Homeಕರ್ನಾಟಕಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

ಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

- Advertisement -
- Advertisement -

ಡಾ. ಪ್ರಕಾಶ್ ಮಂಟೇದ ಅವರು ಬರೆದ ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ ಎಂಬ ಶೀರ್ಷಿಕೆಯ ಲೇಖನದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಡಾ.ಪ್ರಕಾಶ್ ಮಂಟೇದ ವಿರುದ್ಧ 153ಎ ಮತ್ತು ಐಪಿಸಿಯ 505ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ನ.1ರಂದು ವಿಚಾರಣೆಗೆ ಹಾಜರಾಗುವಂತೆ ಡಾ.ಪ್ರಕಾಶ್ ಮಂಟೇದ ಅವರಿಗೆ ರಾಮನಗರ ಗ್ರಾಮಾಂತರ ಪೊಲೀಸರು ನೊಟೀಸ್‌ ನೀಡಿದ್ದಾರೆ.

ರಾಮನಗರದ ಭೋವಿ ಸಮುದಾಯದ ವ್ಯಕ್ತಿಯೊಬ್ಬ ಪ್ರಕಾಶ್ ಮಂಟೇದ ಅವರ ವಿರುದ್ದ ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:
ಲೇಖಕ ಡಾ.ಪ್ರಕಾಶ್ ಮಂಟೇದ ಅವರು ತಮ್ಮ ಬಾಲ್ಯದ ಜೀವನಕ್ಕೆ ಸಂಬಂಧಿಸಿ ಅನುಭವದ ಲೇಖನ ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ’ ಎಂಬ ಶೀರ್ಷಿಕೆಯಡಿ ಬರೆದಿದ್ದು, ಇದನ್ನು ಬಿಗ್ ಕನ್ನಡ ವೆಬ್‌ ಮಾದ್ಯಮ ಪ್ರಕಟಿಸಿದೆ.

ಪರಿಶಿಷ್ಟ ಜಾತಿಯವರೇ ಆದ ತನ್ನೂರಿನ ಬೋವಿ ಸಮುದಾಯದ ಜನರು ಪರಿಶಿಷ್ಟ ಜಾತಿಯ ಹೊಲೆಯರನ್ನು ಅವಮಾನಿಸಿದ ನಿದರ್ಶನಗಳ ಕುರಿತು ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು. SC ಪಟ್ಟಿಯಲ್ಲಿನ ಸ್ಪರ್ಶ್ಯ ಮತ್ತು ಅಸ್ಪೃಶ್ಯ ಸಮುದಾಯದಗಳ ನಡುವೆ ಇರುವ ಜಾತಿ ತಾರತಮ್ಯದ ಅಸಮಾನತೆಯನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದರು.

ಎಸ್ಸಿಗಳೆನ್ನುವ ಭೋವಿಗಳು ಅಮಾನವೀಯವಾಗಿ ನಡೆಸಿಕೊಂಡಿದ್ದಿದೆ. ಭೋವಿಗಳು ತಮ್ಮ ದಬ್ಬಾಳಿಕೆ, ಪುಂಡಾಟಿಕೆಗಳಿಂದ ಊರಲ್ಲಿ ದೌರ್ಜನ್ಯದ ಹವಾ ಇಟ್ಟಿದ್ದರು. ಅಂದಿನ ಇವರ ಜಾತೀಯತೆಯನ್ನು ಇವರ ಸಾಮಾಜಿಕ ಅಜ್ಞಾನ ಎಂದು ಸುಮ್ಮನಾಗಬಹುದಷ್ಟೆ. ಆದರೂ ಜಾತಿ ಆಚರಣೆಯಲ್ಲಿ ತಮ್ಮಂತೆಯೇ ಎಸ್ಸಿಗಳಾದ ಹೊಲೆಯರನ್ನು ನಿಕೃಷ್ಟವಾಗಿ ನಡೆಸಿಕೊಂಡದ್ದಿದೆ ಸೇರಿ ಹಲವು ವಿಚಾರಗಳನ್ನು, ನಿದರ್ಶನಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಡಾ.