ಕೇಂದ್ರದ ಮೂರು ವಿವಾದಾತ್ಮಕ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತದ ರೈತರು ದೆಹಲಿಯಲ್ಲಿ ನಡೆಸುತ್ತಿರುವ ವಿರೋಚಿತ ಹೋರಾಟ 6ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿಯ ಸಿಂಘು ಗಡಿಯಲ್ಲಿ ಲಕ್ಷಾಂತರ ರೈತರು ನೆರಿದಿದ್ದು, ಹೋರಾಟ ಮುಂದುವರೆಸಿದ್ದಾರೆ. ದೆಹಲಿಗೆ ಸಂಪರ್ಕ ಕಲ್ಪಿಸುವ ಐದು ಪ್ರಮುಖ ಸ್ಥಳಗಳನ್ನು ಬಂದ್ ಮಾಡುವ ಮೂಲಕ ಹೋರಾಟ ತೀವ್ರಗೊಳಿಸಲು ರೈತರು ಎಚ್ಚರಿಕೆ ನೀಡಿದ್ದಾರೆ. ಇಂದಿನ ದೆಹಲಿ ರೈತ ಹೋರಾಟದ ಕೆಲ ಚಿತ್ರಗಳು ಇಲ್ಲಿವೆ.


ಸರ್ಕಾರ ನಿಗಧಿಪಡಿಸಿರುವ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ರೈತರು ನಿರಾಕರಿಸಿದ್ದಾರೆ. ಅದು ಬಹಿರಂಗ ಬಂಧೀಖಾನೆಯಾಗಿದ್ದು ಅಲ್ಲಿ ರೈತರನ್ನು ಕೂಡಿ ಹಾಕಿ ಹಿಂಸಿಸಲು ಸರ್ಕಾರ ಯೋಜಿಸಿದೆ ಎಂದು ರೈತರು ಆರೋಪಿಸಿದ್ದಾರೆ. ಹಾಗಾಗಿ ಲಕ್ಷಾಂತರು ದೆಹಲಿಯ ಸಿಂಘು ಗಡಿಯಲ್ಲಿ ನಿಂತು ಪ್ರತಿಭಟನೆ ಮುಂದುವರೆಸಿದ್ದಾರೆ.

ದೆಹಲಿಯಲ್ಲಿ ಹೋರಾಟನಿರತ ಕರ್ನಾಟಕ ತಂಡದ ಸದಸ್ಯರು.

ಪ್ರತಿಭಟನಾ ನಿರತ ರೈತರಿಗೆ ಮಧ್ಯಾಹ್ನದ ಊಟ ಒದಗಿಸುತ್ತಿರುವ ಸರ್ವಧರ್ಮಿಯರು.
In Solidarity with Farmers Protest against anti-farmer laws passed by Modi-Shah govt at Tikiri border, Delhi.
Modi govt wants to sell Agriculture to Corporates Adani-Ambani likeit has been trying to sell education through NEP 2020.
Student-Kisan Unity Zindabad#FarmersProtest pic.twitter.com/UjQwrH20yu
— N Sai Balaji | ఎన్ సాయి బాలాజీ (@nsaibalaji) November 30, 2020
ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವಿಡಿಯೋ.

ಸಿಂಘು ಗಡಿಯಲ್ಲಿ ವೈದ್ಯಕೀಯ ತಂಡವೊಂದು ಹೋರಾಟನಿರತರಿಗೆ ಉಚಿತ ಔಷಧಿ ನೀಡುವಲ್ಲಿ ನಿರತರಾಗಿರುವುದು.

ರೈತರ ನೈತಿಕ ಶಕ್ತಿ ಎಂತಹ ಸರ್ಕಾರವನ್ನು ಅಲ್ಲಾಡಿಸಬಲ್ಲದು ಎಂಬುದನ್ನು ಸೂಚಿಸುವ ಚಿತ್ರ

ಹೋರಾಟನಿರತ ರೈತರ ಮತ್ತೊಂದು ಚಿತ್ರ.
ಇದನ್ನೂ ಓದಿ: Explainer: ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯಲ್ಲಿ ಪ್ರತಿಭಟಿಸುತ್ತಿರುವುದೇಕೆ?


