ಫಿಫಾ ವಿಶ್ವಕಪ್ ಪಂದ್ಯಾಟದ ವೇಳೆ ಇರಾನ್ ತಂಡವು ರಾಷ್ಟ್ರಗೀತೆಯನ್ನು ಹಾಡದೆ ತಮ್ಮ ದೇಶದಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದೆ. ಸೋಮವಾರದಂದು ದೋಹಾದ ಖಲೀಫಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಇರಾನ್ ತಂಡವು ತಮ್ಮ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಒಗ್ಗಟ್ಟು ವ್ಯಕ್ತಪಡಿಸಿದೆ.
ಕಳೆದ ಸೆಪ್ಟೆಂಬರ್ 16 ರಂದು ಹಿಜಾಬ್ ಧರಿಸದ ಕಾರಣಕ್ಕಾಗಿ ದೇಶದ ನೈತಿಕತೆಯ ಪೋಲೀಸರು ಮಹ್ಸಾ ಅಮಿನಿ ಅವರನ್ನು ಬಂಧಿಸಿದ್ದರು. ಇದರ ನಂತರ ಅವರು ಅಲ್ಲಿಯೆ ಹತ್ಯಗೀಡಾಗಿದ್ದರು ಎಂದು ಆರೋಪಿಸಲಾಗಿದೆ. ಅಮಿನಿಯ ಸಾವಿನ ನಂತರ ಇರಾನ್‌ನಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಂಗ್ಲೇಂಡ್ ಮತ್ತು ಇರಾನ್ ಪಂದ್ಯ ನೋಡಲು ಬಂದ ಇರಾನ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ತಮ್ಮದೇ ಆದ ರಾಷ್ಟ್ರಗೀತೆಯನ್ನು ಹಾಡಿದ್ದು, ತಮ್ಮ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
This is what courage looks like
The Iranian football team refuses to sing the national anthem on biggest stage in the world
Eleven men, standing shoulder to shoulder, sending out a message without uttering a word#WorldCup #WorldCup2022 #Qatar2022 #Iran pic.twitter.com/n8gtQed4Fl
— Stefan Simanowitz (@StefSimanowitz) November 21, 2022
ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಅಫ್ಘಾನ್ ಪುನರ್ವಸತಿ ಮತ್ತು ನಿರಾಶ್ರಿತರ ಸಚಿವರ ಮಾಜಿ ನೀತಿ ವಿಶೇಷ ಸಲಹೆಗಾರ್ತಿ ಶಬ್ನಮ್ ನಸಿಮಿ, “ಈ ರೀತಿ ಮಾಡುವುದು ತಂಡಕ್ಕೆ ದೊಡ್ಡ ಅಪಾಯ ಉಂಟುಮಾಡುತ್ತದೆ. ಇರಾನ್ ಆಡಳಿತವು ತನ್ನ ವಿರುದ್ಧ ಮಾತನಾಡಿದ ಇರಾನ್ ಫುಟ್ಬಾಲ್ ಆಟಗಾರರಿಗೆ ಬಂಧನ ವಾರಂಟ್ ಹೊರಡಿಸಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: 1948 ರ ಒಲಂಪಿಕ್ಸ್‌ನಲ್ಲಿ ಭಾರತ ತಂಡ ಬರಿಗಾಲಿನಲ್ಲಿ ಫುಟ್‌ಬಾಲ್ ಆಡಿದ್ದು ಹಣದ ಕೊರತೆಯಿಂದಲ್ಲ
ಶಬ್ನಮ್ ನಸಿಮಿ ಬ್ರಿಟಿಷ್-ಆಫ್ಘಾನ್ ಸಾಮಾಜಿಕ ಹೋರಾಟಗಾರ್ತಿಯಾಗಿದ್ದು, ರಾಜಕೀಯ ವಿಮರ್ಶಕಿ ಕೂಡಾ ಆಗಿದ್ದಾರೆ. “ದೇಶದ ಮಹಿಳೆಯರ ನೇತೃತ್ವದ ಕ್ರಾಂತಿಯನ್ನು ಬೆಂಬಲಿಸುವ ಸಲುವಾಗಿ ಇರಾನ್‌ನ ರಾಷ್ಟ್ರೀಯ ತಂಡವು ಇಂಗ್ಲೇಂಡ್ ವಿರುದ್ಧದ ಆಟ ಪ್ರಾರಂಭಿಸಿದಾಗ ರಾಷ್ಟ್ರಗೀತೆಯನ್ನು ಹಾಡಲಿಲ್ಲ. ಇರಾನಿನ ಜನಸಮೂಹವೂ ತಮ್ಮದೇ ಆದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು. ಅದ್ಭುತ!” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಇರಾನ್ ತಂಡದ ನಾಯಕ ಎಹ್ಸಾನ್ ಹಾಜಿಸಾಫಿ, “ಅಮಿನಿಯ ಸಾವಿನ ನಂತರ ಭುಗಿಲೆದ್ದ ಕ್ರಾಂತಿಯನ್ನು ಬೆಂಬಲಿಸಲು ತಂಡವು ನಿರ್ಧರಿಸಿದೆ” ಎಂದು ಹೇಳಿದ್ದಾರೆ.
IMPORTANT 🇮🇷 Ahead of their game against England, Iran’s captain Ehsan Hajsafi becomes the first Iranian player to speak out in support of women’s rights protesters in his home country, expressing condolences to families who’ve lost loved ones.pic.twitter.com/iyOiZ9cikl
— Men in Blazers (@MenInBlazers) November 21, 2022
ಮಾನವ ಹಕ್ಕುಗಳ ಹೋರಾಟಗಾರ ಸಂಘಟನೆಯ ಪ್ರಕಾರ, ಇರಾನ್‌ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ 400 ಕ್ಕೂ ಹೆಚ್ಚು ಪ್ರತಿಭಟನಾಕಾರರು ಕೊಲ್ಲಲ್ಪಟ್ಟಿದ್ದಾರೆ ಮತ್ತು 16,000 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕೇರಳದ ಈ ಅಭ್ಯರ್ಥಿ ಗೆದ್ದರೆ ‘ವಿಶ್ವಕಪ್ ಫುಟ್ಬಾಲ್’ ನೋಡಲು ಕರೆದೊಯ್ಯುತ್ತಿದ್ದರು!
“ನಮ್ಮ ದೇಶದ ಪರಿಸ್ಥಿತಿಗಳು ಸರಿಯಾಗಿಲ್ಲ ಮತ್ತು ನಮ್ಮ ಜನರು ಸಂತೋಷವಾಗಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ನಾವು ಇಲ್ಲಿದ್ದ ಮಾತ್ರಕ್ಕೆ ನಾವು ಅವರ ಧ್ವನಿಯಾಗಬಾರದು ಅಥವಾ ನಾವು ಅವರನ್ನು ಗೌರವಿಸಬಾರದು ಎಂದೇನಿಲ್ಲ” ಎಂದು ಇರಾನ್ ಕ್ಯಾಪ್ಟನ್ ಹೇಳಿದ್ದಾರೆ.



ಸದ್ಯಕ್ಕೆ ಇದೊಂದು ಆಶಾದಾಯಕ ಬೆಳೆವಣಿಗೆ.