ಪ್ರಕಾಶ್ ಮಂಟೇದ, ನನ್ನ ಬರಹದ ಬಗ್ಗೆ ಸಮಾಜದಲ್ಲಿ ಶಾಂತಿ ಕದಡಿದ, ಕೋಮು ದ್ವೇಷದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ನಾನು 30 ವರ್ಷಗಳ ನನ್ನ ಅನುಭವವನ್ನು ಹಂಚಿಕೊಂಡಿದ್ದೆ. ಬಿಗ್‌ ಕನ್ನಡದಲ್ಲಿ ‘ಅರಿವೇ ಕಂಡಾಯ’ ಸರಣಿ ಅಂಕಣಗಳನ್ನು ನಾನು ಬರೆಯುತ್ತಿದ್ದೇನೆ. ಅದರಲ್ಲಿ ನನ್ನ ಮೂಲ, ಊರಿನ ಬಗ್ಗೆ ಬರೆಯುವಾಗ, ನಮ್ಮ ತಂದೆ ಅಂಬೇಡ್ಕರ್‌ ಸಂಘ ಮಾಡಿದ ಪೋಟೋ ಕಾಣಿಸಿಕೊಂಡಿತ್ತು. ನಮ್ಮ ಅಪ್ಪ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವನ್ನು ಮಾಡಿದ್ದರು. ಇದನ್ನು ನೋಡಿ  ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ ಎಂಬ ಲೇಖನ ಬರೆದೆ. ಅವತ್ತಿಗೆ ನಮ್ಮಲ್ಲಿ ಬೋವಿ ಸಮುದಾಯದ ಜನರು ಪ್ರಬಲವಾಗಿದ್ದರು. ಈ ವೇಳೆ ನನಗೆ ಆದ ಜಾತಿ ಆಧಾರಿತ ಅನುಭವದ ಬಗ್ಗೆ ಬರೆದಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಸ್ಪೃಶ್ಯ, ಅಸ್ಪೃಶ್ಯತೆಯ ತಳ ಮತ್ತು ಮೇಲ್ಮಟ್ಟದ ಜಾತಿ ದೌರ್ಜನ್ಯದ ತಲಸ್ಪರ್ಶದ ಅರಿವಿದೆ. ಆತ್ಮ ವಂಚನೆ ಮಾಡಿಕೊಂಡು ಹುಸಿ ಜಾತ್ಯತೀತ ವಿಚಾರಗಳನ್ನು ಮಾತಾಡುವ ತೆವಲು ಅಥವಾ ಗೀಳು ನನಗಿಲ್ಲ. ಇವತ್ತಿಗೂ ಕೆಲವರಿಗೆ ಜಾತಿಯ ರೂಪ ವಿರೂಪಗಳು ಹೇಗೆ ಸ್ಥಿರೀಕರಣ ಗೊಳ್ಳುತ್ತಿವೆ ಎಂಬುದು ಗೊತ್ತಿಲ್ಲ. ಕೆಲವರ ಬಳಿ ಸಿದ್ಧಾಂತ, ಸ್ಟಾಕ್ ರಿಯಾಕ್ಷನ್ಸ್ ಮಾತ್ರವಿದೆ. ಆದರೆ ಜಾತಿ ಚಲನೆಯ ಸಂಕೀರ್ಣತೆಗಳ ಅರಿವು ಮತ್ತು ಅದು ಮಾಡುವ ಗಾಯ ಮತ್ತು ಗಾಸಿತನಗಳು ನಮಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ಇಂದಿಗೂ ಹೊಲೆಯ ಸಮುದಾಯದ ಜನರನ್ನು ಅಸಹಾಯಕರನ್ನಾಗಿಸಿ ಏನೇ ಆದರೂ ಸುಮ್ಮನಿರುವಂತೆ ಆರ್ಭಟ ಮಾಡುವವರು ನನ್ನ ಮೇಲೆ ಪ್ರಕರಣ ದಾಖಲು ಮಾಡಿರುತ್ತಾರೆ. ಹಾಗೆ ನೋಡಿದರೆ ಇಡೀ ಕುಂಭಾಪುರ ಕಾಲೋನಿಯನ್ನು