Homeಕರೋನಾ ತಲ್ಲಣಪ್ರವಾಸೋದ್ಯಮಕ್ಕೆ ಚಾಲನೆ: ಅಕ್ಟೋಬರ್‌ನಿಂದ ಕೈಬೀಸಿ ಕರೆಯಲಿದೆ ಕೇರಳ..!

ಪ್ರವಾಸೋದ್ಯಮಕ್ಕೆ ಚಾಲನೆ: ಅಕ್ಟೋಬರ್‌ನಿಂದ ಕೈಬೀಸಿ ಕರೆಯಲಿದೆ ಕೇರಳ..!

- Advertisement -
- Advertisement -

ಕೊವೀಡ್-19 ನಿಬಂಧನೆಗಳಿಂದಾಗಿ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮ ಮತ್ತೆ ಜೀವ ಪಡೆದುಕೊಳ್ಳುತ್ತಿವೆ. ಕೇರಳ ಸರ್ಕಾರ ಅಕ್ಟೋಬರ್‌ನಿಂದ ಪ್ರವಾಸೋದ್ಯಮ ಆರಂಭಿಸಲು ನಿರ್ಧರಿಸಿದೆ.

ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಮಾತನಾಡಿ “ಪ್ರವಾಸೋದ್ಯಮ ಇಲಾಖೆಯು ಮತ್ತೆ ರಾಜ್ಯಕ್ಕೆ ಪ್ರಯಾಣಿಕರನ್ನು ಆಕರ್ಷಿಸುವ ಅಭಿಯಾನಗಳನ್ನು ಸಿದ್ಧಪಡಿಸುವಲ್ಲಿ ತೊಡಗಿದೆ. ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಎಚ್ಚರಿಕೆಗಳೊಂದಿಗೆ ಪ್ರವಾಸಕ್ಕೆ ಅನುಮತಿ ನೀಡಲಾಗುವುದು” ಎಂದಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಪ್ರವಾಸೋದ್ಯಮ ಸಮಿತಿ ಸದಸ್ಯರೊಂದಿಗೆ ನಡೆದ ಆನ್‌ಲೈನ್ ಸಭೆಯಲ್ಲಿ ಈ ವಿಚಾರವನ್ನು ತಿಳಿಸಿದ ಸಚಿವರು, ಈ ಸಂಬಂಧದ ಕಡತವನ್ನು ಮುಖ್ಯಮಂತ್ರಿಗೆ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: “ಹಿಂದಿ ತೆರಿಯಾದು ಪೊಡಾ (ಹಿಂದಿ ಗೊತ್ತಿಲ್ಲ, ಹೋಗೋ)” ಟೀಶರ್ಟ್ ವೈರಲ್;‌ ತಯಾರಿಕರಿಗೆ ಬೆದರಿಕೆ!‌

ದೀಪಾವಳಿ ರಜಾದಿನಗಳಿಗೆ ಬರುವ ಇತರ ರಾಜ್ಯಗಳ ಪ್ರವಾಸಿಗರು ಮತ್ತು ಡಿಸೆಂಬರ್-ಜನವರಿ ಋತುವಿನಲ್ಲಿ ಕೇರಳಕ್ಕೆ ಬರಲು ವಿದೇಶಿ ಪ್ರವಾಸಿಗರು ಬುಕಿಂಗ್ ಮಾಡುವುದರಿಂದ, ಕೇರಳದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪ್ರಾರಂಭಿಸಲು ನಿರ್ದಿಷ್ಟ ದಿನಾಂಕವನ್ನು ಘೋಷಿಸಬೇಕಾಗಿದೆ ಎಂದು ಕೈಗಾರಿಕಾ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರವಾಸೋದ್ಯಮ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಖಚಿತತೆ ಇದ್ದಲ್ಲಿ ಮಾತ್ರ ನಾವು ಬುಕಿಂಗ್ ತೆಗೆದುಕೊಳ್ಳಬಹುದು. ಪ್ರವಾಸೋದ್ಯಮವು ಪ್ರಮುಖ ಉದ್ಯಮವಾಗಿರುವ ಇತರ ರಾಜ್ಯಗಳು ಈಗಾಗಲೇ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿದೆ, ಈ ನಿಟ್ಟಿನಲ್ಲಿ ಕೇರಳವು ಸಹ ಮುಂದಾಗಬೇಕು ಎಂದು ಮನಿವಿ ಮಾಡಿದ್ದಾರೆ.

ಕೇರಳದ ಪ್ರವಾಸೋದ್ಯಮದ ಬೇಡಿಕೆಗಳಲ್ಲಿ ಪ್ರಮುಖವಾದುದ್ದು ಪ್ರವಾಸಿಗರಿಗೆ ಕ್ಯಾರೆಂಟೈನ್‌ನಿಂದ ವಿನಾಯಿತಿ ನೀಡಬೇಕು ಎಂಬುದುದಾಗಿದೆ. ಅವರನ್ನು ವ್ಯಾಪಾರ-ವಾಣಿಜ್ಯ ವ್ಯವಹಾರಗಳಿಗೆ ಬರುವ ಪ್ರವಾಸಿಗರಂತೆ ಪರಿಗಣಿಸಲು ಮನವಿ ಮಾಡಲಾಗಿದೆ. ಜೊತೆಗೆ ಈ ವಲಯದ ಉದ್ಯಮಿಗಳಿಗೆ ಸಾಲ ಮಂಜೂರು ಮಾಡುವಂತೆ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗೆ ಸರ್ಕಾರ ನಿರ್ದೇಶನ ನೀಡುವಂತೆ ಒತ್ತಾಯಿಸಿವೆ.

ಸರ್ಕಾರ ದಿನಾಂಕ ಘೋಷಿಸದಿದ್ದರೂ ಅಕ್ಟೋಬರ್ ನಿಂದ ಪ್ರವಾಸೋದ್ಯಮಕ್ಕೆ ಚಾಲನೆ ನಿಡಲಾಗುವುದು ಎಂದು ತಿಳಿಸಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: PUBG ನಿಷೇಧ ಭಾರತದ ಆರ್ಥಿಕತೆಯನ್ನು ಹಾಳು ಮಾಡುತ್ತದೆ ಎಂದಿದ್ದರೆ ಅಮರ್ಥ್ಯ ಸೇನ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...