ಈಗಲೂ ಕಾಶ್ಮೀರದಲ್ಲಿ144 ಸೆಕ್ಷನ್ ಜಾರಿಯಲ್ಲಿದೆ, ಹಲವು ನಾಯಕರನ್ನು ಗೃಹಬಂಧನದಲ್ಲಿ ಇಡಲಾಗಿದೆ, ಅಘೋಷಿತ ತುರ್ತುಪರಿಸ್ಥಿತಿ ಹೇರಿ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ. ಹಾಗಾಗಿ ಕಾಶ್ಮೀರಿಗರಿಗೆ ಬದುಕಲು ಬಿಡಿ ಎಂದು ಮೈಸೂರಿನ ನಳಿನಿ ಎಂಬ ಹುಡುಗಿ ‘Free Kashmir’ ಫಲಕ ಹಿಡಿದು ನಿಂತಿದ್ದಳು. ಇದು ಹೇಗೆ ದೇಶದ್ರೋಹ ಆಗುತ್ತೆ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.
ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ಹೊರಡಿಸಿರುವ ಆದೇಶ ಅಸಂವಿಧಾನಿಕ. ನಳಿನಿ ಪರವಾಗಿ ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಿರುವ ವಕೀಲರ ನಿರ್ಧಾರವನ್ನು ಸ್ವಾಗತ್ತಿಸುತ್ತೇನೆ ಜೊತೆಗೆ ಆ ಹೆಣ್ಣುಮಗುವಿಗೆ ಶ್ರೀಘ್ರ ನ್ಯಾಯ ಸಿಗಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ನಳಿನಿ ಪರವಾಗಿ ಏಕೆ ವಕಾಲತ್ತು ವಹಿಸಬಾರದು ಎಂದು ಮೈಸೂರು ಜಿಲ್ಲಾ ವಕೀಲರ ಸಂಘದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಮಂಜುಳಾ ಮಾನಸ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಹಲ್ಲೆಗೆ ಯತ್ನಿಸಿದವರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.



ಸಿದ್ದರಾಮಯ್ಯನವರು ಸೂಕ್ತವಾದ ಸಂದರ್ಭದಲ್ಲಿ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ನಮಗಿಂದು ಇಂತಹ ನಾಯಕತ್ವ ಅತ್ಯಂತ ಅಗತ್ಯವಾಗಿದೆ.
Yes good point