ಕೇಂದ್ರ ಸರ್ಕಾರದ ವಿವಾದಾತ್ಮಕ ಕಾಯ್ದೆಗಳನ್ನು ರದ್ದುಗೊಳಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ಕಾನೂನು ತರಬೇಕೆಂದು ಕಳೆದ 43 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿರುವ ರೈತರು ಗುರುವಾರ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ಗಮನ ಸೆಳೆದಿದ್ದಾರೆ. ಇದು ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್‍ಯಾಲಿಯ ಟ್ರೈಲರ್ ಎಂದು ಕರೆದಿರುವ ರೈತ ಹೋರಾಟದ ಕಿಚ್ಚನ್ನು ಪ್ರದರ್ಶಿಸಿದ್ದಾರೆ.
ದೆಹಲಿಯ ರೈತ ಹೋರಾಟವನ್ನು ವರದಿ ಮಾಡಲು ತೆರಳಿರುವ ಮಾಸ್ ಮೀಡಿಯಾ ಫೌಂಡೇಶನ್‌ನ ಪ್ರತಿನಿಧಿ ಚಂದ್ರು ತರಹುಣಿಸೆಯವರು ತೆಗೆದ ಹೋರಾಟದ ದಿಟ್ಟ ಚಿತ್ರಗಳು ಇಲ್ಲಿವೆ.
ಅನ್ನ ನೀಡುವ ಕೈ ಧಿಕ್ಕಾರ ಕೂಗಿದಾಗ…

ರೈತರ ಹೆಗಲಿಗೆ ಹೆಗಲು ಕೊಡುತ್ತೇವೆ..

ಬರುತಿಹೆವು ನಾವು ಬರುತಿಹೆವು…

ಗೆಲುವು ನಮ್ಮದೋ ಗೆಲುವು ನಮ್ಮೊದೋ.. ಇಂದಿಗೂ ಎಂದೆಂದಿಗೂ ಗೆಲುವು ನಮ್ಮದೋ

ಚಳಿ, ಗಾಳಿ, ಮಳೆ ಏನೇ ಇರಲಿ… ನಾವು ರೈತರನ್ನು ಪ್ರೀತಿಸುತ್ತೇವೆ

ಒಂಟಿ ಒಬ್ಬಂಟಿ ನಾವಲ್ಲ.. ಎಂದಿಗೂ ನಾವು ಒಂಟಿ ನಡೆಯುವ ಪಯಣಿಗರೆ ಅಲ್ಲ

ಸಾವಿರಾರು ನಾಗರಗಳು ಹುತ್ತ ಬಿಟ್ಟು ಬಂದಂತೆ…

Glimpse Of Tractor March By Kisan Ekta Morcha#TractorMarchDelhi #TractorRally #TractorMarch #tractor #kisan pic.twitter.com/dTKUpJRgkq
— Kisan Ekta Morcha (@Kisanektamorcha) January 7, 2021
ಹೋರಾಟದ ಹಾದಿಯು ನಮ್ಮನ್ನು ಬಿಡುಗಡೆ ಮಾಡುವುದು.. ಎಲ್ಲರ ಬಿಡುಗಡೆ ಮಾಡುವುದು

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು

ಗೆದ್ದೆ ಗೆಲ್ಲುವೆವು ಒಂದು ದಿನ…

ಇದನ್ನೂ ಓದಿ: ಚಹಾ ನೀಡಿ ರೈತ ಹೋರಾಟಕ್ಕೆ ಹುಮ್ಮಸ್ಸು ತುಂಬುವ ಗುರ್‌ನಾಮ್ ಸಿಂಗ್!


