Homeಕರ್ನಾಟಕಸಚಿವ ಕಾರಜೋಳ ಕಚೇರಿ ಮುಂದೆ ಪ್ರತಿಭಟಿಸಲು ಹೊರಟ ರೈತ-ಕಾರ್ಮಿಕರನ್ನು ತಡೆದ ಪೊಲೀಸರು

ಸಚಿವ ಕಾರಜೋಳ ಕಚೇರಿ ಮುಂದೆ ಪ್ರತಿಭಟಿಸಲು ಹೊರಟ ರೈತ-ಕಾರ್ಮಿಕರನ್ನು ತಡೆದ ಪೊಲೀಸರು

ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ರೈತರು ಮತ್ತು ಕಾರ್ಮಿಕರು ಕಳೆದ 73 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

- Advertisement -
- Advertisement -

ಸಚಿವ ಗೋವಿಂದ ಕಾರಜೋಳ ಅವರ ಕಛೇರಿ ಮುಂದುಗಡೆ ಧರಣಿ ಸತ್ಯಾಗ್ರಹ ಮಾಡಲು ತೆರಳುತ್ತಿದ್ದ, ಕಾರ್ಮಿಕರು ಮತ್ತು ರೈತರನ್ನು ಬಾಗಲಕೋಟೆ ಪೊಲೀಸರು ಬುಧವಾರ ತಡೆದಿದ್ದಾರೆ. ಜಿಲ್ಲೆಯ ಮುಧೋಳದ ತಿಮ್ಮಾಪುರದಲ್ಲಿ ಇರುವ ‘ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ’ಯ ಪುನರಾರಂಭಕ್ಕಾಗಿ ಆಗ್ರಹಿಸಿ ರೈತರು ಮತ್ತು ಕಾರ್ಮಿಕರು ಕಳೆದ 73 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

‘ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ’ಯು ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದು, ಆರ್ಥಿಕ ಸಂಕಷ್ಟದಿಂದ ಮುಚ್ಚಲ್ಪಟ್ಟಿದೆ. ರೈತರು ಹಲವಾರು ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಾ ಬರುತ್ತಿದ್ದಾರೆ. ಬುಧವಾರದಂದು ಸಚಿವರಾದ ಗೋವಿಂದ ಕಾರಜೋಳ ಅವರ ಕಛೇರಿ ಮುಂದುಗಡೆ ಧರಣಿ ಸತ್ಯಾಗ್ರಹ ಮಾಡಲು ಹೋಗುತ್ತಿರುವ ಪೋಲಿಸರು ಅವರನ್ನು ತಡೆದಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದ್ದಾರೆ.

ಇದನ್ನೂ ಓದಿ: ಕೊಲ್ಕತ್ತಾ: ದುರ್ಗಾ ಪೂಜೆ ಮಂಟಪಗಳಲ್ಲಿ ಹೊರಹೊಮ್ಮಿದ ರೈತ ಹೋರಾಟದ ಚಿತ್ರಗಳು

“ಸಚಿವ ಗೋವಿಂದ ಕಾರಜೋಳ ಅವರ ಜೊತೆ ಮಾತನಾಡಿದ್ದು, 3 ದಿನಗಳಲ್ಲಿ ಒಂದು ಸಭೆಯನ್ನು ಕರೆಯುತ್ತಾರೆ. ಆ ಸಭೆಯಲ್ಲಿ ಕಾರ್ಖಾನೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ತಿಳಿಸಲಿದ್ದಾರೆ” ಎಂದು ತಹಶೀಲ್ದಾರ್‌ ಅವರು ಪ್ರತಿಭಟನಾಗಾರರಿಗೆ ಭರವಸೆ ನೀಡಿದ್ದಾರೆ.

ತಹಶೀಲ್ದಾರ್ ಅವರ ಭರವಸೆಯ ನಂತರ ಸಚಿವರ ಕಛೇರಿ ಮುಂದುಗಡೆ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟ ಹೋರಾಟಗಾರರು, ತಹಶೀಲ್ದಾರ್ ಕಛೇರಿ ಮುಂದುಗಡೆ ಇದುವರೆಗೂ ನಡೆಯುತ್ತಿದ್ದ ಹೋರಾಟದ ವೇದಿಕೆಯಲ್ಲೇ ಧರಣಿ ಸತ್ಯಾಗ್ರಹ ಮುಂದುವರೆಸಲು ನಿರ್ಧರಿಸಿದ್ದಾರೆ.

“ಕಳೆದ 73 ದಿನಗಳಿಂದ ರನ್ನ ಸಹಕಾರ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕಾಗಿ ಆಗ್ರಹಿಸಿ ಶಾಂತಿಯಿಂದ, ವಿಭಿನ್ನ ರೀತಿಯಾಗಿ ಸರ್ಕಾರವನ್ನು ಎಚ್ಚರಿಸುತ್ತಾ ಇದ್ದೇವೆ. ಆದರೆ ಸಚಿವರಾದ ಗೋವಿಂದ ಕಾರಜೋಳ ಅವರ ನಿಷ್ಕಾಳಜಿಯಿಂದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭವಾಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ಶೀಘ್ರ ರೂಪದಲ್ಲಿ ನಡೆಯುತ್ತಿಲ್ಲ. ಕಾರ್ಖಾನೆಯ 333 ಕೋಟಿ ರೂಪಾಯಿ ಸಾಲಕ್ಕೆ ಹಾಗೂ ಕಾರ್ಖಾನೆಯ ದಿವಾಳಿಗೆ ಕಾರಣವಾದ ಆಡಳಿತ ಮಂಡಳಿಯನ್ನು ವಜಾ ಮಾಡದೆ, ಆಡಳಿತ ಮಂಡಳಿಯ ರಕ್ಷಣೆಗೆ ಮುಂದಾಗಿದ್ದಾರೆ” ಎಂದು ಹೋರಾಟಗಾರರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೃಷಿ ಕಾನೂನಿನ ಡೆತ್‌ ಸರ್ಟಿಫಿಕೇಟ್‌ ಕೊಡಿ ಎಂದು ಹೋರಾಟ ಮಾಡುತ್ತಿದ್ದೇವೆ: ಬಡಗಲಪುರ ನಾಗೇಂದ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...