ಚಂಡಿಗಡ: ಹಲವಾರು ತಿಂಗಳುಗಳಿಂದ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಗುರುವಾರ ಪಟಿಯಾಲಾದ ಪಾರ್ಕ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ರೈತ ನಾಯಕ ನಾಲ್ಕು ತಿಂಗಳಿಗೂ ಹೆಚ್ಚು ದಿನಗಳ ನಂತರ ತಮ್ಮ ಹುಟ್ಟೂರು ಫರೀದ್‌ಕೋಟ್‌ನ ದಲ್ಲೆವಾಲ್ ಗ್ರಾಮಕ್ಕೆ ತೆರಳಲಿದ್ದಾರೆ, ಅಲ್ಲಿ ಅವರು ಜಿಲ್ಲಾ ಮಟ್ಟದ ಕಿಸಾನ್ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ.
ಬಿಕೆಯು ಸಿಧುಪುರದ ಪ್ರಧಾನ ಕಾರ್ಯದರ್ಶಿ ಕಾಕಾ ಸಿಂಗ್ ಕೋಟ್ಡಾ ಅವರು, ಗುರುವಾರ ಬೆಳಿಗ್ಗೆ ದಲ್ಲೆವಾಲ್ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ದೃಢಪಡಿಸಿದ್ದಾರೆ. ದಲ್ಲೆವಾಲ್ ಅವರು ಕೇವಲ ನೀರು ಸೇವಿಸಿ ಕನಿಷ್ಠ ವೈದ್ಯಕೀಯ ನೆರವು ಪಡೆಯುತ್ತಾ ತಮ್ಮ ಉಪವಾಸ ಸತ್ಯಾಗ್ರಹದಲ್ಲಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಬಿಡುಗಡೆಯ ನಂತರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ದಲ್ಲೆವಾಲ್, ರೈತರ ಬೇಡಿಕೆಗಳು, ವಿಶೇಷವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗಾಗಿ ಕಾನೂನುಬದ್ಧ ಖಾತರಿ ಈಡೇರುವವರೆಗೆ ತಮ್ಮ ಉಪವಾಸವನ್ನು ಕೊನೆಗೊಳಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ರೈತ ಸಮುದಾಯವನ್ನು ಮತ್ತೆ ಒಗ್ಗೂಡಿಸಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರೈತ ಸಭೆಗಳನ್ನು ನಡೆಸಲಾಗುವುದು ಎಂದು ಅವರು ಘೋಷಿಸಿದರು, ಆದರೂ ಮತ್ತೊಂದು ದೊಡ್ಡ ಪ್ರಮಾಣದ ಪ್ರತಿಭಟನೆ (ಮೋರ್ಚಾ) ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ. ದಲ್ಲೆವಾಲ್ ಅವರನ್ನು ಆರಂಭದಲ್ಲಿ ಪಂಜಾಬ್ ಪೊಲೀಸರು ಬಂಧಿಸಿ, ಮಾರ್ಚ್ 24ರಂದು ಪಟಿಯಾಲಾದ ಪಾರ್ಕ್ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಜಲಂಧರ್‌ನ ಎರಡು ಆಸ್ಪತ್ರೆಗಳ ನಡುವೆ ಸ್ಥಳಾಂತರಿಸಿದ್ದರು.
ದಲ್ಲೆವಾಲ್ ಅವರ ಆರೋಗ್ಯ ಮತ್ತು ಉಪವಾಸದ ಸ್ಥಿತಿಯ ಬಗ್ಗೆ ಸಂಘರ್ಷದ ವರದಿಗಳು ಹೊರಬಿದ್ದಿರುವುದರಿಂದ ರಾಜ್ಯ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ದಲ್ಲೆವಾಲ್ ಅವರು ಮಾರ್ಚ್ 29ರಂದು ತಮ್ಮ 123 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು, ಆದರೆ ಸಂಯುಕ್ತ ಕಿಸಾನ್ ಮೋರ್ಚಾ (SKM ರಾಜಕೀಯೇತರ) ಈ ಹೇಳಿಕೆಯನ್ನು ಬಲವಾಗಿ ನಿರಾಕರಿಸಿತು.
