Homeಮುಖಪುಟಮನುಸ್ಮೃತಿ ಸುಟ್ಟಿದ್ದು ಏಕೆಂದು ವಿವರಿಸಿದ ಅಮಿತಾಬ್ ಬಚ್ಚನ್ ವಿರುದ್ಧ FIR!

ಮನುಸ್ಮೃತಿ ಸುಟ್ಟಿದ್ದು ಏಕೆಂದು ವಿವರಿಸಿದ ಅಮಿತಾಬ್ ಬಚ್ಚನ್ ವಿರುದ್ಧ FIR!

ಡಾ.ಬಿ.ಆರ್ ಅಂಬೇಡ್ಕರ್‌ರವರು ಜಾತಿ ಬೇಧಭಾವ ಮತ್ತು ಅಸ್ಫೃಶ್ಯತೆಯನ್ನು ವೈಚಾರಿಕವಾಗಿ ವಿರೋಧಿಸುವ ಸಲುವಾಗಿ ಪ್ರಾಚೀನ ಹಿಂದೂ ಗ್ರಂಥ ಮನುಸ್ಮೃತಿಯನ್ನು ಸುಟ್ಟು ಹಾಕಿ ಪ್ರತಿಭಟಿಸಿದ್ದರು.

- Advertisement -
- Advertisement -

ಜನಪ್ರಿಯ ಹಿಂದಿ ಕಾರ್ಯಕ್ರಮ ‘ಕೌನ್ ಬನೇಗ ಕರೋಡ್‌ಪತಿ’ ನಿರೂಪಕ ಅಮಿತಾಬ್ ಬಚ್ಚನ್ ಮತ್ತು ಸೋನಿ ಟಿವಿ ಕಾರ್ಯಕ್ರಮ ತಯಾರಕರ ವಿರುದ್ಧ ಲಕ್ನೋ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ‘1927ರ ಡಿಸೆಂಬರ್ 25 ರಂದು ಡಾ.ಬಿ.ಆರ್ ಅಂಬೇಡ್ಕರ್‌ರವರು ಯಾವ ಧರ್ಮಗ್ರಂಥವನ್ನು ಸುಟ್ಟರು’ ಎಂಬ ಪ್ರಶ್ನೆ ಆಧಾರದಲ್ಲಿ ದೂರು ದಾಖಲಾಗಿತ್ತು.

ನಡೆದುದ್ದೇನು?

ಶುಕ್ರವಾರ ನಡೆದ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮದ ‘ಕರಮ್‌​ವೀರ್’ ಎಂಬ ವಿಶೇಷ ಸಂಚಿಕೆಯಲ್ಲಿ ಅತಿಥಿಗಳಾಗಿ ನಟ ಅನುಪ್ ಸೋನಿ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜವಾಡ ವಿಲ್ಸನ್ ಹಾಟ್​ ಸೀಟ್​ನಲ್ಲಿ ಕುಳಿತಿದ್ದರು. ಅಮಿತಾಭ್ ಬಚ್ಚನ್ 6,40,000 ರೂಪಾಯಿಯ ನಗದು ಬಹುಮಾನಕ್ಕಾಗಿ ಪ್ರಶ್ನೆಯೊಂದನ್ನು ಕೇಳಿದರು. ಆ ಪ್ರಶ್ನೆ ಈಗಿದೆ.

1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್​ ಹಾಗೂ ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು?

ಆಯ್ಕೆಗಳು ಹೀಗಿವೆ:

