ಪ್ಯಾಲೆಸ್ತೀನ್ ಪರವಾಗಿ ಇಸ್ರೇಲ್ ವಿರುದ್ಧ ಕಾದಾಡುತ್ತಿರುವ ಹೆಜ್ಬುಲ್ಲಾ ಬಂಡುಕೋರರು ಗಡಿಯಾಚೆಗಿನ ದಾಳಿಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ನಮ್ಮನ್ನು ಬೆದರಿಸುವ ಯಾರಿಗಾದರೂ ‘ಹೊಡೆದುರುಳಿಸುತ್ತೇವೆ’ ಎಂದು ಹೇಳಿದೆ. ಸಂಭಾವ್ಯ ಯುದ್ಧದಿಂದ ಸಂಪೂರ್ಣವಾಗಿ ಹಿಂದೆ ಸರಿಯಲು ಅಂತರಾಷ್ಟ್ರೀಯ ಸಮುದಾಯದಗಳು ಕರೆ ನೀಡುತ್ತಿದ್ದರೂ ಇತ್ತಂಡಗಳು ಅದನ್ನು ಕಡೆಗಣಿಸಿವೆ. Free Palestine
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಸ್ರೇಲ್‌ನೊಂದಿಗಿನ ಸಂಘರ್ಷದಲ್ಲಿ ನಾವು “ಹೊಸ ಹಂತ”ವನ್ನು ಪ್ರವೇಶಿಸಿದ್ದೇವೆ ಎಂದು ಹಿಜ್ಬುಲ್ಲಾದ ಉಪ ಮುಖ್ಯಸ್ಥ ನಯಿಮ್ ಕಾಸ್ಸೆಮ್ ಪ್ರತಿಭಟನಾ ಸಂದೇಶವನ್ನು ನೀಡಿದ್ದಾರೆ. ಉತ್ತರ ಲೆಬನಾನ್‌ನ ಹಿಜ್ಬುಲ್ಲಾ ಭದ್ರಕೋಟೆಗಳನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ನಡೆಸಿದ ವ್ಯಾಪಕ ಹಾನಿ ಮತ್ತು ಹಲವಾರು ಸಾವುನೋವುಗಳಿಗೆ ಪ್ರತಿಭಟನೆಯಾಗಿ ಕಾಸ್ಸೆಮ್ ಈ ಸಂದೇಶ ನೀಡಿದ್ದಾರೆ.
ಇದನ್ನೂಓದಿ: ಗುಜರಾತ್: ಲೈಂಗಿಕ ದೌರ್ಜನ್ಯ ವಿರೋಧಿಸಿದ ಶಾಲಾ ವಿದ್ಯಾರ್ಥಿನಿ ಹತ್ಯೆ, ಪ್ರಾಂಶುಪಾಲನ ಬಂಧನ
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ತಮ್ಮ ಉತ್ತರದ ನಿವಾಸಿಗಳ ಭದ್ರತೆಯನ್ನು ಖಾತ್ರಿಪಡಿಸುವ ಇಸ್ರೇಲ್‌ನ ಬದ್ಧತೆಯನ್ನು ಪುನರುಚ್ಚರಿಸಿದದ್ದಾರೆ. “ಇಸ್ರೇಲ್‌ನ ಉತ್ತರದ ಸಮುದಾಯಗಳು ಅವರ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗಿಸುವ ಹಂತವನ್ನು ತಲುಪುವವರೆಗೆ ನಾವು ಮಿಲಿಟರಿ ಕ್ರಮಗಳು ಮುಂದುವರೆಯುತ್ತವೆ” ಎಂದು ಹೇಳಿದ್ದಾರೆ.
ಆರ್ಮಿ ಚೀಫ್ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೆವಿ ಮನಾತನಾಡಿ, ತನ್ನ ನಾಗರಿಕರನ್ನು ಬೆದರಿಸುವ ಯಾರಿಗಾದರೂ ಇಸ್ರೇಲ್ ಹೊಡೆದುರುಳಿಸುತ್ತದೆ ಎಂದು ಹೇಳಿದ್ದಾರೆ. ಈ ನಡುವೆ ಇಸ್ರೇಲ್‌ನ ಅತಿದೊಡ್ಡ ಮಿತ್ರರಾಷ್ಟ್ರವಾದ ಅಮೆರಿಕ ಸಂಯಮ ಪಾಲಿಸುವಂತೆ ಒತ್ತಾಯಿಸಿದೆ. ಮಿಲಿಟರಿ ಸಂಘರ್ಷವು ಇಸ್ರೇಲ್‌ನ ಹಿತಾಸಕ್ತಿಗೆ ಉತ್ತಮವಲ್ಲ ಮತ್ತು ಈ ಸಂಘರ್ಷವನ್ನು ತಡೆಯಲು ಅಮೆರಿಕ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದೆ ಎಂದು ಅಧ್ಯಕ್ಷ ಜೋ ಬಿಡೆನ್ ಒತ್ತಿ ಹೇಳಿದ್ದಾರೆ. Free Palestine
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕೂಡಾ ತೀವ್ರ ಕಳವಳಗಳ ವ್ಯಕ್ತಪಡಿಸಿದ್ದು, ನಡೆಯುತ್ತಿರುವ ಗಾಜಾ ಸಂಘರ್ಷದ ಮಧ್ಯೆ ಲೆಬನಾನ್ ಕೂಡಾ “ಮತ್ತೊಂದು ಗಾಜಾ” ಆಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂಓದಿ: FACT CHECK : ಟೋಲ್ ಪ್ಲಾಝಾದಲ್ಲಿ ಗಲಾಟೆ ನಡೆಸಿದ ಮುಸ್ಲಿಮರು? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?