ಸಹ ರೈತ ನಾಯಕರ ಬಂಧನ ಮತ್ತು ಶಂಭು ಮತ್ತು ಖಾನೌರಿ ಮೋರ್ಚಾಗಳಲ್ಲಿ ಪೊಲೀಸ್ ದಬ್ಬಾಳಿಕೆಯನ್ನು ವಿರೋಧಿಸಿ ಮಾರ್ಚ್ 19ರಿಂದ ದಲ್ಲೆವಾಲ್ ನೀರು ಕುಡಿಯುವುದನ್ನು ನಿಲ್ಲಿಸುತ್ತಾ ಇದ್ದರು ಎಂದು SKM ನಾಯಕರು ಹೇಳಿದ್ದಾರೆ.
ರೈತ ನಾಯಕ ಸುಖ್‌ಜಿತ್ ಸಿಂಗ್ ಹಾರ್ಡೋ ಝಾಂಡೆ ಸರ್ಕಾರವು ಸಾರ್ವಜನಿಕರನ್ನು ಮತ್ತು ನ್ಯಾಯಾಂಗವನ್ನು ದಾರಿ ತಪ್ಪಿಸಲು ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
“ನಾವು ನ್ಯಾಯಾಲಯದಲ್ಲಿ ಸತ್ಯಗಳನ್ನು ಮಂಡಿಸುತ್ತೇವೆ. ಮಾರ್ಚ್ 19ರಂದು ಶಂಭು ಮತ್ತು ಖಾನೌರಿ ಗಡಿಗಳಿಂದ ರೈತರನ್ನು ಹೊರಹಾಕಿ ಬಂಧಿಸಿದ ನಂತರ, ದಲ್ಲೆವಾಲ್ ನೀರು ಮತ್ತು ವೈದ್ಯಕೀಯ ನೆರವು ಪಡೆಯುವುದನ್ನು ನಿಲ್ಲಿಸಿದರು. ಬಂಧಿತ ಎಲ್ಲಾ ರೈತರನ್ನು ಬಿಡುಗಡೆ ಮಾಡಿದ ನಂತರವೇ ದಲ್ಲೆವಾಲ್ ಮತ್ತೆ ನೀರು ಕುಡಿಯಲು ಪ್ರಾರಂಭಿಸಿದರು ಮತ್ತು ಮಾರ್ಚ್ 28ರಂದು ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡರು.” ಎಂದು SKM ನಾಯಕರು ತಿಳಿಸಿದ್ದಾರೆ.
ನವೆಂಬರ್ 26ರಂದು ದಲ್ಲೆವಾಲ್ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು, ಆರಂಭದಲ್ಲಿ ನೀರನ್ನು ಮಾತ್ರ ಸೇವಿಸಿದರು ಎಂದು ಹಾರ್ದೋ ಝಾಂಡೆ ಸ್ಪಷ್ಟಪಡಿಸಿದರು. ಜನವರಿ 18ರಂದು, ಹೆಚ್ಚಿನ ಮನವೊಲಿಕೆ ಮತ್ತು ಕೇಂದ್ರ ಸರ್ಕಾರದಿಂದ ಮಾತುಕತೆಗಾಗಿ ಪ್ರಸ್ತಾವನೆಯ ನಂತರ, ದಲ್ಲೆವಾಲ್ ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡರು.
ಮಾಜಿ ಡಿಐಜಿ ನರಿಂದರ್ ಭಾರ್ಗವ್ ಮತ್ತು ಎಡಿಜಿಪಿ ಜಸ್ಕರನ್ ಸಿಂಗ್ ಅವರಿಂದ ನೀರು ಪಡೆದ ನಂತರ ದಲ್ಲೆವಾಲ್ ನೀರು ಕುಡಿಯುವುದನ್ನು ಪುನರಾರಂಭಿಸಿದರು, ಇಬ್ಬರೂ ಸರ್ಕಾರಿ ಸಂವಾದಕರಾಗಿ ನೇಮಕಗೊಂಡರು.
‘ಎಂಎಸ್‌ಪಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ’
ದಲ್ಲೆವಾಲ್ ಅವರು ಮಾರ್ಚ್ 20ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿರುವ ಫರೀದ್‌ಕೋಟ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾರೆ.