ಎ. ವಿಷ್ಣುಪುರಾಣ

ಬಿ. ಭಗವದ್ಗೀತೆ

ಸಿ. ಋಗ್ವೇದ

ಡಿ. ಮನುಸ್ಮೃತಿ

ಈ ಪ್ರಶ್ನೆಗೆ ಬೆಜವಾಡ ವಿಲ್ಸನ್ ಮತ್ತು ಅನೂಪ್ ಸೋನಿ ಮನುಸ್ಮೃತಿ ಎಂದು ಉತ್ತರ ನೀಡಿದರು. ಸರಿ ಉತ್ತರವೆಂದು ಘೋಷಿಸಿದ ಅಮಿತಾಬ್ ಬಚ್ಚನ್, “1927ರ ಡಿಸೆಂಬರ್ 25 ರಂದು ಡಾ.ಬಿ.ಆರ್ ಅಂಬೇಡ್ಕರ್‌ರವರು ಜಾತಿ ಬೇಧಭಾವ ಮತ್ತು ಅಸ್ಫೃಶ್ಯತೆಯನ್ನು ವೈಚಾರಿಕವಾಗಿ ವಿರೋಧಿಸುವ ಸಲುವಾಗಿ ಪ್ರಾಚೀನ ಹಿಂದೂ ಗ್ರಂಥ ಮನುಸ್ಮೃತಿಯನ್ನು ಸುಟ್ಟು ಹಾಕಿ ಪ್ರತಿಭಟಿಸಿದರು” ಎಂದು ವಿವರಣೆ ನೀಡಿದರು.

ಎಫ್‌ಐಆರ್ ಏಕೆ?

ಇತಿಹಾಸದಲ್ಲಿ ದಾಖಲಾಗಿರುವ ಈ ಘಟನೆಯ ಪ್ರಶ್ನೆ ಮತ್ತು ಅಮಿತಾಬ್ ಬಚ್ಚನ್‌ರವರ ವಿವರಣೆ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ. ಈ ಪ್ರಶ್ನೆಯು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ, ಹಾಗಾಗಿ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಅಲ್ಲದೇ ಲಕ್ನೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


ಇದನ್ನೂ ಓದಿ: ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಮತ್ತು RSSನ ಮನಪರಿವರ್ತನೆ! : ಅಂಬೇಡ್ಕರ್‌ ಹೊಗಳಿದ ಬಿ.ಎಲ್‌ ಸಂತೋಷ್‌ಗೆ 9 ಪ್ರಶ್ನೆಗಳು


ಸಿನಿಮಾ ನಿರ್ಮಾಪಕ ವಿವೇಕ್​ ಅಗ್ನಿಹೋತ್ರಿ “ಕೆಬಿಸಿಯನ್ನು (ಕೌನ್ ಬನೇಗ ಕರೋಡ್‌ಪತಿ) ಕಮ್ಮಿಸ್‌ಗಳು ಅಪಹರಿಸಿದ್ದಾರೆ. ಇದರಿಂದ ಸಂಸ್ಕೃತಿ ಯುದ್ಧಗಳು ಹೇಗೆ ಗೆಲ್ಲುತ್ತವೆ ಎಂಬುದನ್ನು ಮುಗ್ಧ ಮಕ್ಕಳು ಕಲಿಯುತ್ತಾರೆ. ಇದನ್ನು ಕೋಡಿಂಗ್ ಎಂದು ಕರೆಯಲಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು “ಕೆಬಿಸಿ ತನ್ನ ಕಾರ್ಯಕ್ರಮವನ್ನು ‘ಕೌನ್ ಬನೇಗ ಕಮ್ಯುನಿಷ್ಟ್’ ಎಂದು ಬದಲಿಸಿಕೊಳ್ಳಬೇಕು. ನಾವು ಇದನ್ನು ಬಹಿಷ್ಕರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇದು ನಿಜಕ್ಕೂ ವಿವಾದವೇ?

