Homeಮುಖಪುಟಯುಪಿ ಸಿಎಂ ರ್‍ಯಾಲಿ ನಡೆಯುವ ಮೈದಾನಕ್ಕೆ ಬಿಡಾಡಿ ದನಗಳನ್ನು ಬಿಟ್ಟ ರೈತರು!

ಯುಪಿ ಸಿಎಂ ರ್‍ಯಾಲಿ ನಡೆಯುವ ಮೈದಾನಕ್ಕೆ ಬಿಡಾಡಿ ದನಗಳನ್ನು ಬಿಟ್ಟ ರೈತರು!

- Advertisement -
- Advertisement -

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ರೈತರು ನೂರಾರು ಬಿಡಾಡಿ ದನಗಳನ್ನು ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿರುವ ತೆರೆದ ಮೈದಾನಕ್ಕೆ ಬಿಟ್ಟಿದ್ದಾರೆ. ಈ ಮೈದಾನವು ರಾಜ್ಯದ ರಾಜಧಾನಿಯಾದ ಲಕ್ನೋದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ.

ವರದಿಗಳ ಪ್ರಕಾರ, ಮಂಗಳವಾರದಂದು ಆದಿತ್ಯನಾಥ್‌ ಅವರ ರ್‍ಯಾಲಿ ನಡೆಯಲಿರುವ ಕೆಲವೇ ಗಂಟೆಗಳ ಮೊದಲು ಬಿಡಾಡಿ ದನಗಳನ್ನು ಮೈದಾನದಲ್ಲಿ ಬಿಡಲಾಗಿದೆ. ರೈತರ ಈ ಅನಿರೀಕ್ಷಿತ ನಡೆಯಿಂದಾಗಿ ಜಿಲ್ಲೆಯ ಅಧಿಕಾರಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅವರು ಪೊಲೀಸರ ಸಹಾಯದಿಂದ ಬ್ಯಾರಿಕೇಡ್‌ಗಳನ್ನು ಬಳಸಿ ಬೀಡಾಡಿ ದನಗಳು ರ್‍ಯಾಲಿಯ ಸ್ಥಳಕ್ಕೆ ಪ್ರವೇಶಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತೆರೆದ ಮೈದಾನದಲ್ಲಿ ನೂರಾರು ಬಿಡಾಡಿ ದನಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿರುವ ಸ್ಥಳೀಯ ರೈತರೊಬ್ಬರು, “ಬಿಡಾಡಿ ದನಗಳಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮುಖ್ಯಮಂತ್ರಿಗೆ ತಿಳಿಯಲಿ” ಎಂದು ಹೇಳಿದ್ದಾರೆ.

ಒಂದು ವೇಳೆ ದನಗಳು ರ್‍ಯಾಲಿ ನಡೆಯುವ ಸ್ಥಳಕ್ಕೆ ತಲುಪಿದ್ದರೆ ಸಭೆಗೆ ಅಡ್ಡಿಯಾಗುತ್ತಿತ್ತು ಎಂದು ವರದಿಗಳು ತಿಳಿಸಿವೆ. ಮುಖ್ಯಮಂತ್ರಿ ಸ್ಥಳಕ್ಕೆ ಬರುವುದು ಸುಮಾರು ಒಂದು ಗಂಟೆ ತಡವಾಗಿದ್ದರಿಂದ ದನಗಳು ರ್‍ಯಾಲಿಯ ಸ್ಥಳಕ್ಕೆ ಬರದಂತೆ ತಡೆಯುವ ಪ್ರಯತ್ನದಲ್ಲಿ ಆಡಳಿತ ಯಶಸ್ವಿಯಾಗಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆ ವರದಿ ಮಾಡಿದೆ.

ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬೀಡಾಡಿ ದನಗಳ ಸಮಸ್ಯೆಯು ಪ್ರಮುಖ ವಿಷಯವಾಗಿದ್ದರಿಂದ ಆದಿತ್ಯನಾಥ್ ಅವರು ಇದೇ ಮೊದಲ ಬಾರಿಗೆ ಬಿಡಾಡಿ ದನಗಳ ಹಾವಳಿಯ ಬಗ್ಗೆ ಮಾತನಾಡಿದ್ದಾರೆ. ನಾವು ಗೋಹತ್ಯೆಗೆ ಅವಕಾಶ ನೀಡುವುದಿಲ್ಲ ಮತ್ತು ಬಿಡಾಡಿ ದನಗಳಿಂದ ಬೆಳೆ ಹಾನಿಯಾಗದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಬಾರಾಬಂಕಿಯಿಂದ ಸ್ವಲ್ಪ ದೂರದಲ್ಲಿರುವ ಬಹರೈಚ್‌ನ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ, ಬಿಡಾಡಿ ದನಗಳ ಸಮಸ್ಯೆಯ ಬಗ್ಗೆಯೂ ಮಾತನಾಡಿದ್ದಾರೆ. “ನಾವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ… ಸಮಸ್ಯೆಯನ್ನು ಪರಿಹರಿಸಲು ನಾವು ಮಾರ್ಗಗಳನ್ನು ಕಂಡುಕೊಂಡಿದ್ದೇವೆ… ಮಾರ್ಚ್ ಹತ್ತರ ನಂತರ ನಮ್ಮ ಸರ್ಕಾರವನ್ನು ರಚನೆಯಾಗುತ್ತಿದ್ದಂತೆ ಬೀಡಾಡಿ ದನಗಳಿಂದ ಉದ್ಭವಿಸುವ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ನಾವು ಹೊಸ ಯೋಜನೆಗಳನ್ನು ಜಾರಿಗೆ ತರುತ್ತೇವೆ” ಎಂದು ಪ್ರಧಾನಿ ಹೇಳಿದ್ದಾರೆ.

ಈ ಹಿಂದೆ ಕೂಡಾ ಬಿಡಾಡಿ ದನಗಳು ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ಮತ್ತು ಎಸ್‌ಪಿ ನಾಯಕರ ಚುನಾವಣಾ ರ್‍ಯಾಲಿಗೆ ಅಡ್ಡಿಪಡಿಸಿದ್ದು ವರದಿಯಾಗಿತ್ತು.

ಇದನ್ನೂ ಓದಿ: ದೇಶದಲ್ಲಿ ಹಿಂದೂ ಧರ್ಮ ಬರುತ್ತದೆ, ಭಗವಾಧ್ವಜ ರಾಷ್ಟ್ರಧ್ವಜ ಆಗುತ್ತದೆ; ಕೆಂಪುಕೋಟೆಯಲ್ಲಿ ಅದನ್ನು ಹಾರಿಸುತ್ತೇವೆ: ಕೆ.ಎಸ್‌. ಈಶ್ವರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read