ಹಾಳುಗೆಡುತ್ತಿರುವವರು ಇವರೇ ಆಗಿರುತ್ತಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು ಇದನ್ನು ಗಮನಿಸಬೇಕು. ಇಂತಹ ಅವಿವೇಕಿಗಳು ಮತ್ತು ದುಷ್ಟರನ್ನು ಇಟ್ಟುಕೊಂಡು ಸ್ಥಳೀಯವಾಗಿ ಕಾಂಗ್ರೆಸ್ ಸಾಧಿಸುವುದಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯ ಹೇಳಲು ನಮಗೆ ಅಂಜಿಕೆ ಯಾಕೆ? ಬಾಬಾ ಸಾಹೇಬರು ಹೇಳಿದಂತೆ ಎಂಜಲು ಮತ್ತು ರಕ್ತವನ್ನು ಟಚಬಲ್ ದಲಿತರು, ಅನ್‌ಟ ಚಬಲ್ ದಲಿತರ ಜೊತೆ ಬೆರೆಸಬಲ್ಲರೆ?  ನಾನು ತಳಮಟ್ಟದ ಸತ್ಯವನ್ನು ಮಾತಾಡಿದ್ದೇನೆ. ಈ ವಿಚಾರದಲ್ಲಿ ಯಾವುದೇ ಕಪೋಲ ಕಲ್ಪಿತ ಸಂಗತಿಗಳು ನನ್ನ ಲೇಖನದಲ್ಲಿ ಇರುವುದಿಲ್ಲ. ಈ ಬಗ್ಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಭಾಸ್ಕರ್‌ ಪ್ರಸಾದ್‌, ಪ್ರಕಾಶ್ ಮಂಟೇದ ಅವರ ಮೇಲೆ ಕೇಸ್ ದಾಖಲಿಸಲಾಗಿದೆ. ನಾನು ಪ್ರಕಾಶ್ ಮಂಟೇದ ಅವರ ಜೊತೆ ಇದ್ದೇನೆ. ಸುಮ್ಮನೆ ಮಾತಿಗೆ ಮಾತ್ರ ಇರೋದಲ್ಲ.‌ ಅವರ ಮೇಲೆ ಕೇಸು ಹಾಕಿರುವ ಪೊಲೀಸರಿಗೆ  ಅವರು ಮಾಡಿರುವ ತಪ್ಪೇನು ಎಂದು ಕಾನೂನಿನ ಮೂಲಕ ತಿಳಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಬಾಲ್ಯದಲ್ಲಿ ಕೇವಲ ಜಾತಿಯ ಕಾರಣಕ್ಕೆ ನಾನೆಷ್ಟು ಹಿಂಸೆ, ಅವಮಾನ, ನಷ್ಟಗಳನ್ನು ಅನುಭವಿಸಿದ್ದೆ ಎಂದು ತನ್ನ ಜೀವನದ ಅನುಭವವನ್ನು ಬರೆದುಕೊಳ್ಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತೆ? ಜಾತಿ ದೌರ್ಜನ್ಯದ ವಿರುದ್ದ ಪ್ರತಿರೋಧ ಒಡ್ಡಲು ಹೇಗೆ ಸಾಧ್ಯವಾಯ್ತು ಎಂಬ ಬಗ್ಗೆ ಕಥನವನ್ನು ಬರೆದುಕೊಳ್ಳುವುದು ಅಪರಾಧ ಎಂದಾದರೆ ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಅನೇಕ ದಲಿತ ಮುಖಂಡರು ಹಾಗು ಸಾಹಿತಿಗಳು  ಜಾತಿ ದೌರ್ಜನ್ಯಗಳ ಘಟನೆಗಳ ಬಗ್ಗೆ ಲೇಖನ ಬರೆದಿದ್ದಾರೆ. ನಾನು ಕೂಡ ಇಲ್ಲಿನ ಜಾತಿ ದೌರ್ಜನ್ಯಗಳ ಬಗ್ಗೆ ಲೇಖನವನ್ನು ಬರೆದಿದ್ದೇನೆ. ಇನ್ನು ಮುಂದೆ ಇಂತಹ ಜಾತಿ ದೌರ್ಜನ್ಯದ ದಾಖಲಾತಿಗಳಿಗೆಲ್ಲಾ ಸೆಕ್ಷನ್ 505, 153A ಅಡಿಯಲ್ಲಿ FIR ಜಡಿಯುತ್ತೀರಾ?