ಅಂಬೇಡ್ಕರ್‌ರವರು ಮನುಸ್ಮೃತಿಯನ್ನು ವಿರೋಧಿಸಿದ್ದುದು, ಅದನ್ನು ಸುಟ್ಟು ಹಾಕಿ ಪ್ರತಿಭಟಿಸಿರುವುದು ಅವರ ಬರಹಗಳಲ್ಲಿ ಮಾತ್ರವಲ್ಲದೇ ನಮ್ಮ ಇತಿಹಾಸದಲ್ಲಿ ದಾಖಲಾಗಿದೆ. ಅದು ನಮಗೆ ಒಪ್ಪಿಗೆ ಇರಬಹುದು ಅಥವಾ ಇಲ್ಲದಿರಬಹುದು. ಆದರೆ ಅದನ್ನು ಅಳಿಸಲು ಅಥವಾ ಬದಲಿಸಲು ಸಾಧ್ಯವಿಲ್ಲ. ಹಾಗಿರುವಾಗ ಇದರಲ್ಲಿ ವಿವಾದ ಎಲ್ಲಿದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕೆಲವರು ಕೆಬಿಸಿಯ ಆ ಪ್ರಶ್ನೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಆ ಪ್ರಶ್ನೆಯಲ್ಲಿ ಯಾವುದೇ ತಪ್ಪಿಲ್ಲ, ಮೊದಲನೆಯದಾಗಿ ಇದು ಕೇವಲ ಸರಳ ಸಾಮಾನ್ಯ ಜ್ಞಾನದ ಪ್ರಶ್ನೆಯಾಗಿದೆ. ಭಾರತದಲ್ಲಿ ನಡೆಯುತ್ತಿರುವ ವರ್ಣಭೇದದ ಇಂದಿನ ಯುಗದಲ್ಲಿ ಅನೇಕ ಭಾರತೀಯರಿಗೆ ಮನುಸ್ಮೃತಿಯ ಅಪಾಯಗಳ ಬಗ್ಗೆ ತಿಳಿದಿಲ್ಲದಿರುವುದರಿಂದ ಪ್ರಶ್ನೆ ಕೇಳಿರುವುದು ಸರಿಯಾಗಿದೆ. ಮನುಸ್ಮೃತಿಯನ್ನು ಸುಡುವುದು ನಿಜಕ್ಕೂ ಒಂದು ಅದ್ಭುತ ಕ್ರಾಂತಿಕಾರಿ ಕ್ರಿಯೆ. ಜಾತಿವಾದವು ಬೇಗನೆ ಕಣ್ಮರೆಯಾದರೆ ಉತ್ತಮ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬರು “ಮನುಸ್ಮೃತಿಯು ತಾರತಮ್ಯದ ದಾರಿದೀಪವಾಗಿದೆ ಮತ್ತು ಅದರಿಂದ ಇಂದಿಗೂ ದಲಿತರಿಗೆ ಕಿರುಕುಳ ನೀಡಲಾಗುತ್ತಿದೆ!! ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಕೆಬಿಸಿಗೆ ಧನ್ಯವಾದಗಳು. ನಾನು ಕೆಬಿಸಿಯನ್ನು ಬೆಂಬಲಿಸುತ್ತೇನೆ. ಕೆಬಿಸಿಯನ್ನು ಬಾಯ್ಕಾಟ್ ಮಾಡಬೇಕು ಎನ್ನುತ್ತಿರುವವರು ಮೊದಲು ಮನುಸ್ಮೃತಿಯನ್ನು ಓದಿ ನಂತರ ಪ್ರತಿಕ್ರಿಯಿಸಲಿ” ಎಂದು ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ಇಂದು ಭಾರತದಲ್ಲಿ ತಮಗೆ ರುಚಿಸದ ಎಲ್ಲಾ ವಿಷಯಗಳನ್ನು ಬಾಯ್ಕಾಟ್ ಮಾಡಬೇಕೆಂದು ಆಗ್ರಹಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅದು ತಮಗೆ ಏಕೆ ಸರಿಯೆನಿಸುತ್ತಿಲ್ಲ, ಅದರಿಂದಾಗುವ ಅಪಾಯಗಳೇನು ಎಂದು ವಿವರವಾಗಿ ಚರ್ಚಿಸುವ ಬದಲು ಬಾಯ್ಕಾಟ್ ಎಂದು ಟ್ರೆಂಡ್ ಮಾಡಲಾಗುತ್ತಿದೆ. ಆ ಪಟ್ಟಿಗೆ ಈ ಪ್ರಕರಣ ಹೊಸ ಸೇರ್ಪಡೆಯಾಗಿದೆ.