ಕಳೆದ ವಾರ ಹೆಜ್ಬೊಲ್ಲಾಹ್ ರಾಕೆಟ್‌ಗಳ ಸುರಿಮಳೆಯನ್ನು ಉಡಾಯಿಸಿದ್ದು, ಅದು ಇಸ್ರೇಲ್‌ನ ಅತಿದೊಡ್ಡ ಉತ್ತರದ ನಗರವಾದ ಹೈಫಾ ಬಳಿಯ ಕಿರ್ಯಾತ್ ಬಿಯಾಲಿಕ್ ಅನ್ನು ತಲುಪಿ ಅಲ್ಲಿನ ಮೂಲಸೌಕರ್ಯವನ್ನು ಹಾನಿಗೊಳಿಸಿತು ಎಂದು ವರದಿಯಾಗಿದೆ. ಅಲ್ಲದೆ ದಾಳಿಯು ಮತ್ತಷ್ಟು ಉಲ್ಬಣಗೊಳ್ಳುವ ಭಯವನ್ನು ಹುಟ್ಟುಹಾಕಿದೆ.
ಇದಕ್ಕೆ ಪ್ರತೀಕಾರವಾಗಿ, ಇಸ್ರೇಲ್ ದಕ್ಷಿಣ ಲೆಬನಾನ್‌ನ ವಾಯುನೆಲೆ ಮತ್ತು ಮಿಲಿಟರಿ ಉತ್ಪಾದನಾ ಸೌಲಭ್ಯಗಳನ್ನು ಒಳಗೊಂಡಂತೆ ಹೆಜ್ಬೊಲ್ಲಾ ಗುರಿಗಳನ್ನು ಹೊಡೆದುರುಳಿಸಿದೆ. ಸ್ಪೋಟದ ಹಿನ್ನಲೆ ಇಸ್ರೇಲ್‌ನ ನಾಗರಿಕ ರಕ್ಷಣಾ ಸಂಸ್ಥೆಯು ಉತ್ತರದ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.
ಲೆಬನಾನ್‌ನ ಆರೋಗ್ಯ ಸಚಿವಾಲಯವು ದಕ್ಷಿಣ ಪ್ರದೇಶಗಳಲ್ಲಿ ಇಸ್ರೇಲಿ ದಾಳಿಯಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ. ಆದರೆ ಹಿಜ್ಬುಲ್ಲಾ ತನ್ನ ಇಬ್ಬರು ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಲೆಬನಾನ್‌ನಿಂದ ರಾತ್ರಿಯಿಡೀ 150 ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತನ್ನ ಭೂಪ್ರದೇಶಕ್ಕೆ ಹಾರಿಸಲಾಗಿದೆ ಎಂದು ಇಸ್ರೇಲಿ ಸೇನೆಯು ವರದಿ ಮಾಡಿದೆ.
ಇದನ್ನೂಓದಿ: ಮಕ್ಕಳ ಅಶ್ಲೀಲ ಚಿತ್ರ ಡೌನ್‌ಲೋಡ್, ನೋಡುವುದು ಅಪರಾಧ; ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಇಸ್ರೇಲ್ ಇತ್ತೀಚೆಗೆ ವೈಮಾನಿಕ ದಾಳಿ ನಡೆಸಿ ಬೈರುತ್‌ನ ಜನನಿಬಿಡ ಪ್ರದೇಶವಾದ ದಹಿಯೆ ಅಕ್ಕಪಕ್ಕದ ಮೇಲೆ ದಾಳಿ ನಡೆಸಿ ಹಿಜ್ಬುಲ್ಲಾದ ರಾದ್ವಾನ್ ಫೋರ್ಸ್‌ನ ಮುಖ್ಯಸ್ಥ ಇಬ್ರಾಹಿಂ ಅಕಿಲ್‌ನನ್ನು ಕೊಂದು ಹಾಕಿತ್ತು. ಇದರ ನಂತರ ಹೆಜ್ಬುಲ್ಲಾಹ್ ಇಸ್ರೇಲ್ ಮೇಲೆ ದಾಳಿ ಮಾಡಿದೆ.
ಈ ನಡುವೆ ಕತಾರ್, ಈಜಿಪ್ಟ್ ಮತ್ತು ಅಮೆರಿಕ ನೇತೃತ್ವದ ಮಧ್ಯಸ್ಥಿಕೆ ಪ್ರಯತ್ನಗಳ ಹೊರತಾಗಿಯೂ, ಸಂಘರ್ಷವು ಕಡಿಮೆಯಾಗುವ ಯಾವುದೇ ಲಕ್ಷಣವನ್ನು ಕಾಣುತ್ತಿಲ್ಲ. ಕದನ ವಿರಾಮಕ್ಕಾಗಿ ಮತ್ತು ಒತ್ತೆಯಾಳುಗಳ ಬಿಡುಗಡೆಯನ್ನು ಸುಗಮಗೊಳಿಸುವ ಪ್ರಯತ್ನಗಳು ಸ್ಥಗಿತಗೊಂಡಿವೆ.
ವಿಡಿಯೊ ನೋಡಿ: ಓ ನನ್ನ ಚೇತನ, ಆಗು ನೀ ಅನಿಕೇತನ.. ಕುವೆಂಪು ಹಾಡಿಗೆ ಭಾವತುಂಬಿದ ಜೀವಪರರು O nanna chethana


