Homeಮುಖಪುಟಸಂವಿಧಾನಕ್ಕೆ ಮೊದಲು ನಮಸ್ಕರಿಸಿ, ಆಮೇಲೆ ಅದರ ಆಶಯಕ್ಕೆ ಗುಂಡು ಹೊಡೆದ ಮೋದಿ: ದೇವನೂರು

ಸಂವಿಧಾನಕ್ಕೆ ಮೊದಲು ನಮಸ್ಕರಿಸಿ, ಆಮೇಲೆ ಅದರ ಆಶಯಕ್ಕೆ ಗುಂಡು ಹೊಡೆದ ಮೋದಿ: ದೇವನೂರು

ಇಂದು ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಸಾಮರಸ್ಯ, ಸಹನೆ, ಪ್ರೀತಿ ಬೆಳೆಸಬೇಕಾಗಿದೆ. ದೇಶವನ್ನು ಮತ್ತೆ ಕಟ್ಟಬೇಕಾಗಿದೆ. ಇದಕ್ಕಾಗಿ ವಿದ್ಯಾರ್ಥಿ ಯುವಜನತೆ ಪಣ ತೊಟ್ಟಿದ್ದಾರೆ. ನಾವೀಗ ಜೊತೆಗೂಡಬೇಕಾಗಿದೆ.

- Advertisement -
- Advertisement -

ಜನಪ್ರತಿನಿಧಿಗಳು ಅಂದರೆ ಎಂಪಿ, ಎಂಎಲ್‌ಎ ಇಂಥವರು ಹೇಗೆ ಆಯ್ಕೆ ಆಗ್ತಾರೆ ಅಂತ ಎಲ್ಲರಿಗೂ ಗೊತ್ತು. ಮತದಾರರು ಅಂದರೆ ನಾವು ನೀವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡ್ತೇವೆ. ಅದನ್ನೇನು ವಿವರಿಸಿ ಹೇಳಬೇಕಾಗಿಲ್ಲ. ಜನಪ್ರತಿನಿಧಿಗಳನ್ನೇ ಆಯ್ಕೆ ಮಾಡುವ ನಮ್ಮ ನಿಮ್ಮ ಕತೆ ಏನಾಗಿದೆ ನೋಡಿ. ನಾವು ನೀವು ಆಯ್ಕೆ ಮಾಡಿದ ಜನಪ್ರತಿನಿಧಿಯೇ ಇಂದು ಅವನನ್ನು ಆಯ್ಕೆ ಮಾಡಿದ ಮತದಾರರನ್ನೇ ನೀನು ಈ ದೇಶದವನು ಅಂತ ಸಾಬೀತು ಪಡಿಸು ಅಂತ ಕೇಳ್ತಾ ಇದ್ದಾನೆ. ಇಂದು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಗೆ ತಂದು ನಮ್ಮ ಪ್ರಧಾನಿಯವರು ನಿನ್ನ ಪೌರತ್ವ ಸಾಬೀತು ಪಡಿಸು ಎಂದು ಅಪ್ಪಣೆ ಮಾಡಿದ್ದಾರೆ. ಇಡೀ ಭಾರತದ ಜನ ಒಕ್ಕೊರಲಿನಿಂದ ಪ್ರಧಾನಿಯವರನ್ನು ಕೇಳಬೇಕಾಗಿದೆ- ಅಲ್ಲಪ್ಪಾ, ನಾವು ನಿಮಗೆ ಓಟು ಕೊಡದಿದ್ದರೆ, ಓಟು ಕೊಟ್ಟು ನಿಮ್ಮನ್ನು ಆಯ್ಕೆ ಮಾಡದಿದ್ದರೆ ನೀವು ಎಲ್ಲಪ್ಪ ಪ್ರಧಾನಿ ಆಗ್ತಾ ಇದ್ದಿರಿ? ಹಾಗೇನೆ ಕೇಳಬೇಕಾಗಿದೆ.

‘ನಾವೇ ಆಯ್ಕೆ ಮಾಡಿದ ನೀವು, ನಿಮ್ಮನ್ನು ಆಯ್ಕೆ ಮಾಡಿದ ನಮ್ಮನ್ನೇ ಈಗ ನೀವು ಈ ದೇಶಕ್ಕೆ ಸೇರಿದವನು ಅಂತ ಸಾಬೀತು ಪಡಿಸು, prove ಮಾಡು ಅಂತ ಕೇಳ್ತಾ ಇದ್ದೀರಲ್ಲ? ಇದು ಸರೀನಾ? ನ್ಯಾಯನಾ?