ಇದನ್ನೂ ಓದಿ: ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ: ‘800’ ಚಿತ್ರ ಬಾಯ್ಕಾಟ್ ಎಂದ ತಮಿಳಿಗರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಇದೆಲ್ಲವೂ ನಾಟಕವಷ್ಟೇ.
    ಅಮಿತಾಬ್‌ಗೇ ಆಗಲಿ ಅಥವ ಸೋನಿ ವಾಹಿನಿ ಯವರಿಗೇ ಆಗಲಿ ಬಾಬಾಸಾಹೇಬರ ಕುರಿತಾಗಿ ಯಾವುದೇ ರೀತಿಯ ಪ್ರೀತ್ಯಾದರ ಅಥವ ಗೌರವಗಳಾಗಲೀ ಇಲ್ಲ. ಇಂಥಹ ಪ್ರಶ್ನೆಗಳನ್ನು ಕೇಳಿದಾಗ ನಮ್ಮ ದೇಶದಲ್ಲಿ ಸಹಜವಾಗಿಯೇ ವಾಕ್ಸಮರ ಮತ್ತು ತಿಕ್ಕಾಟಗಳಾಗುತ್ತವೆ, ಜಾಲವಾಹಿನಿಯಲ್ಲಿ ಚರ್ಚೆಗಳಾಗುತ್ತವೆ, ತತ್ಕಾರಣದಿಂದ ಬಹುಜನರ ಗಮನ ಕಾರ್ಯಕ್ರಮದತ್ತ ಹರಿದು, ಕಾರ್ಯಕ್ರಮದ ಕುರಿತಾದ ಟಿ ಆರ್ ಪಿ ಹೆಚ್ಚುತ್ತದೆ ಎಂಬ ದುರಾಲೋಚನೆಯಿಂದ ಈ ಪ್ರಶ್ನೆ ಕೇಳಿರುತ್ತಾರೆ. ಇಷ್ಟು ವರ್ಷಗಳಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಳದ ಪ್ರಶ್ನೆ, ಬೆಜವಾಡ ವಿಲ್ಸನ್ ಹಾಟ್‌ಸೀಟ್‌ನಲ್ಲಿ ಕುಳಿತಾಗಲೇ ಕೇಳಿದ್ದಾರೆಂದರೆ, ಅದರ ಅಂತರಾರ್ಥ ತಿಳಿಯುತ್ತದೆ. ಈಗ ಬೆಜವಾಡ ವಿಲ್ಸನ್‌ರವರ ಕುರಿತು ತಿಳಿದಿರುವವರೂ ಇದರ ಕಡೆ ಗಮನವೀಯುತ್ತಾರೆ. ಬಹುಜನರನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾರ್ಪೊರೇಟ್ ಕುತಂತ್ರವಿದಷ್ಟೇ….
    ವಿಶ್ವನಾಥ ಎನ್ ಅಮಾಸ

  2. ಇದೆಲ್ಲವೂ ನಾಟಕವಷ್ಟೇ.
    ಅಮಿತಾಬ್‌ಗೇ ಆಗಲಿ ಅಥವ ಸೋನಿ ವಾಹಿನಿ ಯವರಿಗೇ ಆಗಲಿ ಬಾಬಾಸಾಹೇಬರ ಕುರಿತಾಗಿ ಯಾವುದೇ ರೀತಿಯ ಪ್ರೀತ್ಯಾದರ ಅಥವ ಗೌರವಗಳಾಗಲೀ ಇಲ್ಲ. ಇಂಥಹ ಪ್ರಶ್ನೆಗಳನ್ನು ಕೇಳಿದಾಗ ನಮ್ಮ ದೇಶದಲ್ಲಿ ಸಹಜವಾಗಿಯೇ ವಾಕ್ಸಮರ ಮತ್ತು ತಿಕ್ಕಾಟಗಳಾಗುತ್ತವೆ, ಜಾಲವಾಹಿನಿಯಲ್ಲಿ ಚರ್ಚೆಗಳಾಗುತ್ತವೆ, ತತ್ಕಾರಣದಿಂದ ಬಹುಜನರ ಗಮನ ಕಾರ್ಯಕ್ರಮದತ್ತ ಹರಿದು, ಕಾರ್ಯಕ್ರಮದ ಕುರಿತಾದ ಟಿ ಆರ್ ಪಿ ಹೆಚ್ಚುತ್ತದೆ ಎಂಬ ದುರಾಲೋಚನೆಯಿಂದ ಈ ಪ್ರಶ್ನೆ ಕೇಳಿರುತ್ತಾರೆ. ಇಷ್ಟು ವರ್ಷಗಳಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಳದ ಪ್ರಶ್ನೆ, ಬೆಜವಾಡ ವಿಲ್ಸನ್ ಹಾಟ್‌ಸೀಟ್‌ನಲ್ಲಿ ಕುಳಿತಾಗಲೇ ಕೇಳಿದ್ದಾರೆಂದರೆ, ಅದರ ಅಂತರಾರ್ಥ ತಿಳಿಯುತ್ತದೆ. ಈಗ ಬೆಜವಾಡ ವಿಲ್ಸನ್‌ರವರ ಕುರಿತು ತಿಳಿದಿರುವವರೂ ಇದರ ಕಡೆ ಗಮನವೀಯುತ್ತಾರೆ. ಬಹುಜನರನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾರ್ಪೊರೇಟ್ ಕುತಂತ್ರವಿದಷ್ಟೇ….
    ವಿಶ್ವನಾಥ ಎನ್ ಅಮಾಸ
    K V Nayaka

