ಬಿಜೆಪಿ ಶಾಸಕನೊಬ್ಬನನ್ನು ಪಂಜಾಬ್‌ನ ಮುಕ್ತಸರ್ ಜಿಲ್ಲೆಯ ಮಾಲೌಟ್‌ನಲ್ಲಿ ಶನಿವಾರ ರೈತರ ಗುಂಪೊಂದು ಥಳಿಸಿ ಅವರ ಅಂಗಿಯನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಅಬೋಹರ್ ಶಾಸಕ ಅರುಣ್ ನಾರಂಗ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಮಾಲೌಟ್‌ಗೆ ತೆರಳಿದ್ದರು. ಇದನ್ನು ರೈತರು ತೀವ್ರವಾಗಿ ವಿರೋಧಿಸಿದರು.
Punjab: Bharatiya Janata Party (BJP) MLA from Abohar Arun Narang was thrashed allegedly by protesting farmers in Malout yesterday.
An FIR has been registered at Malout Police Station. pic.twitter.com/c7DOYzEMYv
— ANI (@ANI) March 28, 2021
ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿಗಳು ಶಾಸಕರನ್ನು ಸುರಕ್ಷಿತವಾಗಿ ಕರೆದೊಯ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಮಾಲೌಟ್) ಜಸ್ಪಾಲ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: #LieLikeModi ಟ್ವಿಟರ್ ಟ್ರೆಂಡಿಂಗ್: ನಕ್ಕು ಹೊಟ್ಟೆ ಹುಣ್ಣಾದರೆ ನಾವು ಜವಾಬ್ದಾರರಲ್ಲ
“ಕೆಲವು ಜನರು ನನಗೆ ಥಳಿಸಿದ್ದಾರೆ. ಕಪ್ಪು ಮಸಿಯನ್ನು ನನ್ನ ಮೇಲೆ ಎಸೆದಿದ್ದಾರೆ” ಎಂದು ನಾರಂಗ್ ಆರೋಪಿಸಿದ್ದಾರೆ.
@BJP4Punjab MLA #ArunNarang beaten by angery #Farmers in Malout. @BJP4India @capt_amarinder @DGPPunjabPolice #FarmersProtest pic.twitter.com/WM3PX78Lbq
— #ISupportFarmers (@ujjalsatnaam) March 27, 2021
ಇದಕ್ಕೆ ಪ್ರತಿಕ್ರಿಯಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಪಂಜಾಬ್ ನಲ್ಲಿ ಬಿಜೆಪಿ ಶಾಸಕನ ಮೇಲೆ ನಡೆದಿರುವ ದೈಹಿಕ ಹಲ್ಲೆಯ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
”ರೈತರ ಆಂದೋಲನವು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹಿಂಸಾತ್ಮಕವಾಗಿ ತಿರುಗಿದೆ ಮತ್ತು ಶಾಸಕರನ್ನು ದೈಹಿಕವಾಗಿ ಹಲ್ಲೆ ಮಾಡಲಾಗಿದೆ. ಚುನಾಯಿತ ಪ್ರತಿನಿಧಿಯೊಂದಿಗೆ ಈ ರೀತಿ ನಡೆದುಕೊಂಡಿದ್ದು ವಿಷಾದದ ಸಂಗತಿ. ಅಂತಹ ನಡವಳಿಕೆಯನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಈ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದಿದೆ.
ಆದರೆ, ಈ ಘಟನೆಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳೇ ಕಾರಣ ಎಂದು ನಾವು ಪರಿಗಣಿಸುತ್ತೇವೆ. ಬಿಜೆಪಿಯ ನಾಯಕತ್ವದಲ್ಲಿ ಅಹಂಕಾರ ಆಳವಾಗಿ ಬೇರೂರಿದೆ. ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು ಅವರು ಚುನಾವಣೆಗಳಲ್ಲಿ ನಿರತರಾಗಿದ್ದಾರೆ, ಆದರೆ ಕೇಂದ್ರ ಸರ್ಕಾರದ ಈ ನಡವಳಿಕೆಯ ಕಹಿ ಫಲಿತಾಂಶಗಳನ್ನು ಸ್ಥಳೀಯ ನಾಯಕರು ಎದುರಿಸುತ್ತಿದ್ದಾರೆ ಎಂದು ಕಿಸಾನ್ ಮೋರ್ಚಾ ಹೇಳಿದೆ.
ಇದನ್ನೂ ಓದಿ: ‘ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ’ – ಸಿಡಿ ಹಗರಣದ ಸಂತ್ರಸ್ತೆ ಯುವತಿ