ಮತ್ತೂ ಕೇಳಬೇಕಾಗಿದೆ- ನೀವು ನಮ್ಮ ಮತ ಪಡೆಯಲು ಮತದಾರರಿಗೆ ಏನೇನು ಕನಸುಗಳನ್ನು ಮುಂದಿಟ್ಟಿರಿ! ಬಣ್ಣ ಬಣ್ಣದ ಕನಸುಗಳನ್ನು ಮುಂದಿಟ್ಟರಿ. ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಸ್ತೀನಿ ಅಂದಿರಿ! ಮಾಡಿದ್ದೇನು? ಇರೋ ಬರೋ ಉದ್ಯೋಗಗಳನ್ನೇ ಮುಳುಗಿಸಿದ್ದೀರಿ. ರೈತರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸು ಜಾರಿ ಮಾಡ್ತೀನಿ ಅಂದಿರಿ. ಅದರ ಸುಳಿವೇ ಇಲ್ಲ. ರೈತರು ಮತ್ತು ಗ್ರಾಮೀಣ ಜನತೆ ಮಾತ್ರವಲ್ಲ ಎಲ್ಲರ ಬದುಕು ಬೆಂಕಿಗೆ ಬಿದ್ದಂತೆ ಆಗಿದೆ. ನೆರೆ ಬರದಿಂದ ನಾಡು ಕೊಚ್ಚಿ ಹೋಗುತ್ತಿದ್ದಾಗ ತಾವು ಪರಿಹಾರ ನೀಡದೆ ಕಠೋರವಾಗಿ ನಡೆದುಕೊಂಡಿರಿ. ಇದು ಜನ ನಾಯಕನಿಗೆ ಯೋಗ್ಯ ನಡೆಯೆ?

ಅಷ್ಟೇಕೆ ನಿಮಗೆ ನೆನಪಿದೆಯೋ ನೆನಪಿಲ್ಲವೊ ನಮಗೆ ಗೊತ್ತಿಲ್ಲ. ಆದರೆ ನಮಗೆ ನೆನಪಿದೆ. ಕಪ್ಪು ಹಣ ತಂದು ಎಲ್ಲರ ಅಕೌಂಟ್‌ಗೆ 15 ಲಕ್ಷ ಹಾಕುತ್ತೇನೆ ಎಂದು ನೋಟ್ ಬ್ಯಾನ್ ಮಾಡಿ ಜನರು ತಾವು ಇಟ್ಟಿದ್ದ ಹಣಕ್ಕಾಗಿ ಕ್ಯೂನಲ್ಲಿ ನಿಂತು ಎಷ್ಟೊ ಜನ ಸತ್ತರು. ಸಾಲದು ಎಂಬಂತೆ ಈಗ ಎನ್‌ಪಿಆರ್, ಎನ್‌ಆರ್‌ಸಿ, ಸಿಎಎ ಜಾರಿಗೆ ಬಂದರೆ ಆಗ ಜನರು ತಮ್ಮ ಪೌರತ್ವ ಸಾಬೀತು ಪಡಿಸಲು ವರ್ಷಾನುಗಟ್ಟಲೆ ಅಲೆಯುವಂತಹ ಧಾರುಣ ವಾತಾವರಣ ದೇಶದ ತುಂಬ ಉಂಟಾಗುತ್ತದೆ. ಇದು ಭಾರತಕ್ಕೆ ಬೇಕಾಗಿದೆಯೆ? ಸರ್ಕಾರಕ್ಕೆ ತನ್ನ ವಿಫಲತೆ ಮುಚ್ಚಿಕೊಳ್ಳಲು ಬೇಕಾಗಿರಬಹುದು. ಜನರು ಪೌರತ್ವ ರುಜುವಾತು ಪಡಿಸಲು ಅಲೆಯುತ್ತಿರಲಿ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಕ್ಕೆ ತಲೆ ಕೆಡಿಸಿಕೊಳ್ಳದಿರಲಿ ಎಂದು ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿದೆ ಎಂದು ಕಾಣುತ್ತದೆ. ಇದೆಲ್ಲಾ ಜನಸಮುದಾಯಕ್ಕೆ ಬೇಕಾಗಿದೆಯೆ? ಮೋದಿಯವರು ಜನರ ಮನಸ್ಸಿಗೆ ಕೊಟ್ಟಿದ್ದು ಕನಸು. ಆದರೆ ಜನರ ಬದುಕಿಗೆ ನೀಡಿದ್ದು ದುಃಸ್ವಪ್ನ.

