ಪ್ರತಿ ಶುಕ್ರವಾರ ಮಧ್ಯಾಹ್ನದ ನಮಾಜಿಗೆ ಮೊದಲು ಮಸೀದಿಗಳಲ್ಲಿ ನೀಡುವ ಧರ್ಮೋಪದೇಶದ ವಿಷಯವನ್ನು ವಕ್ಫ್ ಬೋರ್ಡ್‌ಗೆ ತಿಳಿಸುವಂತೆ ಮತ್ತು ಅದಕ್ಕಾಗಿ ಅನುಮತಿ ಪಡೆಯುವಂತೆ ಬಿಜೆಪಿ ಆಡಳಿತದ ಛತ್ತೀಸ್‌ಗಢ ರಾಜ್ಯ ವಕ್ಫ್ ಬೋರ್ಡ್ ರಾಜ್ಯದ ಎಲ್ಲಾ ಮಸೀದಿಗಳ ಮುತವಲ್ಲಿಗಳಿಗೆ ಸುತ್ತೋಲೆ ಹೊರಡಿಸಿದೆ. ಈ ರೀತಿಯ ಸುತ್ತೋಲೆ ದೇಶದಲ್ಲೆ ಮೊದಲ ಬಾರಿಗೆ ನೀಡಲಾಗಿದೆ. ಮಸೀದಿಯ ಶುಕ್ರವಾರದ
ಮುಸ್ಲಿಮರು ದೇವರ ಹೆಸರಿನಲ್ಲಿ ಅರ್ಪಿಸಿ ವಕ್ಫ್ ಮಾಡಿರುವ ಆಸ್ತಿಗಳನ್ನು ನಿರ್ವಹಿಸಲು ಮತ್ತು ಅದನ್ನು ರಕ್ಷಿಸಲು ಸರ್ಕಾರಗಳು ರಚಿಸುವ ಮಂಡಳಿಯಾಗಿದೆ ವಕ್ಫ್ ಬೋರ್ಡ್. ಮಸೀದಿಯ ಶುಕ್ರವಾರದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಪ್ರತಿ ಶುಕ್ರವಾರ ಜುಮ್ಮಾ ನಮಾಝ್‌ಗೆ ಮುನ್ನ ಮಾಡುವ ಭಾಷಣಗಳಲ್ಲಿ ಯಾವುದೇ ರಾಜಕೀಯ ಬಣ್ಣ ಇರಬಾರದು. ಕೆಲವೊಮ್ಮೆ, ಮಸೀದಿಗಳಿಂದ ಫತ್ವಾಗಳನ್ನು ನೀಡಲಾಗುತ್ತದೆ ಅಥವಾ ಕೆಲವು ರಾಜಕೀಯ ಪಕ್ಷಗಳಿಗೆ ಬೆಂಬಲವನ್ನು ನೀಡಲಾಗುತ್ತದೆ.” ಎಂದು ಛತ್ತೀಸ್‌ಗಢ ವಕ್ಫ್ ಮಂಡಳಿಯ ಅಧ್ಯಕ್ಷ ಸಲೀಂ ರಾಜ್ ಶನಿವಾರ ತಿಳಿಸಿದ್ದಾರೆ.
“ಮಸೀದಿಗಳು ತಮ್ಮನ್ನು ಧಾರ್ಮಿಕ ಉಪದೇಶ ಅಥವಾ ಆಚರಣೆಗಳಿಗೆ ಸೀಮಿತಗೊಳಿಸಬೇಕು. ಅದು ರಾಜಕೀಯ ಅಡ್ಡ ಆಗಬಾರದು. ಹಾಗಾಗಿ, ತಮ್ಮ ಧರ್ಮೋಪದೇಶದ ವಿಷಯಗಳ ಬಗ್ಗೆ ವಕ್ಫ್ ಬೋರ್ಡ್‌ಗೆ ತಿಳಿಸಲು ಮತ್ತು ನಮ್ಮ ಒಪ್ಪಿಗೆ ಪಡೆಯುವಂತೆ ನಾನು ಎಲ್ಲಾ ಮುತವಲ್ಲಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಮಸೀದಿಗಳು ಮತ್ತು ದರ್ಗಾಗಳು ವಕ್ಫ್ ಮಂಡಳಿಯ ವ್ಯಾಪ್ತಿಯಲ್ಲಿ ಬರುವುದರಿಂದ ಅವರು ತಮ್ಮ ಸುತ್ತೋಲೆಯನ್ನು ಮೀರುವಂತಿಲ್ಲ ಎಂದು ಅವರು ವಾದಿಸಿದ್ದಾರೆ. ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ, ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಇಮಾಮ್‌ಗಳನ್ನು ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.
ವಕ್ಫ್ ಬೋರ್ಡ್‌ನ ಈ ಸುತ್ತೋಲೆಗೆ ವಿರೋಧ ಪಕ್ಷದ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಈ ನಿರ್ದೇಶನ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಬಣ್ಣಿಸಿದೆ.
“ರಾಜ್ಯ ವಕ್ಫ್ ಮಂಡಳಿಯು ವಿನಾಕಾರಣ ತನ್ನ ಮಿತಿಯನ್ನು ಮೀರಿದೆ. ವಕ್ಫ್ ಆಸ್ತಿಗಳನ್ನು ಮೇಲ್ವಿಚಾರಣೆ ಮಾಡಲು ಉದ್ದೇಶದಿಂದ ವಕ್ಫ್ ಬೋರ್ಡ್ ರಚಿಸಲಾಗಿದೆ. ಅದು ಬಿಟ್ಟು ಧಾರ್ಮಿಕ ಬೋಧಕರಿಗೆ ಅಥವಾ ಇಮಾಮ್‌ಗಳಿಗೆ ಷರತ್ತುಗಳನ್ನು ನಿರ್ದೇಶಿಸುವುದು ಅದರ ಕೆಲಸವಲ್ಲ” ಎಂದು ಕಾಂಗ್ರೆಸ್ ಮೀಡಿಯಾ ಸೆಲ್‌ನ ಅಧ್ಯಕ್ಷ ಸುಶೀಲ್ ಆನಂದ್ ಶುಕ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ‘ಎಂ ಫಾಕ್ಸ್’ ಮೊದಲ ಪ್ರಕರಣ ಪತ್ತೆ; ಖಚಿತಪಡಿಸಿದ ಯುಎಸ್
ಕ್ಯಾಲಿಫೋರ್ನಿಯಾದಲ್ಲಿ ‘ಎಂ ಫಾಕ್ಸ್’ ಮೊದಲ ಪ್ರಕರಣ ಪತ್ತೆ; ಖಚಿತಪಡಿಸಿದ ಯುಎಸ್


