2022ರಲ್ಲಿ ನಡೆದಿದ್ದ ಕೊಯಮತ್ತೂರು ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತೆ ನಾಲ್ವರನ್ನು ಬಂಧಿಸಿದೆ. ತಮಿಳುನಾಡಿನಾದ್ಯಂತ 27 ಸ್ಥಳಗಳಲ್ಲಿ ನಡೆಸಿದ ದಾಳಿಯ ವೇಳೆ ಈ ಬಂಧನ ನಡೆದಿದೆ.
ಬಂಧಿತರನ್ನು ಜಮೀಲ್ ಬಾಷಾ ಉಮರಿ, ಮೊಹಮ್ಮದ್ ಹುಸೇನ್ ಫೈಜಿ, ಇರ್ಷಾತ್, ಸೈಯದ್ ಅಬ್ದುರ್ ರೆಹಮಾನ್ ಉಮರಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎನ್‌ಐಎ 6 ಲ್ಯಾಪ್‌ಟಾಪ್‌ಗಳು, 25 ಸೆಲ್ ಫೋನ್‌ಗಳು, 34 ಸಿಮ್ ಕಾರ್ಡ್‌ಗಳು, ಹಲವಾರು ಎಸ್‌ಡಿ ಕಾರ್ಡ್‌ಗಳು ಮತ್ತು ಹಾರ್ಡ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 23, 2022ರಂದು ಕೊಯಮತ್ತೂರಿನ ಉದಕ್ಕಂನಲ್ಲಿ ಕೊಟ್ಟೈ ಈಶ್ವರನ್ ದೇವಸ್ಥಾನದ ಬಳಿ ಸ್ಫೋಟ ಸಂಭವಿಸಿದೆ. ದೀಪಾವಳಿಯ ದಿನದ ಸಂಜೆ ಜಮೇಶ ಮುಬಿನ್ ಎಂಬ ವ್ಯಕ್ತಿ ಚಲಾಯಿಸುತ್ತಿದ್ದ ಕಾರಿನಲ್ಲಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡ ನಂತರ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮುಬಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿ ಮಾರ್ಬಲ್‌ಗಳು, ಮೊಳೆಗಳು ಮತ್ತು ಇತರ ಚೂರುಗಳು ಇದ್ದವು ಎಂದು ತಿಳಿದುಬಂದಿದೆ.
ಬಳಿಕ ಕೊಯಮತ್ತೂರು ಪೊಲೀಸರು ಮುಬಿನ್ ನಿವಾಸದಿಂದ ಸಾಮಾನ್ಯವಾಗಿ ಬಾಂಬ್‌ಗಳನ್ನು ತಯಾರಿಸಲು ಬಳಸುವ ಪೊಟಾಷಿಯಂ ನೈಟ್ರೇಟ್ ಮತ್ತು ಅಲ್ಯೂಮಿನಿಯಂ ಪುಡಿ, ಇದ್ದಿಲು ಮತ್ತು ಸಲ್ಫರ್ ಸೇರಿದಂತೆ 75 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಮೊಹಮ್ಮದ್ ಥಲ್ಕಾ, ಮೊಹಮ್ಮದ್ ಅಸರುದ್ದೀನ್, ಮೊಹಮ್ಮದ್ ರಿಯಾಜ್, ಫಿರೋಜ್ ಇಸ್ಮಾಯಿಲ್, ಮೊಹಮ್ಮದ್ ನವಾಜ್ ಇಸ್ಮಾಯಿಲ್ ಮತ್ತು ಅಸ್ಫರ್ ಖಾನ್ ಎಂಬ ಆರು ಜನರನ್ನು ಬಂಧಿಸಿದ್ದರು.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಶಿಫಾರಸಿನ ಮೇರೆಗೆ ತನಿಖೆಯನ್ನು ಅಕ್ಟೋಬರ್ 27 ರಂದು ಎನ್ಐಎಗೆ ವರ್ಗಾಯಿಸಲಾಗಿತ್ತು.
2019ರಲ್ಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಮುಬಿನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ನಂತರ ಪ್ರಕರಣದಿಂದ ಕೈಬಿಡಲಾಗಿತ್ತು. ಆದರೆ ಅವರ ಚಲನವಲನವನ್ನು ರಾಜ್ಯ ಮತ್ತು ರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದವು. ಇಂಜಿನಿಯರಿಂಗ್ ಪದವೀಧರರಾಗಿದ್ದ 25 ವರ್ಷದ ಮುಬಿನ್‌ನ್ನು ಕೊಯಮತ್ತೂರು ಕಾರು ಸ್ಫೋಟ ಪ್ರಕರಣಲ್ಲಿ ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.
ಇದನ್ನು ಓದಿ: ರೈತರ ‘ದಿಲ್ಲಿ ಚಲೋ’: 2 ಕ್ರೀಡಾಂಗಣಗಳನ್ನು ಜೈಲನ್ನಾಗಿ ಸಿದ್ಧಪಡಿಸಿದ ಬಿಜೆಪಿ ಸರಕಾರ!


