ಇಂಟ್ರಾವೆನಸ್ ಡ್ರಿಪ್‌ಗಾಗಿ ರಕ್ತನಾಳಗಳನ್ನು ಪತ್ತೆ ಮಾಡಲು ವೈದ್ಯರಿಗೆ ಸಾಧ್ಯವಾಗದ ಕಾರಣ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರಿಗೆ ಕಳೆದ ಆರು ದಿನಗಳಿಂದ ವೈದ್ಯಕೀಯ ನೆರವು ನೀಡಲಾಗಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಭಾನುವಾರ ತಿಳಿಸಿದೆ. ಕಳೆದ 6 ದಿನಗಳಿಂದ
ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ನವೆಂಬರ್ 26 ರಿಂದ ದಲ್ಲೆವಾಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರ ಹಲವು ಬೇಡಿಕೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ವ್ಯಾಪಕ ಅಭಿಯಾನದ ಭಾಗವಾಗಿ ಈ ಮುಷ್ಕರ ನಡೆಯುತ್ತಿದೆ. ಕನಿಷ್ಠ ಬೆಂಬಲ ಬೆಲೆ ಎಂದರೆ ಸರ್ಕಾರವು ರೈತರಿಂದ ಬೆಳೆಗಳನ್ನು ಖರೀದಿಸುವ ದರವಾಗಿದೆ. ಕಳೆದ 6 ದಿನಗಳಿಂದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಫೆಬ್ರವರಿ 14 ರಂದು ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸುವುದಾಗಿ ಜನವರಿ 18 ರಂದು ಕೇಂದ್ರ ಸರ್ಕಾರ ಹೇಳಿತ್ತು. ಹಾಗಾಗಿ 70 ವರ್ಷದ ದಲ್ಲೆವಾಲ್ ಅವರು ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡಿದ್ದರು. ಆದಾಗ್ಯೂ, ಕನಿಷ್ಠ ಬೆಂಬಲ ಬೆಲೆಯ ಕುರಿತು ಕಾನೂನುಬದ್ಧ ಖಾತರಿ ನೀಡುವವರೆಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಪಂಜಾಬ್ ಸರ್ಕಾರವು ದಲ್ಲೆವಾಲ್ ಅವರ ಆರೋಗ್ಯದ ಹೊಣೆಯನ್ನು ಹೊರಬೇಕೆಂದು ಒತ್ತಾಯಿಸಿದ ನಂತರ ಇದು ನಡೆದಿತ್ತು.
ಕನಿಷ್ಠ ಬೆಂಬಲ ಬೆಲೆಗಳಿಗೆ ಕಾನೂನು ಖಾತರಿ ನೀಡುವುದರ ಜೊತೆಗೆ, ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, 2013 ರ ಭೂಸ್ವಾಧೀನ ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಫೆಬ್ರವರಿ 2024 ರಿಂದ ಕೇಂದ್ರವು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿರುವ ರೈತ ಸಂಘಟನೆಗಳು, ಕೇಂದ್ರ ಸರ್ಕಾರವು ತಮ್ಮ ಬೇಡಿಕೆಗಳನ್ನು ಪರಿಹರಿಸಲು ಯಾವುದೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದೆ. ಅಂದಿನಿಂದ, ಅವರು ದೆಹಲಿ ಬಳಿಯ ಶಂಭು ಮತ್ತು ಖಾನೌರಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ನೇತೃತ್ವದ ಅಡಿಯಲ್ಲಿ ಬೀಡುಬಿಟ್ಟಿದ್ದಾರೆ.
ಪ್ರತಿಭಟನೆಗೆ ಒಂದು ವರ್ಷ ತುಂಬಿದ ನೆನಪಿಗಾಗಿ, ರೈತ ಗುಂಪುಗಳು ಫೆಬ್ರವರಿ 11 ರಂದು ರಾಜಸ್ಥಾನದ ರತನ್‌ಪುರ, ಫೆಬ್ರವರಿ 12 ರಂದು ಖಾನೌರಿ ರಾಜ್ಯ ಗಡಿಯಲ್ಲಿ ಮತ್ತು ಫೆಬ್ರವರಿ 13 ರಂದು ಶಂಭು ಗಡಿಯಲ್ಲಿ ಏಕತಾ ಸಭೆಗಳನ್ನು ಆಯೋಜಿಸುವುದಾಗಿ ಪ್ರಸ್ತಾಪಿಸಿವೆ.
ಇದನ್ನೂಓದಿ: ಬಿಜೆಪಿಗೆ ಮಣಿಪುರ ಉರಿಯುತ್ತಿರಬೇಕು ಎಂದಿದೆ – ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಬಿಜೆಪಿಗೆ ಮಣಿಪುರ ಉರಿಯುತ್ತಿರಬೇಕು ಎಂದಿದೆ – ಕಾಂಗ್ರೆಸ್ ಅಧ್ಯಕ್ಷ ಖರ್ಗೆ