  3. ಅಮಿತಾಬ್ ಜೀ ರವರು ಕೇಳಿದ ಪ್ರಶ್ನೆ ಕರೆಕ್ಟ್..ಅದಕ್ಕೆ ನೀಡಿದ ಉತ್ತರ ಸರಿ ಇದೆ…… ನಮ್ಮ ಬಾರತದ ಎಸ್ಟೋ ಜನರಿಗೆ ಬಾಬ ಸಾಬ್ ಅಂಬೇಡ್ಕರ್ ರವರು ಮನುಸ್ಮೃತಿ ಯನ್ನು ಸುಟ್ಟೀಧೂ ಗೊತ್ತಿಲ್ಲ ….ಇದ್ದರಿಂದ ಅದನ್ನು ಏಕೆ ಏತಕ್ಕಾಗಿ ಯಾವ ಜನರಿಗೆ ಅನ್ಯಾಯ ಆಗಿದೆ…ಅದರಲ್ಲಿ ಹಿಂದುಗಳು ಬಡ ಹಿಂದು ಜನರನ್ನು ಹೀಗೆ ಹಲವಾರು ಬಾರಿ ದೇಶದ ನಾನಾ ಭಾಗಗಳಲ್ಲಿ.. ಅಂದರೆ ಕನ್ಯಾಕುಮಾರಿ ಯಿಂದ….ಕಾಶ್ಮೀರದ ವರೆಗೆ…ಈ ಬಡ ಹಿಂದುಗಳಿಗೆ ಶಾಲೆಗೆ….ಕುಡಿಯುವ ನೀರಿಗೆ…ದೇವಸ್ಥಾನ ಪ್ರವೇಶ…ಇನ್ನು ಎಷ್ಟೆಷ್ಟೋ….ಕಾನೂನು ಮಾಡಿ ಬಡ ಜನರಿಗೆ ಬದುಕಲು ಕಷ್ಟ ಆಗಿದೆ……ದಯವಿಟ್ಟು ಮನುಸ್ಮೃತಿ ಜನರು ಓದಿ ಆಗ ನೀವು ಸಹ ಅದನ್ನು ಸುಡಲು ಮನಸ್ಸು ಬರುತ್ತೆ….ಈ ಪ್ರಶ್ನೆ ಕೇಳಿದ್ದು ತಪ್ಪಲ್ಲ…ಕೆಲವು ಬ್ರಾಹ್ಮಣ ಮಂಧಿಗಳು ಮಾತ್ರ ಜನರಿಗೆ ಇದು ಗೊತ್ತಿರಲಿಲ್ಲ…ಮತ್ತೇ ಜನರಿಗೆ ಗೊತ್ತು ಮಾಡಿ ನಮ್ಮ ಮರ್ಯಾದೆ ಹಾಳು ಮಾಡ್ತಾರೆ ಅಂಥಾ ..ಕೋರ್ಟ್ನಲ್ಲಿ ಕೇಸ್ ಹಾಕುತ್ತಾರೆ….ಅಮಿತಾಬ್ ರವರರಿಗೆ ಏನು ಆಗಲ್ಲ…ಜೈ ಅಮಿತಾಬ್ ಜಿ….

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...