕಾರಿಯಾಗುತ್ತವೆ ” ಎಂದು ಹೇಳಿದ್ದಾರೆ.

ರೈತರ ಪರವಾಗಿ ಪ್ರತಿಭಟನೆಗಳು ಮತ್ತು ರ‍್ಯಾಲಿಗಳನ್ನು ‘ಭಾರತವನ್ನು ಕೆಣಕುವ ಪಿತೂರಿ’ ಎಂಬ ಭಾರತೀಯ ಸರ್ಕಾರದ ಆರೋಪದ ಕುರಿತು ಉತ್ತರಿಸಿದ ಧೇಸಿ, “ಇದು ಖಂಡಿತವಾಗಿಯೂ ತಪ್ಪು. ಸರ್ಕಾರದ ನೀತಿಗಳ ಬಗ್ಗೆ ಕಳವಳ ವ್ಯಕ್ತಪಡಿಸುವುದು ರಾಷ್ಟ್ರ ವಿರೋಧಿ ಅಥವಾ ಭಾರತ ವಿರೋಧಿ ಅಲ್ಲ. ಅದು ಯಾರೇ ಆಗಿರಬಹುದು. ಯುಕೆಯಲ್ಲಿ, ನಮ್ಮ ಸರ್ಕಾರ ಮತ್ತು ವಿದೇಶಿ ಸರ್ಕಾರಗಳ ಕ್ರಮಗಳನ್ನು ನಾವು ನಿರಂತರವಾಗಿ ಪರಿಶೀಲಿಸುತ್ತೇವೆ; ನಿಜಕ್ಕೂ ಇದು ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತವಾಗಿದೆ.’ ಎಂದರು.

ಜಲಂಧರ್‌ನ ರಾಯ್‌ಪುರ ಗ್ರಾಮದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖಂಡರಾಗಿರುವ ಪರಮಜಿತ್ ಸಿಂಗ್ ರಾಯ್ಪುರ್, (ತನ್ಮಂಜೀತ್ ಸಿಂಗ್ ಅವರ ತಂದೆಯ ಚಿಕ್ಕಪ್ಪ) ಈ ಬೆಳವಣಿಗೆಯು ರೈತರಿಗೆ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು. “ಮೋದಿ ಸರ್ಕಾರವು ರೈತರ ಮಾತುಗಳನ್ನು ಕೇಳಲು ಸಹ ಸಿದ್ಧರಿಲ್ಲದಿದ್ದರೂ, ಯುಕೆ ಸಂಸತ್ತು ಈ ವಿಷಯದ ಬಗ್ಗೆ ಚರ್ಚೆಯನ್ನು ನಡೆಸುತ್ತಿದೆ. ಪ್ರತಿಭಟನೆ ಪ್ರಾರಂಭವಾದಾಗಿನಿಂದ ಯುಕೆ ಸಂಸತ್ತಿನಲ್ಲಿ ರೈತರ ಪ್ರತಿಭಟನೆಯ ವಿಷಯವನ್ನು ತನ್ಮಂಜಿತ್ ಸಿಂಗ್ ಮತ್ತು ಇತರ ಯುಕೆ ಸಂಸದರು ಗಟ್ಟಿಯಾಗಿ ಎತ್ತಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ’ ಎಂದಿದ್ದಾರೆ.

ಮಾರ್ಚ್ 8 ರಂದು ಔಪಚಾರಿಕ ಚರ್ಚೆ ನಡೆಸುವ ಮೂಲಕ ರೈತರ ಆಂದೋಲನಕ್ಕೆ ಉತ್ತೇಜನ ಸಿಗುತ್ತದೆ ಮತ್ತು ಮೋದಿ ಸರ್ಕಾರ ಖಂಡಿತವಾಗಿಯೂ ಒತ್ತಡಕ್ಕೆ ಒಳಗಾಗುತ್ತದೆ ಎಂದು ಪರಮಜಿತ್ ಹೇಳಿದ್ದಾರೆ. “ಅವರು ಈ ಅಸ್ತವ್ಯಸ್ತತೆಯನ್ನು ಕೊನೆಗೊಳಿಸಬೇಕು ಮತ್ತು ರೈತರ ಮಾತನ್ನು ಕೇಳಬೇಕು ಎಂದು ನಾವು ಮೋದಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದು ಅವರು ಹೇಳಿದರು.

ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸುತ್ತಾ, ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ಡಾ. ದರ್ಶನ್ ಪಾಲ್, ಇದು ಹೆಮ್ಮೆಯ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಭಾರತ ಸರ್ಕಾರ ಗಮನಿಸದಿದ್ದರೂ, ಬ್ರಿಟಿಷ್ ಸಂಸತ್ತು ಈ ಬಗ್ಗೆ ಚರ್ಚೆ ನಡೆಸುತ್ತಿದೆ… ಒಂದು ಕಡೆ ನಾಚಿಕೆ, ಮತ್ತೊಂದು ಕಡೆ ಹೆಮ್ಮೆಯ ವಿಷಯ’ ಎಂದಿದ್ದಾರೆ.

