ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟ ಆರೋಪದಲ್ಲಿ ಬಿಜೆಪಿಯ ಮಾಜಿ ಪದಾಧಿಕಾರಿಯಾಗಿರುವ ಸಂತ್ರಸ್ತೆಯ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರ ಮತ್ತು ಆತನ ಸ್ನೇಹಿತರು ಸ್ವಂತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಅವಕಾಶ ಮಾಡಿಕೊಟ್ಟ ಆರೋಪವನ್ನು ಮಹಿಳೆ ಎದುರಿಸುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಈ ಹಿಂದೆ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಆರೋಪಿ ಮಹಿಳೆ, ಕೌಟುಂಬಿಕ ಕಲಹದ ನಂತರ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆಕೆಯ ಮಗ ತನ್ನ ತಂದೆಯೊಂದಿಗೆ ಇದ್ದ, ಆಕೆ ತನ್ನ ಮಗಳು ಮತ್ತು ಪ್ರಿಯಕರ ಸುಮಿತ್ ಪಟ್ವಾಲ್ ಜೊತೆ ವಾಸಿಸುತ್ತಿದ್ದರು.
ಅಪ್ರಾಪ್ತ ವಯಸ್ಸಿನ ಮಗಳು ತಂದೆಯ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಪುತ್ರಿಯ ಹತಾಶ ಮತ್ತು ವಿಮುಖ ಸ್ಥಿತಿಯನ್ನು ನೋಡಿದ ತಂದೆ ಆಕೆಯ ಜತೆ ಮಾತುಕತೆ ನಡೆಸಿದಾಗ ಭಯಾನಕ ಅನುಭವವನ್ನು ತಂದೆಯ ಜತೆ ಹಂಚಿಕೊಂಡಿದ್ದಾಳೆ. ಮಂಗಳವಾರ ಸಂಜೆ ತಂದೆ, ಮಗಳನ್ನು ರಾಣಿಪುರ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ.
“ಜನವರಿಯಲ್ಲಿ, ತನ್ನ ಪತ್ನಿ ಆಕೆಯ ಪ್ರಿಯಕರ ಸುಮಿತ್ ಪಟ್ವಾಲ್ ಮತ್ತು ಅವನ ಸ್ನೇಹಿತ ಶುಭಂ ಜೊತೆ ಬಿಎಚ್‌ಇಎಲ್ ಕ್ರೀಡಾಂಗಣ ಪ್ರದೇಶಕ್ಕೆ ಕಾರಿನಲ್ಲಿ ಮಗಳನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಮದ್ಯ ಸೇವಿಸಿದ ನಂತರ, ಇಬ್ಬರು ವ್ಯಕ್ತಿಗಳು ಅಪ್ರಾಪ್ತ ಮಗಳ ಮೇಲೆ ಆಕೆಯ ತಾಯಿಯ ಒಪ್ಪಿಗೆಯೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಗ್ರಾ, ವೃಂದಾವನ ಮತ್ತು ಹರಿದ್ವಾರದಲ್ಲಿರುವ ಹೋಟೆಲ್‌ಗಳಲ್ಲಿಯೂ ಸಹ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ ದೌರ್ಜನ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಮಗಳನ್ನು ಮತ್ತು ನನ್ನನ್ನು ಕೊಲೆ ಮಾಡುವುದಾಗಿ ಮಗಳಿಗೆ ಬೆದರಿಕೆ ಹಾಕಿದ್ದಾರೆ” ಎಂದು ಸಂತ್ರಸ್ತೆಯ ತಂದೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ವೈದ್ಯಕೀಯ ವರದಿಯು ಲೈಂಗಿಕ ದೌರ್ಜನ್ಯವನ್ನು ದೃಢಪಡಿಸಿದೆ. ಬುಧವಾರ, ಆರೋಪಿ ಮಹಿಳೆ ಮತ್ತು ಆಕೆಯ ಪ್ರಿಯಕರ ಸುಮಿತ್ ಪಟ್ವಾಲ್ ಅವರನ್ನು ಶಿವಮೂರ್ತಿ ಚೌಕ್ ಬಳಿ ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಶುಭಂಗಾಗಿ ಹುಡುಕಾಟ ಮುಂದುವರೆದಿದೆ” ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ಸಿಂಗ್ ದೋಭಾಲ್ ಹೇಳಿದ್ದಾರೆ.
ರಾಜಸ್ಥಾನ | ಮಡಕೆಯಿಂದ ನೀರು ಕುಡಿದ ದಲಿತ ಯುವಕನ ಮೇಲೆ ಸವರ್ಣೀಯರಿಂದ ಥಳಿತ


