ನವ ದೆಹಲಿ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಿರವಾಗಿದ್ದ ಇಂಧನ ಬೆಲೆಯು ಈಗ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.
ಚುನಾವಣೆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಳಿತವಾಗಿದ್ದು, ಅದನ್ನು ಸರಿದೂಗಿಸಲು ಮುಂದಿನ ದಿನಗಳಲ್ಲಿ ಕಂಪನಿಗಳು ಮುಂದಾಗಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಅಂತಾರಾಷ್ಟ್ರೀಯ ತೈಲ ಬೆಲೆಗಳು ಈ ವಾರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ಬ್ಯಾರೆಲ್‌ಗೆ 140 ಡಾಲರ್ ಆಗಲಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹ 15 ಹೆಚ್ಚಿಸಬೇಕಾಗಬಹುದು ಎಂದು ಉದ್ಯಮದ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಅಮೆರಿಕ ತೈಲ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್‌ನಲ್ಲಿ ಭಾನುವಾರ ಸಂಜೆ ಪ್ರತಿ ಬ್ಯಾರೆಲ್‌ಗೆ 130.50 ಡಾಲರ್ ಬೆಲೆ ಏರಿಕೆಯಾಯಿತು. ಜುಲೈ 2008ರಲ್ಲಾದ ಏರಿಕೆಯೇ ಇದುವರೆಗೆ ಅಧಿಕ ಎನ್ನಲಾಗಿತ್ತು. ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕ್ರೂಡ್‌ನಲ್ಲಿ ಒಂದು ಬ್ಯಾರೆಲ್ ಇಂಧನ ಬೆಲೆ ರಾತ್ರೋರಾತ್ರಿ 139.13 ಡಾಲರ್ ಮುಟ್ಟಿತು. ಜುಲೈ 2008ರಲ್ಲಾದ ಏರಿಕೆಯ ಬಳಿಕ ಇದೇ ಮೊದಲ ಭಾರಿಗೆ ಅತಿ ಹೆಚ್ಚು ಏರಿಕೆ ಕಂಡಿದೆ ಎನ್ನಲಾಗಿದೆ.
ರೂಪಾಯಿ ಮೌಲ್ಯವೂ ಕುಸಿತ ಕಂಡಿದೆ. ರೂಪಾಯಿ ಮೌಲ್ಯ ಒಂದು ಡಾಲರ್‌ಗೆ 77.01 ರೂ. ಏರಿಕೆಯಾಗಿದೆ. ಭಾರತವು ತೈಲ ಅಗತ್ಯಗಳಿಗಾಗಿ ಶೇ. 85ರಷ್ಟು ವಿದೇಶಗಳನ್ನು ಅವಲಂಭಿಸಿದೆ. ಈಗಾಗಲೇ ಈ ವರ್ಷ ಶೇಕಡಾ 60ಕ್ಕಿಂತ ಹೆಚ್ಚು ಇಂಧನ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹಣದುಬ್ಬರ ತಲೆದೋರಬಹುದು. ಆರ್ಥಿಕತೆ ಮತ್ತಷ್ಟು ಸಂಕಷ್ಟಕ್ಕೆ ಈಡಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ (ಪಿಪಿಎಸಿ) ಮಾಹಿತಿಯ ಪ್ರಕಾರ ಭಾರತವು ಖರೀದಿಸುವ ಕಚ್ಚಾ ತೈಲದ ಬೆಲೆಯು ಮಾರ್ಚ್ 1 ರಂದು ಪ್ರತಿ ಬ್ಯಾರೆಲ್‌ಗೆ 111 ಡಾಲರ್‌ಕ್ಕಿಂತ ಹೆಚ್ಚಿತ್ತು.
“ಸೋಮವಾರದಂದು ಕೊನೆಯ ಹಂತದ ಮತದಾನ ಮುಕ್ತಾಯವಾಗಿದ್ದು, ಇಂಧನ ಬೆಲೆ ಪರಿಷ್ಕರಣೆಗೆ ಸರ್ಕಾರ ಮುಂದಾಗುವ ನಿರೀಕ್ಷೆ ಇದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿರಿ: Poll of Exit polls 2022: ಉತ್ತರ ಪ್ರದೇಶದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಆಪ್ ಅಧಿಕ್ಕಾರಕ್ಕೇರುವ ಸಾಧ್ಯತೆ



ಹಗಲು ದರೋಡೆ ಇದು