“ಮೋದಿ ಸರ್ಕಾರದ ಅಸೂಕ್ಷ್ಮತೆ, ಅಜ್ಞಾನ ಮತ್ತು ಅಹಂಕಾರದಿಂದಾಗಿ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗ ಯುಕೆ ಸರ್ಕಾರ ಚರ್ಚೆಯನ್ನು ನಡೆಸುತ್ತಿದೆ. ಇಲ್ಲಿಯವರೆಗೆ ನಡೆದ ಪ್ರತಿಭಟನೆಯಲ್ಲಿ 270 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ರೈತರ ಮೂಲಭೂತ ಮಾನವ ಹಕ್ಕುಗಳನ್ನು ಹಾಳುಮಾಡಲಾಯಿತು, ಮೂಲಭೂತ ಸೌಲಭ್ಯಗಳನ್ನು ನಿಲ್ಲಿಸಲಾಯಿತು. ರೈತರ ಸಮಸ್ಯೆ ಕೇಳುವ ಬದಲು ಸರ್ಕಾರ ಅವುಗಳನ್ನು ಕಡೆಗಣಿಸಿತು. ಯುಕೆ ಸಂಸತ್ತಿನ ಉಪಕ್ರಮವನ್ನು ನಾವು ಸ್ವಾಗತಿಸುತ್ತೇವೆ, ಏಕೆಂದರೆ ನಮ್ಮ ಏಕೈಕ ಕಾಳಜಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು” ಎಂದು ದರ್ಶನ್ ಪಾಲ್ ಹೇಳಿದ್ದಾರೆ.

ವಿಶೇಷವೆಂದರೆ, ಹಲವಾರು ಯುಕೆ ಸಂಸದರು ಸೋಷಿಯಲ್ ಮೀಡಿಯಾದಲ್ಲಿ, ವಿಶೇಷವಾಗಿ ಟ್ವಿಟರ್‌ನಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನಿರಂತರ ಅಭಿಯಾನವನ್ನು ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಿದ ದಿಶಾ ರವಿ, ನೊದೀಪ್ ಕೌರ್ ಅವರ ಬಂಧನ ಮತ್ತು ಪತ್ರಿಕಾ ಸ್ವಾತಂತ್ರ‍್ಯದ ಮೇಲಿನ ದಾಳಿಯ ವಿರುದ್ಧ ಲೀಸೆಸ್ಟರ್ ಈಸ್ಟ್ ನ ಸಂಸದ ಕ್ಲೌಡಿಯಾ ವೆಬ್ಬೆ ಧ್ವನಿ ಎತ್ತಿದ್ದರು. ಅವರ ವಿರುದ್ದ ಟ್ವಿಟ್ಟರ್‌ನಲ್ಲಿ ಲೈಂಗಿಕ ದೌರ್ಜನ್ಯದ ಬೆದರಿಕೆ ಮತ್ತು ಜನಾಂಗೀಯ ನಿಂದನೆ ಕಾಣಿಸಿಕೊಂಡಿದ್ದವು.

ಫೆಬ್ರವರಿ 8 ರಂದು ಯುಕೆ ಪಿಎಂ ಬೋರಿಸ್ ಜಾನ್ಸನ್‌ಗೆ ಬರೆದ ಪತ್ರದಲ್ಲಿ, ಕ್ಲೌಡಿಯಾ ವೆಬ್ಬೆ ಹೀಗೆ ಬರೆದಿದ್ದಾರೆ: “ಪ್ರತಿಭಟನಾಕಾರರ ವಿರುದ್ಧ ದೌರ್ಜನ್ಯ ಮತ್ತು ಹಿಂಸಾಚಾರದ ಬಗ್ಗೆ ಭಾರತೀಯ ಸರ್ಕಾರದಲ್ಲಿನ ನಿಮ್ಮ ಸಹವರ್ತಿಗಳೊಂದಿಗೆ ಕಳವಳ ವ್ಯಕ್ತಪಡಿಸಬೇಕು ಮತ್ತು ರೈತರ ಕಳವಳಗಳನ್ನು ಆಲಿಸಲು ಮತ್ತು ತೊಡಗಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಿ. ಭಾರತದಲ್ಲಿ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಬಳಸಬಹುದಾದ ನೀರಿನ ಫಿರಂಗಿಗಳು, ಅಶ್ರುವಾಯು ಮತ್ತು ದಂಡಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ”

ಇದಕ್ಕೂ ಮೊದಲು 2020 ರ ಡಿಸೆಂಬರ್‌ನಲ್ಲಿ 36 ಬ್ರಿಟಿಷ್ ಸಂಸದರು ಯುಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಬ್ ಅವರಿಗೆ ಪತ್ರ ಬರೆದು ಭಾರತೀಯ ಸರ್ಕಾರದೊಂದಿಗೆ ರೈತರ ಪ್ರತಿಭಟನೆಯ ವಿಷಯವನ್ನು ಚರ್ಚಿಸಬೇಕೆಂದು ಒತ್ತಾಯಿಸಿದ್ದರು.


ಇದನ್ನೂ ಓದಿ: ರೈತ ಹೋರಾಟಕ್ಕೆ 100 ದಿನ: ಹೆದ್ದಾರಿ ತಡೆ, ಬಿಜೆಪಿ ಬಹಿಷ್ಕರಿಸಲು ರೈತರ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ವಿದೇಶೀಯರಿಗೆ ಅರ್ಥ ಆಗುತ್ತಿರುವ ನಮ್ಮ ರೈತರ ಕಶ್ಟ, ಸ್ವದೇಶೀಯರಿಗೆ ಅರ್ಥ ಆಗುತ್ತಿಲ್ಲ, ಇದು ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...