ಒಂದು ಜಾನಪದ ಗೀತೆ ಇದೆ- ‘ಜವರಾಯ ಬಂದರೆ ಬರಿಗೈಲಿ ಬರಲಿಲ್ಲ, ಕುಡುಗೋಲು ಕೈಲಿ ಹಿಡಿದು ಬಂದ, ಒಳ್ಳೊಳ್ಳೆ ಮರವ ಕಡಿತಾ ತಾ ಬಂದ”. ಈ ರೀತಿ ನಡೀತಾ ಇದೆ ಮೋದಿಶಾ ಆಳ್ವಿಕೆ. ಸ್ವಾತಂತ್ರ್ಯ ಪಡೆದ ನಂತರ ಕಟ್ಟಿದ್ದ ಒಳ್ಳೊಳ್ಳೆ ಸಂಸ್ಥೆಗಳು, ಸಾರ್ವಜನಿಕ ಆಸ್ತಿಪಾಸ್ತಿ, ನೈಸರ್ಗಿಕ ಸಂಪತ್ತು, ಮತಧರ್ಮಗಳ ನಡುವೆ ಇದ್ದ ಸೌಹಾರ್ದಯುತ ಸಂಬಂಧ ಎಲ್ಲವನ್ನೂ ಕೆಡವಲಾಗುತ್ತಿದೆ. ಕಟ್ಟುವ ಬದಲು ಕಟ್ಟಿರುವುದನ್ನೇ ಕೆಡವಲಾಗುತ್ತಿದೆ.

ಈಗ ಎನ್‌ಪಿಆರ್, ಎನ್‌ಆರ್‌ಸಿ, ಸಿಎಎ ಜಾರಿಗೆ ತಂದು ಪೌರತ್ವ ನಿರ್ಧಾರಕ್ಕೆ ಧರ್ಮವನ್ನು ಪರಿಗಣಿಸಿ ಸಂವಿಧಾನದ ಧರ್ಮ ನಿರಪೇಕ್ಷ ಆಶಯಕ್ಕೆ ಚ್ಯುತಿ ತರಲಾಗಿದೆ. ಗೋಡ್ಸೆ ಗಾಂಧಿ ಕಾಲಿಗೆ ನಮಸ್ಕರಿಸಿ, ಆಮೇಲೆ ಗಾಂಧಿ ಹೃದಯಕ್ಕೆ ಗುಂಡು ಹೊಡೆಯುತ್ತಾನೆ. ಮೋದಿಯವರೂ ಪ್ರಧಾನಿಯಾದಾಗ ಸಂವಿಧಾನಕ್ಕೆ ವಿನಮ್ರವಾಗಿ ಬಗ್ಗಿ ನಮಸ್ಕರಿಸುತ್ತಾರೆ. ನಮಸ್ಕರಿಸಿ, ಸಂವಿಧಾನದ ಆಶಯಕ್ಕೆ ಗುಂಡು ಹೊಡೆದುಬಿಟ್ಟರು.

ಈಗ ಸಂವಿಧಾನದ ಮೌಲ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ, ನಾಳೆ ಬದುಕಿ ಬಾಳಬೇಕಾದ ವಿದ್ಯಾರ್ಥಿ ಯುವಜನತೆ ಮುನ್ನೆಲೆಗೆ ಬಂದಿದೆ. We, the People of India ಅಂದರೆ ನಾವು ಭಾರತೀಯರು 99% v/s 1% ಕೋಮುವಾದಿಗಳ ನಡುವೆ ಸಂಘರ್ಷ ಎಂದು ಕೂಗಿ ಕೂಗಿ ಹೇಳುತ್ತಿದೆ. ಇಂದು ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಸಾಮರಸ್ಯ, ಸಹನೆ, ಪ್ರೀತಿ ಬೆಳೆಸಬೇಕಾಗಿದೆ. ದೇಶವನ್ನು ಮತ್ತೆ ಕಟ್ಟಬೇಕಾಗಿದೆ. ಇದಕ್ಕಾಗಿ ವಿದ್ಯಾರ್ಥಿ ಯುವಜನತೆ ಪಣ ತೊಟ್ಟಿದ್ದಾರೆ. ನಾವೀಗ ಜೊತೆಗೂಡಬೇಕಾಗಿದೆ.

  • ದೇವನೂರ ಮಹಾದೇವ
  • ಕೃಪೆ: ಸಂವಾದ ಮಾಸಪತ್ರಿಕೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...