“ಖಾನೌರಿ ಮತ್ತು ಶಂಭು ಗಡಿಗಳಿಂದ ಮೋರ್ಚಾಗಳನ್ನು ಎತ್ತುವ ಮೂಲಕ, ಪಂಜಾಬ್ ಸರ್ಕಾರವು ರೈತರ ಪ್ರತಿಭಟನೆ ಮುಗಿದಿದೆ ಎಂದು ನಂಬಲು ಪ್ರಾರಂಭಿಸಬಾರದು. ನಾವು ಎಲ್ಲಾ ಜಿಲ್ಲೆಗಳಲ್ಲಿ ಕಿಸಾನ್ ಮಹಾಪಂಚಾಯತ್‌ಗಳನ್ನು ನಡೆಸುತ್ತೇವೆ ಮತ್ತು ಮೊದಲನೆಯದು ಇಂದು ನನ್ನ ಗ್ರಾಮವಾದ ದಲ್ಲೆವಾಲ್‌ನಲ್ಲಿ ನಡೆಯಲಿದೆ. ಬೆಳೆಗಳ ದರಗಳ ಬಗ್ಗೆ ರೈತರು ಮಾತ್ರ ನಿರ್ಧರಿಸುತ್ತಾರೆ…ಎಂಎಸ್‌ಪಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ದಲ್ಲೆವಾಲ್ ಗುರುವಾರ ಹೇಳಿದರು.
ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ-ಸಿಧುಪುರ) ಈಗಾಗಲೇ ಏಪ್ರಿಲ್ 3 ರಿಂದ ಏಪ್ರಿಲ್ 11 ರವರೆಗೆ ಪಂಜಾಬ್‌ನ ವಿವಿಧ ಭಾಗಗಳಲ್ಲಿ ಕಿಸಾನ್ ಮಹಾಪಂಚಾಯತ್ ವೇಳಾಪಟ್ಟಿಯನ್ನು ಘೋಷಿಸಿದೆ. ದಲ್ಲೆವಾಲ್ ಸ್ವತಃ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
“ಎಲ್ಲಾ ಕಿಸಾನ್ ಮಹಾಪಂಚಾಯತ್‌ಗಳನ್ನು ಬಿಕೆಯು ಸಿಧುಪುರ ಆಯೋಜಿಸುತ್ತದೆಯಾದರೂ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ, ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನ ಎಲ್ಲಾ ಘಟಕಗಳು ಇದರಲ್ಲಿ ಭಾಗವಹಿಸಲಿವೆ” ಎಂದು ಎಸ್‌ಕೆಎಂ (ರಾಜಕೀಯೇತರ) ಘಟಕವಾದ ಪಂಜಾಬ್ ಕಿಸಾನ್ ಮಜ್ದೂರ್ ಯೂನಿಯನ್‌ನ ಅಧ್ಯಕ್ಷ ಸುಖಜಿತ್ ಸಿಂಗ್ ಹರ್ಡೋಜಂಡೆ ಹೇಳಿದರು. “ಮುಂದಿನ ಕ್ರಮದ ಕುರಿತು ಚರ್ಚಿಸಲು SKM (ರಾಜಕೀಯೇತರ) ಮತ್ತು KMM ನಾಯಕತ್ವ ಸಭೆ ಸೇರಲಿದೆ” ಎಂದು ಅವರು ಹೇಳಿದರು.
ಏಪ್ರಿಲ್ 3ರಂದು ಫರೀದ್‌ಕೋಟ್ ಜಿಲ್ಲೆಯ ದಲ್ಲೆವಾಲ್ ಗ್ರಾಮದಲ್ಲಿ ಏಪ್ರಿಲ್ 4 ಮತ್ತು 5ರಂದು ಫಿರೋಜ್‌ಪುರ ಮತ್ತು ಪಟಿಯಾಲದಲ್ಲಿ, ನಂತರ ಏಪ್ರಿಲ್ 6ರಂದು ಫತೇಘರ್ ಸಾಹಿಬ್‌ನಲ್ಲಿ ಮತ್ತು ಏಪ್ರಿಲ್ 7, 8, 9, 10 ಮತ್ತು 11ರಂದು ಬರ್ನಾಲಾ, ಮುಕ್ತಸರ್, ಫಜಿಲ್ಕಾ, ಅಮೃತಸರ ಮತ್ತು ಮಾನ್ಸಾದಲ್ಲಿ ಕಿಸಾನ್ ಮಹಾಪಂಚಾಯತ್‌ಗಳು ನಡೆಯಲಿವೆ.
ನಕ್ಸಲರಿಂದ ಷರತ್ತುಬದ್ಧ ಮಾತುಕತೆಗೆ ಕರೆ; ಬೇಷರತ್ ಶಾಂತಿ ಮಾತುಕತೆಗೆ ಸಿದ್ಧ ಎಂದ ಸರಕಾರ


