ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ “ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ” ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಹಲವು ಅಡೆತಡೆ, ವಿರೋಧಗಳ ನಡುವೆಯೂ ದೆಹಲಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇಂದು ಬೆಳಿಗ್ಗೆಯೇ ಸಾವಿರಾರು ಮಹಿಳೆಯರು ಉಚಿತ ಪಾಸ್ ಪಡೆದು ಪ್ರಯಾಣಿಸಿ ಖುಷಿಪಟ್ಟಿದ್ದಾರೆ. ಬಸ್ ಪ್ರಯಾಣದ ಫೋಟೊ ಹಾಕಿ ಧನ್ಯವಾದ ತಿಳಿಸಿದ್ದಾರೆ.

ಇದೊಂದು ಸ್ಮಾರ್ಟ್ ಮತ್ತು ವಿಭಿನ್ನ ಚಿಂತನೆಯಾಗಿದೆ. ಇದಕ್ಕಾಗಿ ಅರವಿಂದ್ ಕೇಜ್ರಿವಾಲ್‌ರವರಿಗೆ ಅಭಿನಂದನೆಗಳು. ಅವರ ಒಂದು ಸಣ್ಣ ಕ್ರಮವು, ಮಹಿಳೆಯರ ಸುರಕ್ಷತೆ, ನಿರುದ್ಯೋಗ, ಟ್ರಾಫಿಕ್ ಜಾಮ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದೆ. ಸಾರ್ವಜನಿಕ ವಾಹನಗಳ ಬಳಕೆಯ ಅರಿವನ್ನು ಹೆಚ್ಚಿಸಲಿದೆ. ಬದಲಾವಣೆಗಾಗಿ ಹೋರಾಡುತ್ತಿರುವ ಈ ರಾಜಕಾರಣಿಯನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಮನ್ವೀರ್ ಗುರ್ಜರ್‌ರವರು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
Smart & Different Thinking . Well Done @ArvindKejriwal this One Small Step will solve many problems like #womensafety #unemployment #trafficrules #awareness ??happy to see a politician is fighting for change ??#OneSmallStepMakeBigChanges #BetterDelhiBetterIndia #Delhi pic.twitter.com/L3Pge9du42
— Manveer Gurjar (@imanveergurjar) October 28, 2019
ಮುಖ್ಯವಾಗಿ ಸಾರ್ವಜನಿಕ ವಾಹನಗಳನ್ನು ಮಹಿಳೆಯರು ಹೆಚ್ಚಾಗಿ ಬಳಸುವುದರಿಂದ ಅವರ ಆರ್ಥಿಕ ಹೊರೆ ತಗ್ಗುವುದಲ್ಲದೇ ಅವರಿಗೆ ಸುರಕ್ಷತೆ ಲಭಿಸಲಿದೆ. ಸಾರ್ವಜನಿಕ ವಾಹನಗಳ ಬಳಕೆ ಹೆಚ್ಚಿದಂತೆ ಮಾಲಿನ್ಯ ತಗ್ಗುತ್ತದೆ ಈ ರೀತಿಯ ಹಲವಾರು ಅನುಕೂಲಗಳು ಈ ಯೋಜನೆಯಿಂದ ಲಭಿಸಲಿವೆ ಎಂದು ಹೇಳಲಾಗುತ್ತಿದೆ. ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರವರು ತಮ್ಮ ಮೊಬೈಲ್ ಆಪ್‌ನಲ್ಲಿ ಯೋಜನೆಯ ಕುರಿತು ಮಾತನಾಡಲಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ ಬೇಡವೆಂದ ಶ್ರೀಧರನ್ ಗೆ ಪ್ರತಿ ಪತ್ರ ಬರೆದ ಮನೀಶ್ ಸಿಸೋಡಿಯ
ಉಚಿತ ಮೆಟ್ರೊ ಯೋಜನೆಗೆ ಕೇಂದ್ರ ಸರ್ಕಾರ ಅಸಹಕಾರ ತೋರಿತ್ತು. ದೆಲ್ಲಿ ಮೆಟ್ರೋದ ಮಾಜಿ ನಿರ್ದೇಶಕರೊಬ್ಬರು ಪ್ರಧಾನಿಗೆ ಪತ್ರ ಬರೆದು ಯೋಜನೆ ತಡೆಯುವಂತೆ ಕೋರಿದ್ದರು. ಹಾಗಾಗಿ ಮೆಟ್ರೊದಲ್ಲಿ ಉಚಿತ ಪ್ರಯಾಣ ಯೋಜನೆ ಇನ್ನು ಜಾರಿಯಾಗಿಲ್ಲ. ಇದನ್ನು ಸಹ ಕೇಜ್ರಿವಾಲ್ ಸಾಧಿಸುತ್ತಾರೆಯೇ ಕಾದು ನೋಡಬೇಕಿದೆ.


