ಕಳೆದ ಕೆಲವು ದಿನಗಳಿಂದ ಬೆಂಗಳೂರಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ 100 ಕೆರೆಗಳು ಭರ್ತಿಯಾಗಿವೆ ಎಂದು ವರದಿಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು ಮಾತನಾಡಿ, ಕೆರೆಗಳು ಅಪಾಯದ ಅಂಚಿನಲ್ಲಿದ್ದು, ಇನ್ನೂ ಕೂಡಾ ಮಳೆಯಾದರೆ ಪ್ರವಾಹ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರವಾಹದ ಭೀತಿ
”ಸದ್ಯ ನಗರದಲ್ಲಿ ನರೆಯಾಗಿದ್ದು ಕೆರೆಗಳು ತುಂಬಿದ ಕಾರಣಕ್ಕೆ ಅಲ್ಲ, ಬದಲಾಗಿ ಮುಚ್ಚಿರು ಚರಂಡಿ ಮತ್ತು ಒತ್ತುವರಿಯ ಕಾರಣಕ್ಕೆ ಆಗಿದೆ. ನಗರದ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಇದೇ ಮೊದಲಲ್ಲ. ಆದರೆ ಮಳೆಯ ತೀವ್ರತೆ ಇದೇ ರೀತಿ ಮುಂದುವರಿದರೆ ತೊಂದರೆಯಾಗಲಿದೆ” ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಂಗಳವಾರದವರೆಗೆ ಸುಮಾರು 80-85 ಕೆರೆಗಳು ತುಂಬಿದ್ದವು, ಆದರೆ ಈಗ ಬುಧವಾರದಂದು ಇದರ ಸಂಖ್ಯೆ 100 ಕ್ಕೆ ತಲುಪಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಕ್ಷೇತ್ರ ಎಂಜಿನಿಯರ್‌ಗಳಿಂದ ನಿಯಮಿತವಾಗಿ ಗ್ರೌಂಡ್ ರಿಪೋರ್ಟ್ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಕಲ್ಕೆರೆ, ರಾಮಾಪುರ ಸೇರಿದಂತೆ ಯಲಹಂಕ ಮತ್ತು ಮಹದೇವಪುರದ ಎಲ್ಲ ಸಣ್ಣ ಮತ್ತು ಮಧ್ಯಮ ಗಾತ್ರದ ಕೆರೆಗಳು ತುಂಬಿವೆ. ನಗರದ ಇತರ ಭಾಗಗಳಾದ ಮಡಿವಾಳ, ಬನ್ನೇರುಘಟ್ಟದ ಕೆರೆಗಳೂ ತುಂಬಿವೆ ಎಂದು ಅವರು ಹೇಳಿದ್ದಾರೆ.
ಬೊಮ್ಮನಹಳ್ಳಿಯಂತೆ ಸುಮಾರು 10-15 ಕೆರೆಗಳು ಇನ್ನೂ ತುಂಬಿಲ್ಲ. ಅದರ ಮೇಲೂ ತೀವ್ರ ನಿಗಾ ಇರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 80 ರಷ್ಟು ಕೆರೆಗಳ ಹೂಳು ತೆಗೆದು ಸ್ವಚ್ಛಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಉಳಿದವುಗಳು ಭರ್ತಿಯಾಗಿರುವುದರಿಂದ ಈಗ ಕೆಲಸ ಕಷ್ಟಕರವಾಗಿದೆ ಅವರು ತಿಳಿಸಿದ್ದಾರೆ.
ಈ ನಡುವೆ, ಭಾರಿ ಮಳೆಗೆ ಜಲಾವೃತಗೊಂಡಿರುವ ನಗರದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಪ್ರದೇಶಕ್ಕೆ ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದಾರೆ. ಭಾರಿ ಮಳೆಯ ಕಾರಣಕ್ಕೆ ಪ್ರವಾಹ ಇದ್ದರೂ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 20 ಫ್ಲ್ಯಾಟ್‌ಗಳ ಮಾಲೀಕರು ಒಳಗೆ ಬೀಗ ಜಡಿದು ತೆರವಿಗೆ ನಿರಾಕರಿಸಿದ್ದರಿಂದ ಬಾಗಿಲು ಒಡೆದು ಒಳನುಗ್ಗುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಸೂಚಿಸಿದ್ದಾರೆ. ಪ್ರವಾಹದ ಭೀತಿ
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, “95%ದಷ್ಟು ತೆರವು ಕಾರ್ಯ ಪೂರ್ಣಗೊಂಡಿದ್ದು, 5%ದಷ್ಟು ಮಾತ್ರ ಬಾಕಿ ಇದೆ. 603 ಫ್ಲಾಟ್‌ಗಳಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕೇಂದ್ರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಾಗಿವೆ. ಹೆಚ್ಚಿನವರನ್ನು ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದ್ದಾರೆ. ಸ್ಥಳಾಂತರಕ್ಕೆ ನಿರಾಕರಿಸಿದ
ಅಪಾರ್ಟ್‌ಮೆಂಟ್‌ನ ಆಡಳಿತದೊಂದಿಗೆ ಮಾತುಕತೆ ನಡೆಸಿ ತುರ್ತು ಕಾರ್ಯಾಚರಣೆಗಾಗಿ ಬಿಬಿಎಂಪಿ ಅಪಾರ್ಟ್ಮೆಂಟ್ ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
“ನೀರು, ವಿದ್ಯುತ್ ಮತ್ತು ಆಹಾರ ಇಲ್ಲದೆ, ಮನೆಯೊಳಗೆ ಬೀಗ ಹಾಕಿಕೊಂಡಿರುವ ಸುಮಾರು 20 ಫ್ಲ್ಯಾಟ್ ಇವೆ. ಅದರಲ್ಲಿರುವ ಜನರ ಆರೋಗ್ಯಕ್ಕೆ ಅಪಾಯ ಇರುವುದರಿಂದ ಒಕ್ಕಲಿಗರ ಸಂಘ ಮತ್ತು ಪೊಲೀಸರ ನೆರವು ಪಡೆದು ಬಾಗಿಲು ಒಡೆದು ಅವರನ್ನು ರಕ್ಷಿಸಲು ಬಿಬಿಎಂಪಿಗೆ ಆದೇಶ ನೀಡಲಾಗಿದೆ’’ ಎಂದು ಶಿವಕುಮಾರ್ ಹೇಳಿದ್ದಾರೆ.
ನಿವಾಸಿಗಳು ತಮ್ಮ ಮನೆಗಳೊಂದಿಗೆ ಇರುವ ಭಾವನಾತ್ಮಕ ಸಂಬಂಧದ ಕಾರಣಕ್ಕೆ ಅದರಿಂದ ಹೊರಗೆ ಬರಲು ನಿರಾಕರಿಸಿರಬಹುದು, ಆದರೆ ಅವರ ಸುರಕ್ಷತೆಯೂ ನಮಗೆ ಮುಖ್ಯ ಎಂದು ಅವರು ಹೇಳಿದ್ದಾರೆ. ಅವರನ್ನು ಒಂದು ವಾರದವರೆಗೆ ಹತ್ತಿರದ ಹೋಟೆಲ್‌ಗಳಲ್ಲಿ ಇರಿಸಲಾಗುವುದು ಮತ್ತು ಪರಿಸ್ಥಿತಿ ಸಹಜವಾದ ನಂತರ ಅವರನ್ನು ತಮ್ಮ ಮನೆಗಳಿಗೆ ಹಿಂತಿರುಗುವಂತೆ ಕೇಳಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಮಳೆ : ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರು ಜನತೆ
ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಮಳೆ : ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರು ಜನತೆ


