ಚಲನಚಿತ್ರ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕ, ಮಾನವ ಹಕ್ಕುಗಳ ಹೋರಾಟಗಾರ ಕೆ.ಪಿ.ಸಸಿ ಅವರು ಕೇರಳದ ತ್ರಿಶೂರಿನಲ್ಲಿ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ತ್ರಿಶೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.
ಸಸಿಯವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ಪರಮೆಕ್ಕಾವು ಚಿತಾಗಾರದಲ್ಲಿ ನಡೆಯಲಿದೆ. ಪ್ರಸಿದ್ಧ ಬರಹಗಾರ ಮತ್ತು ಕಮ್ಯುನಿಸ್ಟ್ ಚಿಂತಕ ಕೆ.ದಾಮೋದರನ್ ಅವರ ಪುತ್ರ ಕೆ.ಪಿ.ಸಸಿ.
1994ರಲ್ಲಿ ಬಿಡುಗಡೆಯಾದ ‘ಇಲಯುಮ್ ಮುಲ್ಲುಮ್’ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕರಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಸಿ ಪಡೆದಿದ್ದಾರೆ. ಕೇರಳದ ಸಾಕ್ಷ್ಯಚಿತ್ರ ಕ್ಷೇತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆಗಳಿಂದಾಗಿ ಅವರು ಜನಪ್ರಿಯರಾಗಿದ್ದಾರೆ. ಅವರ ಸಾಕ್ಷ್ಯಚಿತ್ರಗಳು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಿವೆ.
‘ರೆಸಿಸ್ಟಿಂಗ್ ಕೋಸ್ಟಲ್ ಇನ್ವೇಷನ್’, ‘ಅಮೆರಿಕಾ ಅಮೇರಿಕಾ’, ‘ಲಿವಿಂಗ್ ಇನ್ ಫಿಯರ್’, ‘ಡೆವಲಪ್‌ಮೆಂಟ್ ಎಟ್ ಗನ್‌ಪಾಯಿಂಟ್’ ಮತ್ತು ‘ಫ್ಯಾಬ್ರಿಕೇಟೆಡ್’ ಅವರ ಪ್ರಮುಖ ಸಾಕ್ಷ್ಯಚಿತ್ರಗಳು.
ಲೇಖಕಿ ಮೀನಾ ಕಂದಸ್ವಾಮಿ ಸಂತಾಪ ಸೂಚಿಸಿದ್ದು, “ಕೆಲಸ ಮತ್ತು ಕ್ರಿಯಾಶೀಲತೆಯ ಕಾರಣಕ್ಕಾಗಿ ನಾನು ದೂರದಿಂದಲೇ ಇಬ್ಬರು ವ್ಯಕ್ತಿಗಳು ಇಂದು ನಿಧನರಾದರು. ಮೊದಲನೆಯವರು ನಿರ್ದೇಶಕ, ನಿರ್ಭೀತ ಹೋರಾಟಗಾರ ಕೆ.ಪಿ.ಸಸಿ. 2ನೆಯವರು ಎಡಪಂಥೀಯ ಬುದ್ಧಿಜೀವಿ ಟಿ.ಜಿ.ಜೇಕಬ್. ಪಶ್ಚಿಮ ಘಟ್ಟಗಳು ಮತ್ತು ಪ್ರವಾಸೋದ್ಯಮದ ಬಗೆಗಿನ ಅವರ ಬರಹಗಳು ನನ್ನ ಪ್ರಭಾವಿಸಿವೆ” ಎಂದು ಸ್ಮರಿಸಿದ್ದಾರೆ.
Two people whose work & activism I admired from afar passed away today. The first is the filmmaker KP Sasi–a fearless activist. The 2nd is the leftist intellectual TG Jacob. Reading his writings on western ghats & tourism, left an indelible impression. A long-ago memory (1/2)
— Meena Kandasamy (@meenakandasamy) December 25, 2022
ಹೋರಾಟಗಾರ ಎಸ್.ಕ್ಯೂ.ಮಸೂದ್ ಟ್ವೀಟ್ ಮಾಡಿದ್ದು, “ಆತ್ಮೀಯ ಗೆಳೆಯ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕ ಕೆ.ಪಿ.ಸಸಿ ನಮ್ಮನ್ನು ಅಗಲಿದ್ದು ಅತ್ಯಂತ ದುಃಖದ ಸುದ್ದಿ. ನಮಗೆಲ್ಲರಿಗೂ, ಸಸಿ ಅವರು ತಮ್ಮ ಕಾಳಜಿಯನ್ನು ತೋರಿದ ಎಲ್ಲಾ ಜನರಿಗೂ, ಚಳವಳಿಗಳಿಗೂ ದೊಡ್ಡ ನಷ್ಟವಾಗಿದೆ” ಎಂದಿದ್ದಾರೆ.
Extremely sad news that dear friend and documentary film maker K.P.Sasi has left us.
A great loss to all of us and all the people, issues and movements in which he gave his heart. pic.twitter.com/jPXvE1kOlD
— S.Q.Masood | مسعود (@SQMasood) December 25, 2022


