1947ರಲ್ಲಿ ದೇಶ ವಿಭಜನೆಗೆ ಕಾರಣವಾದ ಎರಡು ರಾಷ್ಟ್ರಗಳ ಸಿದ್ಧಾಂತವನ್ನು 1924 ರಲ್ಲಿ ಮಂಡಿಸಿದವರು ವಿ.ಡಿ. ಸಾವರ್ಕರ್ ಅವರೇ ಹೊರತು ಮಹಮ್ಮದ್ ಅಲಿ ಜಿನ್ನಾ ಅಲ್ಲ ಎಂದು ಡಿಎಂಕೆ ಸಂಸದ ಎ. ರಾಜಾ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಶನಿವಾರ ಲೋಕಸಭೆಯಲ್ಲಿ ಸಂವಿಧಾನದ 75ನೇ ವರ್ಷಾಚರಣೆ ಕುರಿತ ಚರ್ಚೆಯ ಬಗ್ಗೆ ಅವರು ಮಾತನಾಡುತ್ತಿದ್ದರು.
ಈ ವೇಳೆ ಮಾತನಾಡಿದ ಅವರು, “ಸಂವಿಧಾನಕ್ಕೆ ವಲಭಭಾಯಿ ಪಟೇಲ್, ಸರೋಜಿನಿ ನಾಯ್ಡು, ನೆಹರೂ ಸೇರಿದಂತೆ ಹಲವಾರು ಜನರು ಕೊಡುಗೆ ನೀಡಿದ್ದಾರೆ. ಆದರೆ, ನನ್ನ ಒಂದೇ ಒಂದು ಪ್ರಶ್ನೆ ಏನೆಂದರೆ, ಬಿಜೆಪಿಯ ಮಾತೃಸಂಸ್ಥೆಯಾದ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಸಂವಿಧಾನ ರಚನೆಗೆ ನೀಡಿರುವ ಕೊಡುಗೆಯ ಒಂದೇ ಒಂದು ಸಂದರ್ಭವನ್ನು ತೋರಿಸಿ” ಎಂದು ಅವರು ಸವಾಲೆಸೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸಚಿವರಾದ ರಾಜನಾಥ್ ಸಿಂಗ್ ಮತ್ತು ಕಿರಣ್ ರಿಜಿಜು ಹಾಗೂ ಎಲ್ಲಾ ಆಡಳಿತ ಪಕ್ಷದ ಸಂಸದರು ಸಂವಿಧಾನಕ್ಕೆ, ಸಮಾಜವಾದಕ್ಕೆ, ಜಾತ್ಯಾತೀತತೆಗೆ ತಲೆಬಾಗಿದ್ದು ಇಡಿ ದೇಶಕ್ಕೆ ಖುಷಿಯಾಗಿರಬಹುದು, ಆದರೆ ಅವೆಲ್ಲವೂ ಕಪಟವಾಗಿದ್ದು, ಅವರ ಈ ಹಿಂದಿನ ನಡವಳಿಗೆ ಅದನ್ನು ಸಾಬೀತು ಮಾಡುತ್ತದೆ” ಎಂದು ರಾಜಾ ಹೇಳಿದ್ದಾರೆ.
ಬಿಜೆಪಿಯು ಸಂವಿಧಾನವನ್ನು ಬದಲಾಯಿಸುತ್ತೇವೆ ಮತ್ತು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುತ್ತೇವೆ ಎಂದು ಹೇಳಿದೆ ಎಂದು ರಾಜ ಅವರು ಹೇಳಿದ್ದಾರೆ. ಈ ವೇಳೆ ಲೋಕಸಭೆಯಲ್ಲಿ ಗೊಂದಲ ಉಂಟಾಗಿದ್ದು, ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಡಿಎಂಕೆ ಸಂಸದ ಎ. ರಾಜಾ ಅವರ ಅವರ ಹೇಳಿಕೆಯನ್ನು ದೃಢೀಕರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎ. ರಾಜಾ ಅವರು, “ನಿಮ್ಮ ಪಕ್ಷದ ಉಪಾಧ್ಯಕ್ಷರು – ಚುನಾವಣೆಯ ಮೊದಲು ಸಂದರ್ಶನವೊಂದರಲ್ಲಿ – ನಾವು (ಬಿಜೆಪಿ) 400 ಗಳಿಸಿದರೆ ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ ಮತ್ತು ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುತ್ತೇವೆ ಹೇಳಿದ್ದಾರೆ” ಎಂದು ಹೇಳಿದ್ದಾರೆ.
1947 ರಲ್ಲಿ ದೇಶ ವಿಭಜನೆಗೆ ಕಾರಣವಾದ ಎರಡು ರಾಷ್ಟ್ರಗಳ ಸಿದ್ಧಾಂತವನ್ನು 1924 ರಲ್ಲಿ ಮಂಡಿಸಿದವರು ವೀರ್ ಸಾವರ್ಕರ್ ಹೊರತು ಮಹಮ್ಮದ್ ಅಲಿ ಜಿನ್ನಾ ಅಲ್ಲ ಎಂದು ರಾಜ ಹೇಳಿದ್ದಾರೆ.
ಶನಿವಾರ ಲೋಕಸಭೆಯಲ್ಲಿ ಸಂವಿಧಾನದ 75ನೇ ವರ್ಷಾಚರಣೆ ಕುರಿತ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸುವ ನಿರೀಕ್ಷೆಯಿದೆ. ಲೋಕಸಭೆಯು ಸಂವಿಧಾನದ 75 ನೇ ವರ್ಷದ ಆರಂಭದ ಸ್ಮರಣಾರ್ಥ ಡಿಸೆಂಬರ್ 13 ರಂದು ಎರಡು ದಿನಗಳ ಚರ್ಚೆಯನ್ನು ಪ್ರಾರಂಭಿಸಿತು. ಶುಕ್ರವಾರದಂದು, ಸಂವಿಧಾನದ ಮೇಲಿನ ಚರ್ಚೆಯು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿಯವರ ಭಾಷಣಗಳಿಗೆ ಸಾಕ್ಷಿಯಾಯಿತು.
ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ: ಬಹುಮತ ಕಳೆದುಕೊಂಡಾಗ ಪರಿಹಾರವೇನು; ಸಿದ್ದರಾಮಯ್ಯ ಪ್ರಶ್ನೆ
ಒಂದು ರಾಷ್ಟ್ರ, ಒಂದು ಚುನಾವಣೆ: ಬಹುಮತ ಕಳೆದುಕೊಂಡಾಗ ಪರಿಹಾರವೇನು; ಸಿದ್ದರಾಮಯ್ಯ ಪ್ರಶ್ನೆ


