ರಾಷ್ಟ್ರೀಯ ನಾಟಕ ಶಾಲೆ (NSD) ಅಧ್ಯಕ್ಷರಾಗಿ ಮಾಜಿ ಬಿಜೆಪಿ ಸಂಸದ ನಟ ಪರೇಶ್ ರಾವಲ್‌ರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಹೇಳಿದ್ದಾರೆ.
ಸಚಿವ ಪ್ರಹ್ಲಾದ್ ಸಿಂಗ್ “ಪ್ರಖ್ಯಾತ ಕಲಾವಿದ ಪರೇಶ್ ರಾವಾಲ್ ಅವರನ್ನು NSD ಯ ಅಧ್ಯಕ್ಷರಾಗಿ ನೇಮಿಸಿದ್ದಾರೆ. ಅವರ ಪ್ರತಿಭೆಯ ಲಾಭ ದೇಶದ ಕಲಾವಿದರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಹಾರ್ದಿಕ ಶುಭಾಶಯ” ಎಂದು ಟ್ವೀಟ್ ಮಾಡಿದ್ದಾರೆ.
प्रख्यात कलाकार मा @SirPareshRawal जी को महामहिम @rashtrapatibhvn द्वारा @nsd_india का अध्यक्ष नियुक्त किया है।उनकी प्रतिभा का लाभ देश के कलाकारों एवं छात्रों को मिलेगा ।हार्दिक शुभकामनाएँ @PMOIndia @JPNadda @incredibleindia @tourismgoi @MinOfCultureGoI @BJP4India @BJP4MP pic.twitter.com/ONdM2sB3g0
— Prahlad Singh Patel (@prahladspatel) September 10, 2020
ಪದ್ಮಶ್ರೀ ಗೌರವ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಪರೇಶ್ ರಾವಲ್ ಸಿನಿಮಾದೊಂದಿಗೆ ರಂಗಭೂಮಿಯ ನಂಟನ್ನೂ ಹೊಂದಿದ್ದಾರೆ.
ಇದನ್ನೂ ಓದಿ: ಬಾದಲ್ ಸರ್ಕಾರ್‌ರವರ ‘ಏವಂ ಇಂದ್ರಜಿತ್’: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ
NSD ಟ್ವಿಟ್ಟರ್ ಹ್ಯಾಂಡಲ್ ಪರೇಶ್ ನೇಮಕಕ್ಕೆ ಸ್ವಾಗತ ಕೋರಿದೆ, “ಹೊಸದನ್ನು ಸಾಧಿಸಲು ಅವರ ಮಾರ್ಗದರ್ಶನವನ್ನು NSD ಕುಟುಂಬವು ಸ್ವಾಗತಿಸುತ್ತದೆ” ಎಂದು ಹೇಳಿದೆ.
We are glad to inform " Hon’ble President of India @rashtrapatibhvn has appointed renowned actor & Padma Shri @sirpareshrawal as chairman of @nsd_india."NSD family welcome the legend to shower his guidance to NSD for achieving new heights.@prahladspatel @MinOfCultureGoI
— National School of Drama (@nsd_india) September 10, 2020
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರಾಗಿ ತಮ್ಮ ಪಾತ್ರವು ಸವಾಲಿನದಾಗಿರಲಿದೆ, ಆದರೆ ಅಷ್ಟೇ ಮೋಜಿನದೂ ಸಹ ಆಗಿರಲಿದೆ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ರಾವಲ್ 2014 ರ ಲೋಕಸಭಾ ಚುನಾವಣೆಯಲ್ಲಿ ಅಹಮದಾಬಾದ್ ಪೂರ್ವ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದ್ದರು.
ಇದನ್ನೂ ಓದಿ: ಅಯೋಧ್ಯೆಯಿಂದ ಪ್ರೇರಿತರಾಗಿ ಕರ್ನಾಟಕದ ಅರ್ಚಕರು ಪ್ರತಿಭಟನೆ ನಡೆಸಿದರೆ?; ಫ್ಯಾಕ್ಟ್‌ಚೆಕ್