ಯಾವ ಮುಠ್ಠಾಳನಾದರೂ ಇಂತಹ ಕೇಸು ದಾಖಲಿಸುವುದನ್ನು ಒಪ್ಪಬಹುದೇನು ಎಂದು ಭಾಸ್ಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ZEE TV ಕನ್ನಡದಲ್ಲಿ ಅಂಬೇಡ್ಕರರ ಜೀವನ ಚರಿತ್ರೆಯಲ್ಲಿ ಜಾತಿ ದೌರ್ಜನ್ಯಗಳ ಬಗ್ಗೆ ಬರೆಯಲಾಗಿದೆ. ಹಾಗಾದರೆ ನೀವು ಈ ಜಾತಿ ದಬ್ಬಾಳಿಕೆಯ ಚರಿತ್ರೆಯನ್ನು ಬರೆದವರ ಮತ್ತು ಪ್ರಸಾರ ಮಾಡಿದವರ ಮೇಲೆ ಕೇಸ್ ದಾಖಲಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಇಂತಹ ದೂರುಗಳು ಬಂದಾಗ, ಬಂದ ದೂರುಗಳಿಗೆಲ್ಲಾ FIR ಮಾಡಲೇಬೇಕಿಲ್ಲ. ಒಂದು NCR ಮಾಡಿ ಆಪಾದಿತರಿಗೆ ನೋಟಿಸ್ ಕೊಟ್ಟು ಅವರು ನೀಡುವ ಹೇಳಿಕೆಯ ಮೇಲೆ ಮುಂದುವರೆಯಬಹುದು. ದೂರನ್ನು ಕೋರ್ಟಿನ ಗಮನಕ್ಕೆ ತಂದು ಕೋರ್ಟಿನ ಅನುಮತಿ ಪಡೆದು FIR ದಾಖಲಿಸಬಹುದು. ಆದರೆ ಈ ಪ್ರಕರಣದಲ್ಲಿ ಪೂರ್ವಾಗ್ರಹ ಪೀಡಿತ ಪೋಲೀಸರು ಹಾಗೇನೂ ಮಾಡದೇ ನೇರವಾಗಿ FIR ಮಾಡಿರುವುದರ ಹಿಂದೆ ಜಾತಿ ರೋಗವೇ ಕೆಲಸ ಮಾಡಿದೆ. ಮತ್ತದಕ್ಕೆ ನಾವು ಸರ್ಕಾರವನ್ನೂ ಹೊಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂದಿಸಿದ ಕರ್ತವ್ಯ ಭ್ರಷ್ಟ ಪೋಲೀಸರ ಮೇಲೆ ಸೂಕ್ತ ಕ್ರಮವಹಿಸಿ ಎಂದು ಸರ್ಕಾರಕ್ಕೆ ಭಾಸ್ಕರ ಪ್ರಸಾದ್‌ ಅವರು ಆಗ್ರಹಿಸಿದ್ದಾರೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...