ಜನವರಿ 24 ರಂದು ನಡೆಯಬೇಕಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಇಂದಿಗೆ ಮುಂದೂಲ್ಪಟ್ಟಿದ್ದ FDA ಪರೀಕ್ಷೆಯಲ್ಲಿ ಇಂದೂ ಸಹ ಅಕ್ರಮ ನಡೆದಿದ್ದು, ವಿಜಯಪುರದಲ್ಲಿ ನಕಲು, ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಇಂದು FDA ಪರೀಕ್ಷೆಯ ಸಾಮಾನ್ಯ ಜ್ಞಾನ ಪರೀಕ್ಷೆ ಬೆಳಿಗ್ಗೆ ನಡೆದಿದೆ. ವಿಜಯಪುರದ ಎಸ್‌ಎಸ್ ಕಾಲೇಜಿನಲ್ಲಿ ಈ ಸಂದರ್ಭದಲ್ಲಿ ನಕಲು ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಯೊಬ್ಬನಿಗೆ ಕಾಲೇಜಿನ ಜವಾನನು ಕೀ ಉತ್ತರಗಳನ್ನು ಪೂರೈಕೆ ಮಾಡಿದ್ದು, ವಿದ್ಯಾರ್ಥಿ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಆ ವಿದ್ಯಾರ್ಥಿ, ಆತನ ಇಬ್ಬರು ಸ್ನೇಹಿತರು ಸೇರಿದಂತೆ ಕಾಲೇಜಿನ ಜವಾನನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
FDA ಪರೀಕ್ಷೆಯಲ್ಲಿ ಇಂದೂ ಸಹ ಅಕ್ರಮ ನಡೆದಿದ್ದು, ವಿಜಯಪುರದಲ್ಲಿ ನಕಲು, ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.#FDA #fda2021 #FdaExam pic.twitter.com/xHqWrt6NRl
— Naanu Gauri (@naanugauri) February 28, 2021
ಆ ವಿದ್ಯಾರ್ಥಿಯ ಬಳಿ ನಕಲು ಚೀಟಿ ಇದ್ದು ಅದರಲ್ಲಿ ಇಂದಿನ ಸಾಮಾನ್ಯ ಜ್ಞಾನ ಪರೀಕ್ಷೆಯ 100 ಪ್ರಶ್ನೆಗಳಲ್ಲಿ 96 ಪ್ರಶ್ನೆಗಳಿಗೆ ಕೀ ಉತ್ತರಗಳಿದ್ದವು ಎನ್ನಲಾಗಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಇತರ ವಿದ್ಯಾರ್ಥಿಗಳು ಆಕ್ರೋಶಿತರಾಗಿ, ಪರೀಕ್ಷೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ.
ವಿದ್ಯಾರ್ಥಿ ನಕಲು ಮಾಡುವಾಗ ಸಿಕ್ಕಿಬಿದ್ದ ನಕಲು ಚೀಟಿಯಲ್ಲಿನ ಉತ್ತರಗಳು ಮತ್ತು ಪ್ರಶ್ನೆಪತ್ರಿಕೆಯ ಉತ್ತರಗಳಿಗೂ ಸಾಮ್ಯತೆ ಇದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗದೇ ಈ ಉತ್ತರಗಳನ್ನು ಬರೆದುಕೊಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಎದ್ದಿವೆ. ಈ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ಮೋದಿ ಉದ್ಯೋಗ ಕೊಡಿ, ಇಲ್ಲ ಕುರ್ಚಿ ಬಿಡಿ’ ವಿಶ್ವದಾದ್ಯಂತ ಟ್ವಿಟರ್ ಟ್ರೆಂಡ್: ದಾಖಲೆಯ 60 ಲಕ್ಷ ಟ್ವೀಟ್‌ಗಳು!


